ಜೈ ಜಿನೇಂದ್ರ ವೀಕ್ಷಕರೆ, ಧರ್ಮವೇ ಒಂದು ಮೂರ್ತಿವೆತ್ತಂತೆ ಜನ್ಮವೊಂದು ತಾಳಿತೊಂದು ವೈಶಾಲಿ ನಗರಿಯಲ್ಲಿ. ಜಗತ್ತನೆ ಬೆಳಗಿದನಂತೆ ಅಂತ್ತೊಮ್ಮೆ ಮಹಾವೀರ ವರ್ಧಮಾನ, ಓಡೆಯರಾಳಿದ ನಾಡಲ್ಲಿ ಸೂರ್ಯನಾಗಿ ಮಿಂಚಿದನಂದು ಅರಮನೆಗಳ ನಗರಿಯಲ್ಲಿ. ಧರ್ಮ ಧಾರ್ಮಿಕತೆಯ ಸಕಾರ ಮೂರ್ತಿಯಾಗಿ ಮಗದೊಮ್ಮೆ ಎಂ ಎಲ್ ವರ್ಧಮಾನ.
ಹೌದು ವೀಕ್ಷಕರೆ, ಈ ಶತಮಾನದ ಆರಂಭದ ದಿನಗಳಲ್ಲಿ ಮೈಸೂರು ಓಡೆಯರ ಆಪ್ತರಾಗಿದ್ದ ವ್ಯಕ್ತಿಗಳಲೊಬ್ಬರು, ಬಡ ವಿದ್ಯಾರ್ಥಿಗಳು ವಿದ್ಯಾವಂತರಾಗಿ ವೃತಿಪರರಾಗಿ ತಮ್ಮ ಕಾಲಿನ ಮೇಲೆ ತಾವು ನಿಲ್ಲಬೇಕು ಎಂದು ಯೋಚಿಸಿದ ಮಹಾನ್ ದಾನಿಗಳು ಮೈಸೂರು ಹಾಗೂ ಬೆಂಗಳೂರಿನಲ್ಲಿ ಅನೇಕ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಇಲ್ಲಿಯವರೆಗೂ ನಡೆದುಕೊಂಡು ಬರುತ್ತಿದೆ ಎಂದರೆ ಅದಕ್ಕೆ ಕಾರಣ ಎಂ ಎಲ್ ವರ್ಧಮಾನಯ್ಯ ನವರ ಮಹತ್ವದ ನಡೆಗಳೆ ಬುನಾದಿ ಆಯಿತೆಂದರೆ ತಪ್ಪಾಗಲಾರದು. ಎಷ್ಟು ಗುಣಗಾನ ಮಾಡಿದರು ಸಾಲದೆಬಂತಹ ಮಹಾನ್ ವ್ಯಕ್ತಿತ್ವ.
ಪ್ರೇಮ ಮಹಾವೀರ್ ರವರು ಮಾತನಾಡಿ ಎಂ ಎಲ್ ವರ್ಧಮಾನಯ್ಯ ನವರು ಮೈಸೂರಿನಲ್ಲಿ ಮಾಡಿರುವಂತಹ ಕಾರ್ಯಗಳ ಬಗ್ಗೆ ವಿವರಿಸಿದರು.
ಅವರಿಂದ ಅನೇಕ ಬಸದಿಗಳು ಜೀರ್ಣೋದ್ದಾರಗೊಂಡವು ಅನೇಕ ಜಿನ ಮಂದಿರಗಳು ನಿರ್ಮಾಣ ಗೊಂಡವು ಅಂತಹ ಮಹಾನ್ ವ್ಯಕ್ತಿ 1904ರಲ್ಲಿ ತಮ್ಮ ತಾಯಿಯವರಾದ ಶಿವದೇವಮ್ಮ ನವರಿಂದ ಬಿಂಬ ಪ್ರತಿಷ್ಟೆಯನ್ನು ಮಾಡಿಸಿ ವಿಜೃಂಬಣೆಯಿಂ ಪಂಚಕಲ್ಯಾಣೋತ್ಸವವನ್ನು ನಡೆಸಿದರಂತೆ. ಅಂದರೆ ಸರಿ ಸುಮಾರು 117 ವರ್ಷಗಳ ಹಿಂದಿನ ಜಿನ ಮಂದಿರವಾದ ಮೈಸೂರು ಎಂ ಎಲ್ ವರ್ಧಮಾನಯ್ಯ ಜೈನ್ ಬೋರ್ಡಿಂಗ್ ಜಿನಮಂದಿರ, ಪಾರ್ಶ್ವನಾಥ ಜಿನ ಮಂದಿರ.
ಇಲ್ಲಿನ ಮೂಲ ನಾಯಕ ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರಾಗಿದ್ದು ಖಡ್ಗಾಸನ ಭಂಗಿಯಲ್ಲಿರುವ ಕಪ್ಪು ಶಿಲೆ ಮೂರ್ತಿಯ ಸುತ್ತ 24 ತೀರ್ಥಂಕರರು ಕೂಡ ಇರುವುದು ಅಪರೂಪದ ವಿಗ್ರಹ ಎನ್ನುವ ಬಿರುದನ್ನು ತಂದು ಕೊಟ್ಟಿದೆ. ಮೂರ್ತಿಯೂ ಮನೋಜ್ಞವಾಗಿದೆ. ಬ್ರಹ್ಮ ಯಕ್ಷ ಮಾತೆ ಪದ್ಮಾವತಿ ಅಮ್ಮನವರು ಹಾಗೂ ಶಾರದ ಮಾತೆಯನ್ನು ಸಹ ಇಲ್ಲಿ ಪೂಜಿಸಲಾಗುತ್ತದೆ. ದಿನಾಂಕ 21-03-2021ರಂದು ನಡೆದ ಸಿದ್ದಚಕ್ರ ಆರಾಧನೆಯ ದೃಶ್ಯಾವಳಿಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದೇವೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













