ಮನೋಹರ ಪ್ರಕೃತಿ ನಿರ್ಮಿತ ಜೈನ ಧಾರ್ಮಿಕ ಕೇಂದ್ರ ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ. ಸುಧಾ ಪುರ ಎಂದು ಕರೆಯಲಾಗುವ ಈ ಮಠದ ಪೀಠಾಧಿಪತಿಗಳಾಗಿ ಪರಮ ಪೂಜ್ಯ ಭಟ್ಟಾಕಲಂಕ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾ ಸ್ವಾಮೀಜಿಗಳವರು ಪೀಠ ಅಲಂಕರಿಸಿದಾಗಿನಿಂದ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಧಾರ್ಮಿಕ ಪ್ರಭಾವನೆಗಳ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಮಂದಿರಗಳ ಜಿರ್ಣೋದ್ದಾರ ಭಕ್ತಾಧಿಗಳಿಗೆ ಊಟ ವಸತಿ ವ್ಯವಸ್ಥೆಯಿಂದ ಹಿಡಿದು ಅನೇಕ ಉತ್ತಮೋತ್ತಮ ಕಾರ್ಯಕ್ರಮಗಳಿಗೆ ನಾಂದಿ ಹಾಡಿ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಪಾಳು ಬಿದ ಮುತ್ತಿನ ಕೆರೆಯಲ್ಲಿ ಈಗ ಪ್ರತಿವರ್ಷ ಜಗತ್ ಪ್ರಸಿದ್ದ ತೆಪ್ಪೋತ್ಸವ ಅಮೋಘವಾಗಿ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಸಿದ್ದ ಚಕ್ರ ಆರಾಧನೆ. ಚತುರ್ವಂಶದಿ ತೀರ್ಥಂಕರರಿಗೆ ಏಕ ಕಾಲದಲ್ಲಿ ಪಂಚಾಮೃತ ಅಭಿಷೇಕ ರಥೋತ್ಸವ ತೆಪ್ಪೋತ್ಸವ ಹೀಗೆ ಇನ್ನೂ ಅನೇಕ ಪೂಜಾ ವಿಧಿಗಳು ದಿನಾಂಕ 23-03-2021ರಿಂದ ಆರಂಭವಾಗಿ ದಿನಾಂಕ 28-03-2021ರವರೆಗೆ ಜಿನ ಗಾನ ವಿಶಾರದೆ ಜಯಶ್ರೀ ಹೊರನಾಡು ಇವರ ಸುಮಧುರ ಕಂಠಯುತ ಗಾನದೊಂದಿಗೆ ವೈಭವವಾಗಿ ನಡೆಯಿತು. ಸುಮಾರು ಮೂರು ನಾಲ್ಕು ವರ್ಷದಿಂದಲು ಕೂಡ ಇಲ್ಲಿನ ರಥೋತ್ಸವವನ್ನು ನಿಮಗಾಗಿ ಚಿತ್ರಿಕರಿಸಿ ತಂದು ಸುಂದರ ಸಂಕಲನದೊಂದಿಗೆ ಪ್ರಸ್ತುತ ಪಡಿಸುತ್ತಿದೆ. ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್. ಈ ಬಾರಿ ನೇರ ಪ್ರಸಾರದ ಮೂಲಕ ನಿಮಗೆ ಈಗಾಗಲೆ ತಲುಪಿಸಿದ್ದು ಮತ್ತೊಮ್ಮೆ ಸುಂದರ ದೃಶ್ಯಾವಳಿಗಳನ್ನು ಜೋಡಿಸಿ.
ಪರಮ ಪೂಜ್ಯ 108 ಶ್ರೀ ಪುಣ್ಯ ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯ, ಶುಲಕ ರತ್ನ 105 ಸುಧರ್ಮ ಗುಪ್ತಿ ಮಹಾರಾಜರು, ಕಂಬದಳ್ಳಿ ಪರಮ ಪೂಜ್ಯ ಶ್ರೀ ಭಾನು ಕೀರ್ತಿ ಶ್ರೀಗಳು, ವರೂರು ಶ್ರೀಗಳು ಹಾಗೂ ಲಕ್ವಳ್ಳಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಪ್ರತಿಯೊಂದು ಕಾರ್ಯಕ್ರಮವು ನಿರ್ವಿಜ್ಞವಾಗಿ ನಡೆಯಿತು.
ಇಂತಹ ಮನೋಜ್ಞವಾದ ಧಾರ್ಮಿಕ ಕ್ಷೇತ್ರದಲ್ಲಿ ಪುಣ್ಯ ಲಾಭ ಪಡೆಯಲು ಅವಕಾಶ ಕಲ್ಪಿಸಿದ ಸೊಂಧ ಶ್ರೀಗಳಿಗೂ ಇಲ್ಲಿಯ ವರೆಗೂ ವೀಕ್ಷಿಸಿ ಪುಣ್ಯ ಭಾಗಿಗಳಾಗಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಮನದಾಳದ ವಂದನೆಗಳು














