ಜ್ವಲಮಾಲಾ ನ್ಯೂಸ್

ಈಗ ಪಂಚಕಲ್ಯಾಣ ಗೊಳ್ಳುತ್ತಿರುವ ಚಿಕ್ಕ ಬೆಟ್ಟದ ಬಸದಿಯ ಇತಿಹಾಸಕ್ಕೆ ಬಂದಾಗ  ಬಹಳ ಹಿಂದೆ ಊರಿನ ಒಳಿತಿಗಾಗಿ  ವಾಸ್ತುದೋಷ ನಿವಾರಣೆಗಾಗಿ  ಇಲ್ಲಿ ಬಸದಿ ಕಟ್ಟಿಸಲಾಗುತ್ತದೆ. ತದನಂತರ ಸಮೃದ್ದಿಗೊಂಡ ಗ್ರಾಮದಲ್ಲೊಮ್ಮೆ ಗ್ರಾಮ ಲೆಕ್ಕಿಗನೊಬ್ಬನ ಸುಳ್ಳು ಪ್ರಚಾರದ ಪರಿಣಾಮವಾಗಿ ಊರಿನ ಕೆರೆಗೆ ಗ್ರಾಮಸ್ಥರು ಈ ಬಸದಿಯಲ್ಲಿ ಕಲ್ಲನ್ನು ದಾನವಾಗಿ ನೀಡುತ್ತಾರೆ. ಅಂದಿನಿಂದ ಗ್ರಾಮ ಮತ್ತೆ ಅವನತಿಯನ್ನು ಕಾಣುತ್ತದೆ. ಅಲ್ಲದೇ ಊರಿನ ಜೈನರೆಲ್ಲರೂ ವಲಸೆ ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಊರಿನ ಉದ್ದಾರಕ್ಕಾಗಿ  ಮತ್ತೆ ಅದೇ ಜಾಗದಲ್ಲಿ ಬಸದಿಯನ್ನು ನಿರ್ಮಿಸಲು ಸಂಕಲ್ಪಿಸಲಾಗಿ ಚಂದ್ರಗಿರಿಯ ಬೆಟ್ಟದ ಮೇಲೆ ಇದ್ದ ಪುರಾತನ ಜಿನಮಂದಿರ ನಾಶವಾದ ನಂತರ ಇಲ್ಲಿಯವರೆಗೂ ಬೆಟ್ಟದ ಮೇಲೆ ಖಾಲಿ ಜಾಗವೇ ಇತ್ತು. ಪರಮಪೂಜ್ಯ ಸ್ವಸ್ಥಿ ಶ್ರೀ ಭಾನುಕೀರ್ತಿ ಮಹಾಸ್ವಾಮೀಜಿಯವರು ಪ್ರಸ್ತುತ ಬಸದಿ  ನಿರ್ಮಾಣ ಕಾರ್ಯವನ್ನು  ಪ್ರಾರಂಭಿಸಿ ಅನೇಕ ಅಡಚಣೆ ಮಧ್ಯೆಯೂ ಪೂಜ್ಯಶ್ರೀಗಳವರ ಸತತ ಪ್ರಯತ್ನದಿಂದ  ಈಗ ಚತುರ್ಮುಖ ಜಿನಬಿಂಬ ಶ್ರೀ ಚಂದ್ರನಾಥ ಸ್ವಾಮಿ ಮುನಿಸು ವ್ರತನಾಥ ಸ್ವಾಮಿ ಪಾರ್ಶ್ವನಾಥ ಸ್ವಾಮಿ ಶ್ರೀ ಮಹಾವೀರಸ್ವಾಮಿಯ ಜಿನಬಿಂಬಗಳುಳ್ಳ ಬಸದಿಯ ನಿರ್ಮಾಣ ಕಾರ್ಯ ಮುಗಿದಿದ್ದು ಇದೇ ಮೇ ತಿಂಗಳ  22 ರಿಂದ 26 ರವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಬೃಹತ್ ಪೂರ್ಣ ಕಾರ್ಯಕ್ರಮಕ್ಕೆ  ಮುನಿಮಹಾರಾಜರುಗಳು ಪೂಜ್ಯ ಭಟ್ಟಾರಕರುಗಳ ಸಾನಿಧ್ಯ ನೀಡಲಿದ್ದಾರೆ. ಈ ಶುಭ ಕಾರ್ಯವನ್ನು ಸುಸೂತ್ರವಾಗಿ ನಡೆಸಲು ಪಂಚಕಲ್ಯಾಣ ಮಹೋತ್ಸವದ ಸಮಿತಿ ರಚನೆ ಕೂಡ ಆಗಿದೆ. ಈ ಮಹೋತ್ಸವಕ್ಕೆ ತಾವುಗಳೆಲ್ಲರೂ ಸಹ ತನು ಮನ ಧನದ ಸಹಕಾರ ನೀಡುವುದರ ಮೂಲಕ ಭಾಗವಹಿಸಬೇಕೆಂದು ಸಮಿತಿಯವರು ವಿನಂತಿಸಿದ್ದಾರೆ. ಆದ್ದರಿಂದ ತಾವೆಲ್ಲರೂ ಭಾಗವಹಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ