ಶ್ರಿ ದಿಗಂಬರ ಜೈನ್ ಸಿದ್ಧಕ್ಷೇತ್ರ ಕುಂತುಗರಿ

ಈ ವಾರದ ಕ್ಷೇತ್ರ ಪರಿಚಯದಲ್ಲಿ ಶ್ರೀ ಸಮ್ಮೇದಾಚಲ ತೀರ್ಥಕ್ಷೇತ್ರ ಕುಂಥುಗಿರಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಾಗುತ್ತಿದೆ.

ಶ್ರೀ ಸಮ್ಮೇದಾಚಲ ತೀರ್ಥಕ್ಷೇತ್ರ ಕುಂಥಲಗಿರಿ  ರುದ್ರ ರಮಣೀಯ  ಪ್ರಕೃತಿ ತಾಣ ಸುತ್ತಲೂ ಸೊಗಸಾದ ಹೂಬನ  ಮನ ನವಿರೇಳಿಸುವ  ಸುಂದರ ಕ್ಷಣ ಬನ್ನಿ ವೀಕ್ಷಕರೇ ಇಂತಹ ಒಂದು ಕ್ಷಣವನ್ನು ನಮ್ಮದಾಗಿಸೋಣ  ಈ ಸುಂದರ ಕ್ಷೇತ್ರವು ಮಹಾರಾಷ್ಟ್ರದ  ಕೊಲ್ಲಾಪುರ ಜಿಲ್ಲೆಯಿಂದ  35 ಕಿಲೋಮೀಟರ್ ದೂರದಲ್ಲಿದೆ.  ಈ ಕ್ಷೇತ್ರ ನಿರ್ಮಾಣ ಗಣಾಧಿಪತಿ ಗಣಧರ ಕುಂತೀ ಸಾಗರ ಮುನಿಮಹಾರಾಜರಿಂದ  ಆಗಿದೆ. ಮುನಿಮಹಾರಾಜರು ಈ ಕ್ಷೇತ್ರದ ತುಸುದೂರದಲ್ಲಿ ಚಾತುರ್ಮಾಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಸ್ವಪ್ನದಲ್ಲಿ  ಮಾತೇ ಪದ್ಮಾವತಿ ದೇವಿ ಒಂದು ಕ್ಷೇತ್ರ ನಿರ್ಮಾಣವನ್ನು ಮಾಡಲು ಹೇಳಿದರೆಂದು ಕಥೆ.  ಅಂದಿನಿಂದ ಇಂದಿನವರೆಗೆ  ಕ್ಷೇತ್ರ ಅಭಿವೃದ್ದಿ ಹೊಂದುತ್ತಾ ಬಂದಿದೆ.

ಇಲ್ಲಿರುವ ಬೆಟ್ಟದ ವಿಶೇಷವೇನೆಂದರೆ ಇದು ಅರ್ಧ ಚಂದ್ರಾಕಾರದಲ್ಲಿದ್ದು ಯಾರು ಜಾರ್ಖಂಡ್ ನಲ್ಲಿರುವ ಸಮ್ಮೇದಾ ಶಿಖರ್ಜಿಗೆ ಹೋಗಲು ಸಾಧ್ಯವಾಗುವುದಿಲ್ಲವೋ ಅವರಿಗೆ ಶಿಖರ್ಜಿಯ ದರ್ಶನ ಪಡೆದ ಅನುಭವದೊಂದಿಗೆ ಪಡೆಯಲೆನ್ನುವುದು. ಬೆಟ್ಟಕ್ಕೆ ನೀವು ನಡೆದುಹೋಗಬಹುದು  ಅಥವಾ ವಾಹನದಲ್ಲಿಯೂ ಕೂಡ ಸಾಗಬಹುದು. ಶಿಖರ್ಜಿಯ ಹಾಗೇ 28 ಕೂಟಗಳದ್ದು 24 ತೀರ್ಥಂಕರರ  ಮೂರ್ತಿ ಹಾಗೂ ಚಿಹ್ನೆ ಕೂಡ ಇದೆ. ಅದೇ ರೀತಿ ಇಲ್ಲಿ ಕೈಲಾಸ ಪರ್ವತ ಕೂಡ ಇದೆ. ಅಲ್ಲಿ ಶ್ರೀ ಆದಿನಾಥ ಸ್ವಾಮಿಯ ಖಡ್ಘಾಸನ ಪ್ರತಿಮೆಯಿತ್ತು ಅದರೊಳಗೆ ಗುಹೆ ಮಾದರಿ ಬಸದಿಯಲ್ಲಿ 24  ತೀರ್ಥಂಕರರು ಹಾಗೂ ಮುನಿಸೂರತ ತೀರ್ಥಂಕರರು ವಿರಾಜಮಾನರಾಗಿದ್ದು ಚಕ್ರೇಶ್ವರಿ ಪ್ರತಿಮೆ ಕೂಡ ಇದೆ.

ಕ್ಷೇತ್ರದ ಪ್ರವೇಶ ಮಾಡುವಾಗ ಮೊದಲು ಶ್ರೀ ಕ್ಷೇತ್ರಪಾಲ ದರ್ಶನ ಮಾಡಿ ಮುಂದೆ  ಗುರುಮಂದಿರ ಹಾಗೂ ಆಗಮಮಂದಿರವಿದೆ.  ಅಲ್ಲಿಂದ ಮೆಟ್ಟಿಲು ಹತ್ತಿ ಸಾಗಿದಾಗ  ಶ್ರೀ ಪಾರ್ಶ್ವನಾಥ ತೀರ್ಥಂಕರರ ಮನೋಹರ ಮೂರ್ತಿ ಕಾಣಸಿಗುತ್ತದೆ. ಸ್ವಾಮಿಯ ಅಕ್ಕಪಕ್ಕ ಧರಣೇಂದ್ರ ಪದ್ಮಾವತಿಯ ಯಕ್ಷ ಯಕ್ಷಿಣಿಯರನ್ನು ಕೂಡ ನೋಡಬಹುದು. ಎಡಬಲಬದಿಯಲ್ಲಿ ಶಾಂತಿನಾಥ ಜಿನಾಲಯ ಹಾಗೂ ಸಹಸ್ರಕೂಟ ಜಿನಾಲಯ ಕೂಡ ಇದೆ.

ನಂತರ ಆಚಾರ್ಯ ಶ್ರೀ 108 ಕುಂತುಸಾಗರ ಮುನಿ ಮಹಾರಾಜರು ಈ ಕ್ಷೇತ್ರ ಬೆಳೆದು ಬಂದ ರೀತಿಯ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿ, ಈ ಕ್ಷೇತ್ರಕ್ಕೆ  ಆತ್ಮ ಕಲ್ಯಾಣಕ್ಕಾಗಿ  ಮತ್ತು  ಜೈನೇಂದ್ರ ಭಗವಂತನ ದರ್ಶನಕ್ಕಾಗಿ ಬರುತ್ತಾರೆ