ಜ್ವಾಲಾಮಲೆ ನ್ಯೂಸ್

ಜೈ ಜಿನೇಂದ್ರ, ವಿಶೇಷವಾದ ಅತ್ಮೀಯತೆಯಿಂದ ಎಲ್ಲಾರ ಮನಗಳಲ್ಲಿ ಮನಸ್ಸುಗಳಲ್ಲಿ ಸ್ಥಾನ ಪಡೆದು ನಮ್ಮ ಪೂಜ್ಯರು ಎಂದು ಪ್ರಖ್ಯಾತರಾದವರು ಶ್ರೀ ಕ್ಷೇತ್ರಕನಕ ಗಿರಿ ಮಠಾಧೀಶರಾದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು. ಇವರ ಪರಿಚಯ ಮಾಡುವಿಕೆ ಎಂದರೆ ನನಗೆ ಜೀವನದಲ್ಲಿ ಸಿಕ್ಕ ಅತ್ಯುನ್ನತ ಸ್ಥಾನ. ಸಾಗರ ತಾಲ್ಲೂಕು ಹೇರೂರು ಗ್ರಾಮದಲ್ಲಿ ಶ್ರೀ ನೇಮಿಚಂದ್ರ ಮತ್ತು ಶ್ರೀಮತಿ ಮರುದೇವಿ ಅಮ್ಮನವರ ಸೌಭಾಗ್ಯವು ಎಂಬಂತೆ ಅವರ ಸುಪುತ್ರರಾಗಿ ದಿನಾಂಖ 27-3-1967ರಲ್ಲಿ ಚೈತ್ರ ಶುದ್ಧ ಪಂಚಮಿ ಭಾನುವಾರದಂದು ಜನಿಸಿದರು.

 ಜಿನ ಭಕ್ತರಾದ ತಾಯಿ ತಂದೆ ಪುತ್ರರನ್ನು ವಾಸುಪೂಜ್ಯ ಎಂದು ಸಂಭೋಧಿಸಿದರು. ಬಾಲ್ಯದಿಂದಲು ವಿದ್ಯೆಯಲ್ಲಿ ಆಸಕ್ತಿವುಳ್ಳ ಇವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಹೇರೂರು ಹಾಗೂ ಸಾಗರದಲ್ಲಿ ಪಡೆದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಶ್ರೀಕ್ಷೇತ್ರ ಶ್ರವಣ ಬೆಳಗೊಳದ ಶ್ರೀ ಗೊಮ್ಮಟೇಶ್ವರ ವಿಧ್ಯಾಪೀಠ ಗುರುಕುಲಕ್ಕೆ ಪ್ರವೇಶ ಪಡೆದು 1984ರಲ್ಲಿ ಹಿಂದಿ ರತ್ನ ಪರೀಕ್ಷೆ, ಸಂಸ್ಕೃತ, ಸಾಹಿತ್ಯ, ಜೈನಾಗಮ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಉನ್ನತ ವ್ಯಾಸಂಗಕ್ಕಾಗಿ ಮಧ್ಯಪ್ರದೇಶದ ಜಬ್ಬಲ್ ಪುರಕ್ಕೆ ತೆರಳಿ ಶ್ರೀವೇಣಿ ದಿಗಂಬರ ಜೈನ ಗುರುಕುಲದಲ್ಲಿ ಅಭ್ಯಾಸ ಮಾಡಿ 1991ರಲ್ಲಿ ಮಧ್ಯಪ್ರದೇಶದ ರೇವಾ ವಿಶ್ವವಿದ್ಯಾನಿಲಯದಿಂದಲು ಇಂದೂರಿನ ಕುಂದ ಕುಂದ ಜ್ಞಾನ ಪೀಠದಿಂದಲು ಏಕಕಾಲದಲ್ಲಿ ಶಾಸ್ತ್ರ ಪದವಿ ಪಡೆದರು.

ಬೆಳೆಯುವ ಪೈರು ಮೊಳಕೆಯಲ್ಲಿ ತನ್ನತನ ತೋರಿಸುವ ಹಾಗೆ ಬಾಲ್ಯದಿಂದಲು ರೂಡಿಸಿಕೊಂಡ ಜಿನಧರ್ಮದ ಆಸಕ್ತಿ ಮುಂದೆ ಇವರಿಗೆ ಬ್ರಹ್ಮಚರ್ಯ ಮಾರ್ಗದಲ್ಲಿ ಹೋಗಲು ಅನುವು ಮಾಡಿತ್ತು. 1986ರಲ್ಲಿ ಶೃತಪಂಚಮಿಯಂದು ಬ್ರಹ್ಮಚರ್ಯ ದೀಕ್ಷೆ ಪಡೆದ ಶ್ರೀಗಳವರು 1994ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಕೃತ ಎಂ ಎ ಪದವಿ, 1997ರಲ್ಲಿ ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾನಿಲಯದ ಪ್ರಕೃತ ಆಚಾರ್ಯ ಪದವಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಎರಡು ಸ್ವರ್ಣ ಪದಕಗಲೊಂದಿಗೆ ತೇರ್ಗಡೆ ಹೊಂದಿದ್ದು ಸಂಸ್ಕೃತ ಎಂ ಇ, ಪ್ರಾಕೃತ, ಬ್ರಾಹ್ಮಿ ಮುಂತಾದ ಪ್ರಾಚ್ಯ ಭಾಷೆಗಳಲ್ಲಿ ಪರಿಣಿತರಾಗಿ ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ ಸಾಮಾಜಿಕ ವಿದ್ವಸಂಮೇಳನದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದರು.

ದೆಹಲಿಯಲ್ಲಿ ಇಂದ್ರದ್ವಜ ಆರಾಧನೆ ಹಾಗೂ ಸರ್ವತೋಭದ್ರ ವಿಧಾನ, ಕಲ್ಕತ್ತದಲ್ಲಿ ಕಲ್ಪದೃಮ ಆರಾಧನೆಯನ್ನು ಹಿತೊಪ್ಯತೆ ವಿಷಯವಾಗಿ ನಡೆಸಿದರು.

ಇವರ ಶ್ರದ್ಧೆ ನೈಪುಣ್ಯತೆಯನ್ನು ಕಂಡು ವೈಶಾಕ ಶುದ್ಧ ತದುಗೆ ಅಕ್ಷಯ ತೃತೀಯದ ಶುಭದಿನದಂದು ಮತ್ತೊಮ್ಮೆ ಇತಿಹಾಸವನ್ನು ಬರೆಯುವ ಹಾಗೆ ವಾಸುಪೂಜ್ಯರಿಗೆ ಕ್ಷುಲ್ಲಕ ದೀಕ್ಷೆಯನ್ನು ನೀಡಿ, ದಿನಾಂಕ 12-06-1997ರ ಶುದ್ಧ ಸಪ್ತಮಿ ದಿನದಂದು ಹೇಮಾಂಗ ದೇಶದ ಪೂಜ್ಯ ಪಾದಾಚಾರ್ಯರ ತಪೋವನವಾದ ಗಂಗ, ಹೊಯ್ಸಳ, ವಿಜಯ ನಗರ, ಮೈಸೂರು ಒಡೆಯರು ನಂಬಿದ ವಿಜಯ ಪಾರ್ಶ್ವನಾಥನ ಸ್ಥಾನವಾದ ಕನಕಾದ್ರಿಯ ಮಠದ ಪಟ್ಟಾದೀಶರಾಗಿ ನೇಮಕವಾಗಿ ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಎಂದು ಸಂಭೋದಿತರಾದರು.

ಮೈಸೂರು ಪ್ರಾಂತ್ಯದ ಕಾವೇರಿ ದಟ್ಟದಲ್ಲಿ ಸುರಮ್ಯ ಸ್ವರ್ಗ ಸಮಾನ ದೇವೊಪನಿತ ಶಿಖರದ ಪವಿತ್ರ ಸಿದ್ದ ಭೂಮಿಯ ಧಾರ್ಮಿಕ ಸಿದ್ದ ಸಿಂಹಾಸನ ಶ್ರೀಕ್ಷೇತ್ರ ಕನಕಗಿರಿಯ ಪೀಠಾಧ್ಯಕ್ಷರಾಗಿ ಫಟ್ಟಾಭಿಷೇಕವಾದ ದಿನದಿಂದ ಶ್ರೀ ಕ್ಷೇತ್ರ ಕನಕ ಗಿರಿಯನ್ನು 25 ವರ್ಷಗಳ ನಂತರ ನೋಡುವ ಕನಕ ಗಿರಿಯೇ ಬೇರೆ ಎನ್ನಿಸುವಷ್ಟು ಅಭಿವೃದ್ಧಿ ಕಾರ್ಯವನ್ನು ಕೈಗೊಂಡು ಕೆಲಕಾಲ ನಿಂತು ಹೋಗಿದ್ದ ಭಗವಾನ್ ಶ್ರೀ ಪಾರ್ಶ್ವನಾಥರ ಮೋಕ್ಷ ಕಲ್ಯಾಣ ಮುಕುಟ ಸಪ್ತಮಿ ಮಹೋತ್ಸವದ ವೈಭವ ಆಚರಣೆಗೆ ಚಾಲನೆ ನೀಡಿ ಆಚಾರ್ಯ ಪೂಜ್ಯ ಪಾದ ಮುನಿಗಳ ತಪೋಭೂಮಿಯಾದ ಶ್ರೀಕ್ಷೇತ್ರ ಕನಕ ಗಿರಿಯು ಭಾರತದಲ್ಲೆಲ್ಲ ಪ್ರಸಿದ್ದ ತೀರ್ಥ ಕ್ಷೇತ್ರವಾಗಲು ಹಾಗೂ ಧರ್ಮ ಜಾಗೃತಿಗಾಗಿ ದೇಶಾಧ್ಯಂತ ಸಂಚಾರ ಮಾಡಿದರು.

ಇವರ ಅಭಿವೃದ್ಧಿ ಕಾರ್ಯಗಳು ಒಂದೆರಡಲ್ಲಾ ಶ್ರೀ ಕ್ಷೇತ್ರ ಕನಕಗಿರಿ ಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರ, ಶ್ರೀ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿ, ಪೂಜ್ಯ ಪಾದ ವಿಧ್ಯಾಪೀಠ ಸ್ಥಾಪನೆ, ಈ ಗುರು ಕುಲದಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಕ್ಕೆ ವ್ಯವಸ್ಥೆ, ಉನ್ನತ ವ್ಯಾಸಾಂಗಕ್ಕಾಗಿ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಿ ಅವರ ಶಿಕ್ಷಣಕ್ಕೆ ಪ್ರೋತ್ಸಹ, ವಾರಣಾಸಿ, ಮೋರೆನ, ಜೈಪುರಗಳಲ್ಲಿ ಧಾರ್ಮಿಕ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅಧ್ಯಾಯನಕ್ಕೆ ವ್ಯವಸ್ಥೆ, ಶ್ರೀ ಜೈನ್ ಎಜುಕೇಶನ್ ಸೊಸೈಟಿ ಅಸಹಾಯಕ ಮತ್ತು ಬಡ ವಿಧ್ಯಾರ್ಥಿಗಳಿಗೆ ಪ್ರಾಥಮಿಕ ಮಟ್ಟದಲ್ಲಿ ಪ್ರೌಡ ಶಿಕ್ಷಣದವರೆಗೆ ಸಂಪೂರ್ಣ ಶಿಕ್ಷಣದ ವ್ಯವಸ್ಥೆ, ವಿಧ್ಯಾರ್ಥಿಗಳಿಗೆ ತಾಂತ್ರಿಕ ವೈದ್ಯಕೀಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ವ್ಯವಸ್ಥೆ. ಪ್ರತಿವರ್ಷ ಮೈಸೂರು, ಚಾಮರಾಜ ನಗರ, ಕೊಡಗು ಹಾಗೂ ಮಂಡ್ಯ ವಿಭಾಗಿಯ ಪದವಿ ಪೂರ್ವ ಕಾಲೇಜುಗಳ ಸುಮಾರು 1,000 ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರಗಳ ಆಯೋಜನೆ, ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ಕೀರ್ತಿ ಸನ್ಮಾನ ನೀಡಿ ಪ್ರತಿಭಾ ಪುರಸ್ಕಾರ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ತಾನ ಟ್ರಸ್ಟ್ ಮೂಲಕ ಚಾಮರಾಜ ನಗರ ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಮೂಗುರು, ಕುದೇರು, ಉಮ್ಮತ್ತೂರು, ತಗಡೂರು, ಮಲೆಯೂರು, ಚಾಮರಾಜ ನಗರ, ಬೆಳಗಲಿ, ಗೊಮ್ಮಟಗಿರಿ, ಮಾಕೋಡು, ಬಸದಿ ಹೊಸಕೋಟೆ, ಶ್ರೀರಂಗ ಪಟ್ಟಣ್ಣ, ಸಾಲಿಗ್ರಾಮ, ಹೆಚ್ ಡಿ ಕೋಟೆ ಸುಮಾರು 25ಕ್ಕೂ ಹೆಚ್ಚು ಪ್ರಾಚೀನ ಜಿನ ಮಂದಿರಗಳ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾಪನೆ. ಶ್ರೀ ಕ್ಷೇತ್ರದಲ್ಲಿ 18 ಅಡಿ ಎತ್ತರದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪ್ರತಿಷ್ಠಾಪನೆ. ಗಜರಥ ಮಹೋತ್ಸವ, ಕನಕ ಗಿರಿ ಅತಿಶಯ ಮಹೋತ್ಸವ ಮತ್ತು ಮುಕುಟ ಸಪ್ತಮಿ ಮಹೋತ್ಸವಗಳ ಆಯೋಜನೆ.

ಈ ಸುಸಂದರ್ಭದಲ್ಲಿ 1290 ವಿಧ್ಯಾರ್ಥಿನಿಗಳು ಪೂಜ್ಯ ಪಾದರ ಬೃಹತ್ ಚರಣದ ಆಕೃತಿ ನಿರ್ಮಿಸಿ ಗಿನ್ನಿಸ್ ವಿಶ್ವದಾಖಲೆ ಜೊತೆಗೆ ಒಂದು ನಿಮಿಷದಲ್ಲಿ ಸ್ವಸ್ತಿಕ ಆಕಾರದಲ್ಲಿ 3000 ವಿಧ್ಯಾರ್ಥಿಗಳು ಏಕಕಾಲದಲ್ಲಿ ದೀಪ ಬೆಳಗುವುದರ ಮೂಲಕ ದಾಖಲೆ, ಶ್ರೀ ಕ್ಷೇತ್ರದಲ್ಲಿ ಪ್ರತಿ ಮಾಹೆ ಉಚಿತ ನೇತ್ರ ತಪಾಸಣೆ, ಔಷದಿಗಳೂ ಮತ್ತು ಕನ್ನಡಕ ವಿತರಣೆ ಹಾಗೂ ಪ್ರತಿನಿತ್ಯ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ ವ್ಯವಸ್ಥೆ ನಿಶುಲ್ಕ ಅಲೋಪತಿ ಔಷದಿ ವಿತರಣೆ. ಪೂಜ್ಯ ಪಾದ ಆಯುರ್ವೇದ ಪುರಸ್ಕಾರದಲ್ಲಿ 1ಲಕ್ಷರೂ ನಗದು ರಜತ ಪ್ರಶಸ್ತಿ ಘೋಷಣೆ. ಅಹಿಂಸಾ ಶಾಂತಿ ಪುರಸ್ಕಾರ ಯೋಜನೆ ಮತ್ತು ಭಗವಾನ್ ಮಹಾವೀರ ಅಹಿಂಸ ಪುರಸ್ಕಾರ ಯೋಜನೆ. ಶ್ರೀ ಕ್ಷೇತ್ರದಲ್ಲಿ ಯಾತ್ರಿನಿವಾಸ, ಸಂತಭವನ, ಸಮುದಾಯ ಭವನ, ಧ್ಯಾನ ಮಂದಿರ, ಪೂಜ್ಯ ಪಾದ ಪರಗಾಮಾಗ ಮಂದಿರ ಹಾಗೂ ಅತಿಥಿ ಗೃಹಗಳ ನಿರ್ಮಾಣ.

ಕಾಡ ಪ್ರತಿಗಳು ಹಾಗೂ ಹಸ್ತಪ್ರತಿಗಳ ಸಂರಕ್ಷಣೆ, ಇಲ್ಲಿ 800 ಹೆಚ್ಚಿನ ತಾಳೆಗರಿ ಸುಮಾರು ಸಾವಿರ ಹಸ್ತಪ್ರತಿಗಳು ಮತ್ತು ಅಪೂರ್ವ ಗ್ರಂಥ ಕೃತಿಗಳ ಸಂಪಾಧನೆ ಮತ್ತು ಸಂರಕ್ಷಣೆಯನ್ನು ಮಾಡಲಾಗಿದೆ. ಸಿದ್ದಾಂತ, ಇತಿಹಾಸ, ಭೂಗೋಳ, ಖಗೋಳ ಮುಂತಾದ ಸಂಪೂರ್ಣ ಜೈನ ಧರ್ಮದ ಮಾಹಿತಿಯನ್ನು ಒಳಗೊಂಡ ಜೈನೇಂದ್ರ ಸಿದ್ದಾಂತ ಕೋಶಗಳ ಏಳು ಸಂಪುಟವನ್ನು ಕನ್ನಡದಲ್ಲಿ ಪ್ರಕಟಣೆ. ಹಾಗೂ ಪುರಾತನ ಪ್ರಕಟಿತ ಕೃತಿಗಳ ಪ್ರಕಾಶನ, ಉತ್ತರ ಪ್ರದೇಶ, ವಾರಣಾಸಿ, ಕೌಶಾಂಭಿ, ಚಂದ್ರಪುರಿಗಳಲ್ಲಿ ತೀರ್ಥಂಕರರ ಜನ್ಮ ಭೂಮಿಯ ಜೀರ್ಣೋದ್ಧಾರ, ಮಧುರೈನ ದೀಪಂಗುಡಿ, ವಿಜಯಮಂಗಲ, ಮುನ್ನಾರಗುಡಿ ಮಂದಿರಗಳ ಜೀರ್ಣೋದ್ಧಾರ. ಒರಿಸ್ಸಾದ ಕಂಡಗಿರಿ, ದೌಳಿಯ ಕುಂಠಿ, ಪಶ್ಚಿಮ ಬಂಗಾಲದ ಪುರುಲಿಯ, ಜಾರ್ಖಂಡ್ ತಮಾಡ್ ಹಾಗೂ ಬುಂಡೋಗ್ರಾಮದಲ್ಲಿ ಆದಿವಾಸಿಗಳಿಗಾಗಿ ಶ್ರಮಣ ಭಾರತಿ ಶಿಕ್ಷಣ ಪರಿಷತ್ ಸ್ಥಾಪಿಸಿ ಪಾಠಶಾಲೆ ಗುರುಕುಲಗಳನ್ನು ತೆರೆಯಲಾಗಿದೆ. ಬೆಟ್ಟದ ಕೆಳಗೆ ಭಗವಾನ್ ಶ್ರೀ ಪಾರ್ಶ್ವನಾಥರ ಸುಂದರ ಜಿನ ಮಂದಿರದ ನಿರ್ಮಾಣ.

ಇವರ 25 ವರ್ಷಗಳ ವ್ಯಕ್ತಿತ್ವ ಹಾಗೂ ಕಾರ್ಯಗಳನ್ನು ಹೇಳಲು ಈ ಅಲ್ಪಾವದಿ ಸಾಲದು, ಆದರು ಪ್ರಯತ್ನವಿದ್ದರೆ ಮಾರ್ಗ ಎನ್ನುವಾಗೆ ಪ್ರಯತ್ನಿಸಿದ್ದಿದೇನೆ 25 ವರ್ಷದ ವರದಂತೋತ್ಸವದ ಶುಭಾಷಯಗಳು ಪೂಜ್ಯರಿಗೆ ಇಚ್ಚಾಮಿ ಸ್ವಾಮೀಜಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್