ಧರ್ಮದ ಕುಡಿ / ಎಪಿಸೋಡ್-04

ಸರ್ವರಿಗೂ ಜೈ ಜಿನೇಂದ್ರ, ಸಂಸ್ಕಾರ ಎನ್ನುವುದು ಮಕ್ಕಳಿಗೆ ಹುಟ್ಟಿನಿಂದ ಬಂದರು ಕೂಡ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಿ ನಮ್ಮ ಧರ್ಮದ ಹಾದಿಯಲ್ಲಿ ಕೊಂಡೊಯ್ಯವುದರಿಂದ ವೃದ್ಧಿಸುತ್ತದೆ. ಇಂದು ನಮ್ಮ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ನಮ್ಮ ಜೊತೆ ಕ್ಯಾಲಿಫೋನಿಯಾದ ಅಹನ, ಬೆಂಗಳೂರಿನ ಆರ್ಯ ಹಾಗೂ ಬಾನ್ವಿ ಇದ್ದಾರೆ, ಅಹಾನ ಬಗ್ಗೆ ಒಂದು ಕೀರು ಪರಿಚಯ.

ಅಹನ ಜೈನ್, ಅಮೆರಿಕಾದ ಕ್ಯಾಲಿಫೋನಿಯನಲ್ಲಿರುವ ಸೂರಜ್ ನಲ್ಲಿಕಾರು ಹಾಗೂ ಪ್ರಣನ್ಯ ಜೈನ್ ಇವರ ನಾಲ್ಕು ವರ್ಷದ ಹೆಣ್ಣುಮಗಳು.ಪುಸ್ತಕವನ್ನು ಓದುವ ಅವ್ಯಾಸವನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ರೂಢಿಸಿಕೊಂಡಿರೊ ಅಹನ, ಸೈಕ್ಲಿಂಗ್ ಕರಾಟೆ ಕಲಿತ್ತಿದ್ದಾಳೆ. ಅವಳಿಗೆ ರಾಷ್ಟ್ರ ಭಕ್ತಿಗೀತೆ ಹಾಡುವುದು ಎಂದರೆ ತುಂಬಾ ಇಷ್ಟ.

(ಅಹನರವರು ವಂದೆಮಾತರಂ ಗೀತೆಯನ್ನು ಹೇಳಿದರು).

ಕನ್ನಡ ವರ್ಣಮಾಲೆಯನ್ನು ಇಷ್ಟಪಟ್ಟು ಕಲಿತಿದ್ದಾರೆ. ನಾನು ಇಷ್ಟೇಲ್ಲಾ ಹೇಳಲು ಕಾರಣ ಹೊರದೇಶದಲ್ಲಿ ಇದ್ದು ನಮ್ಮ ದೇಶ, ಸಂಸ್ಕೃತಿ, ಧರ್ಮ ಹೀಗೆ ನಮ್ಮ ತನವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ ಈಕೆಯ ತಂದೆ ತಾಯಿ, ನಿಜವಾಗಿ ಮೆಚ್ಚುವಂತಹ ಕೆಲಸ. ಆಕೆ ದರ್ಶನ ಸ್ತುತಿ ಜೊತೆಗೆ ಅನೇಕ ಮಂತ್ರಗಳು ಸ್ತೋತ್ರಗಳನ್ನು ಕಲಿತ್ತಿದ್ದಾಳೆ. ಅವಳ ಬಗ್ಗೆ ನನಗೆ ತುಂಬಾ ಹೆಮ್ಮೆ. ಖಂಡಿತ ಪ್ರೋತ್ಸಾಹಿಸಿ.

ನಿರೂಪಕರು :- ಜೈ ಜಿನೇಂದ್ರ ಅಹನ.

ಅಹನ :- ಜೈ ಜಿನೇಂದ್ರ.

ನಿರೂಪಕರು :- ಅಪ್ಪ ಅಮ್ಮನ ಹೆಸರು ಏನು?

ಅಹನ :- ಅಪ್ಪ ಸೂರಜ್ ನಲ್ಲಿಕಾರು ಅಮ್ಮ ಪ್ರಣನ್ಯ ಜೈನ್

 ನಿರೂಪಕರು :- ಅಜ್ಜಿ ಮನೆ ಯಾವುದು.

ಅಹನ :- ಮೂಡುಬಿದ್ರೆ.

ನಿರೂಪಕರು :- ಎಲ್ಲಿ ಇರುವುದು.

ಅಹನ :- ಕರ್ನಾಟಕ , ಭಾರತ.

ನಿರೂಪಕರು :- ನೀವು ಪ್ರತಿದಿನ ನಮೋಕಾರ ದರ್ಶನ ಸ್ತುತಿ ಹೇಳುತ್ತಿರಂತೆ ಹೌದ.

ಅಹನ :- ಹೌದು.

ನಿರೂಪಕರು :- ಪೆಟ್ರಿಯಾಟಿಕ್ ಸಾಂಗ್ ತುಂಬಾ ಇಷ್ಟಪಟ್ಟು ಹಾಡುತ್ತಿರಂತೆ ನಿಮ್ಮ ಶಾಲೆಯಲ್ಲಿ ಕಲಿಸಿರುವುದ ಹೇಗೆ.

ಅಹನ :- ಇಲ್ಲಾ ಅಪ್ಪ ಅಮ್ಮ ಕಲಿಸಿರುವುದು.

ನಿರೂಪಕರು :- ಭಕ್ತಾಂಬರದ ಐದನೇ ಶ್ಲೋಕವನ್ನು ಹೇಳುತ್ತೀರ.

(ಅಹನ ರವರು ಭಕ್ತಾಂಬರದ ಐದನೇ ಶ್ಲೋಕವನ್ನು ಹೇಳಿದರು).

ನಿರೂಪಕರು :- ವಿಶೇಷ ಅನಿಸುವುದು ನಿಮ್ಮ ತೊದಲು ನುಡಿಗಳಲ್ಲಿ ಪಾರ್ಶ್ವನಾಥ ಸ್ವಾಮಿಯ ಉಪಸರ್ಗ ಸ್ತೋತ್ರ ಕೇಳುವುದು, ಬೇಗ ಹೇಳಿ ಒಮ್ಮೆ.

(ಅಹನ ರವರು ಪಾರ್ಶ್ವನಾಥ ಸ್ವಾಮಿಯ ಉಪಸರ್ಗ ಸ್ತೋತ್ರವನ್ನು ಹೇಳಿದರು).

ನಿರೂಪಕರು :- ಹೀಗಾಗಲೆ ಧರ್ಮದ ತಳಹದಿಯಲ್ಲಿ ಬೆಳೆಯುತ್ತಿರುವ ನಿಮಗೆ ಆಸಕ್ತಿ ಇನ್ನೂ ಹೆಚ್ಚು ಬೆಳೆಯಲ್ಲಿ ಎಂದು ಹೇಳುತ್ತಾ, ಥ್ಯಾಂಕ್ ಯೂ ಅಹನ.

ಅಹನ :- ಥ್ಯಾಂಕ್ ಯೂ.

ವೀಕ್ಷಕರೆ ಹೀಗಾ ಆರ್ಯ ನಮ್ಮ ಜೊತೆ ಇದ್ದಾರೆ, ಆರ್ಯನ ಬಗ್ಗೆ ತಿಳಿದು ಕೊಳ್ಳೊಣ.

ಹೆಸರು ಆರ್ಯ ತಂದೆ ಅಭಿನಂದನ್ ತಾಯಿ ಬಿಂದು ಅಭಿನಂದನ್ ಅವನು ಹಿಮಾಚಲ ಪ್ರದೇಶದವರೆಗೂ ಹೋಗಿ ನ್ಯಾಷಿನಲ್ ಲೆವೆಲ್ ಟೆಬಲ್ ಟೆನ್ನಿಸ್ ನಲ್ಲಿ ಗೆದ್ದುಕೊಂಡು ಬಂದಿದ್ದಾನೆ. ಇಂತಹ ಸ್ಪೋಟಿವ್ ಹುಡುಗ ಧರ್ಮದ ವಿಷಯದಲ್ಲಿ ಬಹುತೇಕ ಧಾರ್ಮಿಕ ಮಂತ್ರ ಹಾಗೂ ಸ್ತೋತ್ರಗಳನ್ನು ಕಂಠ ಪಾಠ ಮಾಡಿದ್ದಾನೆ. ಡ್ರಾಯಿಂಗ್, ಪೈಂಟಿಗ್ ನಲ್ಲಿ ಆಸಕ್ತಿ ಇದೆ ಸ್ವಾಧ್ಯಯದಲು ಕೂಡ ಆಸಕ್ತಿ ಇದೆ. ಈತ ಬೆಳೆದು ವಿದ್ವಾಂಸನಾದರು ಆಶ್ಚರ್ಯವಿಲ್ಲಾ, ಬೆಲೆಯುತ್ತಿರುವ ಚಿಗುರು ಗಿಡವಾಗಿ ಮರವಾಗಲು ನೀವೆಲ್ಲಾ ಪ್ರೋತ್ಸಾಹಿಸಿ.

ನಿರೂಪಕರು :- ಜೈ ಜಿನೇಂದ್ರ ಆರ್ಯ.

ಆರ್ಯ :- ಜೈ ಜಿನೇಂದ್ರ.

ನಿರೂಪಕರು :- ಏನು ಓದುತ್ತಾಯಿರಿ ?

ಆರ್ಯ :- ಆರನೇ ತರಗತಿ .

ನಿರೂಪಕರು :- ನ್ಯಾಷಿನಲ್ ಲೆವೆಲ್ ಟೆಬಲ್ ಟೆನ್ನಿಸ್ ಪ್ಲೆಯರ್ ನೀವು, ಮುನಿಗಳಿಗೆ ಆಹಾರವನ್ನು ಕೂಡ ಕೊಡುತ್ತಿರ, ಭಕ್ತಾಂಬರ 48 ಶ್ಲೋಕ ಹೇಳುವ ನಿಮಗೆ ನಾನು ಕೇಳುತ್ತಿರುವುದು 40ನೇ ಶ್ಲೋಕ.

(ಆರ್ಯ ರವರು ಭಕ್ತಾಂಬರದ 40ನೇ ಶ್ಲೋಕವನ್ನು ಹೇಳಿದರು).

ನಿರೂಪಕರು :- ತುಂಬಾ ಚೆನ್ನಾಗಿ ಹೇಳಿದ್ರಿ ಶ್ಲೋಕವನ್ನು ಕಲಿಯುತ್ತಿದಿರಿ ಇನ್ನೂ ಅರ್ಥವನ್ನು ತಿಳಿಯಲು ಶುರುಮಾಡಿ.

ಆರ್ಯ :- ಪ್ರಯತ್ನಿಸುತ್ತೇನೆ.

ನಿರೂಪಕರು :- ಈಗಿನ ಮಕ್ಕಳು ಬಸದಿಗೆ ಬರುವುದಿಲ್ಲಾ ಆದರೆ ಪ್ರತಿ ಧಾರ್ಮಿಕ ಕಾರ್ಯಕ್ರಮಗಳಿಗೆ ಬರುತ್ತಿರಿ ಧರ್ಮದ ವಿಷಯಕ್ಕೆ ಪ್ರೇರನೆ ಹೇಗೆ ಸಿಕ್ಕಿತು.

ಆರ್ಯ :- ದೇವರ ಪೂಜೆ ಅಭಿಷೇಕ ಶ್ಲೋಕಗಳನೇಲ್ಲಾ ಪ್ರತಿ ದಿನ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಅಪ್ಪ ಅಮ್ಮ ಹೇಳುತ್ತಾರೆ. ಇದನ್ನೆಲ್ಲಾ ಮಾಡಿದರೆ ಜೈನ ಕಥೆಗಳಲ್ಲಿ ನಾನು ಕೇಳಿದ್ದೇನೆ ಇದನ್ನೇಲ್ಲಾ ಮಾಡಿದರೆ ನನಗೆ ಖುಷಿಯಾಗುತ್ತದೆ. ಇದಕ್ಕೆ ಬಸದಿಗಳಿಗೆ ನಾನು ಹೊಗುತ್ತೇನೆ, ಇದಕ್ಕೆ ನನಗೆ ಪ್ರೇರಣೆ ನನ್ನ ಅಮ್ಮ.

ನಿರೂಪಕರು :- ಧರ್ಮದ ಬಗ್ಗೆ ತಿಳಿದುಕೊಂಡಿರುವ ನೀವು ತೀರ್ಥಕರರ ಬಗ್ಗೆ ಕೂಡ ತಿಳಿದು ಕೋಡಿರುತ್ತಿರ ಹಾಗಾಗಿ ಒಂದು ಕಥೆಯನ್ನು ಹೇಳುತ್ತೀರ.

(ಆರ್ಯ ರವರು ಪಾರ್ಶ್ವನಾಥ ತೀರ್ಥಂಕರರ ಹಿಂದಿನ ಜನ್ಮದ ಕಥೆಗಳಲ್ಲಿ ಮರುಭೂತಿ ಬ್ರಾಹ್ಮಣನ ಕಥೆಯನ್ನು ಹೇಳಿದರು).

ವೀಕ್ಷಕರೆ ಆರ್ಯನಿಗೆ ಕಮೆಂಟ್ ಮತ್ತು ಲೈಕ್ ಮೂಲಕ ಪ್ರೋತ್ಸಾಹಿಸಿ ದಯವಿಟ್ಟು.

ನಿರೂಪಕರು :- ಬಹಳ ಅರ್ಥವತ್ತಾಗಿ ಸ್ಪುಟವಾಗಿ ವಿವರಣೆಯನ್ನು ನೀಡಿದ್ದೀರಿ. ಇದನ್ನು ಹೀಗೆ ಉಳಿಸಿ ಬೆಳಸಿ ಕೊಂಡು ಹೋಗಿ ಎಂದು ಹೇಳುತ್ತಾ ಥ್ಯಾಂಕ್ ಯೂ ಆರ್ಯ.

ವೀಕ್ಷಕರೆ ಹೀಗಾ ನಮ್ಮೊಟ್ಟಿಗೆ ಬೆಂಗಳೂರಿನ ಪ್ರಮೋದ್ ಮತ್ತು ಅರ್ಷಿತಾ ದಂಪತಿಗಳ ಪುತ್ರಿ ಭಾನ್ವಿ ಇದ್ದಾರೆ. ಅವರು ಬಾಹುಬಲಿ ಸ್ವಾಮಿ ಜಗಕ್ಕೆಲ್ಲಾ ಸ್ವಾಮಿ ಹಾಡಲ್ಲಿದ್ದಾರೆ ಅವರನ್ನ ಇನ್ನೂ ಹೆಚ್ಚಿನ ರೀತಿ ಧಾರ್ಮಿಕ ಆಸಕ್ತಿ ಬೆಳೆಸಲು  ಪ್ರೋತ್ಸಾಹಿಸಿ ಎಂದು ಹೇಳುತ್ತಾ.

ನಿರೂಪಕರು :- ಜೈ ಜಿನೇಂದ್ರ ಭಾನ್ವಿ.

ಭಾನ್ವಿ :- ಎಲ್ಲಾರಿಗೂ ಜೈನ ಜಿನೇಂದ್ರ.

(ಭಾನ್ವಿ ರವರು ಬಾಹುಬಲಿ ಸ್ವಾಮಿ ಜಗಕ್ಕೆಲ್ಲಾ ಸ್ವಾಮಿ ಹಾಡಿದರು).

ನಿರೂಪಕರು :- ಇಲ್ಲಿ ಒಂದು ಮುದ್ದಾದ ಮಗುವು ರಾಮಯಾಣ ಮಹಾಭಾರತವನ್ನು ಹರೆದು ಕುಡಿದಿರುವ ರೀತಿಯಲ್ಲಿ ಬುದ್ದಿವಂತಿಕೆಯಿಂದ ಉತ್ತರಿಸುತ್ತಿದೆ. ಧರ್ಮ ಯಾವುದೇ ಇರಬಹುದು ಸಂಸ್ಕೃತಿ ಯಾವುದೇ ಇರಬಹುದು ಧಾರ್ಮಿಕ ವಿಚಾರ ಯಾವುದೇ ಇರಬಹುದು ಆದರೆ ಆಕೆಯ ಬುದ್ದಿವಂತಿಕೆ ಜಾಣ್ಮೆ ನೋಡಿ ನಮ್ಮ ಮಕ್ಕಳಲು ನಮ್ಮ ಧರ್ಮ ಗ್ರಂಥದ ಬಗ್ಗೆ ಯಾಕೆ ತಿಳಿದು ಕೋಳ್ಳಲು  ಸಾಧ್ಯವಾಗುವುದಿಲ್ಲಾ ನಾವು ಯಾಕೆ ಪ್ರಯತ್ನಿಸಬಾರದು ಎಂದು  ಈ ವೀಡಿಯೋ :-

Link : https://www.youtube.com/watch?v=2JViQnLzxPM  (12:13 ನಿಂದ  14 : 42)

ನೋಡಿದ್ರಲ್ವಾ ವೀಕ್ಷಕರೆ, ಮಕ್ಕಳಲ್ಲಿ ಅಗಾದ ಶಕ್ತಿ ಇರುತ್ತದೆ ಮಕ್ಕಳನ್ನು ನಾವು ಯಾವ ರೀತಿ ಬೆಳಸುತ್ತ ಹೋಗುತ್ತಿವಿ  ಅ ರೀತಿ ಬೆಳೆಯುತ್ತಾರೆ ಮಕ್ಕಳು ಮಕ್ಕಳಲ್ಲಿರೊ ಧಾರ್ಮಿಕ ಆಸಕ್ತಿಯನ್ನ ಗುರುತಿಸಿ ಅವರ ಆಸಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಈ ನಮ್ಮ ಧರ್ಮದ ಕುಡಿ ಕಾರ್ಯಕ್ರಮ.

ಪ್ರತಿ ಭಾನುವಾರ ಬೆಳಗ್ಗೆ ಸರಿಯಾಗಿ 10:30ಕ್ಕೆ ತಪ್ಪದೇ ವೀಕ್ಷಿಸಿ ಎಲ್ಲರಿಗೂ ಜೈ ಜಿನೇಂದ್ರ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್