ಜಾನಪದ, ಕವಿತೆ , ನಾಟಕ , ಸಾಹಿತ್ಯ ವಿಮರ್ಷೆ, ಅನುವಾದ, ಗ್ರಂಥ ಸಂಪಾದನೆ, ಶೈಕ್ಷಣಿಕ ಸಾಹಿತ್ಯ ಹೀಗೆ ಸಾಹಿತ್ಯದ ಹಲವು ಪ್ರಾಕಾರಗಳಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿರುವ ಮಲೆನಾಡಿನ ಅಪ್ಪಟ ಪ್ರತಿಭೆ ಶಿಕ್ಷಣ ತಜ್ಞ ಡಾ|| ಎಸ್. ಪಿ ಪದ್ಮಪ್ರಸಾದ್ ಅವರು ಶಿವಮೊಗ್ಗ ಜಿಲ್ಲೆ ಹೊಸ ನಗರದಲ್ಲಿ 9/12/1949ರಂದು ಜನಿಸಿದರು. ಬಿ.ಎಸ್ಸಿ, ಎಂ.ಇ ಪದವಿದರರಾದ ಎಸ್.ಪಿ ಪದ್ಮಪ್ರಸಾದ್ ರವರು ಶಿಕ್ಷಣ ಕ್ಷೇತ್ರದಲ್ಲಿ 45 ವರ್ಷಗಳಷ್ಟು ದೀರ್ಘ ಅವಧಿಯ ಬೋಧನೆ ಮತ್ತು ಆಡಳಿತಾನುಭವ ಹೊಂದಿರುತ್ತಾರೆ. ಕಾವ್ಯ ಜೀವಿ ಇವರ ಕಾವ್ಯ ನಾಮ ವಾಗಿರುತ್ತದೆ. ನೂರಕ್ಕೂ ಹೆಚ್ಚು ಪುಸ್ತಕಗಳ ಲೇಖಕರಾಗಿರುವ ಡಾ|| ಎಸ್.ಪಿ ಪದ್ಮಪ್ರಸಾದ್ ರವರು 5 ನಾಟಕಗಳು 8 ಸಾಹಿತ್ಯ ವಿಮರ್ಶಾ ಗ್ರಂಥಗಳು , ನಾಲ್ಕು ಜೀವನ ಚರಿತ್ರೆ. ಎರಡು ಕವನ ಸಂಕಲನಗಳು , 7 ಶೈಕ್ಷಣಿಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 12 ಜಾನಪದ ಸಾಹಿತ್ಯ ಸಂಶೋಧನಾ ಕೃತಿಗಳು , ನಾಲ್ಕು ಪ್ರವಾಸ ಕಥನ ಲೇಖನಗಳ ಲೇಖಕರಾಗಿದ್ದಾರೆ. 5 ಜೈನ ಧರ್ಮದ ಕುರಿತಾದ ಕೃತಿಗಳನ್ನು ರಚಿಸಿದ್ದಾರೆ. ಆಧುನಿಕ ಜೈನ ಪುಣ್ಯ ಪುರುಷರು ಮಾಲಿಕೆಯ 8 ಜೀವನ ಚರಿತ್ರೆಗಳು , ಜೈನ ಕವಿ ಕಾವ್ಯ ಮಾಲೆಯ 8 ಕೃತಿಗಳು ಆಚಾರ್ಯ ಮಹಾ ಪ್ರಾಜ್ಞ ಮತ್ತು ಆಚಾರ್ಯ ಶ್ರಾಮ್ಯರ 10 ಕೃತಿಗಳ ಸಂಪಾದಕರಾಗಿದ್ದಾರೆ. ಇವಲ್ಲದೇ ಆಂಗ್ಲ ಭಾಷೆಯಲ್ಲಿ ಹಲವು ಶೈಕ್ಷಣಿಕ ಕೃತಿಗಳ ಮತ್ತು ಕೆಲ ಕಾದಂಬರಿಗಳ ಲೇಖಕರಾಗಿದ್ದಾರೆ. ಜೈನ ಜಾನಪದ ಸಾಹಿತ್ಯ ಮಳೆ ಒಂದು ಜಾನಪದೀಯ ಅಧ್ಯಯನ , ಭಾರತದಲ್ಲಿ ಪ್ರೌಢ ಶಿಕ್ಷಣ , ಜೈನ ಧರ್ಮಕ್ಕೊಂದು ಕೈಪಿಡಿ, ಕೈಗುಂದಿಯ ಧಂಗೆ ಮತ್ತು ಜೂನ್ ಮಾಲಾ ಭೂಮಿ ಪ್ರಸಂಗ ಎಂಬ ನಾಟಕಗಳು ಹೀಗೆ ಹಲವಾರು ಇವರ ಪ್ರಮುಖ ಕೃತಿಗಳಾಗಿವೆ. ಚೀನಾ, ಸಿಂಗಪೂರ್, ಶ್ರೀಲಂಕಾ , ಭೂತಾನ್ , ಕಾಂಬೋಡಿಯಾ , ಮಲೇಶಿಯಾ, ಯು.ಕೆ ಹೀಗೆ ಹಲವು ದೇಶಗಳನ್ನು ಪ್ರವಾಸ ಮಾಡಿರುವುದಲ್ಲದೇ ಆ ದೇಶಗಲ ಕುರಿತು ಹಲವು ಆಸಕ್ತಿದಾಯಕ ಪ್ರವಾಸ ಕಥನಗಳನ್ನು ಬರೆದ ಹೆಗ್ಗಳಿಕೆ ಇವರದ್ದು . ಸುವರ್ಣ ಪದ್ಮ. ಸತ್ವ ಹಾಗೂ ವಜ್ರ ಪದ್ಮ ಎಂಬ ಅಭಿನಂದನಾ ಗ್ರಂಥಗಳು ಇವರಿಗೆ ಸಮರ್ಪಿತವಾಗಿವೆ. ಅರವಂತಿಗೆ, ಅನುಪ್ರತಾಪ್ ಸಾಹಿತ್ಯ ಅಕಾಡೆಮಿ ವಾರ್ತಾ ಪತ್ರಗಳ ಪತ್ರಿಕಾ ಸಂಪಾದನಾ ಕಾರ್ಯವನ್ನು ಇವರು ನಿರ್ವಹಿಸಿದ್ದಾರೆ. ಡಾ|| ಎಸ್.ಪಿ ಪದ್ಮಪ್ರಸಾದರ್ ರವರು ಹಲವು ಪ್ರಶಸ್ತಿ ಪುರಸ್ಕಾರಗಳಿಂದ ಸನ್ಮಾನಿತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ , ಹೊಂಬುಜ ಜೈನ ಮಠದಿಂದ ಸಿದ್ದಾಂತ ಕೀರ್ತಿಪ್ರಶಸ್ತಿ , ಮೂಡುಬಿದಿರೆ ವರ್ಧಮಾನ ಪೀಠದಿಂದ ಪ್ರಶಸ್ತಿ ಜಾನಪದ ಪ್ರತಿಷ್ಠಾನದಿಂದ ಕುವೆಂಪು ಜಾನಪದ ದೀಪ ಪ್ರಶಸ್ತಿ , ಕರ್ನಾಟಕ ಜಾನಪದ ಅಲಾಡೆಮಿಯ ಜಾನಪದ ತಜ್ಞ ಪ್ರಶಸ್ತಿ. ಗೊಮ್ಮಟೇಶ್ವರ ವಿದ್ಯಾ ಪೀಠ ಪುರಸ್ಕಾರ ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶ್ರೀಯುತರಿಗೆ ಜ್ಞಾನದೀಪಿಕೆಯು ಗೌರವಪೂರ್ಣ ಹಾಗೂ ಅನಂತಾನಂತ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ನಾವು ಅವರನ್ನು ಸಂದರ್ಶನ ಮಾಡಿದಾಗ ಅವರ ಕಾವ್ಯನಾಮ ವಾದ ಕಾವ್ಯಜೀವಿ ಯ ಬಗ್ಗೆ ಅದರ ಹಿನ್ನೆಲೆಯನ್ನು ಕೇಳಿದಾಗ ಅದಕ್ಕೆ ಅವರು ನಾನೆ ಸ್ವತಃ ಇಟ್ಟುಕೊಂಡಿರುವ ಕಾವ್ಯನಾಮ . ಅದರ ಹಿಂದಿನ ಅರ್ಥವೆಂದರೆ ಕಾವ್ಯವನ್ನು ಬರೆಯುವುದಕ್ಕಿಂತ ಬದುಕೇ ಕಾವ್ಯ ವಾಗುವುದು ಬಹಳ ಮುಖ್ಯ ವೆಂದು ಎನ್ನುವ ಆಸೆಯಿಂದ ಈ ಕಾವ್ಯಜೀವಿ ಎನ್ನುವ ಹೆಸರು ಬಂದಿತು ಎಂದರು. ಸುಮಾರು 10 ಪುಸ್ತಕಗಳು ಪ್ರಕಟವಾಗುವವರೆಗೂ ಆ ಹೆಸರಿನಲ್ಲಿ ಪ್ರಕಟವಾಯಿತು. ಆಮೇಲೆ ಅದನ್ನು ನಿಧಾನವಾಗಿ ಹಿಂದಕ್ಕೆ ಸರಿಸುತ್ತಾ ಬಂದೆ ಬಹಳ ಜನ ಹೇಳದರು ಅದು ಯಾರು ಎಂದು ಗೊತ್ತಾಗುತ್ತಿಲ್ಲ ಎಂದು ಅದಕ್ಕೆ ನಾನೇ ಆ ಕಾವ್ಯ ನಾಮವನ್ನು ಕೈಬಿಟ್ಟು ಹಾಗೇಯೇ ನನ್ನ ಹೆಸರು ಕೊಟ್ಟು ಪ್ರಕಟಿಸಲು ಶುರು ಮಾಡಿದೆವು. ಅವರ ಸಾಹಿತ್ಯ ಬರೆಯುವ ಕಲೆಗೆ ಮೂಲ ಪ್ರೇರಣೆ ನನ್ನ ತಂದೆಯವರು ಎಂದು ತಿಳಿಸಿದರು. ನನ್ನ ತಂದೆಯ ತಂದೆ ಕಾಲದಿಂದಲೂ ಸಾಹಿತ್ಯಗಳನ್ನು ಬರೆಯುವ ಕಲೆ ನನಗೆ ಅಲ್ಲಿಂದ ಬಂದಿದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ ಎಂದು ತಿಳಿಸಿದರು. ನನ್ನ ಬರವಣಿಗೆ ಪ್ರಾರಂಭವಾಗಿದ್ದೇ ಲಲಿತಾ ಪ್ರಬಂಧಗಳಿಂದ ಅಂದಿನಿಂದಲೂ ಕಲೆಯನ್ನು ಮುಂದುವರೆಸಿಕೊಂಡು ಬಂದಿದ್ದೇನೆ. ಅವರು ಮಾಡಿರುವ ಸಾಧನೆಗೆ ನಮ್ಮ ಜ್ವಾಲಾಮಾಲಾ ನ್ಯೂಸ್ ಚಾನೆಲ್ ನ ಪರವಾಗಿ ಗೌರವಪೂರ್ಣ ಹಾಗೂ ಅನಂತಾನಂತ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಹೀಗೆ ನಮ್ಮ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರಿ . ಜೈ ಜಿನೇಂದ್ರ.














