ಅತಿಸಾಯ ಕ್ಷೇತ್ರ ಗೆರುಸೊಪ್ಪೆ

ಜೈ ಜಿನೇಂದ್ರ ವೀಕ್ಷಕರೆ, ನಾವು ಇಂದು ನಿಮಗೆ ಗೇರುಸೊಪ್ಪೆ ಕ್ಷೇತ್ರದ ಸಂಕ್ಷೀಪ್ತ ಪರಿಚಯ ಹಾಗೂ ಗೇರುಸೊಪ್ಪೆಯಿಂದ ಸ್ಥಳಾಂತರಗೊಂಡು ಪ್ರತಿಷ್ಠಾಪನೆಯಾದ ಮಾತೆ ಶ್ರೀ ಜ್ವಾಲಮಾಲಿನಿ ದೇವಿಯ ಅತಿಶಯ ಶ್ರೀ ಕ್ಷೇತ್ರ ಸಿಂಹನಗದ್ದೆ ರಥೋತ್ಸವವನ್ನು ಪ್ರಸ್ತುತ ಪಡಿಸುತ್ತಿದೇವೆ.

ವಿಶ್ವವಿಖ್ಯಾತ ಜೋಗದ ಜಲಪಾತದಿಂದ ಮುಂದೆ ಸಾಗಿ ಹೊನಾವರದ ಕಡೆ ಸಾಗಿದರೆ ಸುಮಾರು 40ಕಿ.ಮೀ ದೂರದಲ್ಲಿ ಸಿಗುತ್ತದೆ ಗೇರುಸೊಪ್ಪೆ ಎಂಬ ಪುಟ್ಟಗ್ರಾಮ. ಶಾರಾವತಿ ದಂಡೆಯಲ್ಲಿರುವ ಮೋಹಕ ಕಾಡು ಹಾದಿಯಲ್ಲಿ ಮುಂದೆ ಕಾಣ ಸಿಗುವುದು ಈ ಗ್ರಾಮ.

ಎಸ್ ಪಿ ಪದ್ಮ ಪ್ರಸಾದ್ ರವರ ಜೈನ ಜಾನಪದ ಸಾಹಿತ್ಯ ಸಂಪಾದನೆ ಮತ್ತು ಅಧ್ಯಾಯನ ಏನ್ನುವ ಪುಸ್ತಕದಲ್ಲಿರುವ ಲೇಖನದ ಪ್ರಕಾರ ಸಾಳ್ವ ರಾಜಧಾನಿಯಾಗಿದ್ದ ಶಾಸನಗಳಲ್ಲಿ ನಗಿರೆ ಎಂದು ಕರೆಯಲಾದ ಚೆನ್ನ ಬೈರಾದೇವಿ ಆಳಿದ ನಾಡು. ಅದಕ್ಕು ಮೊದಲು ಇಲ್ಲಿ ಸಮತ್ತ ಭಧ್ರಚಾರ್ಯರಿಂದ ಜ್ವಾಲಮಾಲಿನಿ ಅಮ್ಮನವರ ಮೂರ್ತಿ ಪ್ರತಿಷ್ಠೆಯಾಗಿತ್ತು ಎಂದು ಹೇಳಲಾಗುತ್ತದೆ. ಇದು ಜೈನ ಸಂಸ್ಕೃತಿಯ ಕೇಂದ್ರವಾಗಿದ್ದಲ್ಲದೆ ಒಟ್ಟು ಎಪ್ಪತ್ತು ಬಸದಿಗಳು ಇದ್ದವಂತೆ, ಈಗ ಉಳಿದಿರುವುದು 5 ಮಾತ್ರ.

ಮೊದಲಿಗೆ ಹಿರೆ ಬಸದಿ, ಇಲ್ಲಿ ಪಾಶ್ವನಾಥರ ಶೀಲಾ ಮೂರ್ತಿ ಇದೆ, ಜೊತೆಗೆ ಜ್ವಾಲಮಾಲಿನಿ ಯಕ್ಷೆಯ ಲೋಹದ ಮೂರ್ತಿ ಇತ್ತೆಂದು ಸುಮಾರು ಹತ್ತು ವರ್ಷಗಳ ಹಿಂದೆ ಅದು ಕಳವಾಯಿತು ಎಂದು ಹೇಳಲಾಗುತ್ತದೆ.

ನೇಮಿನಾಥ ಬಸದಿ, ಇಲ್ಲಿ ನೇಮಿನಾಥ ತೀರ್ಥಂಕರರ ವಿಗ್ರಹವಿದೆ, ತುಸು ನೀಲಿ ಬಣ್ಣದ ಶಿಲೆಯಿಂದ ಹಾಗಿದ್ದು ಅಜನ ಎಂಬುವವನ್ನು ಇದನ್ನು ಪ್ರತಿಷ್ಠಾಪಿಸಿದನೆಂದು ಹೇಳಲಾಗುತ್ತದೆ. ಚೆನ್ನ ಬೈರಾದೇವಿ ಕಾಲದಲ್ಲಿಯೇ ಇದು ನಿರ್ಮಾಣವಾಯಿತ್ತು.

ಇನ್ನೂ ವರ್ಧಮಾನ ಹಾಗೂ ಪಾರ್ಶ್ವನಾಥ ಬಸದಿ, ಇವುಗಳ ಗರ್ಭಗುಡಿಗಳು ಮಾತ್ರ ಇದೆ, ಮೂರ್ತಿಗಳು ಸುಂದರವಾಗಿದೆ. ಬಸದಿಗಳ ಉಳಿದ ಭಾಗ ಪೂರ್ತಿ ನಾಶವಾಗಿದೆ ಹಾಗೂ ಇಲ್ಲಿಯ ಭಗ್ನಾವಿಶೇಷಗಳು ಇಂದಿಗೂ ಕಾಣಸಿಗುತ್ತದೆ.

ಚತುರ್ಮುಖ ಬಸದಿ, ಗೇರುಸೊಪ್ಪೆಗೆ ಹೆಚ್ಚಿನ ಪ್ರಸಿದ್ದಿ ತಂದು ಕೊಟ್ಟಿರುವ ಬಸದಿ ಇದು. ವಾಸ್ತುಶಿಲ್ಪದ ದೃಷ್ಟಿಯಿಂದಲು ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ. ಇದರ ಉಪ ರಚನೆಗಳು ಕೆಲವು ಈಗ ಬಿದ್ದು ಹೋಗಿವೆ ಅನಿಸುತ್ತದೆ. ನಾಲ್ಕು ದಿಕ್ಕಿಗೆ ಮುಖಮಾಡಿದ ನಾಲ್ಕು ತೀರ್ಥಂಕರರ ನಾಲ್ಕಡಿ ಮುದ್ರೆಯ ತೇಜಸ್ವಿ ಮೂರ್ತಿಗಳು ಇಲ್ಲಿವೆ. ರಾಣಿ  ಚೆನ್ನ ಬೈರಾದೇವಿ ನಿರ್ಮಿಸಿದ ಮಂದಿರ ಇದೆಂದು ಹೇಳಲಾಗುತ್ತದೆ.

ಇಲ್ಲಿನ ಜಾನಪದ ಕಥೆಯೊಂದರಲ್ಲಿ ಗೇರುಸೊಪ್ಪೆ ನಾಶವಾಗುವ ಸಂದರ್ಭದಲ್ಲಿ ಸಮಂತ ಭದ್ರಾಚಾರ್ಯ ಮುನಿಗಳು ಎತ್ತಿನ ಗಾಡಿಯಲ್ಲಿ ದೇವಿಯ ಮೂರ್ತಿಯನ್ನು ಬೇರೆಡೆ ಸಾಗಿಸಲು ಮುಂದದಾಗ ದೇವಿಯ ಆಜ್ಞೆಯ ಪ್ರಕಾರ ಗಾಡಿಯ ಕೀಲು ಮುರಿದ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪಿಸ ಬೇಕಿತ್ತು. ಈಗಿನ ಸಿಂಹನಗದ್ದೆ ಕ್ಷೇತ್ರದ ಬಳಿ ಬಂದಾಗ ಬಂಡಿಯ ಕೀಲು ಮುರಿಯುತ್ತದೆ. ಅದೇ ಸ್ಥಳದಲ್ಲಿ ಸಿಂಹ ಮತ್ತು ಹಸು ಒಂದೇ ಕಡೆ ನೀರು ಕುಡಿಯುವ ದೃಶ್ಯವು ಅವರಿಗೆ ಕಾಣಸಿಗುತ್ತದೆ. ಹಾಗಾಗಿ ಇದು ಒಂದು ಅಹಿಂಸಾತ್ಮಕ ಸ್ಥಳವಾಗಿದ್ದು ದೇವಿ ಮೂರ್ತಿ ಪ್ರತಿಷ್ಠಾಪನೆಗೆ ಪ್ರಶಸ್ತವಾದ ಸ್ಥಳ ಎಂದು ಭಾವಿಸಿ ಮೂರ್ತಿಯನ್ನು ಅಲ್ಲಿ ತಂದು ಪ್ರತಿಷ್ಠಾಪಿಸಿದರು ಎಂದು ಹೇಳುವುದು ಇಲ್ಲಿನ ಪ್ರತಿತಿಯಲ್ಲಿರುವ ಕಥೆ.

ಪರಮ ಪೂಜ್ಯ ಸ್ವಸ್ತಿಶ್ರೀಮದಭಿನವ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮಾತನಾಡಿ ರಾಣಿ ಚೆನ್ನ ಬೈರಾದೇವಿಯವರ ಆಳ್ವಿಕೆ ಹಾಗೂ ಗೇರುಸೊಪ್ಪೆ ಶ್ರೀಕ್ಷೇತ್ರದಲ್ಲಿ ಇದಂತಹ ಬಸದಿಗಳ ವಿಶೇಷತೆ ಅದರಲ್ಲು ಶ್ರೀಕ್ಷೇತ್ರದಿಂದ ಜ್ವಾಲಮಾಲಿನಿ ದೇವಿಯ ಮೂರ್ತಿಯನ್ನು ಸ್ಥಳಾಂತರ ಮಾಡಿ ಸಿಂಹನಗದ್ದೆ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದ ಸಮಂತ ಭದ್ರಾಚಾರ್ಯ ಮುನಿಗಳ ಬಗ್ಗೆ ವಿವರಿಸಿದರು.

ಇಂತಹ ಒಂದು ಪುಣ್ಯ ಕ್ಷೇತ್ರವಾದ ನರಸಿಂಹರಾಜ ಪುರ ಅತಿಶಯ ಕ್ಷೇತ್ರ ಸಿಂಹನಗದ್ದೆ ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ಬಹಳಷ್ಟು ಅಭಿವೃದ್ಧಿಗೊಂಡು ಇತ್ತೀಚಿನ ದಿನಗಳಲ್ಲಿ ಭೋಜನ ಶಾಲೆ, ವಸತಿಗೃಹ, ರಸ್ತೆ ನಿರ್ಮಾಣದಿಂದ ಹಿಡಿದು ಇಲ್ಲಿನ ಚಂದ್ರನಾಥ ಬಸದಿ, ಶಾಂತಿನಾಥ ಸ್ವಾಮಿ, ಬಾಹುಬಲಿ ಸ್ವಾಮಿ, ಹೀಗೆ ಇನ್ನೂ ಅನೇಕ ಬಸದಿಗಳ ಸಮ್ಮುಚಯ ಇದ್ದು ಇವುಗಳ ಅಗತ್ಯ ಜೀರ್ಣೋದ್ದಾರ ಕಾರ್ಯಗಳು ಕೂಡ ಶ್ರೀಗಳವರ ನೇತೃತ್ವದಲ್ಲಿ ನಡೆದಿದೆ. ಶ್ರೀಗಳವರ ಮಾರ್ಗದರ್ಶನದಲ್ಲಿ ನಡೆದ ಭಗವಾನ್ ಚಂದ್ರಪ್ರಭು ಮತ್ತು ಮಾತೆ ಜ್ವಾಲಮಾಲಿನಿ ದೇವಿಯ ರಥೋತ್ಸವ ದಿನಾಂಕ 05-04-2021ರಂದು ಕರೊನದ ಪ್ರಕ್ಷಿದ್ದ ಪರಿಸ್ಥಿತಿಯಲು ಕೂಡ ಸಾಧರಣವಾದರು ಬಹಳ  ಸುಂದರವಾಗಿ ಅಯೋಜನೆಗೊಂಡು ವಿಧಿಪೂರ್ವಕವಾಗಿ ನಡೆಯಿತು. ಕಂಬದಳ್ಳಿ ಶ್ರೀಗಳು ಉಪಸ್ಥಿತರಿದ್ದ ಈ ಒಂದು ಕಾರ್ಯಕ್ರಮದ ದೃಶ್ಯಾವಳಿ ಗಳನ್ನು ಒಮ್ಮೆ ವೀಕ್ಷಿಸಿ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್