ಜೈನರಗುತ್ತಿ ಅಡಗೂರು ೧೨

ಜೈ ಜಿನೇಂದ್ರ ವೀಕ್ಷಕರೆ, ಇಂದು ಜಿನ ರಾತ್ರಿ ಜೈನರಿಗೆ ಅತಿ ಪವಿತ್ರವಾದ ದಿನ ಶ್ರಮಣ ಪರಂಪರೆಯ ಅರಿಕಾರರು ಪ್ರಥಮ ತೀರ್ಥಂಕರರು ಆದ ಭಗವಾನ್ ವೃಷಭನಾಥ ತೀರ್ಥಂಕರರು ಮೋಕ್ಷವನ್ನು ಪಡೆದ ಪಾವನ ದಿನ. ಇಂತಹ ಪುಣ್ಯದಿನವಾದ ಇಂದು ಎಲ್ಲೆಡೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧ ಭಕ್ತಿಯಿಂದ ನಡೆಯುತ್ತಿವೆ. ವಿವಿಧದಲ್ಲಿ ಭಗವಾನ್ ಆದಿನಾಥರನ್ನು ಸ್ಮರಣೆ ಮಾಡಲಾಗುತ್ತಿದೆ. ಆದರೆ ವೀಕ್ಷಕರೆ ನಾನೀಗ ನಿಮ್ಮ ಮುಂದೆ ಪ್ರಸ್ತುತ ಪಡಿಸ ಬೇಕೆನ್ನುತ್ತಿರುವ ಒಂದು ಧಾರ್ಮಿಕ ಮಹೋತ್ಸವ ಎಂದರು ತಪ್ಪಾಗಲಾರದು. ಅದ್ಬುತ ಅತಿಶಯುಕ್ತ ಕ್ಷಣಗಳು ಇದಾಗಿದೆ. 

ನಡುರಾತ್ರಿ ಪಯಣ ಆರಂಭಿಸಿ ನಮ್ಮ ತಂಡ ಅತಿಶಯುಕ್ತ ಕ್ಷೇತ್ರ ಹಾಗೂ ಮಹಾನ್ ತೇಜಸ್ವಿ ಮುನಿ ಮಹಾರಾಜರಿದ್ದಲ್ಲಿಗೆ ತಲುಪಿದಾಗ ಮುಂಜಾನೆ ಗಂಟೆ ಮೂರರ ಸಮಯ.

ಮುನಿ ಶ್ರೀ 108 ವೀರ ಸಾಗರ ಮುನಿ ಮಹಾರಾಜರು ಮಹಾನ್ ಸಾಧನ ತಪಸ್ವಿಯಾದ ಇವರ ಧರ್ಮ ಪ್ರಭಾವನೆಯ ಬಗ್ಗೆ ರಾಜ್ಯದಲ್ಲಿ ಅಷ್ಟೆಯಲ್ಲಾ ಎಲ್ಲೇಡೆಯ ಜೈನ ಸಮುದಾಯದವರಿಗೆ ಇದರ ಅರಿವಿದೆ. ಇತ್ತೀಚೆಗಷ್ಟೇ ಶಿಕರ್ಜಿಯಲ್ಲಿ ಚಾತುರ್ಮಾಸವನ್ನು ಕೈಗೊಂಡು ಮರಳಿದ ಅವರ  ಸಾಧನಾ ಶಕ್ತಿ ದುಪಟ್ಟು ಆದಂತೆ ಅನಿಸುತ್ತದೆ. ಅತಿಶಯ ಕ್ಷೇತ್ರ ಜೈನರ ಗುತ್ತಿ ಅಡುಗೂರು, ಇತ್ತೀಚೆಗಷ್ಟೇ ಪಂಚ ಕಲ್ಯಾಣಗೊಂಡ ಭಗವಾನ್ ಶ್ರೀ ಪಾರ್ಶ್ವನಾಥ ಜಿನಾಲಯದ ಆವರಣದಲ್ಲಿ ಮುನಿಗಳ ಸಾಧನಾ ಶಕ್ತಿ ಕ್ಷೇತ್ರದ ಅತಿಶಯ ಎನ್ನುವುದೊ ಎಲ್ಲವು ಒಡಗೂಡಿ ಎನೇಂದು ಬಣ್ಣಿಸುವುದು ಎಂದು ಅರಿಯದಾದ ಹಾಗೂ ಅಲ್ಲಿ ನೇರೆದಿದ್ದ ಶ‍್ರಾವಕರು ದಿಗ್ಭ್ರಾಂತರಾದ ಘಟನಾವಳಿಗಳು ಎಲ್ಲರ ಕಣ್ಣಮುಂದೆ ನಡೆಯಿತು. ಮುನಿಗಳು ನಿಗದಿ ಪಡಿಸಿದ ಸುಸಮಯದಲ್ಲಿ ಅವರ ಮಾರ್ಗ ದರ್ಶನದಂತೆ ಅವರು ತೋರಿಸಿದೆಡೆಯಲ್ಲಾ ಉತ್ಕಲನ ಮಾಡಲಾಗಿ ಭೂಗರ್ಭದಿಂದ ಭಗವಾನ್ ಶ್ರೀ ಮುನಿಸುರತ, ಆದಿನಾಥ, ಪಾರ್ಶ್ವನಾಥ ತೀರ್ಥಂಕರರ ಹಾಗೂ ಪದ್ಮಾವತಿ ಅಮ್ಮನವರ ಪ್ರಾಚೀನ ಮೂರ್ತಿಗಳು ದೊರೆತ್ತಿವೆ.

ನೆರೆದಿದ್ದ ಭಕ್ತಾಧಿಗಳು ಮೂರ್ತಿ ಮಣ್ಣಿನಿಂದ ಮೇಲೆದ್ದ ಕ್ಷಣ ಭಕ್ತಿ ಪರವಶರಾಗಿ ಧ್ಯಾನಿಸಿದಾಗ.

ಭಗ್ನ ಮೂರ್ತಿಯನ್ನು ಕಂಡು ಮುನಿಗಳು ಕುಸಿದು ಗದ್ಗದಿತರದಾಗ.

ಅದ್ಬುತ ಅದ್ಬುತ ಅದ್ಬುತ ಎನ್ನುವ ಘಳಿಗೆಗಳನ್ನು ನೀವು ವೀಕ್ಷಿಸಿ ಪುಣ್ಯಪಾತ್ರರಾಗುತ್ತಿದ್ದೀರಿ.

ಒಂದೊಂದು ಮೂರ್ತಿಯು ದೊರೆತಾಗ ಮುನಿಗಳು ಓಡೋಡಿ ಮೂರ್ತಿಯನ್ನು ಸ್ಪರ್ಶಿಸಿ ಸಂಭ್ರಮಿಸಿದಾಗ.

ಮುನಿಮಹಾರಾಜರು ಮಾತನಾಡಿ ಮೂರ್ತಿಗಳು ದೊರೆತಿರುವುದಕ್ಕೆ ಸಂತಸ ಮತ್ತು ಅದರಲ್ಲಿ ಒಂದು ಮೂರ್ತಿ ಜೆಸಿಬಿ ಗೆ ಸಿಕ್ಕಿ ಒಡೆದಹೊಗಿದಕ್ಕೆ ಸ್ವಲ್ಪ ಬೇಸರವನ್ನು ವ್ಯಕ್ತಪಡಿಸಿದರು. ಮತ್ತು ಮೂರ್ತಿಯ ವಿಶೇಷತೆಯ ಬಗ್ಗೆ ತಿಳಿಸಿದರು.

ಜಲ ಹಾಗೂ ಗಂಧಾಭಿಷೇಕದ ಮೂಲಕ ಶುದ್ಧಿಗೊಂಡ ಪ್ರತಿಮೆಗಳು ಪ್ರಾಚೀನತೆಯ ಕುರುಹುಗಳನ್ನು ಹೊತ್ತು ಮುದ್ದಾದ ಲಕ್ಷಣದೊಂದಿಗೆ ಗೋಚರಿಸಿದ ಕ್ಷಣ.

ಮುನಿಗಳವರ ಬಳಿ  ನಡೆದ ಪ್ರೇರಣೆಯ ಬಗ್ಗೆ ತಿಳಿದು ಕೊಂಡಾಗ.

2014ರಲ್ಲಿ ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ಚಾತುರ್ಮಾಸವನ್ನು ಮುಗಿಸಿಕೊಂಡು ಅಡುಗೂರಿಗೆ ವಿಹಾರಮಾಡಿ ಬಂದೇವು. 48 ದಿನ ಭಕ್ತಾಂಬರ ಮಾಡಿದೆವು, ನಂತರ ವಿಹಾರವಾಗಿ ಮಹಾರಾಷ್ಟ್ರಕ್ಕೆ ತೆರಳುತ್ತೇವೆ ಎಂದರು. ಈ  ಕ್ಷೇತ್ರದಲ್ಲಿ ಅತಿಶಯವಿದ್ದು ನಮಗೆ ಭವಿಷ್ಯದಲ್ಲಿ ನಡೆಯುವಂತಹ ಸ್ಥಿತಿಗತಿಗಳುನ್ನು ನಾವು ನೋಡಿದೆ ಎಂದು ಹೇಳಿದರು. ಈ ಕ್ಷೇತ್ರವನ್ನು ಕಾಪಡಿಕೊಂಡು ಹೋಗುವುದಾಗಿ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು. ಮೂಲ ನಾಯಕ ಪಾರ್ಶ್ವನಾಥ ಭಗವಂತನಿಗೆ ವಜ್ರ ಲೇಪನೆ ಮಾಡಿ ಸ್ಥಾಪನೆ ಮತ್ತು ಇಲ್ಲಿ 24 ತೀರ್ಥಂಕರರನ್ನು ಸ್ಥಾಪನೆ ಮಾಡಲಾಗಿದೆ ಎಂದರು.

ನಂತರ ಮುನಿಗಳವರಿಗೆ ಕಾಡಿಗೆ ಹೋಗಿದಂತಹ ಸಂದರ್ಭದಲ್ಲಿ ದೊರೆತಂತಹ ಮೂರ್ತಿಯ ಬಗ್ಗೆ ತಿಳಿಸಿದರು. ನಂತರ ಮೂರ್ತಿ ಇದಂತಹ ಸ್ಥಳದಲ್ಲಿ ಅವರು ಜಪಮಾಡುತ್ತಿದು ಒಂದು ಕಾಲು ಲಕ್ಷ ಜಪಮಾಡುತ್ತಿದ್ದಾಗಿ ತಿಳಿಸಿದರು. ಒಂದು ದಿನ ಅವರ ಕನಸಿನಲ್ಲಿ ಒಂದು ಅನಾವುತ ವಾಗುತ್ತದೆ ಎಂದು ಕಂಡಿದ್ದು ಅದರಂತೆ ಮೂರ್ತಿಯನ್ನು ಭೂಗರ್ಭದಿಂದ ಹೊರತೆಗೆಯುವಾಗ ಒಂದು ಮೂರ್ತಿಯು ಬಿನ್ನವಾಯಿತು ಎಂದು ಬೇಸರ ವ್ಯಕ್ತಪಡಿಸಿದರು ಜೊತೆಗೆ ಉಳಿದ ಮೂರ್ತಿ ಸುರಕ್ಷಿತವಾಗಿ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಮತ್ತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಭಗವಂತರನ್ನು ಈ ಕ್ಷೇತ್ರದಲ್ಲಿ ಭೂಗರ್ಭದಿಂದ ತೆಗೆಯುವುದಾಗಿ ತಿಳಿಸಿದರು.

ಎಲ್ಲವೂ ಮೈನವಿರೇಳಿಸುವಂತಹ ಕ್ಷಣಗಳು, ಮುಂದೆ ಈ ಕ್ಷೇತ್ರರದ ಇತಿಹಾಸ ನಿಮ್ಮ ಮುಂದೆ ಪರಿಚಯಿಸಲಿದೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್