ಧರ್ಮದಕುಡಿ – ೪೧

ಇಂದಿನ  ಧರ್ಮದ ಕುಡಿ ಕಾರ್ಯಕ್ರಮಕ್ಕೆ ಸ್ವಾಗತ ಮಾಡುತ್ತಾ ಭಕ್ತಾಂಭರ ಸ್ತೋತ್ರದ  5ನೇ ಶ್ಲೋಕದ ಅರ್ಥ ಜಿನೇಂದ್ರ ಭಗವಂತನ  ಸ್ತುತಿ ಮಾಡುವಷ್ಟು ಶಕ್ತಿ ನನ್ನಲ್ಲಿಲ್ಲ ಆದರೂ  ಕೂಡ ಜಿನೇಂದ್ರ ಭಗವಂತನ  ಮೇಲಿರುವ ಭಕ್ತಿಯ ಕಾರಣ ನಾನು ಪ್ರಯತ್ನಿಸುತ್ತೇನೆ. ಯಾವ ರೀತಿ ಮೇಗ ಸಿಂಹದ ಜೊತೆ ಹೋರಾಡುವಷ್ಟು ಶಕ್ತಿ ನನ್ನಲ್ಲಿಲ್ಲ ಎಂದು  ಅರಿತಿದ್ದರೂ ಕೂಡ ಸಿಂಹ ಮೇಗದ ಶಿಶುವನ್ನು ಕಂಡಾಗ ಶಿಶುವಿನ ಮೇಲಿರುವ ಪ್ರೀತಿಯ ಕಾರಣ ಮೇಗ ತನ್ನ ಶಕ್ತಿಯನ್ನು ಮೀರಿ  ಹೋರಾಡಲು ಪ್ರಯತ್ನಿಸುತ್ತದೆ. ಅದೇ ರೀತಿ ನಮ್ಮಲ್ಲಿ ಜಿನೇಂದ್ರ  ಭಗವಂತನ ಸ್ತುತಿ ಮಾಡುವಷ್ಟು ಶಕ್ತಿ ಬುದ್ದಿ ಧ್ಯಾನ ಇಲ್ಲದಿದ್ದರೂ ಕೂಡ  ಅವರ ಮೇಲಿರುವ ಭಕ್ತಿಯ ಕಾರಣ ಸ್ತುತಿ ಮಾಡುತ್ತೇವೆ.

 

ಇಂದಿನ ಧರ್ಮದಕುಡಿ  ಕಾರ್ಯಕ್ರಮದಲ್ಲಿ ನಾವು ನಿಮಗೆ ಪರಿಚಯಿಸುತ್ತಿರುವುದು ಸುಚಯ್ ಜೈನ್.  ಈ ಹುಡುಗ 8 ವರ್ಷದ ಪ್ರಾಯದವನಾಗಿದ್ದು  ಓದುತ್ತಿರುವುದು  3ನೇ ತರಗತಿ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಿವಾಸಿಗಳಾದ ಡಾ|| ಅರ್ಜುನ್ ಮತ್ತು ರಶ್ಮಿ ದಂಪತಿಗಳ  ಜೇಷ್ಠ ಪುತ್ರ. ಅವನ ಧಾರ್ಮಿಕ ಆಸಕ್ತಿ ಎಷ್ಟಿದೆ ಎಂದರೆ  ಪ್ರತಿದಿನ ಬೆಳಗಿನ ಜಿನ ಅಭಿಷೇಕ ಅವರ ಮನೆಯಲ್ಲಿ  ಇವನಿಂದಲೇ. ಇಷ್ಟು ಸಂಸ್ಕಾರಯುತವಾಗಿ ಬೆಳೆಯುತ್ತಿರುವ  ಈತ ಮಂತ್ರಗಳನ್ನು ಶ್ಲೋಕಗಳನ್ನು ಕಲಿತಿದ್ದಾನೆ. ಗಾಂಧಾರಿ ವಿದ್ಯೆ ಎನ್ನುವ ವಿದ್ಯೆಯನ್ನು ರೂಢಿಸಿಕೊಳ್ಳುವುದರಲ್ಲಿಯೂ ಕೂಡ  ಆಸಕ್ತಿ ಹೊಂದಿದ್ದಾನೆ.  ಈ ಪುಟ್ಟ ಬಾಲಕನ ಚಿಗುರುತ್ತಿರುವ ಧಾರ್ಮಿಕ ಆಸಕ್ತಿಗೆ  ನಾವೆಲ್ಲರೂ ಲೈಕ್ ಮತ್ತು ಕಮೆಂಟ್ ಮೂಲಕ ಪ್ರೋತ್ಸಾಹಿಸೋಣ.

 

ಇವನನ್ನು ನಾವು ಪರಿಚಯ ಮಾಡಿಕೊಂಡಾಗ ತುಂಬಾ ಸೊಗಸಾಗಿ ಭಕ್ತಾಂಭರ ಸ್ತೋತ್ರ ಹಾಗೂ ಅವನು ಕಲಿತಿರುವ ಜೈನ ಸ್ತೋತ್ರಗಳನ್ನು ಹೇಳಿದನು. ನಂತರ ಅವನ ತಾಯಿಯವರು ಗಾಂಧಾರಿ ವಿದ್ಯೆ ಪ್ರಕ್ರಿಯೆಯ ಬಗ್ಗೆ ತಿಳಿಸಿಕೊಟ್ಟು ಅ ವಿದ್ಯೆಯನ್ನು ತಮ್ಮ ಮಗನ ಮೇಲೇ ಪ್ರಯೋಗ ಮಾಡಿದರು. ಅವರು ಕೆಲವು ಕಾಗದಗಳಲ್ಲಿ ಚಿತ್ರಗಳನ್ನು ಬಿಡಿಸಿ  ಅವನ ವಿದ್ಯೆಯನ್ನು ಪರೀಕ್ಷೆ ಮಾಡಿ ತೋರಿಸಿಕೊಟ್ಟರು.  ಈ ಹುಡುಗನ ವಿದ್ಯಾಸಕ್ತಿಯನ್ನು ನೋಡಿದರೆ ನಮಗೆ ತುಂಬಾ ಕುತೂಹಲವುಂಟಾಗುತ್ತದೆ ಏಕೆಂದರೆ ಮುಂದೆ ಇವನ ವಿದ್ಯೆಗಳು ಅತಿ ಹೆಚ್ಚಿನ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ನಮ್ಮೆಲ್ಲರ ಆಶಯವಾಗಿದೆ.

 

ಧರ್ಮದ ಪಾಠದ ಬಗ್ಗೆ ತಿಳಿಸಿತ್ತಾ ಶ್ರೀಯುತ ದೀರಜ್ ಜೈನ್ ರವರು ಇಂದಿನ ಪಾಠದ ಬಗ್ಗೆ ತಿಳಿಸುತ್ತಾ ನಮ್ಮ ಜೈನ ಧರ್ಮದ 24 ತೀರ್ಥಂಕರರಲ್ಲಿ 23ನೇ ತೀರ್ಥಂಕರರಾದಂತಹ ಶ್ರೀ ಶ್ರೀ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ. ಪಾರ್ಶ್ವನಾಥ ತೀರ್ಥಂಕರರು  ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯ ದಿವಸ ಅಲಯ ಯೋಗದಲ್ಲಿ ಪಾರಣಾಸಿ ನಗರದ ರಾಜನಾಗಿರುವಂತಹ  ವಿಶ್ವಸೇನ ಹಾಗೂ ರಾಣಿಯಾಗಿರುವಂತಹ ಬ್ರಾಹ್ಮಿಲ ದೇವಿಯ ಸುಪುತ್ರರಾಗಿ ಜನ್ಮ ವನ್ನು ಪಡೆಯುತ್ತಾರೆ. ಸುಮಾರು  ಅವರು 100 ವಯಸ್ಸಿಯ ಆಯಸ್ಸನ್ನು ಪಡೆದುಕೊಂಡು ಬಂದಿರುತ್ತಾರೆ.  9 ಬಿಲ್ಡಿಂಗ್ ನಷ್ಟು ಎತ್ತರ ಹರಿತ ವರ್ಣದಲ್ಲಿ ಬಾಹುಬಲಿ ತೀರ್ಥಂಕರರು ಇರುತ್ತಾರೆ. ಅನೇಕ ವೈಶಿಷ್ಟ್ಯಗಳಿಂದ ಕೂಡಿರುವಂತಹ  ಒಂದು  ಈ ಭವ ಎಂದರೆ ಪಾರ್ಶ್ವನಾಥ ತೀರ್ಥಂಕರರು  ಅವರು ಯಾವ ರೀತಿ ಪರಿಪಾಲನೆ ಮಾಡುತ್ತಾರೆ ಎಂದು  ಯಾವ ರೀತಿ ನೀತಿಗಳನ್ನು ಪರಿಪಾಲನೆ ಮಾಡುತ್ತಾರೆ. ಹೇಗೆ ಅವರಿಗೆ ದೀಕ್ಷೆ ತೆಗೆದುಕೊಂಡರು ಯಾವಾಗ ಮೋಕ್ಷ ತೆಗೆದುಕೊಂಡರು ಎಂದರೆ ವೃಷಭ ನಾಥ ತೀರ್ಥಂಕರರ ರೀತಿ ನೀತಿಗಳನ್ನು ತಿಳಿದು ಅವರ ನಿಯಮಗಳನ್ನೇ ಪ್ರತಿಪಾದಿಸಲು ನಿರ್ಧಾರ  ಮಾಡಿ  ಈ ಎಲ್ಲಾ ಮಾಹಿತಿಗಳನ್ನು ಸವಿಸ್ತಾರವಾಗಿ  ತಿಳಿದುಕೊಂಡು ವೈರಾಗ್ಯದ ಜೀವನವನ್ನು ರೂಢಿಸಿಕೊಳ್ಳಲು ನಿರ್ಧಾರಮಾಡಿದರು. ನಂತರ ಅವರು ವೈರಾಗ್ಯವನ್ನು ಪಡೆದ ತಕ್ಷಣ ದೀಕ್ಷೆಯನ್ನು  ಪಡೆಯುತ್ತಾರೆ ಅದೂ ಕೂಡ  ಪುಷ್ಯಮಾಸದ ಕೃಷ್ಣಮಾಸದ  ಏಕಾದಶಿ ದಿವಸವೇ ಅವರಿಗೆ  ದೀಕ್ಷೆಯನ್ನು ಪಡೆದುಕೊಳ್ಳುತ್ತಾರೆ. ಹೀಗೆ ಅವರು ಸುಮಾರು  8  ಉಪವಾಸವನ್ನು ಮಾಡಿಕೊಂಡು  ಕಠಿಣವಾದ ತಪಸ್ಸನ್ನು ಮಾಡುತ್ತಾರೆ. ಮೊಟ್ಟ ಮೊದಲ ಬಾರಿಗೆ  ಗುಲ್ಮಕೇಟಪುರ ಎನ್ನುವ ಪ್ರದೇಶಕ್ಕೆ ಬಂದು  ಆ ಪ್ರಾಂತ್ಯದ ರಾಜನಾಗಿರುವಂತಹ ಧಾನ್ಯರಾಜ ನೊಟ್ಟಮೊದಲ ಬಾರಿಗೆ ಪಾರ್ಶ್ವನಾಥ  ಮುನಿಗೆ ಆಹಾರವನ್ನು ನೀಡಿ ಪುಣ್ಯವನ್ನು ಪ್ರಾಪ್ತಿಮಾಡಿಕೊಂಡಿದ್ದಾರೆ.  ಅದಾದ ನಂತರ ಅವರು  ಏಕ ಕಠಿಣ ತಪಸ್ಸುಗಳನ್ನು ಮಾಡುತ್ತಿರುತ್ತಾರೆ. ಹೀಗೆ ಅವರು ತಪಸ್ಸನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಶಾಖಾಂಬರ ಎನ್ನುವ ಜ್ಯೋತಿಷ್ಯ ದೇವನಲ್ಲಿ ಅಂದರೆ ಅವನ ಹಿಂದಿನ ಭವದಲ್ಲಿ ಕವಟನಾಗಿರುತ್ತಾನೆ ಅವನು ಏನು ಮಾಡುತ್ತಾನೆ ಎಂದರೆ ಪಾರ್ಶ್ವನಾಥರು ತಪಸ್ಸು ಮಾಡುವಾಗ ಬೆಂಕಿಯ ಮಳೆಯನ್ನು ಸುರಿಸುತ್ತಾರೆ.   ಈ ಬೆಂಕಿಯ ಮಳೆಯನ್ನ ಸುರಿಸಬೇಕಾದರೆ  ಹಿಂದಿನ ಭವದಲ್ಲಿ ಪಾರ್ಶ್ವನಾಥ ತೀರ್ಥಂಕರರು ಒಮ್ಮೆ  ಈ ಕಟ್ಟಿಗೆಯನ್ನು ಪೂಜೆಗೋಸ್ಕರ ತುಂಡು ಮಾಡುತ್ತಿರುತ್ತಾರೆ. ಪಾರ್ಶ್ವನಾಥ ತೀರ್ಥಂಕರರಿಗೆ ಅನಿಸಿತ್ತು ಹೀಗೆ ಯಾವುದೋ ಒಂದು ಜೀವಿ ಇರುತ್ತದೆ ಅದನ್ನು ನಾವು ನಾಶ ಮಾಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರೂ ಕೂಡ  ಕಟ್ಟಿಗೆಯನ್ನು ತುಂಡು ಮಾಡುತ್ತಿದ್ದರು .ಆಗ ಕಟ್ಟಿಗೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಎರಡು ನಾಗ ದಂಪತಿಗಳು ಅಂದರೆ  ಎರಡು ನಾಗರ ಹಾವುಗಳು ತುಂಡಾಗುತ್ತವೆ ಆ ಸಮಯದಲ್ಲಿ ಪಾರ್ಶ್ವನಾಥ ತೀರ್ಥಂಕರರು ಆ ನಾಗ ದಂಪತಿಗಳಿಗೆ  ಪಂಚನಮಸ್ಕಾರ ಮಂತ್ರವನ್ನು ಹೇಳಿ  ಅವರಿಗೆ ಕಟ್ಟ ಕಡೆಯ ಸಂದರ್ಭದಲ್ಲಿ  ಪಂಚನಮಸ್ಕಾರ ಮುಖೇನ ಅವರಿಗೆ ಸಾವು ಆದಾಗ ಅವರು ಭವದ ಲೋಕದಲ್ಲಿ ಲಿಂಗರಾಗುತ್ತಾರೆ. ಅವರೇ ಧರಣೇಂದ್ರ ,ಮತ್ತು ಪದ್ಮಾವತಿ . ಈ ರೀತಿಯಾಗಿ  ಮುಂದಿನ ಭವದಲ್ಲಿ ಅವರು  ಧರಣೇಂದ್ರ ಮತ್ತು  ಪದ್ಮಾವತಿ ಯವರು ಜನ್ಮ ಪಡೆದಾಗ  ಪಾರ್ಶ್ವನಾಥ ತೀರ್ಥಂಕರರಿಗೆ ಈ ಕಮಟನ ಉಪಸರ್ಗ ಆಗುತ್ತದೆ ಶಾಖಾಂಬರ ಎನ್ನುವಂತಹ  ಜ್ಯೋತಿಷ್ಯ ದೇವರು ಆಕಾಶದಿಂದ ಬೆಂಕಿಯ ಮಳೆಯನ್ನು ಸುರಿಯಬೇಕಾದರೆ, ಭವನವಾಸಿಯಾಗಿರುವಂತಹ ಧರಣೇಂದ್ರ ಪದ್ಮಾವತಿ ಹಿಂದಿನ ಜನ್ಮದ ಭವವನ್ನು ಅರಿವಿಗೆ ಬಂದಾಗ ತಕ್ಷಣವೇ  ಅವರು ಪಾತಾಳದಿಂದ ಮೇಲೆ ಬಂದು ಪಾರ್ಶ್ವನಾಥ ತೀರ್ಥಂಕರರಿಗೆ ತನ್ನ ಹೆಡೆಯನ್ನು ಹರಡಿಸುತ್ತಾರೆ. ಅದೇ ರೀತಿಯಾಗಿ ಅವರ ಪತ್ನಿಯಾಗಿರುವಂತಹ ಪದ್ಮಾವತಿ  ಪಾರ್ಶ್ವನಾಥ ತೀರ್ಥಂಕರರಿಗೆ  ವಜ್ರದ ಒಂದು ಛತ್ರಿಯಂತೆ ಅವರಿಗೆ ಆಸರೆಯಾಗಿರುತ್ತಾರೆ.  ಆಗ ಈ ಒಂದು ಕಮಟ ವನ್ನು ಸದ್ಬಾವನೆಯನ್ನು ಉಪಶಮನ ಮಾಡುವಲ್ಲಿ ದರಣೇಂದ್ರ ದಂಪತಿಗಲು ಸಹಾಯ ಮಾಡುತ್ತಾರೆ.  ತದನಂತರ ಪಾರ್ಶ್ವನಾಥ ತೀರ್ಥಂಕರರಿಗೆ  ಕೇವಲ ಜ್ನಾನವಾದಾಗ  ಅವರಿಗೆ  ಇದು ಗೊತ್ತಾಗುತ್ತದೆ  ಆಗ ಅವರು ಏನು ಮಾಡುತ್ತಾರೆ ಎಂದರೆ  ಜೈನ ಧರ್ಮ ಪರಮೋಚ್ಛ ಒಂದು ತತ್ವವೆಂದರೆ ಕ್ಷಮೆ. ಶಾಖಾಂಬರ ಜ್ಯೋತಿಷ್ಯ ದೇವನಿಗೆ  ಕ್ಷಮೆಯನ್ನು ನೀಡುತ್ತಾರೆ. ಅವರು ಯಾವುದೇ ರೀತಿಯ ರಾಗದ್ವೇಷಗಳನ್ನು  ಪರಿಪಾಲನೆ ಮಾಡುವುದಿಲ್ಲ ಈ ಒಂದು ಸಮಯದಲ್ಲಿ  ಶಾಖಾಂಬರ  ಜ್ಯೋತಿಷ್ಯ ದೇವತೆಗಳು  ಇದನ್ನು ನೋಡಿ ಬಹಳ  ಆಶ್ಚರ್ಯದಿಂದ ನೋಡಿ ಅವರಿಗೂ ಕೂಡ ವೈರಾಗ್ಯ ಬರುತ್ತದೆ. ಇದೇ ರೀತಿ ಅವರು ಸುಮಾರು 69 ವರ್ಷ 11 ತಿಂಗಳುಗಳ ಕಾಲ ಸಮವಸರಣವನ್ನು ವಿಹಾರ ಮಾಡಿಕೊಂಡು ಬರುತ್ತಾರೆ.  ಇನ್ನೇನು ಅವರ ಆಯಸ್ಸು ಒಂದು ತಿಂಗಳು ಇದೇ ಎನ್ನುವಾಗ  ಸಮವಸರಣವನ್ನು  ವಿಸರ್ಜನೆ ಮಾಡಿ  ಪಾರ್ಶ್ವನಾಥ ತೀರ್ಥಂಕರರು  ಸಮ್ಯೇದಭಾವದಿಂದ ವಿಹಾರವನ್ನು ಮಾಡುತ್ತಾರೆ ಅಂದರೆ ಶ್ರಾವಣ ಮಾಸದ  ಶುಕ್ಲ ಪಕ್ಷದ  ಸಪ್ತಮಿಯ ದಿವಸ  ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಸಿದ್ದ, ಪರಮೇಷ್ಡಿಗಳಾಗುತ್ತಾರೆ  ಅವರ ಒಂದು ಸ್ಥಾನ ಈಗಲೂ  ಕೂಡ ಸಂವೇದ ಪರ್ವದಲ್ಲಿ  ಸುವರ್ಣ ಭದ್ರ ಕೂಟ ಎನ್ನುವ ದೇಶವಿದೆ . ನಾವೆಲ್ಲಾ ಶಿಖರ್ ಜಿ ಗೆ ಹೋದಾಗ  ಪಾರ್ಶ್ವನಾಥ ಟೋಂಕ್ ಎಂದು ಕರೆಯುತ್ತೇವೆಯಲ್ಲಾ  ಅಲ್ಲಿ ಪಾರ್ಶ್ವನಾಥ ತೀರ್ಥಂಕರರು  ಮೋಕ್ಷವನ್ನು ಪಡೆದಿದ್ದು ಆಗಿರುತ್ತದೆ.

ಎನ್ನೊಂದು ವಿಶೇಷವೇನೆಂದರರೆ ಕೇತು ಗ್ರಹದ  ಅದಿನಾಯಕ ತೀರ್ಥಂಕರರು  ಅಂದರೆ ಪಾರ್ಶ್ವನಾಥ ತೀರ್ಥಂಕರರು   ಅನೇಕ ಕಡೆ ನಮ್ಮ ಅತಿಶಯ  ಕ್ಷೇತ್ರವಾಗಿರುವಂತಹ  ಹೊಂಬುಜ ದಲ್ಲಿ ನಮ್ಮ ಪಾರ್ಶ್ವನಾಥ ತೀರ್ಥಂಕರರು ಮೂಲ ದಲ್ಲಿದ್ದಾರೆ ಮತ್ತು ಅಲ್ಲೇ ಪದ್ವಾವತಿ ಧರಣೇಂದ್ರ ರವರು ಇದ್ದಾರೆ. ಇದೇ ರೀತಿಯಾದಂತಹ ಮತ್ತೊಂದು ಸಂಚಿಕೆಯಲ್ಲಿ ಇನ್ನೋರ್ವ ತೀರ್ಥಂಕರರ ಬ‍ಗ್ಗೆ ತಿಳಿಸಿಕೊಡುತ್ತೇನೆ ಧನ್ಯವಾದಗಳು.

ರತ್ನತ್ರಯ ಜೈನ ಬಾಲಬೋಧ :

ಪ್ರೇರಣೆ ಮಾತೃಶ್ರೀ  ‍ಶ್ರೀಮತಿಹೇಮಾವತಿ ವೀ, ಹಗ್ಗಡೆಯವರು

ಮಾರ್ಗದರ್ಶನ: ಶ್ರೀ ಡಿ. ಸುರೇಂದ್ರ ಕುಮಾರ್ ,ರಾಷ್ಟ್ರೀಯ ಕಾರ್ಯಾಧ್ಯಕ್ಷರು, ಭಾರತೀಯ ಜೈನ್ ಮಿಲನ್

ಜೀವ = ಯಾವುದು ಆತ್ಮ ಇದೆಯೋ  ಅಂತಹ ಜೀವಗಳಲ್ಲಿ  ಎರಡು ವಿಧಗಳನ್ನು ಮಾಡಿದ್ದಾರೆ.

ಒಂದು ತ್ರಸ ಜೀವ  ಮತ್ತೊಂದು ಸ್ಥಾವರ ಜೀವ  ಎಂದು ಎರಡು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ.

ಸ್ಥಾವರ ಎಂದರೆ ಒಂದೇ ಇಂದ್ರಿಯ ಇರುವಂತಹ  ಜೀವ ಅಂದರೆ ಮುಟ್ಟಿದರೆ  ಗೊತ್ತಾಗುತಕ್ಕಂತಹ ಜೀವಗಳನ್ನು ಸ್ಪರ್ಶನೇಂದ್ರಿಯ ಮಾತ್ರ ಇರುವಂತಹ  ಜೀವಿಗಳನ್ನು ಸ್ಥಾವರ ಜೀವಿಗಳೆಂದು ಕರೆಯುತ್ತಾರೆ, ಸ್ಥಾವರ ಜೀವಗಳಲ್ಲಿ 5 ವಿಧಗಳಿವೆ:-

ಮೊದಲನೆಯದು ಪೃಥ್ವಿ ಕಾಯಕ ಜೀವ ಅಂದರೆ ಮಣ್ನನ್ನು ತನ್ನ ಶರೀರವನ್ನಾಗಿ  ಹೊಂದಿರುವಂತಹ ಜೀವ

ಎರಡನೆಯದಾಗಿ  ಜಲ ಕಾಯಕ ಜೀವ ಅಂದರೆ ನೀರನ್ನೇ ತನ್ನ ಶರೀರವನ್ನಾಗಿ ಹೊಂದಿರುವಂತಹ ಜೀವ

ಮೂರನೆಯದು ಅಗ್ನಿ ಕಾಯಕ ಜೀವ ಅಂದರೆ  ಬೆಂಕಿಯನ್ನೇ ತನ್ನ ಶರೀರವನ್ನಾಗಿ ಹೊಂದಿರುವಂತಹ ಜೀವ

ನಾಲ್ಕನೆಯದು ವಾಯು ಕಾಯಕ ಜೀವ ಅಂದರೆ  ಗಾಳಿಯನ್ನೇ  ತನ್ನ ಶರೀರವನ್ನಾಗಿ ಹೊಂದಿರುವಂತಹ ಜೀವ

ಐದನೆಯದು ವನಸ್ಪತಿ ಕಾಯಕ ಜೀವ ಆಂದರೆ  ವನಸ್ಪತಿಯನ್ನು ತನ್ನ ಶರೀರವನ್ನಾಗಿ ಹೊಂದಿರುವಂತಹ ಜೀವ .