ಮಂದ್ರಾಗಿರಿ ವರ್ಷಿಕಪೂಜೆ

ಜೈ ಜಿನೇಂದ್ರ ವೀಕ್ಷಕರೆ, ತುಮಕೂರು ಜಿಲ್ಲೆಯಲ್ಲಿ ಪ್ರಕೃತಿ ನಿರ್ಮಿತವಾದ ಒಂದು ಮನೋಹರ ತಾಣದಲ್ಲಿ ಇರುವಂತಹ ಸುಂದರ ಪ್ರಾವಾಸಿಗರ ಪ್ರೇಕ್ಷಣಿಯ ಸ್ಥಳವಾಗಿ ಮಾರ್ಪಾಡಗಿರುವಂತಹ ಒಂದು ಪುಣ್ಯ ಕ್ಷೇತ್ರವಾಗಿ ಈಗ ಯುಗಳ ಮುನಿಗಳ ವಾಸ್ಥವ್ಯದಿಂದ ಪಾವ ಕ್ಷೇತ್ರವಾಗಿ ಜೀರ್ಣೋದ್ದಾರಗೊಳ್ಳುತ್ತ ಜೈನರನ್ನು ತನ್ನತ್ತ ಆಕರ್ಷಿಸಿಸುತ್ತಿರುವ ಮಂದರ ಗಿರಿ ಹಲವಾರು ಅದ್ಬುತಗಳನ್ನು ಮೂಡಿಸಿಕೊಳ್ಳುತ್ತ ಜಗತ್ತ್ ಪ್ರಸಿದ್ದವಾಗುತ್ತಿದೆ. ದಿನಾಂಕ 17-01-2021ರಂದು ಒಂದು ವೈಭವಯುತ ಕಾರ್ಯಕ್ರಮಕ್ಕೆ ಈ ಕ್ಷೇತ್ರ ಸಾಕ್ಷಿಯಾಯಿತು. ಅಂದು ಭಗವಾನ್ 1008 ಚಂದ್ರ ಪ್ರಭ ತೀರ್ಥಂಕರರ ವಾರ್ಷಿಕ ಪೂಜೆ ಪ್ರಯುಕ್ತ 108 ಕಳಶಗಳ ಪಾದ ಪೂಜೆ ಅಭಿಷೇಕ, ಪಂಚಾಮೃತ ಅಭಿಷೇಕ ನಯನ ಮನೋಹರವಾಗಿತ್ತು.

ಅಂದು ಕಣ್ಣಿಗೆ ಹಬ್ಬವನ್ನು ತಂದು ಕೊಟ್ಟ ಅಪರೂಪದ  ದೃಷ್ಯಾವಳಿಗಳು ಇಲ್ಲಿ ನೇರದಿದ್ದ ಭಕ್ತಾಧಿಗಳಿಗೆ ಧನ್ಯಭಾವ ಮೂಡಿಸಿತ್ತು. ಅದುವೆ ಯುಗಳ ಮುನಿಗಳ ಜನ್ಮ ಜಯಂತಿ ಮಹೋತ್ಸವ ವೈಭವ. ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಸಮಿತಿ ಯುಗಳ ಮುನಿಗಳ ಚಾತುರ್ಮಾಸ ಸಮಿತಿ 2020 ಇವರುಗಳ ಆಯೋಜನೆಯಲ್ಲಿ ಶ್ರೀಮತಿ ಶಾಂತಲ ಅಜಿತ್ ಕುಮಾರ್ ಇವರ  ಪರಿಕಲ್ಪನೆಯಲ್ಲಿ ಮೂಡಿ ಬಂದು ಮುನಿಗಳಿಗೆ ಅಷ್ಠ ದ್ರವ್ಯಗಳಿಂದ ಪೂಜೆ ವಿಭಿನ್ನ ರೀತಿಯಲ್ಲಿ ಸಲ್ಲಿಸಲಾಯಿತ್ತು.

ಪರಮ ಪೂಜ್ಯ ಮುನಿಶ್ರೀ 108 ಅಮೋಘ ಕೀರ್ತಿ ಮುನಿ ಮಹಾರಾಜರು ಪರ್ವ ಪೂಜ್ಯ ಮುನಿಶ್ರೀ 108 ಅಮರ ಕೀರ್ತಿ ಮುನಿ ಮಹಾರಾಜರುಗಳ ಮಾರ್ಗ ದರ್ಶನ ಪಾವನ ಸಾನಿಧ್ಯ ಆಶೀರ್ವಾದದಲ್ಲಿ ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಜಗದ್ಗುರು ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿಯವರು, ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳು ಇವರ ಪಾವನ ಸಾನಿಧ್ಯದಲ್ಲಿ ಕಾರ್ಯಕ್ರಮ ಜಿನ ಭಜನ ಸ್ಪರ್ಧೆ ವಿಜೇತ ತಂಡವಾದ ಸ್ವರಾಭಿಷೇಕ ತಂಡದವರಿಂದ ಪ್ರಾರ್ಥನೆಯ ಮೂಲಕ ಆರಂಭ ಗೊಂಡು.

ಕಾರ್ಯಕ್ರಮದ ದೀಪ ಪ್ರಜ್ವಲನೆ ಹಾಗೂ ಸ್ಥಾಪನೆಯನ್ನು ಶ್ರೀ ಡಿ ಸುರೇಂದ್ರ ಕುಮಾರ್ ರವರು ನೆರವೇರಿಸಿದರು.  ಯುಗಳ ಮುನಿಗಳು ನಡೆಸುತ್ತಿರುವ ಎ ಬಿ ಸಿ ಡಿ ಆಫ್ ಜೈನಿಜ಼ಂಮ್ ತರಗತಿಯಲ್ಲಿ ಭಾಗವಹಿಸಿರುವ ಶ್ರಾವಕರು ರಾಜ್ಯದೆಲ್ಲೆಡೆ ಇಂದ ಆಗಮಿಸಿ ಹಾಗೂ ಹಲವೆಡೆಯ ಸಮಾಜದವರೊಂದಿಗೆ ಅಷ್ಟ ದ್ರವ್ಯಗಳನ್ನು ಭಕ್ತಿ ಪೂರ್ವಕವಾಗಿ ವಿವಿಧ ರೀತಿಯಲ್ಲಿ ಸುಂದರವಾಗಿ ಅಣಿಗೊಳಿಸಿಕೊಂಡು ಮುನಿಗಳ ಪಾದಾರವಿಂದಕ್ಕೆ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜೈನಸಮಾಜದ ಅಧ್ಯಕ್ಷರಾದ ಶ್ರೀ ಎಸ್ ಜೆ ನಾಗರಾಜು ರವರು, ಕೆ ಜೆ ಎ ಅಧ್ಯಕ್ಷರಾದ ಶ್ರೀ ಬಿ ಪ್ರಸನ್ನಯ್ಯ ನವರು, ಶ್ರೀ ಮನೋಹರ್ ಕುಮಾರ್ ಜೈನ್ ಮತ್ತು ಇನ್ನೂ ಅನೇಕ ಗಣ್ಯರುಗಳು ಉಪಸ್ಥಿತರಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮುದ ನಾಗಭುಷಣ್ ರವರು ಮನೋಜ್ಞವಾಗಿ ನಡೆಸಿಕೊಟ್ಟರು.

(ಗಣ್ಯರುಗಳು ಮಾತನಾಡಿ ಮಂದರ ಗಿರಿ ಮತ್ತು ಯುಗಳ ಮುನಿಗಳ ಜನ್ಮ ಜಯಂತಿ ಮಹೋತ್ಸವದ  ವೈಭವವನ್ನು ಕುರಿತು ಭಾಷಣ ಮಾಡಿದರು).

ನಂತರ ಗಣ್ಯರಿಗೆ ಸನ್ಮಾನವನ್ನು ಮಾಡಲಾಯಿತು.

ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಜಗದ್ಗುರು ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿಯವರು ಯುಗಳ ಮುನಿಗಳ ಬಗೆಗೆ ಸವಿಸ್ತಾರವಾಗಿ  ತಿಳಿಸಿದರು.

ಬೆಟ್ಟದ ಮೇಲಿನ ಮೂಲ ನಾಯಕ ಶ್ರೀ ಚಂದ್ರ ಪ್ರಭ ಸ್ವಾಮಿ ಬಸದಿಯಲ್ಲಿ ಪೂಜ್ಯಾಭಿಷೇಕ ಕಾರ್ಯಕ್ರಮಗಳು ಸಂಜೆ ನೆರವೇರಿತು. ಮೊದಲಿನ ಬಸದಿಗೂ ಈಗ ಯುಗಳ ಮುನಿಗಳ ಆಶೀರ್ವಾದದಿಂದ ನವೀಕರಣಗೊಂಡಿರುವ ಬಸದಿಗು ವ್ಯತ್ಯಸವನ್ನು ನಿಮಗೆ ತೋರಿಸುತ್ತಿದೇವೆ ನೋಡಿ ಎಷ್ಟು ಮನೋಹರವಾಗಿ ಕಾರ್ಯ ಸಂಪನ್ನಗೊಂಡಿದೆ. ಒಟ್ಟಾರೆ ಮನಸ್ಸಿಗೆ ಮುದ ನೀಡಿದ ಕಾರ್ಯಕ್ರಮವಾಗಿ ಈ ಕಾರ್ಯಕ್ರಮ ಹೊರ ಹೊಮ್ಮಿತ್ತು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್