ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿಧ್ಯಾನಿಲಯ ಬೃಹತ್ ಸಂಸ್ಥೆ, ಮಾದರಿ ಸಂಸ್ಥೆ. ಉತ್ತರ ಕರ್ನಾಟಕ ಜಿಲ್ಲೆಯ ಆರೋಗ್ಯ ಪರ ಕಾಳಜಿ ಹಾಗೂ ಇಲ್ಲಿ ಉತ್ಕೃಷ್ಟ ವೈದ್ಯರುಗಳು ತಯಾರಾಗ ಬೇಕೆನ್ನುವ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆ ಅದನ್ನು ಸಕಾರ ಗೊಳಿಸಲು ಶ್ರಮಿಸುತ್ತಿರುವ ಡಾ|| ನಿರಂಜನ್ ಕುಮಾರ್ ರವರು ಹಾಗೂ ಇಲ್ಲಿ ಮಿಲನ ಗೊಂಡಿರುವ ಅನೇಕ ಸಂಸ್ಥೆಗಳ ಸಮಗ್ರ ನೋಟದೊಂದಿಗೆ ನಾವು ನಿಮ್ಮೊಂದಿಗೆ ಇದ್ದೇವೆ.

ಹೌದು ವೀಕ್ಷಕರೆ ಧರ್ಮವೆಂಬುದು ಮೈದೆಳೆದು ಸ್ವರೂಪ ತಾಳಿತೆಂದರೆ ಅದುವೇ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಪದ್ಮವಿಭೂಷಣ ರಾಜಶ್ರೀ ಡಾ|| ಡಿ ವೀರೇಂದ್ರ ಹೆಗ್ಗಡೆ ಯವರು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮದ ನೆಲೆಗಟ್ಟಿನಲ್ಲಿ ಜನಸಾಮಾನ್ಯರಿಗೆ ಪರಿಹಾರ ನೀಡುವ ಅನನ್ಯ ಧಾರ್ಮಿಕ ಕೇಂದ್ರವಾಗಿದೆ. ಶಿಕ್ಷಣದ ಮೂಲಕ ಜನರಲ್ಲಿ ನಿಜವಾದ ಧರ್ಮ ಪ್ರಜ್ಞೆ ನೀಡುವುದರ ಸದುದ್ದೇಶದಿಂದ ಬೆಳ್ತಂಗಡಿ ತಾಲ್ಲೂಕಿನಲ್ಲಿ ಆರಂಭವಾಗಿ ಹೀಗಾ ಬೃಹದಾಕಾರದಲ್ಲಿ ಬೆಳೆದು ರಾಜ್ಯದ ಹಲವೆಡೆಗಳಲ್ಲಿ ಮಾದರಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದೆ. ಇಂದಿನ ಧರ್ಮಾಧಿಕಾರಿಗಳ ಪ್ರೇರಣೆ ಮಾರ್ಗ ದರ್ಶನದಂತೆ ಇಂದಿನ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ಗುಣಮಟ್ಟದ ಶಿಕ್ಷಣದ ಮೂಲಕ ಸ್ವಸ್ತ್ಯ ಸಮಾಜದ ಕನಸನ್ನು ಹೊತ್ತು ಸಕಾರಗೊಳಿಸಿದ್ದಾರೆ.

ಜೈನರಲ್ಲಿ ಚತುರ್ವಿಧ ದಾನಗಳಿಗೆ ಪ್ರಾಧಾನ್ಯತೆ ನೀಡಲಾಗಿದ್ದು ಪೂಜ್ಯರು ಮೊದಲಿನಿಂದಲ್ಲು ಈ ಮೂಲ ಸೂತ್ರಗಳ ತಳ ಅದಿಯಲ್ಲಿ ಅನೇಕ ಯೋಜನೆಗಳನ್ನು ನಡೆಸುತ್ತಾ ಬಂದ್ದಿದು, ಇವರು ಹೊತ್ತು ನೀಡಿವ ದಾನಗಳಲ್ಲಿ ಔಷದ ಹಾಗೂ ವಿಧ್ಯಾದಾನವು ಸೇರಿದೆ. ಪೂಜ್ಯ ಹೆಗ್ಗಡೆಯವರ ಆಶಯದಂತೆ ಉತ್ಕೃಷ್ಟಮಟ್ಟದ ವಿದ್ಯಾಭ್ಯಾಸದಿಂದ ಗುಣಮಟ್ಟದ ವೈದ್ಯರ ಸೃಷ್ಠಿ, ಉತ್ಕೃಷ್ಟಮಟ್ಟದ ಸೇವೆಗಳಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಅಲ್ಲದೆ ಉತ್ಕೃಷ್ಟ ವಾತಾವರಣದಲ್ಲಿ ಹಾಗ ಬೇಕು ಜನ ಸಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗಬೇಕು ಎನ್ನುವ ಉನ್ನತ ದ್ಯೇಯದೊಂದಿಗೆ ಎದ್ದು ನಿಂತಿದೆ ಈ ಬೃಹತ್ ಸಂಸ್ಥೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯ ಧಾರವಾಡ.

ಇನ್ನೂ ಈ ಸಂಸ್ಥೆ ದೇಶ ವಿದೇಶಗಳಿಗೆ ಮಾದರಿಯಾದ ಪರಿಯನ್ನು ನಾವು ಹೇಳುತ್ತಾ ಹೋಗುತ್ತೇವೆ. ಪತ್ರಿ ಕ್ಷಣವನ್ನು ತಪ್ಪದೇ ಆಸ್ವಾದಿಸಿ ವೀಕ್ಷಕರೆ.

ನೋದ ಬಡಜನತೆಯ ಸಹಾಯಕ್ಕಾಗಿ ಹುಟ್ಟಿಕೊಂಡ  ಈ ಸಂಸ್ಥೆ ಉತ್ತರ ಕರ್ನಾಟಕದ ಜನರಿಗೆ ವರದಾನವಾಗಿದೆ. ಏಕೆಂದರೆ ಇಲ್ಲಿ ವ್ಯವಹಾರ ಧರ್ಮಕ್ಕಿಂತ ವ್ಯವಹಾರದಲ್ಲಿ ಧರ್ಮವಿದೆ, ವ್ಯವಹಾರದಲ್ಲಿ ಧರ್ಮ ಮಾನವಿಯತೆ ಕಾಳಜಿಯಿಂದ ಕೂಡಿದೆ. ಇದೇ ಶ್ರೇಷ್ಟ ಧರ್ಮವಾಗಿದೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ 2003ರಲ್ಲಿ ಆರಂಭವಾಯಿತು ಎಸ್ ಡಿ ಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಆಸ್ಪೆಟಲ್ ಧಾರವಾಡ ಎನ್ನುವ ಸಂಸ್ಥೆ. ಇಂದಿಗೆ ಇಲ್ಲಿನ ಪ್ರಾಂಗಣದಲ್ಲಿ ಮೆಡಿಕಲ್ ವಿಭಾಗದಲ್ಲಿ ಅನೇಕ ಕ್ಷೇತ್ರಗಳು ಸೇರಿದಂತೆ ಡೆಂಟಲ್, ನರ್ಸಿಂಗ್, ಫಿಜೀ಼ಯೋತೆರಫಿ, ರಿಸರ್ಚ್, ಬಯೋ ಮೆಡಿಕಲ್ ಸೈನ್ಸ್, ಸೂಪರ್ ಸ್ಪೇಶಾಲಿಟಿ ಡಿಪಾರ್ಟ್ ಮೆಂಟ್ ಇನ್ನೂ ಅನೇಕ ವಿಭಾಗಗಳು ಸೇರಿವೆ. ಮುಂದಿನ ದಿನಗಳಲ್ಲಿ ಅನೇಕ ವಿಭಾಗಗಳು ಸೇರಲಿವೆ.

ಭವ್ಯ ಭಾರತದಲ್ಲಿ ಅಷ್ಟೇ ಅಲ್ಲದೇ ವಿಶ್ವ ಮಟ್ಟದಲ್ಲಿ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಹೀಗೊಂದು ಗರಿಮೆ ಸಾಧನೆಯ ಹಾದಿ ಯಶೋಧಾತೆಯನ್ನು ಪೂಜ್ಯರಿಂದಲ್ಲೆ ಕೇಳೋಣ್ಣ ಬನ್ನಿ.

ಜ್ವಾಲಮಾಲ ಸಾಧಕರ ಹೆಜ್ಜೆ ಕಾರ್ಯಕ್ರಮದಲ್ಲಿ ಪೂಜ್ಯ ಡಾ|| ರಾಜ ಶ್ರೀ ವೀರೇಂದ್ರ ಹೆಗ್ಗಡೆಯವರು ನಮ್ಮೊಂದಿಗಿದ್ದಾರೆ.

 

 

ಇಲ್ಲಿನ ಪ್ರತಿಯೊಂದು ವಿಷಯವು ಒಂದಕ್ಕಿಂತ ಒಂದು ವಿಶೇಷವಾಗಿದ್ದು ಮುಂದೆ ಅವುಗಳನ್ನು ಪ್ರಸ್ತುತ ಪಡಿಸುತ್ತಾ ಹೊಗುತ್ತೇವೆ. ಅದಕ್ಕಿಂತ ಮುಂಚೆ ನಾವು ಹೇಳಲೆ ಬೇಕಾದ ವಿಷಯವೆಂದರೆ ಈ ಯೋಜನೆಗಳ ಹಿಂದೆ ಇರುವ ಶಕ್ತಿ ಯುಕ್ತಿ ಈ ಸಂಸ್ಥೆಯ ಉಪ ಕುಲಪತಿಗಳಾದ ಡಾ|| ನಿರಂಜನ್ ಕುಮಾರ್ ರವರು, ಹಾಗೂ ಪೂಜ್ಯ ಹೆಗ್ಗಡೆಯವರ ಸಹೋದರಿಯಾದ ಶ್ರೀಮತಿ ಪದ್ಮಲತಾ ನಿರಂಜನ್ ರವರು ಎಕೆಂದರೆ ತಮ್ಮ ಆತ್ಮಿಯ ಸಂಸ್ಥೆಯ ಬಗೆಗಿನ ಅವರ ಅಸಕ್ತಿ ಶ್ರದ್ದೆ ಎಷ್ಟು ಇದೆ ಎಂದರೆ ಅವರೆ ಸ್ವತಃ ನಿಂತು ಈ ವ್ಯವಸ್ಥೆಗಳನ್ನು ಒಳ್ಳೆಯ ಯೋಜನೆಯ ಮೂಲಕ ಅನುಷ್ಟಾನ ಗೊಳಿಸುತ್ತಾ ಬಂದಿದ್ದಾರೆ.

ಇಲ್ಲಿನ ಪರಿಸರ ಸ್ನೇಹಿ ವಾತಾವರಣ ವಿದ್ಯಾರ್ಥಿಗಳಿಗಾಗಲ್ಲಿ ಅಥವಾ ರೋಗಿಗಳಿಗಾಗಲ್ಲಿ ಉಲ್ಲಾಸದಾಯಕವಾಗಿದೆ. ಅವರಣವನ್ನು ಪ್ರವೇಶಿಸುತ್ತಲೆ ಹಸಿರು ಪರಿಸರ ಅಹಲ್ಲಾದಕರ  ವೇನಿಸುತ್ತದೆ. ಬೃಹದಾಕರದ ಕಾಂಕ್ರಿಟ್ ಕಟ್ಟಡಗಳು ಸುತ್ತಲು ಕಂಡರು ಒಳಾಂಗಣ ಹೊರಾಂಗಣದೆಲ್ಲೇಡೆ  ಹಸಿರು ಕಣ್ಣಿಗೆ ತಂಪನ್ನು ನೀಡುತ್ತದೆ. ಇಲ್ಲಿನ ಪ್ರತಿ ವಿಭಾಗದ ಕಟ್ಟಡಗಳನ್ನು ಪ್ರವೇಶಿಸುತ್ತಲೆ ದೇವರ ಪ್ರತಿಮೆಯನ್ನು ಇರಿಸಲಾಗಿದ್ದು ಬಂದಂತವರಿಗೆ ನಂಬಿಕೆ ದೈರ್ಯವನ್ನು ತುಂಬುತ್ತದೆ. ಅಲ್ಲದೆ ಬಹುಮುಖ್ಯವಾಗಿ ಗಮನಿಸ ಬೇಕಾದ ಅಂಶವೆಂದರೆ ಕಟ್ಟಡಗಳ ಬಹುತೇಕ ಭಾಗದಲ್ಲಿ ನೈಸರ್ಗಿಕ ಬೆಳಕಿಗೆ ಪ್ರದ್ಯಾನತೆಯನ್ನು ನೀಡಲಾಗಿದೆ. ಉಸಿರಾಟಕ್ಕೆ ಯೋಗ್ಯವಾದ ನೈಸರ್ಗಿಕ ಗಾಳಿಯೊಂದಿಗೆ ಉತ್ತಮ ವಾತಾವರಣ ನಿರ್ಮಾಣಗೊಳಿಸಲಾಗಿದ್ದು ಇಲ್ಲಿ ಬಂದಂತಹ ರೋಗಿಗಳಲ್ಲಿ ಆಸ್ಪತ್ರೆಯ ಅನುಭವವಾಗುವುದಿಲ್ಲಾ ಇದು ಬಹಳ ಮುಖ್ಯ. ಇಲ್ಲಿನ ವಾತಾವರಣಕ್ಕೆ ರೋಗಿಗಳಿಗೆ ಚೇತರಿಕೆಯ ಅನುಭವ ಕೊಡುತ್ತದೆ.

ಮತ್ತೊಂದು ಪ್ರಮುಖ ವಿಷಯವೆಂದರೆ ಇಲ್ಲಿನ ಪರಿಸರವನ್ನು ವಾಯುಮಾಲಿನ್ಯ ರಹಿತಗೊಳಿಸಲು ಆವರಣವನ್ನು ಪ್ರವೇಶಿಸಿದ ನಂತರ ನೂರಾರು ಎಕ್ಕರೆ ವಿಶಾಲವಾದ ಈ ಸ್ಥಳದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಮತ್ತೊಂದೆಡೆಗೆ ಸಾಗಲು ಬೈಸಿಕಲ್ ಅನ್ನು ಬಳಸಲಾಗುತ್ತದೆ. ಹಾಗೂ ಈ ಬೈಸಿಕಲ್ ಗಳನ್ನು ಸಂಸ್ಥೆಯಿಂದಲೇ ನೀಡಲಾಗುತ್ತದೆ. ಇಲ್ಲಿ ಸ್ವಂತ ವಾಹನಗಳಿಗೆ ಅವಕಾಶವಿರುವುದ್ದಿಲ್ಲಾ. ಇಲ್ಲಿಗೆ ಮಾಹಿತಿಯನ್ನು ಕೇಳಿಬರುವ ಪ್ರತಿ ವ್ಯಕ್ತಿಯನ್ನು ಕಡೆಗಣಿಸದೆ ಅವರಿಗೆ ಬೇಕಾದ ಮಾಹಿತಿ ಅಷ್ಟೇ ಅಲ್ಲದೆ ತಲುಪ ಬೇಕಾದ ವಿಭಾಗಗಳವರೆಗೂ ಅವರನ್ನು ಕರೆದೊಯ್ದು ಅವರಿಗೆ ಅಗತ್ಯದ ಸೇವೆಯನ್ನು ಒದಗಿಸಲಾಗುತ್ತದೆ.  ಇದು ಇಲ್ಲಿನ ಸಿಬ್ಬಂದಿಗಳಿಗೆ ನೀಡಲಾದ ಉತ್ತಮವಾದ ಸಂಸ್ಕೃತಿ. ಇಲ್ಲಿನ ವಿಶೇಷವೆಂದರೆ  ಸಂಸ್ಥೆಯ ಕಾಗದ ಪತ್ರಗಳು ಹಾಗೂ ರೋಗಿಗಳ ದಾಖಲಾತಿ ಸಹಿತ ಕಾಗದ ರಹಿತ ಅಂದರೆ ಎಲ್ಲವೂ ಗಣಕಿಕೃತಗೊಳಿಸಲಾಗಿದೆ. ಅದ್ಬುತವೆಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಕಾಗದ ರಹಿತವಾಗಿ ಈ-ಪ್ಯಾಡ್ ಗಳ ಮೂಲಕ ನಡೆಯುತ್ತದೆ.

ಸಂಸ್ಥೆಗೆ ಬೇಕಾದ ಅಗತ್ಯ ವಸ್ತುಗಳೆಲ್ಲವನ್ನು ರಾಸಾಯನಿಕ ಪದಾರ್ಥಗಳನ್ನು ಇಲ್ಲೆ ತಯಾರಿಸುವುದರಿಂದ ಇಡಿದು, ವಿದ್ಯಾರ್ಥಿಗಳು ಸಿಬ್ಬಂದಿಗಳು ಹಾಗೂ ರೋಗಿಗಳಿಗೆ ಉಟದ ವ್ಯವಸ್ಥೆ ಮಾಡಲಾಗುವ ಮೆಸ್ ಗಳಿಗೆ ಬೇಕಾಗುವ ತರಕಾರಿಗಳನ್ನು ಕೂಡ ಇದೆ ಆವರಣದಲ್ಲಿ ತೋಟಗಾರಿಕೆ ಮೂಲಕ ಬೆಳಸಲಾಗುತ್ತದೆ. ಬೇಕರಿ ತಿನಿಸುಗಳು ಸಹ ಇಲ್ಲೆ ತಯಾರಗುತ್ತದೆ. ಏಕೆಂದರೆ ಇಲ್ಲಿ ಬಳಸಲಾಗುವ ಪ್ರತಿಯೊಂದು ವಸ್ತು ಕೂಡ ಗುಣಮಟ್ಟವನ್ನು ಕಾಯ್ದುಕೋಳ್ಳುವ ಸಲುವಾಗಿ ತಗಲುವ ವೆಚ್ಚವನ್ನು ಕಡಿಮೆ ಗೊಳಿಸಲ್ಲು ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಲ್ಲಿನ ಮೈಟೆನೆನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಜನರೆಟರ್ ಗಳಿಗಾಗಿ ಕೂಡ ಸಂಸ್ಥೆ ಸ್ವತಃ ಡಿಜ಼ಲ್ ಟ್ಯಾಂಕರ್ ಗಳನ್ನು ಹೊಂದಿದೆ.

ಆಸ್ಪತ್ರೆ ಆವರಣದಲ್ಲಿ ಹೇಮಾವತಿ ಹೆಗ್ಗಡೆ ಅಮ್ಮನವರ ಸಿರಿ ಗ್ರಾಮೋದ್ಯೋಗ ಅಂಗಡಿಯನ್ನು ಪರಿಚಯಿಸಲಾಗಿದ್ದು ಇಲ್ಲಿಗೆ ಬೇಟಿ ಕೊಡುವವರಿಗೆ ಅಗತ್ಯ ವಸ್ತುಗಳನ್ನು ಗುಣಮಟ್ಟದಲ್ಲಿ ಕಡಿಮೆ ದರದಲ್ಲಿ ಪೂರೈಸಲಾಗುತ್ತದೆ. ಇಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಇತರರಿಗೆ ಸ್ಪೂರ್ತಿ ಹಾಗೂ ಇಲ್ಲಿನ ಸಿಬ್ಬಂದಿಗಳನ್ನು ಆಡಳಿತ ಮಂಡಳಿಯಿಂದ ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದು ಅವರು ಇಲ್ಲಿ ಕೆಲಸಗಳನ್ನು ಬಹಳ ಸಂತೃಪ್ತಿಯಿಂದ ಮಾಡುತ್ತಾರೆ. ಇಲ್ಲಿ ನಾಲ್ಕು ಸಾವಿರಕ್ಕು ಹೆಚ್ಚು ಸಿಬ್ಬಂದಿಗಳು ಹಾಗೂ ನಾಲ್ಕು ನೂರಕ್ಕು ಹೆಚ್ಚು ನೂರಿತ ಅರ್ಹ ವೈದ್ಯರುಗಳಿದ್ದಾರೆ. ಇಷ್ಟರವರೆಗೆ ಇಲ್ಲಿನ ಅಚಾರ ವಿಚಾರಗಳ ಬಗ್ಗೆ  ಸಂಕ್ಷಿಪ್ತವಾಗಿ ತಿಳಿದುಕೊಂಡಿದ್ದೇವೆ. ಮುಂದೆ ಇಲ್ಲಿನ ಸೇವೆ ಸೌಕರ್ಯಗಳ ಬಗ್ಗೆ ತಿಳಿಯೋಣ. ಇಲ್ಲಿ ಬಹುತೇಕ ಯುಜಿ, ಪಿಜಿ ಮತ್ತು ಪ್ಯಾರ ಮೆಡಿಕಲ್ ಕೋರ್ಸುಗಳು ಲಭ್ಯವಿದ್ದು ವಿದ್ಯಾರ್ಥಿಗಳ ಜೀವನದ ಮೌಲ್ಯ ವೃದ್ಧಿಗಾಗಿ ಸಕಲ ವ್ಯವಸ್ಥೆಯು ಈ ಆವರಣದಲ್ಲಿ ಇದೆ. ಅತ್ಯಧುನಿಕ ಶೈಲಿಯ ತರಗತಿಗಳು ಸುವ್ಯವಸ್ಥಿತವಾದ ಪ್ರಯೋಗಾಲಯಗಳು ಅನ್ವೇಶಣೆಗೆ ಯೋಗ್ಯವಾದ ಬೃಹತ್ ಸಂಶೋದನ ಕೇಂದ್ರಗಳು ವಿಶಾಲವಾದ ಗ್ರಂಥಾಲಯ ಪ್ರತಿ ವಿಭಾಗಗಳಿಗೂ ಪ್ರತ್ಯೇಕವಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳು ಹಾಗೂ ಉಪಹಾರ ನಿಲಯಗಳು ಅಲ್ಲಿ ರುಚಿಯಾದ ಆರೋಗ್ಯದಾಯಕವಾದ ಬಗೆಬಗೆಯ ತಿಂಡಿ ತಿನಿಸುಗಳು ಸೇರಿದಂತೆ ಪಾನಿಯಗಳ ವ್ಯವಸ್ಥೆಯು ಕೂಡ ಇದೆ. ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಮೈದಾನಗಳು ಯೋಗಾಭ್ಯಾಸ ಕೇಂದ್ರ ವಿದ್ಯಾರ್ಥಿಗಳ ಆಸಕ್ತಿಗೆ ಅನುಸಾರ ಸಾಂಸ್ಕೃತಿಕ ಚಟುವಟಿಕೆಗಳಿಗೆ ತರಬೇತಿ ಕೆಂದ್ರಗಳು ಹಾಗೂ ಅದಕ್ಕೆ ಸೂಕ್ತ ವೇದಿಕೆಗಳನ್ನು ಕಲ್ಪಿಸಲಾಗಿದೆ. ಇಷ್ಟೇ ಅಲ್ಲದೇ ಇನ್ನೂ ಹತ್ತು ಹಲವು  ಶೈಕ್ಷಣಿಕ ಸವಲತ್ತುಗಳಾದರೆ ಇಲ್ಲಿನ ಹಾಸ್ಪಿಟಲ್ ಗಳಿಗೆ ಬೇಟಿ ನೀಡುವ ರೋಗಿಗಳಿಗೆ ಸೇವೆಗಳ ಪಟ್ಟಿ ಇನ್ನೂ ದೊಡ್ಡದಾಗಿದೆ.

ಬುದ್ಧಿಮಾಂದ್ಯಮ ಮಕ್ಕಳಿಗೂ ಕೂಡ ಇಲ್ಲಿ ಚಿಕಿತ್ಸೆ ನೀಡಲಾಗಿದೆ, ಸ್ಪೆಷಾಲಿಟಿ ಸರ್ವಿಸ್ ನಲ್ಲಿ ಅನಸ್ತೆಶಾಲಜಿ, ನ್ಯಾಚುರೂಪತಿ, ಡೆರಮೆಟಾಲಜಿ, ಇ ಎನ್ ಟಿ ಸ್ಪಿಚ್ ತೆರಫಿ, ಜನರಲ್ ಮೆಡಿಸನ್, ಜನರಲ್ ಸರ್ಜರಿ, ಪಿಡಿಯಾಟ್ರಿಕ್ಸ್ ಇನ್ನೂ ಅನೇಕ ಹಾಗೂ ಸೂಪರ್ ಸ್ಪೆಶಾಲಿಟಿಯಲ್ಲಿ ಪ್ಲಾಸ್ಟಿಕ್ ಸರ್ಜರಿ, ಪಿಡಿಯಾಟ್ರಿಕ್ ಸರ್ಜರಿ, ನ್ಯೂರಾಲಜಿ, ನ್ಯೂರೂ ಸರ್ಜರಿ, ಕಾರ್ಡಿಯಾಲಜಿ, ಮೆಡಿಕಲ್ ಅನ್ಕೊಲಜಿ, ಡಯಬಿಟಾಲಜಿ ಹೀಗಿ ಇನ್ನೂ ಅನೇಕ ಸೌಲಭ್ಯಗಳು ಲಭ್ಯವಿದೆ. ಲ್ಯಾಭ್ಕೊಸ್ಕೊಪಿಕ್ ಸರ್ಜರಿ, ಕಾಸ್ಮೆಟಿಕ್ ಸರ್ಜರಿ, ಮೈಕ್ರೊವಾಸ್ಕುಲರ್ ಸರ್ಜರಿ, ಜಾಂಯಿಟ್ ರಿಪ್ಲೆಸ್ಮೆಂಟ್ ಸರ್ಜರಿ, ಬೈಪಾಸ್ ಸರ್ಜರಿ, ಒಪನ್ ಹಾರ್ಟ್ ಸರ್ಜರಿ ಸೇರಿದಂತೆ ಹಲವು ರೀತಿಯ ಶಸ್ತ್ರ ಚಿಕಿತ್ಸೆಗಳು ಇಲ್ಲಿ ಯಶಸ್ವಿಯಾಗಿ ನಡೆಯುತ್ತವೆ. ಕೋವಿಡ್ 19 ಸಂದರ್ಭದಲ್ಲಿ ಎಸ್ ಡಿ ಎಂ ಆಸ್ಪತ್ರೆಯ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಉಳಿದೆಲ್ಲಾ ದಾನಕ್ಕಿಂತ ಒಬ್ಬ ಮನುಷ್ಯನಿಗೆ ಪುನರ್ ಜನ್ಮ ನೀಡುವ ಅಂಗಾಂಗ ದಾನ ಶ್ರೇಷ್ಟ ಎಂದೆನ್ನುವ ಶ್ರೀ ಹೆಗ್ಗಡೆಯವರ ಪ್ರೇರಣೆಯಿಂದ ಎಸ್ ಡಿ ಎಂ ನಲ್ಲಿ ಡಾಕ್ಟರ್ ನಿರಂಜನ್ ಕುಮಾರ್ ರವರ ಮುಂದಾಳತ್ವದಲ್ಲಿ ಅಂಗಜೋಡಣ ಕಾರ್ಯಗಳು ಯಶಸ್ವಿಯಾಗಿ ನಡೆದಿವೆ. ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲು ವಿಶೇಷ ಶಸ್ತ್ರ ಚಿಕಿತ್ಸಾ ಘಟಕಗಳ ಮೂಲಕ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಏಕೆಂದರೆ ಸ್ವತಃ ಇಲ್ಲಿನ ಉಪಕುಲಪತಿಗಳಾದ ಶ್ರೀ ನಿರಂಜನ್ ಕುಮಾರ್ ರವರು ಶಸ್ತ್ರ ಚಿಕಿತ್ಸೆಯಲ್ಲಿ ನೈಪುಣ್ಯತೆ ಹೊಂದಿದ್ದು ಅತ್ಯುತ್ತಮ ಪ್ಲಾಸ್ಟಿಕ್ ಸರ್ಜನ್ ಹಾಗಿದ್ದಾರೆ. ಇವರಿಗೆ ಎರಡು ಬಾರಿ ಎಫ್ ಆರ್ ಸಿ ಎಸ್ ಎ ಪ್ರಶಸ್ತಿ ಸಿಕ್ಕಿದೆ. ಅದು ಅಷ್ಟು ಸುಲಭದ ಮಾತಲ್ಲಾ 1993ರಿಂದ 2003ರ ವರೆಗೆ ಬೆಂಗಳೂರಿನ ಮಣಿಪಾಲ್ ನಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಕನ್ಸಲ್ಟೆಂಟ್ ಹಾಗಿ ಕಾರ್ಯ ನಿರ್ವಹಿಸಿದ್ದು ನಂತರ ಧಾರವಾಡಕ್ಕೆ ಆಗಮಿಸಿ ಸಂಸ್ಥೆಯು ಮಾದರಿ ಸಂಸ್ಥೆಯಾಗಿ ಬೆಳೆಯಲು ಒಬ್ಬ ಕಾರಣಕರ್ತರಾಗಿರುತ್ತಾರೆ. ಪ್ರಸ್ತುತ ಇಲ್ಲಿ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಹಾಸ್ಪಿಟಲ್ ಧಾರವಾಡ ಇದರ ನಿರ್ದೇಶಕರು ಮತ್ತು ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಪ್ರಾಚಾರ್ಯರು ಕೂಡ ಹಾಗಿದ್ದಾರೆ.

ಇನ್ನೂ ಇವರ ಧರ್ಮಪತ್ನಿಯವರ ಬಗ್ಗೆ ಹೇಳುವುದಾದರೆ, ಧರ್ಮಸ್ಥಳದಂತಹ ಧರ್ಮಭೂಮಿಯ ಮಗಳಾದ ಪೂಜ್ಯ ಕಾವಂದರ ಸಹೋದರಿಯಾದ ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರು ತಮ್ಮ ಪತಿಯವರ ಕೆಲಸದಲ್ಲಿ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದು, ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕೂಡ ಜವಬ್ದಾರಿ ಹೊತ್ತಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ ಶ್ರದ್ಧೆ ಹೊಂದಿದ್ದು ಕ್ರೀಯಾಶೀಲರು ಸ್ನೇಹಶೀಲರು ಸರಳ ಸಜ್ಜನರು ಆದ ಇವರು ಪದವಿಯೊಂದಿಗೆ ಸಂಗೀತ ಪದವಿಯನ್ನು ಸಹಗಳಿಸಿದ್ದಾರೆ.

ದಂಪತಿಗಳಿಬ್ಬರೊಂದಿಗೆ ಮಾತನಾಡಿದ ಸುಂದರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಡಾ|| ನಿರಂಜನ್ ಕುಮಾರ್ ರವರು ಮತ್ತು ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರು ಜ್ವಾಲಮಾಲ ನ್ಯೂಸ್ ಗೆ ಅಭಿನಂದಿಸುವುದರ ಮೂಲಕ ತಮ್ಮ ಮಾತುಗಳನ್ನು ಆರಂಭಿಸಿದರು, ಅವರಿಗೆ ಪೂಜ್ಯ ಕಾವಂದರ ಸಲಹೆ ಮತ್ತು ಮಾರ್ಗ ದರ್ಶನದ ಮೂಲಕ ಸಂಸ್ಥೆಯನ್ನು ಆರಂಭಿಸಲು ಅವರು ನೀಡಿದ ದೈರ್ಯ ಮತ್ತು ಸಹಕಾರವನ್ನು ಕುರಿತು ವಿವರಿಸುತ್ತ ಮತ್ತು ಅವರ ಮುಖ್ಯ ಉದ್ದೇಶವಾದ ಬಡವರಿಗೆ ಕಡಿಮೆ ಬೆಲೆಯಲ್ಲಿ  ಕೈಗೆಟುಕುವಂತೆ ಸೌಲಭ್ಯಗಳು ದೊರಕಿಸುವುದರ ಬಗ್ಗೆ ಅವರ ಮಾತಿನ ಮೂಲಕ ವಿವರಿಸಿದರು.

ಹಾಗೂ ಸಂಸ್ಥೆಯಲ್ಲಿರುವ ಕಾಗದ ರಹಿತ ತಂತ್ರಜ್ಞಾನ ಮತ್ತು ಸಂಸ್ಥೆಯಲ್ಲಿರುವ ಸವಲತ್ತುಗಳ ಬಗ್ಗೆ ಹಾಗೂ ಕಾವಂದರ ಮತ್ತೊಂದು ಸಲಹೆಯಾಗಿದ್ದ ಸಂಸ್ಥೆಯ ಹೊರಗೂ ಹಸಿರು ಮತ್ತು ಸಂಸ್ಥೆಯ ಒಳಗೂ ಹಸಿರು ಎನ್ನುವುದರ ಬಗ್ಗೆ ತಿಳಿಸಿದರು. ಅವರು ವೈಯಕ್ತಿಕವಾಗಿ ಪ್ಲಾಸ್ಟಿಕ್ ಸರ್ಜನ್ ಹಾಗಿರುವುದರ ಬಗ್ಗೆ ಕೂಡ ಮಾತನಾಡಿದರು, ಅವರ ಸಿಬ್ಬಂದಿ ವರ್ಗದವರ ಸಹಕಾರದ ಮತ್ತು ಅವರು ಕಾರ್ಯ ನಿರ್ವಹಿಸುತಿರುವುದರ ಹಾಗೂ ಸಿಬ್ಬಂದಿಗಳ ಶ್ರದ್ಧೆ ಸಂಸ್ಕೃತಿಯ ಬಗ್ಗೆ ತಿಳಿಸಿದರು. ಸಿಬ್ಬಂದಿಯನ್ನು ಕೆಲಸಕ್ಕೆ ಆಯ್ಕೆ ಮಾಡುವಾ ವಿಧಾನವನ್ನು ವಿವರಿಸಿದರು.

ಪ್ಲಾಸ್ಟಿಕ್ ಸರ್ಜರಿಯಲ್ಲಿನ ಬರುವಂತಹ ಬಹು ಮುಖ್ಯವಾದ ವಿಧಗಳು ಮತ್ತು ಪ್ಲಾಸ್ಟಿಕ್ ಸರ್ಜರಿಮಾಡುವ ವಿಧಾನವನ್ನು ವಿವರಿಸಿ ತಮ್ಮ ಮಾತಿನ ಮೂಲಕ ತಿಳಿಸಿದರು.

ಅವರ ಧರ್ಮಪತ್ನಿಯಾದ ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರ ಸಹಕಾರ ನೀಡುವುದರ ಜೊತೆಗೆ ಸದಾ ಅವರಿಗೆ ಬೆನ್ನೆಲುಬಾಗಿ ನಿಂತು ಅವರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ತಮ್ಮ ಮಗ ಕೊಡ ಅವರೊಟ್ಟಿಗೆ ಕಾರ್ಯ ನಿರ್ವಹಿಸುತ್ತಿರುವುದನ್ನು ತಿಳಿಸಿದರು.

ನಂತರ ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರು ತಮ್ಮ ಮಾತೃಶ್ರೀಗಳಾದ ರತ್ನಮ್ಮ ರವರನ್ನು ನೆನಿಸಿಕೊಳ್ಳುವುದರ ಮೂಲಕ ಮಾತನ್ನು ಪ್ರಾರಂಭಿಸಿ ತಾವು ಬೆಂಗಳೂರಿನಿಂದ ಧಾರವಾಡಕ್ಕೆ ಆಗಮಿಸಿದ ಸಂದರ್ಭವನ್ನು ವಿವರಿತ್ತಾ ಮತ್ತು ಸಂಸ್ಥೆಗಳಿಗೆ ಬಂದಂತಹ ಪ್ರಶಸ್ತಿ ಪುರಸ್ಕಾರಗಳನ್ನು ತಿಳಿಸಿದರು.

ಮತ್ತು ತಮ್ಮ ಸಂಸ್ಥೆಯಲ್ಲಿ ಸರ್ಜರಿಗೆ ಬೇಕಾಗುವಂತಹ ಮತ್ತು ಆಪರೇಸನ್ ಗೆ ಬೇಕಾಗುವಂತಹ ಕೆಮಿಕಲ್ಸ್ ಗಳನ್ನು ತಾವೇ ತಯಾರಿಸಲು ಆರಂಭಿಸಿರುವುದರ ಮೂಲ ಉದ್ದೇಶ ಹಾಗೂ ಈ ರೀತಿಯ ಕೆಲಸದಿಂದ ಸಿಕ್ಕಂತಹ ಯಶಸ್ಸನ್ನು ವಿವರಿಸಿದರು.

ಅಂತಿಮವಾಗಿ ಜ್ವಾಲಮಾಲ ನ್ಯೂಸ್ ನ ಕಾರ್ಯವೈಕರಿಗೂ ಮತ್ತು ತಂಡದವರಿಗೂ ಅಭಿನಂದನೆ ತಿಳಿಸಿದರು.

ಜ್ವಾಲಮಾಲ ನ್ಯೂಸ್ ನತಂಡದವರಿಂದಲು ಕೂಡ ಡಾ|| ನಿರಂಜನ್ ಕುಮಾರ್ ರವರು ಮತ್ತು ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರಿಗೆ ಅಭಿನಂದಿಸಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್