ತುಮಕೂರಿನ ಜೈನ ಭವನದಲ್ಲಿ ದಿನಾಂಕ 17-07-2021ರಂದು ಅಷ್ಟಾನಿಕ ಪರ್ವದ ಶುಭ ಸಂರ್ಭದಲ್ಲಿ ಯುಗಳ ಮುನಿ ಮಹಾರಾಜರಾದ ಮರಮ ಪೂಜ್ಯ 108 ಅಮೋಘ ಕೀರ್ತಿ ಮಹಾರಾಜರ, ಪರಮ ಪೂಜ್ಯ 108 ಅಮರ ಕೀರ್ತಿ ಮುನಿ ಮಹಾರಾಜರ, ಪರಮ ಪೂಜ್ಯ ಬಾಲಾಚಾರ್ಯ ಶ್ರೀ 108 ಪಾವನ ಕೀರ್ತಿ ಮುನಿ ಮಹಾರಾಜರ ಪಾವನ ಸಾನಿದ್ಯ ಮಾರ್ಗ ದರ್ಶನದಲ್ಲಿ ಬೃಹತ್ ಶ್ರೀ ಸಿದ್ದ ಚಕ್ರ ಆರಾಧನ ಮಹೋತ್ಸವ ದ್ವಜಾರೋಹಣದೊಂದಿಗೆ ಶುಭಾರಂಭಗೊಂಡಿತ್ತು.
ಶ್ರೀಮತಿ ಶಾಂತಲ ಅಜಿತ್ ಹಾಗೂ ಶ್ರೀ ಅಜಿತ್ ಕುಮಾರ್ ರವರು ಇಂದ್ರ ಇಂದ್ರಾಣಿಯರಾಗಿ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ತುಮಕೂರು ಜೈನ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೂಡಿ ನಡೆಸಿದ ಅಮೋಘವಾದ ಆರಾಧನ ಮಹೋತ್ಸವದಲ್ಲಿ ಸುತ್ತಮುತ್ತಲಿನ ಬೆಂಗಳೂರು ಹಾಗೂ ಮೈಸೂರಿನಿಂದ ಆಗಮಿಸಿದ ಶ್ರಾವಕ ಶ್ರಾವಕಿಯರು ಕೂಡ ಆರಾಧನೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














