ಕ್ಷೇತ್ರ ಪರಿಚಯ- ೧೩

ತುಳುನಾಡಿನ ಪ್ರಾಕೃತಿಕ ವಿಸ್ಮಯದ ಪರಿಸರ ಎಷ್ಟು ಸುಂದರವಾಗಿದೆಯೋ ತುಳುವರ  ಅರಸು ಮನೆತನಗಳ ಇತಿಹಾಸ ಅಷ್ಟೇ  ಪ್ರಭಾಯಯುತವಾಗಿದೆ.  ಅಲ್ಲಿ ಆಳುವ ಅರಸರ ವೈಭವಗಳನ್ನು  ಈಗಲೂ ಅಲ್ಲಿನ ಅರಮನೆಗಳು ಸಾರಿ ಹೇಳುತ್ತಿವೆ, ಅಂತಹುದೇ ರಮಣೀಯ ಪರಿಸರದ ನಡುವೆ ಇರುವ ಗಂಗರ ಿತಿಹಾಸನ್ನು ಬಿಂಬಿಸುತ್ತಿರುವ  ಬಂಗಾಡಿ ಅರಮನೆಯ ಮುಂದೆ ನಾವಿದ್ದೇವೆ. ಸುತ್ತಲೂ ತೆಂಗು ಅಡಿಕೆ  ಹಾಗೂ ಇಲ್ಲಿ ಪೂರ್ವಜರಾದ  ಪದ್ಮರಾಜ್ ಭಂಗ್ ಅರಸರು  ಸ್ವತಃ ಆಯುರ್ವೇದ ರಾಜ ಪಂಡಿತರಾದ ಕಾರಣ ಔಷಧಿಯುಕ್ತ ಸಸ್ಯ ಸಂಕುಲಗಳು ಈ ಅರಮನೆಯ ತೋಟದಲ್ಲಿ ರಾರಾಜಿಸುತ್ತಿವೆ. ದೀನ ದಲಿತರೆಂಬ ಬೇಧವಿಲ್ಲದೆ ಹಿಂದುಳಿದ ವರ್ಗದವರಿಗೆ  ಬಡ ಜನತೆಗೆ ಧರ್ಮಾರ್ಥವಾಗಿ  ಊಟೋಪಚಾರ ಸಹಿತವಾಗಿ ಔಷಧಿ ಕೊಡುವ ಪದ್ದತಿ  ಈ ಅರಮನೆಯಲ್ಲಿತ್ತಂತೆ. ಇಂತಹ ಸುಂದರ ತೋಟ ಸಾಗಿ ಹಾದುಹೋದಾಗ  ಕಾಣಸಿಗುವುದು  ಬಂಗಾಡಿ ಅರಮನೆ  ಶ್ರೀಮದ್ ವೀರ ನರಸಿಂಹ  ಲಕ್ಷ್ಮಪ್ಪ ಭರ ಸಂಗ್ ರಾಜ್ ಎಂಬ ಹೆಸರಿನಿಂದ  ಪದ್ಮರಾಜ್ ಅರಸರು  ನಂದಾವರ ಅರಮನೆಯು ನಾಶದ  ನಂತರ  ಕ್ರಿ.ಶ 1901 ರಲ್ಲಿ ನಿರ್ಮಿತವಾದ  ಅರಮನೆ  ಇದಾಗಿದೆ.

ಕರಾವಳಿ ಕರ್ನಾಟಕವನ್ನಾಳಿದ ಅರಸು ಮನೆತನಗಳ ಪೈಕಿ  ಬಂಗಾಡಿಯಿಂದ ಆಳಿದ ಭಂಗ ಅರಸರು  ಬಹಳ ಪ್ರಸಿದ್ಧರು . ತುಳುನಾಡಿನಲ್ಲಿನ ಇವರಿಗೆ  ಮೊದಲಸ್ಥಾನದ ಗೌರವ ಸಲ್ಲುತ್ತಿತ್ತು. ಪಶ್ಚಿಮ ಘಟ್ಟಗಳಿಂದ ತೊಡಗಿ  ಅರಬ್ಬೀ ಸಮುದ್ದರದ ವರೆಗೆ  ನೇತ್ತಾವತಿ ನದಿಯ  ಇಕ್ಕೆಲಗಳಲ್ಲಿ ಹರಡಿದ ವಿಸ್ತಾರ ಭೂಭಾಗವನ್ನು  ಇವರು ಆಳುತ್ತಿದ್ದರು.  ಇವರ ಆಳ್ವಿಕೆ ಯ ಕಾಲದಲ್ಲಿ ಚಲಾವಣೆಯಲ್ಲಿದ್ದ ಚಿನ್ನದ ನಾಣ್ಯ ಗಳು ಬಂಗಾಡಿಯಿಂದ  ಧ್ಯಾನಗಳೆಂಬ ಶಿಲಾಶಾಸನಗಳಲ್ಲಿ ಉಲ್ಲೇಖಿತವಾಗಿದೆ.  ಬಂಗಾಡಿ ಇತಿಹಾಸ ಕ್ರಿ. ಶ 1170 ರಲ್ಲಿ ದಕ್ಷೀಣ ಕನ್ನಢ ಜಿಲ್ಲೆಯನ್ನಾಳಿದ ಜೈನ   ಅರಸರಲ್ಲಿ ತುಳು ರಾಜ್ಯದಲ್ಲೆಲ್ಲಾ ಬಂದ ರಾಜರುಗಳು ಒಂದನೇ ಮರ್ಯಾದೆಯನ್ನು  ಪಡೆಯುತ್ತಿದ್ದರು. ಅಲ್ಲದೇ ಬಂಗಾಡಿಯ ಎಲ್ಲಾ ಮತ ಜಾತಿಯವರಿಗೂ ಅವರವರ ಜಾತಿ ಕಟ್ಟಳೆಯಂತೆ ಸಿಗುವ  ಮಾನ ಮರ್ಯಾದೆಯು  ಬಂಗಾಡಿ ಸೀಮೆಯವರಿಗೆ ಎಲ್ಲಿ ಹೋದರೂ ಒಂದನೇ ಮರ್ಯಾದೆ ಸಿಗುತ್ತಿತ್ತು. ಈ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ವೆಂಬ ಗ್ರಂಥದಲ್ಲಿ  1922 ನೇ ಇಸವಿಯಲ್ಲಿ  ಎಂ. ಗಣಪತಿರಾವ್ ವಿಧಳ್ವರವರು ಉಲ್ಲೇಖಿಸಿದ್ದಾರೆ. ಅರಮನೆಯ ಒಡೆಯರಾದ  ರವಿರಾಜ್ ಬಲ್ಲಾಳರನ್ನು ಸಂದರ್ಶಿಸಿದಾಗ ಈ ಇಳಿವಯಸ್ಸಿನಲ್ಲೂ  ಅವರಿಗಿರುವ ನೆನಪಿನ ಶಕ್ತಿ  99 ರ ಪ್ರಾಯದಲ್ಲೂ  ಈಗಲೂ ಲೇಖನಿ ಬಿಟ್ಟಿಲ್ಲ. ಅನೇಕ ಕೃತಿಗಳ  ಕಾವ್ಯಗಳ ರಚನೆಯಲ್ಲಿ ಈಗಲೂ ನಿರತರಾಗಿರುವಂತಹುದು  ಹಲವರಿಗೆ ಸ್ಪೂರ್ತಿ.  ಅನೇಕ ಕೃತಿಗಳನ್ನು ಸಹ ಇವರು ಬರೆದಿದ್ದಾರೆ.  ರವಿರಾಜ ಬಲ್ಲಾಳರಿಗೆ  ಯಶೋಧರ ಬಲ್ಲಾಳರು, ಅಜಿತ್ ಕುಮಾರ್ ಬಲ್ಲಾಳರು ಎಂಬ ಇಬ್ಬರು ಪುತ್ರರು , ಜಯರತ್ನ ಎಂಬ ಪುತ್ರಿಯೂ ಇದ್ದಾರೆ. ಮನೆಯೊಡತಿ ಸತ್ಕರಿಸಿದ ರೀತಿ ಅವರ ರಾಜ ಮನೆತನದ  ಹೃದಯವಂತಿಕೆ ಬಿಂಬಿಸುವಂತಿತ್ತು.

ಇಲ್ಲಿನ ಭವ್ಯ ವನರಾಶಿಯ ನಡುವೆ  ಶ್ರವಣಗೊಂಡ ಕ್ಷೇತ್ರವಿದೆ. ಈ ಕ್ಷೇತ್ರವು ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿದ್ದು. ಇಲ್ಲಿ ಚಾರಣ ಮುನಿಗಳ ತಪಸ್ಸಿನ ಫಲದಿಂದ .1954 ನೇ ಇಸವಿಯ ತನಕ  ಗುಂಡು ದರ್ಶನ  ಅಂದರೆ ನೀರಿನಲ್ಲಿ ಕಲ್ಲುಗುಂಡು  ಮುಕ್ಕಾಲು ಭಾಗ ತೇಲುವುದು. ಇಂತಹ  ಅತಿಶಯ ನಡೆಯುತ್ತಿತ್ತು . ಸುಮಾರು 7000 ಸಂವತ್ಸರಗಳಿಗೂ  ಪೂರ್ವ ಕಾಲದಲ್ಲಿ ಚಾರಣ ಮುನಿಗಳೆಂಬ ಮಹಾ ಮುನಿವರ್ಯರು ತಪಸ್ಸನ್ನು ಆಚರಿಸಿದ  ಭೂಮಿಯೇ  ಈ ಶ್ರವಣಗೊಂಡ. ಈ ಪಂಚಮಕಾಲದಲ್ಲಿ ಜೈನರ ಅಪನಂಬಿಕೆಯು  ದಿನೇದಿನೇ ಹೆಚ್ಚಾಗುತ್ತಾ ಅದೊಂದು ದಿನ ಪ್ರಾಚೀನ ಕಾಲದಿಂದ  ಬೆಳಕು ಚೆಲ್ಲಿದ  ಅತಿಶಯವು ಕೊನೆಗೊಂಡಿತು. ನಂತರ ಧರ್ಮಾಧಿಕಾರಿಗಳಾದ  ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ  ಭಕ್ತಿ ಪ್ರಧಾನವಾದ ಪೂಜಾ ವಿಧಿವಿಧಾನ ಗಳು ಪೌರೋಹಿತ್ಯದಲ್ಲಿ  ಪಾಂಡಿತ್ಯ ಗಳಿಸಿದ  ಅರ್ಚಕರಿಂದ ನಡೆದವು. ಆರಾಧನೆ ನಡೆಯುವ  ದಿನಗಳಲ್ಲಿ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆಯು  ಹೆಚ್ಚುತ್ತಾ ಮಹತ್ವದ  ಧಾರ್ಮಿಕತೆಯ ಬೆಳಕೊಂದು  ಪ್ರಜ್ವಲಿಸಿತು. ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆರ್ಥೀಕ ಕೊಡುಗೆ ಕುಣಿಗಲ್  ಬ್ರಹ್ಮದೇವಯ್ಯ ಡಾ|| ವಸಂತ್ ಕುಮಾರ್ , ಸಂತೋಷ್ ಕುಮಾರ್ ಮತ್ತು ಧಾರವಾಡದ ಸಂಹಸೇನ ಇವರೆಲ್ಲರ  ಅಮೋಘ ದಾನ ಹಾಗೂ ಊರ ಪರಊರ  ಗಣ್ಯ ಧಾತೃಗಳ ನೆರವಿನಿಂದ  ಸಂಪೂರ್ಣ ಶಿಲಾಮಯವಾಗಿ  ನಿರ್ಮಾಣಗೊಂಡಿತು. ಪ್ರಸ್ತುತ ಬ್ರಹ್ಮ ದೇವರ  ಸಾನಿಧ್ಯದಲ್ಲಿ  ದಿನನಿತ್ಯ ಪೂಜಾಕಾರ್ಯಗಳು  ಬೆಳಗ್ಗೆ 10 ರಿಂದ 12 ರವರೆಗೆ ನಡೆಯುತ್ತದೆ. ಹಾಗೂ  ಅಮಾವಾಸ್ಯೆ ದಿನ ವಿಶೇಷ  ಪೂಜೆಗಳು ನಡೆಯುತ್ತವೆ. 

ಭಂಗವರಸರು ನಿರ್ಮಿಸಿದ  ಶ್ರೀ ಶಾಂತಿನಾಥ ಬಸದಿ . ಭಂಗವಾಡಿ ಎಂಬ  ಪ್ರಾಚೀನ ನಗರದಲ್ಲಿದ್ದ  ಶ್ರೀ ಶಾಂತಿನಾಥ   ಬಸದಿಯಲ್ಲಿದೆ.  ಈ ಮೂರ್ತಿಯನ್ನು ಆದಿ ಶಾಂತಿನಾಥ, ಕೋಟೆ ಶಾಂತಿನಾಥನೆಂದು  ಹೇಳಿ ಸಂಭೋದಿಸುತ್ತಾರೆ.  ಕೋಟೆ ಮತ್ತು ಬಸದಿಯು  ನಾಶವಾದೊಡನೆ  ಈಗ ಬಂಗಾಡಿಯಲ್ಲಿರುವ  ಶಿಲಾಮಯ ಬಸದಿಯನ್ನು  ಶ್ರೀ ಮದ್ ವೀರ ನರಸಿಂಹ ಭಂಗರಾಜರು  ನಿರ್ಮಿಸಿ  ಪಂಚಲೋಹದ  ಶ್ರೀ ಶಾಂತಿನಾಥ ಸ್ವಾಮಿಯ ವಿಗ್ರಹವನ್ನು  ಪ್ರತಿಷ್ಠಾಪಿಸಿದರೆಂದು ಇತಿಹಾಸದಿಂದ ತಿಳಿದುಬರುತ್ತದೆ.

ಮಾತೇ ಪದ್ಮಾವತಿ ಅಮ್ಮನವರ  ಮನೋಜ್ನ ಪ್ರತಿಮೆ ಪೂಜಿಸಲ್ಪಡುತ್ತಿರುವ  ಶ್ರೀ ಶಾಂತಿನಾಥ ಬಸದಿ  ವಿಶಾಲವಾದ ಆವರಣದಲ್ಲಿ ಯೇ ಶ್ರೀ ಪದ್ಮಪ್ರಭ ತೀರ್ಥಂಕರರ ಬಸದಿ .