ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಧರ್ಮದ ಕುಡಿ ಕಾರ್ಯಕ್ರಮದ ಮತ್ತೊಂದು ಸಂಚಿಕೆಗೆ ಪ್ರೀತಿಯ ಸ್ವಾಗತ, ನಮ್ಮ ಇಂದಿನ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ಯಾರು ಬಂದಿದ್ದಾರೆ ಎಲ್ಲಿಂದ ಬಂದಿದ್ದಾರೆ ಏನು ಮಾಡುತ್ತಾರೆ ಇದನ್ನೆಲ್ಲವನ್ನು ನೋಡೊಣ ಆದರೆ ಅದಕ್ಕೂ ಮುನ್ನ ಭಕ್ತಾಂಬರ ಸ್ತೋತ್ರದ ಎರಡನೇ ಶ್ಲೋಕದ ಭಾವಾರ್ಥವನ್ನು ನೋಡಿಕೊಂಡು ಬರೋಣ.
(ಸಂಸ್ಕೃತಿ ಎಂ ಜೈನ್ ಏಳನೀರು ರವರು ಭಕ್ತಾಂಬರ ಶ್ಲೋಕವನ್ನು ಬಹಳ ಸುಂದರವಾಗಿ ಹೇಳಿದರು).
(ಸಂಸ್ಕೃತಿ ಎಂ ಜೈನ್ ಏಳನೀರು ರವರು ಹೇಳಿದ ಭಕ್ತಾಂಬರ ಶ್ಲೋಕದ ಭಾವಾರ್ಥವನ್ನು ವಿವರಿಸಿದರು).
ವೀಕ್ಷಕರೆ ಇಂದಿನ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ಯಾರು ಇದ್ದಾರೆ ಎಂದು ನೋಡೊಣ. ಅವರ ಹೆಸರು ಅನ್ವಯ್ ಜೈನ್ ಅವರು ಇರುವುದು ಅಮೆರಿಕಾದ ಕ್ಯಾಲಿಫೊನಿಯದಲ್ಲಿ ಈ ಪುಟ್ಟ ಬಾಲಕನ ಕಿರುಪರಿಚಯವನ್ನು ವಿ ಟಿ ಮುಖಾಂತರ ನೊಂಡಿಕೊಂಡು ಬರೋಣ.
ಅನ್ವಯ್ ಜೈನ್ ಏಳು ವರ್ಷದ ಪ್ರಯದ ಇತಾ ಅಮೆರಿಕದ ಕ್ಯಾಲಿಫೊನಿಯದಲ್ಲಿ ಬೆಳೆಯುತ್ತಿರುವ ಮುದ್ದು ಹುಡುಗ. ತಾಯಿ ಲಕ್ಷ್ಮಿ ಜೈನ್, ತಂದೆ ವಿಕ್ರಮ್ ಕುಮಾರ್ ಬಲ್ಲಾಳ್, ಇಸ್ರೋ ಅಜಿತ್ ಕುಮಾರ್ ಬೆಂಗಳೂರು ಹಾಗೂ ಜೀವನ್ ದರ್ ಬಲ್ಲಾಳ್ ದಕ್ಷಿಣ ಕನ್ನಡ ಇವರುಗಳ ಪ್ರೀತಿಯ ಮೊಮ್ಮಗ. ಈತನ ಹವ್ಯಾಸಗಳ ಪಟ್ಟಿ ದೊಡ್ಡದು, ಜೈನ ಸ್ತೋತ್ರಗಳನ್ನು ಕಲಿಯಿತ್ತಿರುವ ಈತನು ಜಿನ ಭಕ್ತಿಗೀತೆಗಳನ್ನು ಹಾಡುತ್ತಾನೆ. ಹಾಗೂ ಜನಪದ ಗೀತೆಗಳು, ಕಥೆ ಹೇಳುವುದು, ಡ್ರಾಯಿಂಗ್, ಕಾರ್ ಕಲೆಕ್ಷನ್, ಫುಟ್ಬಾಲ್, ಸೈಕ್ಲಿಂಗ್, ಸ್ಕೆಟಿಂಗ್, ಕ್ರಿಕೆಟ್ ಇನ್ನೂ ಹಲವಾರು ಹವ್ಯಾಸಗಳನ್ನು ಹೊಂದಿದ್ದಾನೆ. ಹೊರ ದೇಶದಲ್ಲಿದ್ದರು ನಮ್ಮ ಸಂಸ್ಕೃತಿಯನ್ನು ಮರೆಯದೆ ಧರ್ಮದ ಹಾದಿಯಲ್ಲಿ ಬೆಳೆಯುತ್ತಿರುವ ಇತನಿಗೆ ಲೈಕ್ ಮತ್ತು ಕಮೆಂಟ್ ಪ್ರೊತ್ಸಾಹಿಸಿ..
ನಿರೂಪಕರು :- ಜೈ ಜಿನೇಂದ್ರ ಅನ್ವಯ್ ಕಾರ್ಯಕ್ರಮಕ್ಕೆ ಸ್ವಾಗತ. ನಮ್ಮ ಕಾರ್ಯಕ್ರಮದ ಆರಂಭವನ್ನು ನೀವು ಹೇಳುವ ಭಕ್ತಾಂಬರ ಸ್ತೋತ್ರದ ಮೂಲಕ ಮಾಡೋಣ. ಅನ್ವಯ್ ನೀವು ಭಕ್ತಾಂಬರದ ಮೂರನೇ ಶ್ಲೋಕವನ್ನು ಹೇಳ ಬಹುದ.
(ಅನ್ವಯ್ ಜೈನ್ ರವರು 3ನೇ ಭಕ್ತಾಂಬರ ಶ್ಕೋಕವನ್ನು ಹೇಳಿದರು).
ನಿರೂಪಕರು :- ತುಂಬ ಚೆನ್ನಾಗಿ ಭಕ್ತಾಂಬರ ಶ್ಲೋಕವನ್ನು ಹೇಳಿದ್ದಿರಾ. ವೀಕ್ಷಕರೆ ನಾವೇಲ್ಲರು ಕೂಡ ನಮ್ಮ ಊರಿನಲ್ಲಿ ಇರುವ ಬಸದಿಯನ್ನು ನೋಡಿದ್ದೀವಿ, ಇನ್ನೂ ಹೆಚ್ಚು ಎಂದರೆ ಭಾರತದ ಬೇರೆ ಬೇರೆ ಕಡೆ ಬಸದಿಗಳನ್ನ ನೋಡಿದ್ದೀವಿ ಅಲ್ವ, ಇವಾಗ ಅನ್ವಯ್ ರವರು ಕ್ಯಾಲಿಫೊನಿಯದಲ್ಲಿ ಇರುವಂತಹ ಒಂದು ಬಸದಿ ದರ್ಶನವನ್ನು ಮಾಡಿಸುತ್ತಾರೆ. ಅದರ ಜೊತೆಗೆ ಧಾರ್ಮಿಕ ಆಸಕ್ತಿ ಇದ್ದು ಹಲವಾರು ಶ್ಲೋಕಗಳು ಮಂತ್ರಗಳು ಕಲಿತ್ತಿರುವ ಅವರು ಕ್ಯಾಲಿಫೊನಿಯದ ಬಸದಿ ದರ್ಶನವನ್ನು ಮಾಡಿಸುತ್ತ ಈ ಎಲ್ಲಾ ಸ್ತೋತ್ರಗಳನ್ನ ಹೇಳುತ್ತಾರೆ ಬನ್ನಿ ಕ್ಯಾಲಿಫೊನಿಯದ ಬಸದಿ ಹೇಗಿದೆ ಎಂದು ನೊಡೋಣ.
(ಅನ್ವಯ್ ಜೈನ್ ರವರು ಕ್ಯಾಲಿಫೊನಿಯದಲ್ಲಿ ಇರುವ ಸುಂದರ ಬಸದಿ ತೋರಿಸುತ್ತ ಶ್ಲೋಕಗಳು ಮಂತ್ರಗಳನ್ನು ಹೇಳಿದರು).
ನಿರೂಪಕರು :- ವೀಕ್ಷಕರೆ ನನಗಂತೂ ತುಂಬಾ ಖುಷಿಯಾಯಿತು, ಕ್ಯಾಲಿಫೊನಿಯದ ಬಸದಿಯನ್ನು ನಾವು ಇಲ್ಲೇ ಕೂತು ದರ್ಶನ ಮಾಡಿದೆವು, ನಿಮಗೂ ಕೂಡ ಖುಷಿಯಾಗಿದೆ ಎಂದು ಭಾವಿಸಿದ್ದೇನೆ, ಅನ್ವಯ್ ಅವರಿಗೆ ದನ್ಯವಾದಗಳನ್ನು ಹೇಳ ಬೇಕು ಯಾಕೆ ಎಂದು ಹೇಳಿದರೆ ನಮಗೆ ಇಲ್ಲೇ ಕೂರಿಸಿ ಕ್ಯಾಲಿಫೊನಿಯದ ಬಸದಿಯ ದರ್ಶನವನ್ನು ಮಾಡಿಸಿದ್ದಾರೆ. ಅನ್ವಯ್ ರವರಿಗೆ ತುಂಬಾ ದನ್ಯವಾದಗಳು. ನೀವು ಹೇಳಿದಂತಹ ಶ್ಲೋಕಗಳು ಮಂತ್ರಗಳು ತುಂಬಾ ಚೆನ್ನಾಗಿತ್ತು.
ವೀಕ್ಷಕರೆ ನಮ್ಮ ಕಾರ್ಯಕ್ರಮದಲ್ಲಿ ಅನ್ವಯ್ ರವರು ನಮಗೆ ಬಸದಿ ದರ್ಶನವನ್ನು ಮಾಡಿಸಿದರು, ಇನ್ನೂ ಮುಂದೆ ಕೂಡ ಅತಿ ಹೆಚ್ಚು ಸಾಧನೆಯನ್ನು ಮಾಡಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲ್ಲಿ ಎಂದು ನಾವೇಲ್ಲರೂ ಭಾವಿಸೋಣ ಅನ್ವಯ್ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಧನ್ಯವಾದಗಳು.
ಜೈ ಜಿನೇಂದ್ರ.
ಈಗ ನಿಮ್ಮ ಮುಂದೆ ಧರ್ಮದ ಪಾಠ ಪ್ರಸಾರವಾಗಲ್ಲಿದೆ ಧರ್ಮದ ಪಾಠವನ್ನು ಕೇಳಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಈ ಕೂಡಲೇ ವಾಟ್ಸ್ ಆ್ಯಪ್ ಮಾಡಿ.
‘ಧರ್ಮದ ಕುಡಿ’
ಧರ್ಮದ ಬೆಳೆ ಬಿತ್ತೋಣ
‘ಧರ್ಮ ಪಾಠ’
ಧೀರಜ್ ಜೈನ್, ಹೊಳೆನರಸಿಪುರ.
ಜೈ ಜಿನೇಂದ್ರ ಮಕ್ಕಳೆ ಜ್ವಾಲಮಾಲ ಡಾಟ್ ನ್ಯೂಸ್ ಸಮರ್ಪಿಸುವ ಜೈನ ಧಾರ್ಮಿಕ ಪಾಠ ಮಾಲಿಕೆ ಕಾರ್ಯಕ್ರಮಕ್ಕೆ ನಿಮ್ಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ.
ನಾವು ಪ್ರತಿ ಸಂಚಿಕೆಯಲ್ಲಿ ವರ್ತಮಾನ ಕಾಲದ 24 ತೀರ್ಥಂಕರರ ಒಬ್ಬೊಬ್ಬ ತೀರ್ಥಂಕರರ ಬಗ್ಗೆ ತಿಳಿದು ಕೊಳುತ್ತಿದ್ದೇವೆ, ಅದೆ ರೀತಿಯಲ್ಲಿ ಹಿಂದಿನ ಸಂಚಿಕೆಯಲ್ಲಿ ನಾವು ನಮ್ಮ ಜೈನ ಧರ್ಮದ 24 ತೀರ್ಥಂಕರರಲ್ಲಿ 20ನೇ ತೀರ್ಥಂಕರರಾದ ಶ್ರೀ ಶ್ರೀ ಶ್ರೀ 1008 ಮುನಿಸುವ್ರತ ತೀರ್ಥಂಕರರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮುನಿಸು ವ್ರತ ತೀರ್ಥಂಕರರು ಭರತ ಖಂಡದ ರಾಜಗೃಹ ಅನ್ನುವಂತಹ ಪ್ರದೇಶದಲ್ಲಿ ರಾಜನಾಗಿರುವಂತಹ ಸುಮಿತ್ರ ರಾಜ ಹಾಗೂ ಪದ್ಮಾವತಿ ದೇವಿಗೆ ಸುಪುತ್ರರಾಗಿ ಜನ್ಮವನ್ನು ಪಡೆಯುತ್ತಾರೆ. ಸುಮಾರು 20 ಬಿಲ್ಲುಗಳಷ್ಟು ಎತ್ತರ 30ಸಾವಿರ ವರ್ಷಗಳಷ್ಟು ಆಯಸ್ಸು ಹೊಂದಿರುತ್ತಾರೆ. ಏಳುವರೆ ಸಾವಿರ ವರ್ಷಗಳಲ್ಲಿ ಕುಮಾರಾವಸ್ತೆಯನ್ನು ಹೊಂದುತ್ತಾರೆ. ಸುಮಾರು 15 ಸಾವಿರ ವರ್ಷಗಳಷ್ಟು ರಾಜ್ಯ ಬಾರವನ್ನು ಮನೋಜ್ಞವಾಗಿ ನಡೆಸುತ್ತಾರೆ. ಒಮ್ಮೆ ಮುನಿಸುವ್ರತನಾಥ ಮಹಾರಾಜರು ಕಾಡಿನಲ್ಲಿ ವಿಹಾರ ಮಾಡಿಕೊಂಡು ಬಂದು ತಮ್ಮ ಅರಮನೆಗೆ ಹಿಂತಿರುಗ ಬೇಕಾದರೆ ತಮ್ಮ ಅರಮನೆಯಲ್ಲಿರುವಂತಹ ಆನೆಯನ್ನು ನೋಡಿದಾಗ ಆ ಆನೆ ತಾನು ಇದಂತಹ ಕಾಡಿನ ಬಗ್ಗೆ ನೆನಪಿಸಿಕೊಳ್ಳುತ್ತ ಚಿಂತೆ ಯಂದ ಮಲಗಿರುತ್ತದೆ. ಅದನ್ನು ನೋಡಿದಂತಹ ಮುನಿಸುವ್ರತ ಮಹಾರಾಜರಿಗೆ ಬಹಳ ಮನಸ್ಸಿಗೆ ನೋವು ಉಂಟಾಗಿ ತನ್ನ ಎಲ್ಲ ಹಳೆಯ ಭವಗಳ ಬಗ್ಗೆ ಗೊತ್ತಾಗಿ ಅವರಿಗೆ ವೈರಾಗ್ಯ ಬರುತ್ತದೆ. ನಂತರ ಮುನಿ ದೀಕ್ಷೆಯನ್ನು ಪಡೆದು ಸುಮಾರು ಮೂರು ದಿನಗಳ ನಂತರ ರಾಜಗೃಹಕ್ಕೆ ಬಂದು ರಾಜಗೃಹದ ರಾಜ ವೃಷಭ ಸೇನ ಮೊಟ್ಟ ಮೊದಲ ಬಾರಿಗೆ ಆಹಾರವನ್ನು ನೀಡುತ್ತಾರೆ.
ಅನೇಕ ವರ್ಷಗಳ ಕಾಲ ತಪಸ್ಸನ್ನು ಮಾಡುತ್ತಾ ಕಠಿಣವಾದಂತಹ ದ್ಯಾನವನ್ನು ಮಾಡುತ್ತ ವಿಹಾರವನ್ನು ಮಾಡುತ್ತ ನೀಲ ವನದಲ್ಲಿ ಚಂಪಕ ವೃಕ್ಷದ ಕೆಳಗಡೆ ಕೂತು ಅವರು ದ್ಯಾನವನ್ನು ಮಾಡುವಾಗ ಅವರಿಗೆ ಕೇವಲ ಜ್ಞಾನ ಪ್ರಪ್ತಿಯಾಗುತ್ತದೆ. ನಂತರ ಸೌಧರ್ಮೇಂದ್ರ ಅದನ್ನು ತಿಳಿದುಕೊಂಡು ನಿಯಮಾನುಸಾರ ಕುಬೇರನಿಗೆ ಸಂವತ್ಸರಣ ರಚನೆ ಮಾಡಲು ಆಜ್ಞೆಯನ್ನು ಮಾಡುತ್ತಾರೆ. ಬಹಳ ವರ್ಷಗಳ ವರೆದು ಸಂವತ್ಸರಣ ವಿಹಾರವಾರವನ್ನು ಮಾಡುತ್ತ ಜೈನ ಧರ್ಮದ ಪ್ರಬಾವನೆಯನ್ನು ಮಾಡುತ್ತಾರೆ.
ಮುನಿಸುವ್ರತ ತೀರ್ಥಂಕರರಿಗೆ ಅವರ ಅಂತ್ಯ ಕಾಲ ಸಮೀಪವಾಗುವಂತಹದ್ದು ಗೊತ್ತಾದಾಗ ಸಂವತ್ಸರಣ ವಿಸರ್ಜನೆ ಮಾಡಿ ಸಂವೇದ ಪರ್ವತದ ನಿರ್ಜಲ ಕೂಟ ಅನ್ನುವಂತಹ ಪ್ರದೇಶದಲ್ಲಿ ಮೋಕ್ಷವನ್ನು ಪಡೆದು ಸಿದ್ದ ಪರಮೇಶ್ಟಿಗಳಾಗುತ್ತಾರೆ.
ಮುನಿಸುವ್ರತ ತೀರ್ಥಂಕರರ ಲಾಂಛನ ಆಮೆ. ಮುನಿಸುವ್ರತ ತೀರ್ಥಂಕರರ ಯಕ್ಷ ವರುಣ ಮತ್ತು ಯಕ್ಷಿಣಿ ಬಹುರೂಪಿಣಿ. ಇದು ಮುನಿಸುವ್ರತ ತೀರ್ಥಕರರ ವೈಶಿಷ್ಟ್ಯ. ಮುಂದಿನ ಸಂಚಿಕೆಯಲ್ಲಿ ಮುಂದಿನ ತೀರ್ಥಂಕರರ ಬಗ್ಗೆ ತಿಳಿದುಕೊಳ್ಳೋಣ ಮತ್ತು ಜೈನ ಧರ್ಮದ ಬಗ್ಗೆ ಹೆಚ್ಚು ಆಸಕ್ತಿಯನ್ನು ಬೆಳೆಸೋಣ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ.
ಜೈ ಜಿನೇಂದ್ರ
ವೀಕ್ಷಕರೆ ನಮ್ಮ ಇಂದಿನ ಸಂಚಿಕೆ ಮುಕ್ತಾಯ ಗೊಂಡಿದೆ ಮುಂದಿನ ಭಾನುವಾರ ಬೆಳಗ್ಗೆ ಸರಿಯಾಗಿ 10:30ಕ್ಕೆ ನಿಮ್ಮ ಮುಂದೆ ಮತ್ತೊಂದು ಪುಟ್ಟ ಪ್ರತಿಭೆಯೊಂದಿಗೆ ನಾನು ಬರುತ್ತೇನೆ ಅಲ್ಲಿಯವರೆಗೂ ಮನೆಯಲ್ಲಿ ಇರಿ ಸುರಕ್ಷಿತವಾಗಿರಿ ಜ್ವಾಲಮಾಲ ನ್ಯೂಸ್ ತಪ್ಪದೆ ವೀಕ್ಷಿಸುತ್ತಿರಿ.
ಈ ವಾರದ ಪ್ರಶ್ನೆಗಳು
- ಹಿಂದಿನ ಪಾಠದಲ್ಲಿ ಏನು ತಿಳಿದುಕೊಂಡಿರಿ?
- ಶ್ರೀ ಮುನಿಸುವ್ರತ ತೀರ್ಥಂಕರರ ಜನನ ಯಾವ ಸ್ಥಳದಲ್ಲಿ ಆಯಿತು?
- ಅವರ ಎತ್ತರ ಮತ್ತು ಆಯಸ್ಸು ಎಷ್ಟು?
- ಅವರಿಗೆ ಮೊದಲ ಆಹಾರ ನೀಡಿದವರು ಯಾರು?
- ಅವರ ಲಾಂಛನ ಯಾವುದು?
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














