ಉದ್ಘಾಟನಾ ಕಾರ್ಯಕ್ರಮದ ಸಂಕ್ಷಿಪ್ತ

ಜಿನ ಭಜನಾ ಸ್ಪರ್ಧೆಯ ಮೊದಲ ದಿನದ ಉದ್ಘಾಟನೆಯ ಕಿರು ವಿಹಂಗಮ ನೋಟ / ಜ್ವಾಲಮಾಲ.ನ್ಯೂಸ್‌ / 2022

ಸಾಂಸ್ಕೃತಿಕ ನಗರಿ  ಪ್ರಕೃತಿ ಸಿರಿ, ಕಲೆಗಳ ನಾಡು ರಾಜಮನೆತನದ ಬೀಡು. ಸ್ವಚ್ಛತೆಗೆ ರಾಷ್ಟ್ರಮಟ್ಟದಲ್ಲಿ  ಹೆಸರಾದ ಮೈಸೂರಿನಲ್ಲಿ  ಕಲೆ ಮತ್ತು ಸಂಸ್ಕೃತಿಗೆ  ಪ್ರಾಧ್ಯಾನ್ಯತೆ ಕೊಡಲಾದ ಒಂದು ಸ್ಪರ್ಧಾ ಕಾರ್ಯಕ್ರಮ  ಅದುವೇ ಜಿನ ಭಜನಾ ಸ್ಪರ್ಧೆ ಸೀಸನ್ – 5 ನೇ ಆವೃತ್ತಿಯ ಅಂತಿಮ ಸುತ್ತು ಫಿನಾಲೆ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ಆಗಿರುವುದು ಶ್ರೀ ಡಿ. ಸುರೇಂದ್ರ ಕುಮಾರ್ ಮತ್ತು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಸಹಕಾರದಿಂದ ಎಂದರೆ ತಪ್ಪಾಗಲಾರದು. ಮತ್ತು ಇವರಿಗೆ ಸಹಕಾರವನ್ನು ಕೊಡುತ್ತಿರುವ ಅವರ ಜೈನ ಸಮುದಾಯ ತಂಡ ಹಾಗೂ ಜೈನ್ ಮಿಲನ್ ತಂಡಗಳು .ಎಲ್ಲರೂ ಒಂದೆಡೆ ಸೇರಿರುವುದು ತುಂಬಾ ಹೆಮ್ಮೆಯ ವಿಷಯ.

ಚಿತ್ರ ಜಿನೇಂದ್ರ ರವರ ಕೈಂಕರ್ಯದಲ್ಲಿ  ಸಜ್ಜಾದ ವೇದಿಕೆ ಅರಮನೆಯ ಪ್ರತಿಕೃತಿಗೆ ನಿಧಾನವಾಗಿ ಹೊಮ್ಮಿಸಲಾದ ದೀಪಾಲಂಕಾರಗಳ ಅಲಂಕಾರ ವೇದಿಕೆ ಅಂದವನ್ನು ಹೆಚ್ಚಿಸಿತು. ಸ್ವತಃ ಮಹಾರಾಜರೇ ಅರಮನೆ ಅಂಬಾರಿಯ ಮುಂದೆ ನಿಂತಂತೆ ಭಾಸವಾಯಿತು. ನಂತರ ಮೈಸೂರು ಸಂಸ್ಥಾನದ ಶ್ರೀ ಯದುವೀರ್ ಮಹಾರಾಜರು ಒಡೆಯರ್, ಶ್ರೀ ಕ್ಷೇತ್ರ ಜೈನದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು  ಹಾಗೂ ವೇದಿಕೆ ಗಣ್ಯರುಗಳಿಂದ  ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟನೆ ಗೊಂಡಿತು.