ಉತ್ತರ ಕನ್ನಡ ಜಿಲ್ಲೆಯ ಪ್ರಸಿಧ್ದ ಧಾರ್ಮಿಕ ಕ್ಷೇತ್ರ ಅತಿಶಯಕ್ಷೇತ್ರ ಸ್ತವನಿಧಿ ನವಕಂಡ ಪಾರ್ಶ್ವನಾಥಸ್ವಾಮಿ ಶಾಂತಿನಾಥಸ್ವಾಮಿ ನೇಮಿನಾಥಸ್ವಾಮಿ ಆದಿನಾಥಸ್ವಾಮಿ ಹಾಗೂ ಅತಿಶಯಕಾರಿ ಬ್ರಹ್ಮದೇವರು ಹಾಗೂ ಪದ್ಮಾವತಿ ಅಮ್ಮನವರ ನೆಲೆಬೀಡು ಬನ್ನಿ ವೀಕ್ಷಕರೇ ಪ್ರಕೃತಿ ದತ್ತ ಈ ಧಾರ್ಮಿಕ ಕ್ಷೇತ್ರವನ್ನೋಮ್ಮೆ ದರ್ಶನ ಮಾಡಿ ಬರೋಣ .ಅತಿಶಯಕ್ಷೇತ್ರ ಸಿಧ್ಧಕ್ಷೇತ್ರ ತೀರ್ಥಕ್ಷೇತ್ರ ಎಂದೆಲ್ಲಾ ಕರೆಸಿಕೊಳ್ಳುವ ಒಂದು ಪಾವನ ಭೂಮಿ ಸುಂದರ ಪರಿಸರದಲ್ಲಿ ಪ್ರಕೃತಿ ನಿರ್ಮಿತ ಧಾರ್ಮಿಕಕ್ಷೇತ್ರ ಸ್ತವನಿಧಿ ಹಚ್ಚ ಗುಡ್ಡಗಾಡಿನಲ್ಲಿ ಜಿನಾಲಯದ ಪರಾಂಗಣದಲ್ಲಿ ನೆಲೆನಿಂತಿದ್ದಾರೆ. ಶ್ರೀ ಕ್ಷೇತ್ರಪಾಲ ಬ್ರಹ್ಮದೇವ ಇಲ್ಲಿನ ಮಾನ ಸ್ತಂಭದಲ್ಲಿ ಪಾರ್ಶ್ವನಾಥಸ್ವಾಮಿಯನ್ನು ಪ್ರತಿಷ್ಶಾಪಿಸಿದ್ದಾರೆ. ಮೂಲ ಮೂರ್ತಿಗಳಾಗಿ ನವಕಂಡ ಪಾರ್ಶ್ವನಾಥಸ್ವಾಮಿ ಶಾಂತಿನಾಥಸ್ವಾಮಿ ಆದಿನಾಥಸ್ವಾಮಿ ಹಾಗೂ ಚಿಂತಾಮಣಿ ಪಾರ್ಶ್ವನಾಥಸ್ವಾಮಿ ಆದರೆ ಸಂಕಷ್ಶನಿವಾರಿಣಿ ಶ್ರೀ ಪದ್ಮಾವತಿ ಮಾತೆ ಕೂಡ ಇಲ್ಲಿ ನೆಲೆಸಿದ್ದಾರೆ.ಮೇಲಿನ ಅಂಗಳದಲ್ಲಿ ಅದೇ ನಾಲ್ಕು ಮುಖದ ಚರ್ತುಮುಖ ಬಸೀದಿ ಇದೆ.ಇಲ್ಲಿ ಪ್ರತಿ ಅಮವಾಸ್ಯೆಯಲ್ಲಿ ಬ್ರಹ್ಮದೇವರಿಗೆ ವಿಷೇಶ ಪಲ್ಲಕ್ಕಿಉತ್ಸವದ ಪೂಜೆ ನೆಡೆಯುತ್ತದೆ ಚಂದ್ರಗುಪ್ತರು 100 ಮುನಿಗಳೊಂದಿಗೆ ಉತ್ತರದಿಂದ ದಕ್ಷಿಣದ ಕಡೆಗೆ ಪ್ರಯಾಣಮಾಡುವಾಗ ಮಾರ್ಗ ಮಧ್ಯೆ ಇಲ್ಲಿ ತಂಗಿದ್ದರು ತಪಸ್ಸನ್ನು ಆಚರಿಸಿದರು ಎಂದು ಹೇಳಲಾಗಿದೆ.16 ಸಾವಿರ ಹಿಂದಿನ ಪ್ರಾಚೀನ ಇತಿಹಾಸ ಹೊಂದಿದ ಈ ಬಸೀದಿಯಲ್ಲಿ 400 ವರ್ಷಗಳ ಹಿಂದೆ ಮೊಘಲರ ದಾಳಿಯಲ್ಲಿ ಬಸದಿ ನಾಶಮಾಡಿ ಇಲ್ಲಿನ ಒಂದು ಪಾರ್ಶ್ವನಾಥ ಜಿನವೆಂಬ 9 ಭಾಗಗಳಾಗಿ ಕಡಿತವಾಗುತ್ತದೆ.ಅದನ್ನು ವಜ್ರಲೇಪನದ ಮೂಲಕ ಪುನಹ ಪ್ರತಿಷ್ಶಾಪಿಸಲಾಗಿದೆ. ಅಂದಿನಿಂದ ಅದಕ್ಕೆ ನವಕಂಡ ಪಾರ್ಶ್ವನಾಥಸ್ವಾಮಿ ಎಂದು ಹೆಸರಿಸಲಾಗಿದೆ.ಮೊದಲನೆ ಬಸದಿಯ ಮೂರ್ತಿಯು ಸಹಾ ಮೊಘಲರ ದಾಳಿಯಲ್ಲಿ ನಾಪತ್ತೆಯಾಗಿ ಹೊಸದಾಗಿ ಚಿಂತಾಮಣಿ ಪಾರ್ಶ್ವನಾಥರ ಪ್ರತಿಷ್ಶಾಪನೆ ಮಾಡಲಾಗುತ್ತದೆ.ಅದೇ ಮೊಘಲರದಾಳಿಗೆ ಬಾರಿ ಬಂಡೆಯೊಂದು ಉರುಳಿಬಂದಾಗ ಮೊಘಲರು ಓಡಿ ಹೋಗುತ್ತಾರೆ.ಉಳಿದ ತೀರ್ಥಂಕರ ಪ್ರತಿಮೆಗಳು ನಾಶವಾಗುವುದು ತಡೆಯಾಗುತ್ತದೆ.ಹೀಗೆ ಉರುಳಿಬಂದು ನಿಂತ ಈ ಬಂಡೆಯನ್ನು ಕ್ಷೇತ್ರವನ್ನು ಪಾಲಿಸಿದ ಕ್ಷೇತ್ರಪಾಲ ಎಂದು ಕರೆಯುತ್ತಾರೆ ಅಂದಿನಿಂದ ಪೂಜಿಸಲ್ಪಡುವ ಬ್ರಹ್ಮದೇವರು ಅನೇಕ ಭಕ್ತರ ಸಂಕಟವನ್ನು ದೂರಮಾಡಿ ಇಲ್ಲಿ ದೂರ ದೂರದಪ್ರಧೇಶದವರೆಗೂ ಈ ಕ್ಷೇತ್ರ ಪ್ರಸಿದ್ದಿಯನ್ನು ಪಡೆದಿದೆ.ಈ ಭಕ್ತರ ಸಂಕಟ ನಿವಾರಣೆ ಮಾಡುವಂತಹ ಈ ಶ್ರೀ ಅಕ್ಷಯ ಕ್ಷೇತ್ರ ಸಿದ್ದಿ ಬ್ರಹ್ಮಕ್ಷೇತ್ರಪಾಲ ಮತ್ತು ಭಕ್ತರ ಸಂಕಟನಿವಾರಣೆಮಾಡಿ ಸೌಭಾಗ್ಯ ಕರುಣಿಸುವ ಜಗನ್ಮಾತೆ ದೇವಿ ಪದ್ಮಾವತಿ ಅಮ್ಮನವರಿಗೆ ನಮಸ್ಕಾರ ಮಾಡುತ್ತಾ ನಮ್ಮ ಜೈನ ಧರ್ಮದಲ್ಲಿ ಕುಲ ದೈವ ತತ್ವ ಎಂದರೆ ಬ್ರಹ್ಮದೇವರು ಪ್ರಥಮವಾಗಿ ತೆಂಗಿನಕಾಯಿ ಎರಿಸಿ ಘಟವನ್ನು ಸ್ಥಾಪನೆ ಮಾಡಿ ದೀಪಾರ್ಚಾನೆ ಮಾಡುತ್ತಾರೊ ಅದನ್ನು ನವರಾತ್ರಿ ಇಲ್ಲಿಂದ ಮುಂದುವರೆಯುತ್ತೆ ದಸರಾ ಹಬ್ಬ 9 ದಿನ ನೆಡೆಯುತ್ತದೆ. ಪದ್ಮಾವತಿ ದೇವಿ ಆರಾಧನ ಅಲಂಕಾರ ವಿರುತ್ತದೆ ಅದೇ ಪ್ರಕಾರವಾಗಿ ಬ್ರಹ್ಮದೇವರ ಆರಾಧನ ಅಲಂಕಾರ ವಿರುತ್ತದೆ.ಭಕ್ತರ ಸಂಕಟ ನಿವಾರಣೆ ಮಾಡುವ ಸಾಮರ್ಥ್ಯ ಇದೆ. 100 ಕಿ.ಮೀ 50 ಕಿ.ಮೀ ಆದರೂ ಜನರು ಪ್ರತಿ ಭಾನುವಾರ ನೆಡೆದು ಇಲ್ಲಿಗೆ ಬರುವಂತ ಮಂದಿ ಬಹಳಷ್ಶು ಜನ ಇದ್ದಾರೆ.ಅವರ ಇಚ್ಛಾಪೂರ್ತಿಯಾಗಿರುವ ಸಲುವಾಗಿ ಮನಕಾರ್ಯ ಸಿದ್ದಿ ಆಗಿರುವುದರಿಂದ ಮನಕಾರ್ಯಸಿದ್ದಿ ಬ್ರಹ್ಮದೇವ ಕ್ಷೇತ್ರಪಾಲ ಜನಗಳ ಇಚ್ಛಾಪೂರ್ತಿಯಾದ ನಂತರ ಆ ಮಗುವನ್ನು ಕರೆದು ಕೊಂಡು ಇಲ್ಲಿಯೇ ಮುಡಿ ಕೊಡುತ್ತಾರೆ.ನಾಮಕರಣ ಮದುವೆಕಾರ್ಯಕ್ರಮ ನೆಡೆಯುತ್ತವೆ.ಅತಿಶಯಕ್ಷೇತ್ರ ದಕ್ಷಿಣಭಾರತ ಜೈನ ಸಭಾ ಕ್ಷೇತ್ರದ ಅಧ್ಯಕ್ಷರು ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಮುಂದುವರೆಯುವುದು ಇದು 5 ಶಿಖರ ಅಸ್ತಿತ್ವ ಇರುವಂತಹ ಒಂದು ಕ್ಷೇತ್ರ ಅದೇ ಪ್ರಕಾರವಾಗಿ ಇದೊಂದು ನಿಸರ್ಗರಮ್ಯ ವಾಗಿರುವಂತಹ ತಾಣ ಇದು ಇಲ್ಲಿ ಭಯಂಕರ ಮಂದಿ ದರ್ಶನಕ್ಕೆಂದು ಬರುತ್ತಾರೆ, ಮಾರ್ಗದಲ್ಲಿ ಒಂದು ಕೆರೆಪದ್ಮಾವತಿದೇವಿ ಬಸದಿ ಇದೆ ಕ್ಷೇತ್ರವನ್ನು ಪ್ರವೇಶಿದಲ್ಲಿ ಆದಿಯಲ್ಲಿ ಭಗವಾನ್ ಸಾವಿರದ ಎಂಟು ಜಿನ ಮಂದಿರವನ್ನು ನೋಡಬಹುದು ಯಾತ್ರಿಕರಿಗೆ ಉಳಿದು ಕೊಳ್ಳಲು ಯಾತ್ರೆಯ ವಾಸ ವಿದ್ಯಾರ್ಥಿಗಳಿಗೆ ಉಳಿದು ಕೊಳ್ಳಲು ವಿದ್ಯಾರ್ಥಿನಿಲಯಗಳು ಇಲ್ಲಿ ಇವೆ














