ಚಳ್ಳಕೆರೆ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ  ಧಾರ್ಮಿಕವಾಗಿ ಧರ್ಮಾತ್ಮರುಗಳನ್ನು  ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಒಡಲಿನಲ್ಲಿರಿಸಿಕೊಂಡಿರುವ  ನಾಡು. ಅಲ್ಲಿನ ಕ್ಷೇತ್ರಾಭಿವೃದ್ದಿ ಕಾರ್ಯಕ್ಕೆ ಪ್ರಶಂಸೆ ನೀಡಲು ಪದಗಳು ಸಾಲದು.  ಬಣ್ಣಿಸಲು ಆಗದ ಅಲ್ಲಿನ ಧರ್ಮಾಸಕ್ತರುಗಳ ಕಾರ್ಯ  ನೀವು ನೋಡುತ್ತಿರುವಂತೆಯೇ ಗೋಚರಿಸುತ್ತದೆ.  ಶ್ವೇತಾಂಭರ ಹಾಗೂ ದಿಗಂಬರ ಎನ್ನುವ ಭೇದವಿಲ್ಲದೆ ಸೌಹಾರ್ಧತೆಯಲ್ಲಿರುವ  ಅಲ್ಲಿನ ಸಮುದಾಯದವರು ಮಾಡಿರುವ ಕೆಲಸ ಅಮೋಘವಾದುದು. ಇಷ್ಟೆಲ್ಲಾ  ನಾವು ನಿಮಗೆ ಹೇಳುತ್ತಿರುವುದು ದಿನಾಂಕ 16/02/2021ರಂದು ಇಲ್ಲಿ ನ ಮೈತ್ರಿಧಾಮ ಬಾಹುಬಲಿ ಸ್ವಾಮಿಯ  ಪ್ರಥಮ ವಶಿಷ್ಠ ಬಾಹುಬಲಿ ಮಹೋತ್ಸವದ ಚಿತ್ರೀಕರಣಕ್ಕಾಗಿ ನಮ್ಮ ತಂಡ ಭೇಟಿ ನೀಡಿದಾಗ ಅಲ್ಲಿನವರ ಕ್ಷೇತ್ರಾಭಿವೃದ್ದಿಯನ್ನು ಕಂಡ ದೃಶ್ಯಗಳು.

ಶ್ರೀ 1008 ಪಾರ್ಶ್ವನಾಥ ಜಿನಮಂದಿರ ಜೈನ ಸಮಾಜ ಇವರ ಆಯೋಜನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮ ಭಾರತಭೂಷಣ ಜಗದ್ಗುರು ಪರಮಪೂಜ್ಯ ಸ್ವಸ್ಥಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು  ಮೂಡುಬಿದ್ರೆ ಇವರ ಪಾವನ ನೇತೃತ್ವದಲ್ಲಿ  ಜರುಗಿತು. ಶ್ರೀಗಳವರ ಪುರಪ್ರವೇಶದೊಂದಿಗೆ  ಆರಂಭವಾದ ದಿನ  ಸಂಕ್ಷೀಪ್ತ ಪಲ್ಲಕ್ಕಿ ಹಾಗೂ ಜಲಕುಂಭದ ಉತ್ಸವದೊಂದಿಗೆ  ಶ್ರೀಗಳವರ ಮಾರ್ಗದರ್ಶನದಲ್ಲಿ ಭಕ್ತಾಂಬರ ಆರಾಧನೆ ಕೂಡ ನಡೆಯಿತು.

ಅಲ್ಲಿನ ಜಿನಮಂದಿರದಲ್ಲಿ ವೀಣಾ ಚಂದನ್ ರವರ ಅದ್ಭುತ ಕಲೆಯ ಕುಂಚದಲ್ಲಿ  ಮೂಡಿಬಂದ  ಹದಿನಾರು ಸ್ವಪ್ನಾವಳಿ  ಹಾಗೂ ಸುಂದರ ಕೈ ಕುಸುರಿಯ ಸುವರ್ಣ ಲೇಪಿತ  ಚಿತ್ರಗಳನ್ನು ಪ್ರದರ್ಶಿಸಿ ಬಿಡುಗಡೆಗೊಳಿಸಲಾಯಿತು. ಅಂಬಣ್ಣ ನವರ ನೇತೃತ್ವದಲ್ಲಿ  ರೂಪ ಅಜಯ್ ಕುಮಾರ್ ಕುಟ್ಟಿ ಬೆಳ್ಳಿ ಇವರ ಪ್ರಾಯೋಜಕತ್ವದಲ್ಲಿ  ಈ ಕಾರ್ಯಕ್ರಮ ನಡೆಯಿತು.

ಬಳಿಕ ಮೈತ್ರಿಧಾಮದಲ್ಲಿ ಭಗವಾನ್ ಬಾಹುಬಲಿಯ ವೈಭಯಯುತ ಮಸ್ತಕಾಭಿಷೇಕ . ಪ್ರತಿ ಶ್ರಾವಕರು ಸಮೃದ್ಧಿಯಾಗಿ  ದ್ರವ್ಯ ಪೂಜೆಗಳನ್ನು ನೆರವೇರಿಸಿದರು.  ಶ್ರೀಗಳವರು ಪ್ರಥಮ ಅಭಿಷೇಕಕ್ಕೆ ಚಾಲನೆ ನೀಡಿದರು.

ಅಂದಿನ ಧಾರ್ಮಿಕ ಸಭೆಯಲ್ಲಿ  ಶ್ರೀಗಳವರ ಪಾವನ ಸಾನಿಧ್ಯದಲ್ಲಿ ಸಮಾಜದ ಮುಖಂಡರುಗಳಾದ ಶ್ರೀಮತಿ ಹರ್ಷಿನಿ ಡಿ. ಸುಧಾಕರ್ ರವರು, ಭರತ್ ರಾಜು ರವರು , ಡಾ|| ವಿಜಯ್ ಕುಮಾರ್, ಶ್ರೀಯುತರಾದ ಅಂಬಣ್ಣನವರು  ಪದ್ಮಾವತಿಯವರು  ವೇದಿಕೆಯಲ್ಲಿ ಉಪಸ್ತಿತರಿದ್ದು  ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಹಾಗೂ ಸುವರ್ಣ ಸಂಭ್ರಮ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.  ಶ್ರೀಗಳವರು ಆಶೀರ್ವಚನ ನೀಡಿದರು.  ಚಳ್ಳಕೆರೆಯ  ಎಲ್ಲಾ ಮನೆತನದವರಿಗೆ  ನಾವು ವಿಶೇಷವಾದ ಆಶೀರ್ವಾದವನ್ನು ಹೇಳುತ್ತಾ  ಈ ಮಂದಿರಗಳ ನಿರ್ಮಾಣದಿಂದ  ಇದು ಪ್ರಭಾವನಾಂಗವಾಗಿದೆ.  ಇಲ್ಲಿ ಬಾಹುಬಲಿಯ ಸ್ಥಾಪನೆಯಾಗಿ  ಇದರ ವೈಖರಿಯನ್ನೆಲ್ಲಾ ನೀವೆಲ್ಲಾ ನೋಡಿ ಅನುಭವಿಸಿದ್ದೀರಿ ಎಂದು ತಿಳಿಸಿ ಎಲ್ಲರಿಗೂ ಆ ಶ್ರವಣಬೆಳಗೊಳದ ಬಾಹುಬಲಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ ಹಾಗೆ ಈ ಚಕ್ಕ ಬಾಹುಬಲಿ ಮೂರ್ತಿಗೂ ಸಹ ಪ್ರಾಮುಖ್ಯತೆಯನ್ನು ಕೊಡಬೇಕು  ಎಂದು ಆಶೀರ್ವಚನ ನೀಡಿದರು.