ಧರ್ಮದಕುಡಿ ಪ್ರೋಮೋ

ಜೈ ಜಿನೇಂದ್ರ ವೀಕ್ಷಕರೆ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ಇಗಾಗಲೇ ನೋಡುತ್ತಿದ್ದಿರಾ ಮಕ್ಕಳಲ್ಲಿ ಹುದುಗಿರುವ ಧಾರ್ಮಿಕ ಪ್ರತಿಭೆಯನ್ನು ಅನಾವರಣಗೊಳಿಸುವುದರ ಮೂಲಕ ಧರ್ಮದ ಬೆಳೆ ಬಿತ್ತುವ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮ ಅತ್ಯಂತ ಸಫಲಗೊಂಡಿದ್ದು ಈ ಕಾರ್ಯಕ್ರಮದ ಅಡಿಯಲ್ಲಿ ತಮ್ಮ ಧಾರ್ಮಿಕ ಆಸಕ್ತಿಗೆ  ಪ್ರೋತ್ಸಾಹ ಗಳಿಸಿದ್ದು ಮುಂದಿನ ಅವರ ಧಾರ್ಮಿಕ ಶ್ರದ್ಧೆ ವೃದ್ದಿಗಾಗಿ ಧೀರಜ್ ಜೈನ್, ಹೊಳೆನರಸಿಪುರ ಇವರ ಧರ್ಮ ಪಾಠವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಪೋಷಕರೆ ನಿಮ್ಮ ಮಕ್ಕಳಿಗೆ ನೀವು ಧರ್ಮದ ಬಗ್ಗೆ ತಿಳಿಸಿಕೊಡಲು ಈ ಕಾರ್ಯಕ್ರಮದಲ್ಲಿ ಇನ್ನೊಂದು ಭಾಗವನ್ನು ನಿಮಗಾಗಿ ಸೇರಿಸುತ್ತಿದ್ದೇವೆ. ಮುಂದಿನ ಸಂಚಿಕೆ ಇಂದ ರತ್ನತ್ರಯ ಜೈನ ಬಾಲಬೋಧೆ ಎನ್ನುವ ಪೂಜ್ಯ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಪ್ರೇರಣೆ ಇಂದ ಹಾಗೂ ಶ್ರೀ ಡಿ ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಮೂಡಿಬರುತ್ತಿರುವ ಧಾರ್ಮಿಕ ಸರಣಿ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಮತ್ತೊಮ್ಮೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಪೋಷಕರೆ ಧಾರ್ಮಿಕ ಕಾರ್ಯಕ್ರಮಗಳ ವೀಕ್ಷಣೆಯಲ್ಲಿ ಮಕ್ಕಳಿಗೆ ತಮ್ಮ ಮಾರ್ಗದರ್ಶನ ಅಗತ್ಯ ಎನ್ನುವುದನ್ನು ಮರೆಯದೆ ಅರ್ಧತಾಸು ಅದಕ್ಕಾಗಿ ಮೀಸಲಿಟ್ಟು ಅವರಿಗೆ ತಿಳಿಯ ಪಡಿಸಿ ಕೊನೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ಅವರಿಂದ ಉತ್ತರವನ್ನು ನೇರವಾಗಿ ಕಳುಹಿಸಿ ಇಂತಹ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮದ ಅಡಿಯಲ್ಲಿ ಧಾರ್ಮಿಕ ರಸ ಪ್ರಶ್ನೆಯನ್ನು ಅಯೋಜಿಸಲಾಗುವುದು. 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್