ಸಾಗರ

ಜೈ ಜೀನೇಂದ್ರ ವೀಕ್ಷಕರೇ, ಸಾಗರ ನಗರದ ಹೃದಯ ಭಾಗದಲ್ಲಿರುವಂತಹ ಪುರಾತನ ಜೈನ ಬಸದಿಯ ಜೀರ್ಣೋಧ್ದಾರ ಕಾರ್ಯಕ್ರಮ ನೆಡೆಯುತ್ತಲಿದ್ದು ಮುನಿಶ್ರೀ 108 ಪುಣ್ಯಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಹಾಗೂ ಮಾನಸ್ಥಂಭೋಪರಿ ಚತುರ್ಮುಖ ಜಿನವೆಂಬ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನ ಮಹೋತ್ಸವವನ್ನು ಇದೇ ಮೇ18ರಿಂದ 22ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಬಸದಿಯು ಹೊಂಬುಜ ಶ್ರೀ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದಾಗಿದೆ ಸ್ವಸ್ತಶ್ರೀ ದೇವೇಂದ್ರ ಕೀರ್ತೀ ಭಟ್ಟಾರಕ ಮಹಾಸ್ವಾಮೀಜಿಯವರು ಪರಮ ಸಂರಕ್ಷಕರಾಗಿದ್ದಾರೆ. ಇಲ್ಲಿ ಪುರಾತನ ಪಚ್ಚಕಲ್ಲಿನ ಪ್ರತಿಮೆ ಇರುವುದು ಬಹಳ ವಿಷೇಶ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ವೀಷೇಶವಾದಂತಹ ಮೂರ್ತಿಯದು ಪಚ್ಚಕಲ್ಲಿನ ಪ್ರತಿಮೆಯದು ಬಹಳ ಜನಕ್ಕೆ ಮಲೆನಾಡಿನಲ್ಲಿ ಶಿವಮೊಗ್ಗಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಇಂತಹ ಒಂದು ಪ್ರಮುಖವಾದ ಬಸದಿಇದೆ ಇದನ್ನು ನೊಡಿದರೆ ಕಪ್ಪುಕಾಣುತ್ತದೆ ಆದರೆ ಅದು ಹಸಿರು ಬಣ್ಣದಲ್ಲಿರುವ ಒಂದು ಬಸಿದಿ 1946ಮತ್ತು 1947ರಲ್ಲಿ ಮುಳುಗಡೆಗೊಂಡ ಸೇತುವೆ ಬದ್ರಾಮದಲ್ಲಿರುವ ಬಸದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಇಲ್ಲಿಯ ಸ್ಥಳೀಯರು ಹೇಳುತ್ತಾರೆ 1946 47ರಲ್ಲಿ ಈ ಸಾಗರ ತಾಲ್ಲೂಕಿನಲ್ಲಿ ಹಿರೇಭಾಸ್ಕರ ಡ್ಯಾಮ್ ನಿರ್ಮಾಣವಾಯಿತು.ಆ ನಿರ್ಮಾಣವಾಗುವಂತಹ ಸಮಯದಲ್ಲಿ ಹಿನ್ನಿರಿನ ಮುಳುಗಡೆ ಸಮಯದಲ್ಲಿ ಸೇತು ಎನ್ನುವ ಗ್ರಾಮ ಮುಳುಗಡೆಯಾಯಿತು ಆ ಗ್ರಾಮದಲ್ಲಿ ಮೊದಲು ಮೂಲತಹ ಈ ಬಸದಿ ಇತ್ತು ಪುರಾತನ ಹಿನ್ನಲೆ ಏನು ಎಂದರೆ ದಕ್ಷಿಣಭಾರತದಲ್ಲಿ ಸಾಮಾನ್ಯವಾಗಿ ಬಹಳಷ್ಟು ರಾಜಮನೆತನಗಳು ರಾಜ್ಯಭಾರವನ್ನು ಮಾಡಿ ಹೊಗಿದ್ದಾವೆ. ಅದರಲ್ಲಿ ವಿಷೇಶವಾಗಿ ಹೊಂಬುಜದ ಸಾಂತನರು ಇವರು ವಿಷೇಶವಾದಂತಹ ಒಂದು ಸಾವಿರ ವರ್ಷಗಳ ಕಾಲ ಈ ದಕ್ಷಿಣಭಾರತದಲ್ಲಿ ಮಲೆನಾಡಿನ ಪ್ರಧೇಶದಲ್ಲಿ ರಾಜ್ಯಭಾರಮಾಡಿಕೊಂಡು ಹೋಗಿದ್ದರು ಅಂತಹ ಸಮಯದಲ್ಲಿ ಅವರು ರಾಜ್ಯಭಾರಮಾಡುತ್ತಿದ್ದ ಸಮಯದಲ್ಲಿ ಸೂಮಾರು 1148 ಕಾಮಭೂಪಾಲ ಎಂದು ಹೊಂಬುಜದಲ್ಲಿ ರಾಜ್ಯಮಾಡಿಕೊಂಡು ಇದ್ದಂತಹ ಕಾಮಭೂಪಾಲನ ಆಡಳಿತದಲ್ಲಿ ರಾಜ್ಯಭಾರವನ್ನು ಹೊಂಬುಜದಿಂದ ಸೇತುವಿಗೆ ಬದಲಾಯಿಸುತ್ತಾರೆ.ಆಗ ಸೇತು ಪ್ರಧೇಶದಲ್ಲಿ 20ವರ್ಷಗಳ ಕಾಲ ರಾಜ್ಯಭಾರ ಮಾಡುತ್ತ ಇರುತ್ತಾರೆ. ಅಲ್ಲಿ ಜಗದೇವ ಅರಸ ಎಂಬುವವನು ವಿಷೇಶವಾಗಿ ರಾಜ್ಯಭಾರ ಮಾಡುತ್ತಾ ಇರುತ್ತಾರೆ ಸುಮಾರು 20 ವರ್ಷಗಳ ಕಾಲ ಜಗದೇವ ಅರಸ ಅವರ ಸಹೋದರ ಸಿಂಗಿದೇವಅರಸ ರಾಜ್ಯಭಾರ  ಮಾಡುತ್ತಾ ಇರುತ್ತಾರೆ.ಆ ಸಮಯದಲ್ಲಿ ಅವರ ಸಹೋದರಿ ಅಳಿಯದೇವಿ ಎಂಬುವರು ಈ ಬಸದಿಯ ನಿರ್ಮಾಣದ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಿದ್ದಾರೆ. ಸಾಗರ ನಗರದ ಹೃದಯಭಾಗದಲ್ಲಿರುವಂತಹ ಈ ಒಂದು ಸ್ಥಳದಲ್ಲಿ ನಮ್ಮ ಹಿಂದಿನ ಪೂರ್ವಜರು ಏನು ಒಂದು ಲಿಂಗನಮಕ್ಕಿ ಡ್ಯಾಮ್  ಹಾಗೂ ಹೀರೇಭಾಸ್ಕರ ಡ್ಯಾಮ್ ಮುಳುಗಡೆ ಯಾಗಿದೆ ಪುನರ್ವೃಷ್ಟಿಯಿಂದ ಬಸದಿಯನ್ನು ನಿರ್ಮಾಣ ಮಾಡಿದ್ದರು ಅದು ಅಜೀರ್ಣವಾಗಿತ್ತು. ಪರಮಪೂಜ್ಯಡಾಕ್ಟರ್ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಹೊಸದಾಗಿ ಜೀರ್ಣೋಧ್ದಾರ ಗೊಂಡಿರುವ ಬಸದಿಯಲ್ಲಿ ಮೇ18ರಿಂದ 22ರನೇ ತಾರೀಖಿನವರೆಗೆ ಪಂಚಕಲ್ಯಾಣಮಹೋತ್ಸವವು ಪರಮಪೂಜ್ಯ 108 ಪುಣ್ಯಸಾಗರಮುನಿಮಹಾರಾಜರ ದಿವ್ಯ ನೇತೃತ್ವ ಮತ್ತು ಸಾನಿಧ್ಯದಲ್ಲಿ ಹೊಂಬುಜ ಶ್ರೀ ಗಳವರ ಮತ್ತು ಕರ್ನಾಟಕದ ಉಳಿದ ಎಲ್ಲಾ ಭಟ್ಟಾರಕರ ಸಾನಿಧ್ಯದಲ್ಲಿ ಪಂಚಕಲ್ಯಾಣಮಹೋತ್ಸವವು ವೈಭವಿಯುತವಾಗಿ ನಾವೆಲ್ಲರೂ ಮಾಡಬೇಕೆಂದು ಸಮಾಜದಲ್ಲಿ ಒಗ್ಗಟ್ಟಿನಿಂದ ಶ್ರೀಗಳ ಆದೇಶದಿಂದ ಪಾಲ್ಗೋಳ್ಳುವವರಾಗಿದ್ದೇವೆ.ಇದೇ ಸಂಧರ್ಭದಲ್ಲಿ ಸಾಗರ ನಗರದಲ್ಲಿ ಪ್ರಖ್ಯಾತವಾಗಿರವ ಗಣಪತಿ ದೇವಸ್ಥಾನವಿದೆ. ಹಾಗೆಯೇ ಮಾರಿಕಾಂಬ ದೇವಸ್ಥಾನ 3 ವರ್ಷಗಳಿಗೊಮ್ಮೆ ವೈಭವಯುತವಾದ ಜಾತ್ರಮಹೋತ್ಸವ ಇಲ್ಲಿ ನೆಡೆಯುತ್ತದೆ. ಹಾಗೆಯೇ ಉಳಿದ ಎಲ್ಲಾ ಸಮಾಜದ ಮಸೀದಿ ಚರ್ಚ್ ಗಳು ಇದ್ದಾವೆ ಅಂತೆಯೇ ನಮ್ಮ ಒಂದು ಜೀರ್ಣೋಧ್ದಾರ ಗೊಂಡಿರುವ ಬಸಿದಿಯಲ್ಲಿ ವೈಭವಯುತವಾಗಿ ಎಲ್ಲರೂ ಕೂಡ ಮೆಚ್ಚುವ ರೀತಿಯಲ್ಲಿ ಈ ಒಂದು ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದೇವೆ.ಜೋಗಜಲಪಾತಕ್ಕೆ ಕೇವಲ 30 ಕಿಲೋ ಮೀಟರ್ನಲ್ಲಿರುವ ಸಾಗರ ನಗರ ಭಾಗದಲ್ಲಿ ಈ ಒಂದು ಕಾರ್ಯಕ್ರಮ ನೆಡೆಯುತ್ತಿದೆ ಕರ್ನಾಟಕದ ಎಲ್ಲಾ ಸಮಾಜ ಭಾಂಧವರು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಈ ಮೇ18 ರಿಂದ 22ನೇ ತಾರೀಖು ನೆಡೆಯುವಂತಹ ಕಾರ್ಯಕ್ರಮದಲ್ಲಿ ತಾವೆಲ್ಲರೂ ತನು ಮನ ಧನಗಳಿಂದ ಭಾಗವಹಿಸಿ ಸಹಕರಿಸಬೇಕು ಪಂಚಕಲ್ಯಾಣ ಮಹೋತ್ಸವವು ಇಲ್ಲಿ ನೇರೆವೇರಲು ಎಲ್ಲರೂ ಕೈ ಜೋಡಿಸಬೇಕೆಂದು ಎಲ್ಲರಿಗೂ ಹೃತ್ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.

ಸುಂದರ ಬಸದಿಯೊಂದು ಜೊತೆಗೆ ವಿದ್ಯಾರ್ಥಿನಿಲಯವುಕೂಡ ಕಮಿಟಿಯವರ ಧಾರ್ಮಿಕ ಕಾಳಜಿಯೊಂದಿಗೆ ನಿರ್ಮಾಣಗೊಂಡು ಬೃಹತ್ ಮಹೋತ್ಸವವನ್ನು ಆಯೋಜಿಸಲಾಗಿದೆ ಧರ್ಮಬಂಧುಗಳು ಈ ಪುಣ್ಯಕಾರ್ಯದಲ್ಲಿ ತಾವು ಭಾಗಿಗಳಾಗ ಬೇಕಾಗಿ ಕಮಿಟಿಯ ಪಧಾಧಿಕಾರಿಗಳು ನೇಮಿಸಿದ್ದಾರೆ. 18-05-2022ರಿಂದ 22-05-2022ರ ತನಕ ಸಾಗರದಲ್ಲಿ ಪಂಚಕಲ್ಯಾಣ ಮಹೋತ್ಸವವಿರುತ್ತದೆ, ಆದಿನಾಥಸ್ವಾಮಿ ಪಂಚಕಲ್ಯಾಣ ಮಹೋತ್ಸವವಿರುತ್ತದೆ. ಈ ಪಂಚಕಲ್ಯಾಣಮಹೋತ್ಸವದಲ್ಲಿ ಪುಣ್ಯಶ್ರೀಮಹಾರಾಜರ ಸಾನಿಧ್ಯದಲ್ಲಿ ನೇರೆವೇರಿಸುತ್ತಿರುವುದು ತುಂಬಾ ಸಂತೋಷವಗಿದೆ. ಸಾಗರದ ಪದ್ಮಶ್ರೀ ಮಹಿಳಾಸಮಾಜದಿಂದ ವಿನಂತಿಮಾಡಿಕೊಳ್ಳುತ್ತಿದ್ದೇವೆ. ಎಲ್ಲಾ ಮಹಿಳಾ ಸಮಾಜದವರು ಸಹಕರಿಸಬೇಕು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಎಲ್ಲರ ಸಹಕಾರ ಬೇಕು ಪಂಚಕಲ್ಯಾಣಮಹೋತ್ಸವಕ್ಕೆ ಎಲ್ಲರೂಬರಬೇಕು ಇಲ್ಲಿ ಹಾಸ್ಟೆಲ್ ನೆಡೆಯುತ್ತಾ ಇದೆ ಇದೇ ಹಾಸ್ಟೆಲ್ ಹಿಂದೆ ಇದ್ದ ಮಂದಿ ಒಳ್ಳೆ ಒಳ್ಳೆ ಹುದ್ದೆಯಲ್ಲಿ ಇದ್ದಾರೆ.ಈ ಹಾಸ್ಟೆಲ್ ಗೂ ಬಸದಿಗೂ ತನು ಮನ ಧನ ಸಹಾಯಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.