ಬೆಳ್ಳೂರು ರಥೋತ್ಸವ

ಬೆಳ್ಳೂರಿನ ಭಗವಾನ್  ಶ್ರೀ ಶ್ರೀ 1008 ವಿಮಲನಾಥ  ತೀರ್ಥಂಕರರ 106ನೇ ವರ್ಷದ ವಾರ್ಷಿಕ ಪಂಚ ಕಲ್ಯಾಣ ಮಹೋತ್ಸವವನ್ನು ನೀವೆಲ್ಲರೂ ವೀಕ್ಷಿಸಲಿದ್ದೀರಿ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ  ಸ್ವಾಮೀಜಿಯವರ ಆಶೀರ್ವಾದದ ಮೇರೆಗೆ  ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ  ಪಾವನ ಸಾನಿಧ್ಯದಲ್ಲಿ ಪರಮಪೂಜ್ಯ ಸ್ವಸ್ತಿ ಶ್ರೀ ಶ್ರೀಮದ್ ಅಭಿನವ ಲಕ್ಷ್ಮೀ ಸೇನಾ ಭಟ್ಟಾರಕ ಪಟ್ಟಾಚರ್ಯವರ್ಯ  ಸ್ವಾಮೀಜಿಯವರ ಆಶೀರ್ವಾದದೊಂದಿಗೆ  ಪ್ರತಿವರ್ಷದಂತೆ ಈ ವರ್ಷವೂ ಕೂಡ ಲೋಕಕಲ್ಯಾಣಾರ್ಥವಾಗಿ  ದಿನಾಂಕ 14/02/2021 ರಿಂದ  18/02/2021 ರವರೆಗೆ  ನಡೆದ ಈ ಕಾರ್ಯಕ್ರಮದ  ರಥೋತ್ಸವದ ಭಕ್ತಿ ಪೂರ್ವಕ  ಕ್ಷಣಗಳು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎತ್ತಿದ ಕೈ ಆದ ಇಲ್ಲಿನ ಧರ್ಮಾತ್ಮರು ಗಳು ಸಮಾಜದ  ಶ್ರಾವಕ ಶ್ರಾವಕಿಯರೆಲ್ಲರೂ ಕೂಡಿ ಸಂಭ್ರಮದಿಂದ  ಪ್ರತಿ ವರ್ಷವೂ ಪಂಚ ಕಲ್ಯಾಣವನ್ನು  ನಡೆಸಿಕೊಂಡು ಬರುತ್ತಿದ್ದು ಇಲ್ಲಿನ ಜಿನಾಲಯದ ಜೀರ್ಣೋದ್ಧಾರ  ಕಾರ್ಯವನ್ನು ಬಹು ದಿನಗಳಿಂದ ಆರಂಭಗೊಂಡು  ಮುಕ್ತಾಯದ ಹಂತದಲ್ಲಿದೆ.  ಇಲ್ಲಿನ ಜಿನಾಲಯದ ಜೀರ್ಣೋದ್ಧಾರ  ಕಾರ್ಯ ಬಹುದಿನಗಳಿಂದ  ಪ್ರಾರಂಭಗೊಂಡು ಮುಕ್ತಾಯ ಹಂತದಲ್ಲಿದೆ.  ಇಲ್ಲಿಯವರೆಗೆ ಬೆಳ್ಳೂರಿನ  ಧರ್ಮಾತ್ಮರುಗಳಿಂದಲೇ ಈ ಬೃಹತ್  ಕಾರ್ಯ ನೆರವೇರುತ್ತಿದ್ದು  ಆಸಕ್ತ ಬಂಧುಗಳು ಈ ಸತ್ಕಾರ್ಯದಲ್ಲಿ  ತಾವು ಭಾಗಿಯಾಗಬಹುದು.

ಈ ಬಸದಿಯ ಬಗ್ಗೆ ಪದ್ಮನಾಭ್ ಜೈನ್ ಅಧ್ಯಕ್ಷರು ಮಾತನಾಡಿ  ಈ ಬಸದಿಯು ತುಂಬಾ ಹಳೆಯದ್ದಾಗಿದ್ದು ಚಾರುಕೀರ್ತಿ ಮಹಾಸ್ವಾಮಿಗಳು ಇಲ್ಲಿಗೆ ಭೇಟಿ ನೀಡಿದ್ದಂತಹ ಸಂದರ್ಭದಲ್ಲಿ ಈ ಬಸದಿಯನ್ನು ಜೀರ್ಣೋದ್ದಾರ ಮಾಡಿ  ಹೊಸದಾಗಿ ಮೂರ್ತಿಯನ್ನು ಮತ್ತು ಮೇಲ್ಛಾವಣಿಯನ್ನು  ಜೀರ್ಣೋದ್ಧಾರ ಮಾಡಬೇಕೆಂದು ಸೂಚನೆಗಳನ್ನು ತಿಳಿಸಿದರು. ಅವರ ಸೂಚನೆಯ ಮೇರೆಗೆ  ಈ ಬಸದಿಯ ಕಾರ್ಯ ನಡೆಯುತ್ತಿದೆ. ಹಾಗೆಯೇ ಪಂಚಕಲ್ಯಾಣದ ಕಾರ್ಯಕ್ರಮವನ್ನು ಈ ಬಾರಿ  100 ನೇ ವರ್ಷಕ್ಕೆ ಜೀರ್ಣೋದ್ದಾರ ಕಾರ್ಯಕ್ರಮವನ್ನು ನಾವೆಲ್ಲರೂ ಹಾಗೂ ಶ್ರಾವಕ ಹಾಗೂ ಶ್ರಾವಕಿಯರು ಸೇರಿಕೊಂಡು ತೀರ್ಥಂಕರರ ಮೂರ್ತಿಗಳು ತುಂಬಾ ಚೆನ್ನಾಗಿ ಹೊಸ ವಿನ್ಯಾಸದೊಂದಿಗೆ ಮೂಡಿಬರುತ್ತಿದೆ, ಈ ಸಂಪೂರ್ಣ ಕಾರ್ಯಗಳನ್ನು ಬೆಳ್ಳೂರಿನ ಜೈನ  ಸಮಾಜದ ಶ್ರಾವಕ ಶ್ರಾವಕಿಯರು  ಸೇರಿ ಎಲ್ಲರೂ ಜೀರ್ಣೋದ್ಧಾರ ಕಾರ್ಯವನ್ನು ಮಾಡುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಿನ್ನೂ ನಿಗದಿಯಾಗಿಲ್ಲವಾದ್ದರಿಂದ  ಈ ಕಾರ್ಯಕ್ರಮವನ್ನು ಅತಿ ದೊಡ್ಡ ಮಟ್ಟದಲ್ಲಿ ಇತಿಹಾಸದಲ್ಲಿ ನೆನಪಾಗುವಂತೆ ಮಾಡಲು ಪ್ರಯತ್ನಗಳನ್ನು ರೂಪಿಸುತ್ತಿದ್ದೇವೆ. ಹಾಗಾಗಿ ಎಲ್ಲರೂ ನಿರೀಕ್ಷಿಸಬೇಕೆಂದು ಹೇಳಿದರು.

ಇಂತಹ  ಅದ್ಭುತ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಲು  ವೀಕ್ಷಣೆಗಾಗಿ  ನಿರೀಕ್ಷಿಸುತ್ತಿರಿ ಜ್ವಾಲಾಮಾಲಾ ಡಾಟ್ ನ್ಯೂಸ್.