ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಜ್ಞಾನಚಂದ್ರ ಚರಿತೆ ಮತ್ತು ಜೈನ ಧರ್ಮ ಇತಿಹಾಸ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಮತ್ತೊಂದು ಸರಣಿಕಾರ್ಯಕ್ರಮ ಜ್ಞಾನ ದೀಪಿಕೆಗಳು ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಸ್ವಾಗತ.
ಜ್ವಾಲಮಾಲ ಡಾಟ್ ನ್ಯೂಸ್ ನಿಂದ ಪ್ರಾರಂಭವಾಗಿರುವಂತಹ ಜ್ಞಾನ ದೀಪಿಕೆಗಳು ಈ ಒಂದು ಸರಣಿಕಾರ್ಯಕ್ರಮದಲ್ಲಿ ನಾವು ಪರಿಚಯ ಮಾಡಿಕೊಡುತ್ತಿರುವ ಪ್ರಾಚೀನ ಕೃತಿ ಜ್ಞಾನಚಂದ್ರ ಚರಿತೆ ಇದು ಬಹಳ ಪ್ರಮುಖವಾದಂತಹ ಪುಸ್ತಕ, ಮಹಾಕವಿ ಪಾಯಣ್ಣ ವರ್ಣಿ ವಿರಚಿತ ಜ್ಞಾನ ಚಂದ್ರ ಚರಿತೆ. ಈ ಕೃತಿಯ ಸಂಪಾದನೆ ಮಾಡಿರುವಂತವರು ಶ್ರೀ ರಘುಚಂದ್ರ ಶೆಟ್ಟಿ ಮೂಡುಬಿದ್ರೆ ಯವರು. ಮಹಾಕವಿ ಪಾಯಣ್ಣ ವರ್ಣಿ ವಿರಚಿತ ಜ್ಞಾನ ಚಂದ್ರ ಚರಿತೆ 1958ರಲ್ಲಿ ಸಂಪಾದಿತವಾದಂತಹ ಕೃತಿ, ಪ್ರತಿಗಳು ಹಾಗ ಆರು ರೂಪಾಯಿಗಳು ಇದ್ದವು. ಮೂಡುಬಿದ್ರೆಯಲ್ಲಿ ವೀರವಾಣಿ ವಿಲಾಸ ಜೈನ ಸಿದ್ದಾಂತ ಭವನ ಮೂಡುಬಿದ್ರೆ ಜಯ ಮುದ್ರಣ ಪ್ರಕಟಣ ಇಲ್ಲಿ ಪ್ರಕಟವಾದಂತಹದ್ದು. ಈ ಕೃತಿ ಪ್ರಕಟ ಮಾಡುವುದಕ್ಕೆ ಸಹಕಾರ ನೀಡಿದವರು ಮೈಸೂರಿನ ಸಾಹುಕಾರ್ ವರ್ಧಮಾನಯ್ಯನವರ ಸುಪುತ್ರಿ ಸೌಭಾಗ್ಯವತಿ ನಿರ್ಮಲಮ್ಮನವರು, ಅಲ್ಲಿನವರೆಗೂ ಪ್ರಕಟವಾಗದೆ ಉಳಿದ್ದಿದ್ದಾ ಕೃತಿಗೆ ಧನಸಹಾಯ ಮಾಡಿ ಅವರ ಅನೇಕ ಗೆಳತಿಯರಿಗೂ ಹೇಳಿ ಪ್ರಕಟಮಾಡಿಸಿದರು.
ಈ ಕೃತಿಯನ್ನು ಬರೆದಂತಹ ಶ್ರೀಮಾನ್ ಟಿ ರಘು ಚಂದ್ರ ಶೆಟ್ಟಿ ಯವರು ಸಂಪಾದನೆ ಕಾರ್ಯವನ್ನು ಅತ್ಯಂತ ಅಭಿಮಾನದಿಂದ ಮಾಡಿಕೊಟ್ಟಿದ್ದಾರೆ. ಕೃತಿ ಪೀಠಿಕೆಯಲ್ಲಿಯೇ ಕವಿ ಪಾಯಣ್ಣ ವರ್ಣಿ ಯವರು ಹೇಳಿರುವುದು, ಭರತೇಶ ವೈಭವದ ಮುಂದೆ ಜ್ಞಾನಚಂದ್ರ ಚರಿತೆ ಅತ್ಯಂತ ಸಮಾನ್ಯವಾದಂತಹ ಕೃತಿ ಎಂದು ಹೇಳಿದ್ದಾರೆ. ಜ್ಞಾನಚಂದ್ರ ಚರಿತೆಯನ್ನು ಬರೆದಿರುವ ಕವಿ ಪಾಯಣ್ಣ ವರ್ಣಿ ಯವರು ಶ್ರವಣಬೆಳಗೊಳದವರು, ಇವರ ತಂದೆ ನಾಗಪ್ಪಯ್ಯ ತಂದೆಯ ಕುರಿತು ಬೆಳಗುಳಾದ್ರಿಯ ಗೊಮ್ಮಟ ಸ್ವಾಮಿಯ ಸೇವಕ ಎಂದಿರುವುದರಿಂದ ಬೆಟ್ಟದ ಸ್ವಾಮಿಯ ಅರ್ಚಕರಿರಬಹುದು ಎಂದು ಸಂದೇಹ ಪಡುತ್ತಾರೆ. ತಾನು ಬರೆದ ಜ್ಞಾನಚಂದ್ರ ಚರಿತೆಯ ಬರೆದ ಕಾಲವನ್ನು ಗ್ರಂಥದ ಕೊನೆಯಲ್ಲಿ ದಾಖಲಿಸಿದ್ದಾರೆ. ಹಾಗಾಗಿ ಅವರ ಕಾಲ ಸುಮಾರು 1659ರಲ್ಲಿ ರತ್ನಾಕರವರ್ಣಿ ಕಾಲ 1557 ಹಾಗಿರುವುದರಿಂದ ರತ್ನಾಕರರ 100 ವರ್ಷಗಳ ನಂತರ ಬಂದಂತಹ ಈ ಕೃತಿ.
ಜ್ಞಾನ ಚಂದ್ರ ಚರಿತೆಯಲ್ಲಿ ಮೂರು ತಲೆಮಾರಿನ ಬೃಹತ್ ಕಥೆಯನ್ನು ಕಾಣುತ್ತೇವೆ, ಅನುಶಂಗಿಕವಾಗಿ ಬವಾಂತರ ಕಥೆಗಳು ಬಂದಿರುವುದರಿಂದ ಅವುಗಳು ಕರ್ಮ ವೈಚಿತ್ರವನ್ನು ಪ್ರದರ್ಶಿಸುವ ಐಂದ್ರ ಜಾಲಗಳಲ್ಲಿ ಮಾತ್ರ ಉಳಿಯದೆ ನೀತಿ ಭೋದನಾ ಸರಸ ಕಥೆಗಳು ಇದೆ.
ಈ ಜ್ಞಾನ ಚಂದ್ರ ಚರಿತೆ ಸಿಗುತ್ತದೊ ಇಲ್ಲವೊ ಗೊತ್ತಿಲಾ ಒಂದು ರತ್ನಾಕರ ನಂತರ ಬಂದಂತಹ ಒಬ್ಬ ಮಹತ್ತರ ಕವಿ ಬರೆದಂತಹ ಕೃತಿ
ಇನ್ನೊಂದು ಕೃತಿಯನ್ನು ನಾನು ಪರಿಚಯ ಮಾಡಿಸುತ್ತಿರುವುದು ಒಂದು ಪುಟ್ಟ ಕೃತಿ ಜೈನ ಧರ್ಮ ಇತಿಹಾಸ. ಈ ಕೃತಿಯನ್ನು ಬರೆದಿರುವಂತವರು ಡಾ|| ಹೊಳಲ್ಕೆರೆ ಶ್ರೀಪಾಲ ಶೆಟ್ಟಿ ಮಧನ ಕೇಸರಿಯವರು. ಈ ಕೃತಿಯನ್ನು ಬರೆದಿರುವಂತಹ ಡಾ|| ಹೊ ಶ್ರೀ ಮಧನ ಕೇಸರಿಯವರು ಬರೆದಿರುವಂತಹ ಅವರದೆ ಜನ ಜ್ಯೋತಿ ಪ್ರಕಾಶನ ದಿಂದ 2000ದಲ್ಲಿ ಬಂದಿರುವಂತಹ ಕೃತಿ ಹಾಗ 35ರೂಪಾಯಿಗಳು ಇತ್ತು.
ಡಾ|| ಹೊಳಲ್ಕೆರೆ ಶ್ರೀಪಾಲ ಶೆಟ್ಟಿ ಮಧನ ಕೇಸರಿಯವರು ಎಂ ಎ, ಬಿ ಎಲ್ ಮತ್ತು ಪಿ.ಹೆಚ್.ಡಿ ಯನ್ನು ಯೂ.ಎಸ್.ಎ ನಲ್ಲಿ ಮಾಡಿದಂತವರು ಮತ್ತು ಧಾರ್ಮಿಕರು ಧರ್ಮ ಮತ್ತು ಸಮಾಜ ಪ್ರೇಮಿಗಳು, ಶ್ರೇಷ್ಟ ಬರಹಗಾರರು, ಜೈನ್ ವಿದ್ವಾಂಸರು, ಸರ್ವಧರ್ಮ ಸಮನ್ಮಯ ದೃಷ್ಟಿಯಿಂದ ನೋಡುವಂತವರು ಮತ್ತು ನಯ ವಿನಯ, ಉಪಕಾರ ಸ್ಮರಣೆ, ಕೃತಜ್ಞತಾ ಬಾವವುಳ್ಳ ಸಜ್ಜನರು.
ಮಧನ ಕೇಸರಿಯವರು ಇವತ್ತು ವಯೋವೃದ್ದರಾಗೆ ಇದ್ದಾರೆ, ಒಂದು ಕಾಲದಲ್ಲಿ ಕರ್ನಾಟಕದಾದ್ಯಂತ ಜೈನ ಧರ್ಮವನ್ನ ಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿಸಿ ಕೊಂಡಿದಂತವರು ನ್ಯಾಯವಾದಿ ವೃತಿಯಲ್ಲಿ ಇದರು ಕೂಡ ಅದಲ್ಲವನ್ನು ತ್ಯಾಗಮಾಡಿ ಜೀವನವನ್ನೆಜೈನ ಧರ್ಮವನ್ನೇ ಮುಡಿಪಾಗಿ ಇಟ್ಟಂತವರು. ಅವರ ಅನೇಕ ಬರಹಗಳು ಪುಟ್ಟ ಪುಟ್ಟ ಕೃತಿಗಳಾಗಿ ನಮ್ಮ ಮುಂದೆ ಬರುತ್ತವೆ, ಏಕೆಂದರೆ ಜನಸಾಮಾನ್ಯರಿಗೆ ತಿಳಿಹೇಳುವಂತಹ ರೀತಿಯಲ್ಲಿ ಕೃತಿಗಳನ್ನು ಬರೆಯುವುದು ಮುಖ್ಯ ಅನ್ನುವಂತಹದನ್ನು ನಂಬಿದರು ಅದೇ ರೀತಿ ಕೃತಿಗಳನ್ನು ಬರೆದುಕೊಂಡು ಬಂದರು.
ಅಖಿಲ ಭಾರತ ಸಂಯುಕ್ತ ಬರಹಗಾರ ಸಂಸ್ಥೆಯ ಫಿಲೋ ಪದವಿ ನೀಡಿ ಗೌರವಿಸಿದರು. ವಿಶ್ವದ ಪ್ರಮುಖ ಸಮಸ್ಯೆಯಾದಂತಹ ಜನಸಂಖ್ಯಾ ಸ್ಪೋಟ ತಡೆಗೆ ಕುಟುಂಬ ಯೋಜನೆ ಪ್ರೋತ್ಸಾಹಿಸಿ ವಿಶ್ವದಲ್ಲೆ ದಾಖಲಾಗುವಂತಹ ಒಂದು ಬೃಹತ್ ಸಾಹಿತ್ಯ ಸೃಷ್ಠಿಯನ್ನು ಪರಿಗಣಿಸಿ ಅಮೇರಿಕಾದ ಕ್ಯಾಲಿಫೋನಿಯಾ ಅಂತರಾಷ್ಟ್ರಿಯ ವಿಶ್ವವಿದ್ಯಾಲಯ ಸಾಹಿತ್ಯದಲ್ಲಿ ಡಾಕ್ಟರೆಟ್ ಪ್ರಶಸ್ತಿಯನ್ನು ಕೊಟ್ಟರು. ಅನೇಕ ಸಂಘ ಸಂಸ್ಥೆ ಮಠ ಮಾನ್ಯರಿಂದ ಧರ್ಮ ರತ್ನಾಕರ, ಜೈನ ಧರ್ಮ ಭೂಷಣ, ಜೈನಾಗಮ ಚತುರ, ಭಾರತ ಭಾಷಾ ಭೂಷಣ, ಸಾಹಿತ್ಯ ರತ್ನ, ಸಮಾಜ ರತ್ನ ಹೀಗೆ ಅನೇಕ ಬಿರುದುಗಳಿಂದ ಗೌರವಯುತರಾಗಿರುವಂತಹ ಇನ್ನು ನಮ್ಮೊಂದಿಗೆ ಇದ್ದಾರೆ.
ವಯೋವೃದ್ದರಾಗಿರುವಂತಹ ಡಾ|| ಹೊ ಶ್ರೀ ಮಧನ ಕೇಸರಿಯವರ ಜೈನ ಧರ್ಮದ ಇತಿಹಾಸ ಅನ್ನುವ ಕೃತಿ ಮಹತ್ವದ ಕೃತಿ. ಆ ಕೃತಿಯನ್ನ ಬರೆಯಲು ಎರಡು ಕಾರಣವನ್ನು ಹೇಳಿದ್ದಾರೆ, ಶಾಲೆಯ ಚರಿತ್ರೆಯಲ್ಲಿಯೂ ಇತಿಹಾಸದ ಪುಸ್ತಕಗಳಲ್ಲಿಯು ವರ್ಧಮಾನ ಮಹಾವೀರನೆ ಜೈನ ಧರ್ಮದ ಸ್ಥಾಪಕ ಅಂತ ಬರೆದಿರುವಂತಹದನ್ನ ನೋಡಿ ಅದಲ್ಲಾ ಎಂದು ಪ್ರತಿಪಾದಿಸಲು ಈ ಕೃತಿಯನ್ನು ಬರೆದಿರುವುದಾಗಿ ಹೇಳಿದ್ದಾರೆ.
ಜೈನ ಧರ್ಮದ ಇತಿಹಾಸವನ್ನು ತಿಳಿದುಕೊಳ್ಳಲು ಈ ಪುಸ್ತಕ ಬಹಳ ಅವಶ್ಯಕ ಎಂದು ಹೇಳುತ್ತೇನೆ. ಹಾಗಾಗಿ ಈ ಎರಡು ಕೃತಿಗಳು ಕೂಡ ಮಹತ್ವದ ಕೃತಿ ಎಂದು ಹೇಳುತ್ತೇನೆ. ಈ ಎರಡು ಕೃತಿಗಳನ್ನು ಓದುವುದರ ಮೂಲಕ ಜ್ಞಾನವನ್ನು ವೃದ್ದಿಸಿ ಕೊಳ್ಳೊಣ ಎಂದು ಹೇಳುತ್ತೇನೆ ಮತ್ತೆ ಮುಂದಿನ ವಾರ ಭೇಟಿಯಾಗೋಣ ನಮಸ್ಕಾರ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













