ಜೈ ಜಿನೇಂದ್ರ ವೀಕ್ಷಕರೆ ಜಗತ್ ಪ್ರಸಿದ್ದ ಹೊಂಬುಜದ ಜಾತ್ರಾ ಮಹೋತ್ಸವ ಕರೊನ ಕಾರಣದಿಂದಾಗಿ ಜಾತ್ರೆಗೆ ಜನರನ್ನು ನಿರ್ಬಂಧಿಸಲಾಗಿದೆ. ಮಠದ ಮಟ್ಟಿಗೆ ಮಾತ್ರ ಸಂಪ್ರದಾಯ ಬದ್ದವಾಗಿ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಜಾತ್ರಾ ಮಹೋತ್ಸವವನ್ನು ವೀಕ್ಷಿಸಲಾಗದಿರುವ ಭಕ್ತಾಧಿಗಳಿಗಾಗಿ ಮನೆಯಲ್ಲೆ ಕುಳಿತು ವೀಕ್ಷಿಸುವ ಸಲುವಾಗಿ ಜಾತ್ರೆಯ ಈ ಸುಂದರ ಕ್ಷಣಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ.
ಪರಂಪರಾನುಗತವಾಗಿ ನಡೆದು ಕೊಂಡು ಬರುತ್ತಿರುವ ಹೊಂಬುಜದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯಾದ್ಯಂತ ಅಷ್ಟೇ ಏಕೆ ದೇಶಾದ್ಯಂತ ಭಕ್ತಾಧಿಗಳು ಆಗಮಿಸುತ್ತಾರೆ. ಆದರೆ ಕಳೆದ ಬಾರಿಯಿಂದ ಈ ಮಹೋತ್ಸವದಲ್ಲಿ ಹೆಚ್ಚಿನ ಭಕ್ತರು ದರ್ಶನ ಲಾಭ ಪಡೆಯಲಾಗುತ್ತಿಲ್ಲ, ಕಾರಣ ನಿಮಗೆ ತಿಳಿದೆ ಇದೆ. ಮಹಾಮಾರಿ ಕರೊನದಿಂದ ಬಸದಿಗಳ ಸಂಪ್ರದಾಯ ಬದ್ದ ಆಚರಣೆಗಳಿಗೂ ಕೂಡ ಅಡಚಣೆಯಾಗಿದೆ. ಆದರು ವಿಧಿ ಪೂರ್ವಕ ರಥೋತ್ಸವದ ಕೆಲವು ದೃಶ್ಯಾವಳಿಗಳು ಇಲ್ಲಿವೆ.
ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೆಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಪಾವನ ನೇತೃತ್ವದಲ್ಲಿ ಮುನಿಶ್ರೀ 108 ಪ್ರಸಂಗ ಸಾಗರರ ಹಾಗೂ ಶ್ರೀಕ್ಷೇತ್ರ ಕಂಬದಹಳ್ಳಿ ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಉಪಸ್ಥಿತಿಯಲ್ಲಿ ನಡೆದ ರಥಯಾತ್ರ ಮಹೋತ್ಸವ 28-03-2021 ರಿಂದ ವಿವಿಧ ಬಸದಿಗಳಲ್ಲಿ ವಿವಿಧ ಆರಾಧನೆಗಳ ಸಹಿತ ಆರಂಭಗೊಂಡಿತ್ತು. ಶ್ರೀ ಪಾರ್ಶ್ವನಾಥ ಭಗವಂತರ ಹಾಗೂ ಮಾತೆ ಪದ್ಮಾವತಿ ಅಮ್ಮನವರ ಅಭಿಷೇಕದಿಂದ ಈ ಭಕ್ತಿ ಪ್ರಧಾನ ದೃಶ್ಯ ಕಾವ್ಯವನ್ನು ಆರಂಭಿಸೋಣ.
ಸ್ವಸ್ತಿಶ್ರೀ ದೇವೆಂದ್ರ ಕೀರ್ತಿ ಶ್ರೀಗಳು ಹೊಂಬುಜ ಮಠದ ಸರ್ವತೊಮುಖದ ಅಭಿವೃದ್ಧಿಗೆ ಅಡಿಪಾಯವನ್ನು ಹಾಕಿ ಬೃಹತ್ ಆಕಾರದಲ್ಲಿ ಬೆಳೆದು ನಿಂತಿರುವ ಕೊಡುಗೆಗಳು, ಅನೇಕ ನೂತನ ವಸತಿ ಗೃಹದಿಂದ ಹಿಡಿದು ನೂತನ ಬೃಹತ್ ಭೋಜನ ಶಾಲೆ. ಶಾಲಾ ಕಾಲೇಜು ನೂತನವಾಗಿ ಜೀರ್ಣೋದ್ದಾರಗೊಳ್ಳುತ್ತಿರುವ ಬಸದಿಗಳು, ಕ್ಷೇತ್ರದ ಮೂಲ ಪದ್ಮಾವತಿ ಮಾತೆಯ ದೇವಾಲಯವನ್ನು ಕೂಡ ನೂತನವಾಗಿ ಜೀರ್ಣೋದ್ದಾರಗೊಳ್ಳುತ್ತಿದು ಈ ಬಾರಿಯ ರಥವು ಕೂಡ ನೂತನವಾಗಿ ಸೊಗಸಾಗಿ ನಿರ್ಮಿಸಲಾಗಿರುವ ಜಿನ ದತ್ತ ರಾಯನ ಕಥೆಯಿಂದ ಹಿಡಿದು 24 ತೀರ್ಥಂಕರರು, ಲಾಂಛನಗಳು, ಗೌತಮ್ಮ ಗಣದರರು ಹಾಗೂ ಇನ್ನೂ ಅನೇಕ ಸುಂದರ ಕೆತ್ತನೆಯನ್ನು ಒಳಗೊಂಡ ಬ್ರಹ್ಮ ರಥವು ಈ ಬಾರಿ ಅಮ್ಮನವರಿಗೆ ಅರ್ಪಿಸಲಾಯಿತು. ಇದೆ ಸಂದರ್ಭದಲ್ಲಿ ಸಿದ್ದದಾಂತ ಕೀರ್ತಿ ಪ್ರಶಸ್ತಿಯನ್ನು ಕೂಡ ಪ್ರೋಫೆಸರ್ ಜಯ ಚಂದ್ರ ಇವರಿಗೆ ನೀಡಿ ಗೌರವಿಸಲಾಯಿತು.
(ಪ್ರೋಫೆಸರ್ ಜಯ ಚಂದ್ರರವರು ಮಾತನಾಡಿ ಪಂಪ ಮತ್ತು ರತ್ನಾಕರವರ್ಣಿಯ ಕವಿಗಳ ಜಯಂತಿಯನ್ನು ಆಚರಿಸುವ ಕುರಿತು ಮಾತನಾಡಿದರು).
(ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮಾತನಾಡಿ ಜೈನಧರ್ಮದ ಗ್ರಂಥಗಳನ್ನು ಓದುವುದರ ಮಹತ್ವವನ್ನು ವಿವರಿಸಿದರು).
ಹೊಂಬುಜ ರಥೋತ್ಸವವು ವಿಧಿ ಪೂರ್ವಕ ಅಷ್ಟೇ ಅಲ್ಲಾ ವೈವಿದ್ಯಮಯವು ಕೂಡ. ಅಭಿಷೇಕದ ನಂತರ ಕಲಿ ಕುಂಡಲ ಆರಾಧನೆ ಹಾಗೂ ಪ್ರತಿ ರಾತ್ರಿ ನಾಗವಾಹನೋತ್ಸವ, ಸಿಂಹನಾವನೋತ್ಸವ, ಬೆಳ್ಳಿರಥ, ಪುಷ್ಪರಥ ಹಾಗೂ ಮಹಾರಥಗಳ ವೈಭವ ನೋಡಲು ಕಣ್ಣು ಎರಡು ಸಾಲದು.
ಇಂತಹ ಪ್ರಶುದ್ದ ಪರಿಸ್ಥಿತಿಯಲ್ಲೂ ಕೂಡ ಇಂತಹ ಒಂದು ಧಾರ್ಮಿಕ ವಾತಾವರಣವನ್ನು ಸೃಷ್ಠಿಸಿ ನಾವು ಕೂಡ ಭಾಗಿಯಾಗಲು ಅವಕಾಶ ಕಲ್ಪಿಸಿ ಕೊಟ್ಟ ಶ್ರೀಗಳವರಿಗೆ ಹಾಗೂ ಮನೆಯಲ್ಲೇ ಕುಳಿತು ನೀವಿದ್ದಲಿಂದಲೆ ವೀಕ್ಷಿಸಿಸುತ್ತಿರುವ ನಿಮ್ಮೆಲರಿಗೂ ಕೂಡ ಹೃತ್ಪೂರ್ವಕ ವಂದನೆಗಳು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














