ಜೈ ಜಿನೇಂದ್ರ ವೀಕ್ಷಕರೆ, ಈ ವಾರದ ಸುದ್ದಿಗಳನ್ನು ಹೊತ್ತು ಮತ್ತೆ ನಾನು ನಿಮ್ಮೊಂದಿಗಿದೇನೆ ವಾರದ ಮುಖ್ಯಾಂಶಗಳೆಡೆಗೆ ಒಂದು ನೋಟ.
ಮುಖ್ಯಾಂಶಗಳು :-
ಭಾರತ ವರ್ಷೀಯ ದಿಗಂಬರ ಜೈನ ಮಹಾ ಸಭೆಯಿಂದ ವಿಶ್ವದಲ್ಲೇ ಮೊದಲ ಜೈನ ವಿಶ್ವವಿದ್ಯಾನಿಲಯ.
ಅರಹಂತ ಗಿರಿಯಲ್ಲಿ ವಿಶೇಷ ಪೂಜೆ.
ಗಿನ್ನಿಸ್ ದಾಖಲೆಯಲ್ಲಿ ದಾಖಲಾದ ಸಿದ್ಧಿ ದೇವರ ಸ್ಪಟಿಕ ಪ್ರತಿಮೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಚಾರು ಶ್ರೀಗಳಿಂದ ಭಕ್ತಿ ಕಾಣಿಕೆ.
ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ವಿದ್ಯಾರ್ಥಿಗಳಿಗೆ ಪೀಠೋಪಕರಣ ವಿತರಣೆ.
ಕಾರ್ಕಳದ ಹಲ್ಲರ ಬಸದಿ ರಥೋತ್ಸವ.
ಮೂಗೂರು ಜಿನಾಲಯ ಜೀರ್ಣೋದ್ಧಾರ ಸಮಿತಿ ರಚನೆ.
ಸುದ್ದಿಗಳ ವಿವರ:-
ಭಾರತ ವರ್ಷೀಯ ದಿಗಂಬರ ಜೈನ ಮಹಾ ಸಭೆಯು ಕುಂದ ಕುಂದ ವಿಶ್ವವಿದ್ಯಾನಿಲಯವನ್ನು ಆರಂಭಿಸುವ ಯೋಚನೆಯನ್ನು ರೂಪಿಸಿದೆ ವಿವರವನ್ನು ನೋಡಿ.
ಭಾರತ ವರ್ಷೀಯ ದಿಗಂಬರ ಜೈನ ಮಹಾ ಸಭೆಯು ವಿಶ್ವದಲ್ಲೇ ಮೊದಲ ಜೈನ ಅದಿಪತ್ಯದ ಕುಂದ ಕುಂದ ವಿಶ್ವವಿದ್ಯಾನಿಲಯ ಅಥವಾ ಜೈನ ವಿಶ್ವವಿದ್ಯಾನಿಲಯ ಆರಂಭಿಸುವ ಯೋಜನೆಯನ್ನು ರೂಪಿಸಿದೆ, ಇದಕ್ಕಾಗಿ ಸಿದ್ದತೆಗಳನ್ನು ಆರಂಭಿಸಿದೆ. ಇದು ನೂರು ಜನ ಟ್ರಸ್ಟಿಗಳನ್ನು ಹೊಂದಲ್ಲಿದು ಟ್ರಸ್ಟಿಗಳನ್ನು ಆಹ್ವಾನಿಸಲಿದೆ. ಟ್ಟಸ್ಟಿಗಳಾಗಬಯಸುವವರು ಒಂದು ಕೋಟಿ ರೂಪಾಯಿಗಳನ್ನು ನೀಡ ಬೇಕು. ಶುತ್ತಾಸಂವಿರ್ದಿನಿ ಕಾರ್ಯಧ್ಯಕ್ಷ ಶ್ರೀ ಕಮಲ ಜೈನ್ ಮೊದಲನೆಯವರಾಗಿ ಒಂದು ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ. ಮಹಾ ಸಭಾಧ್ಯಕ್ಷ ನಿರ್ಮಲ್ ಕುಮಾರ್ ಸಿ ಟಿ ಒಂದು ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ, ಇದರ ಕಾರ್ಯ ಪ್ರಗತಿಯಲ್ಲಿದೆ.
ಶ್ರೀ ಕ್ಷೇತ್ರ ಅರಹಂತಗಿರಿಯಲ್ಲಿ ಧನುರ್ಮಾಸದ ನಿಮ್ಮಿತ್ತ ಪಂಚ ಕುಲ ದೇವತೆಗಳ ಪೂಜಾರಾಧನೆಗಳು ವಿಶೇಷವಾಗಿ ನಡೆಯತಿವೆ. ಅಲ್ಲಿನ ಕೆಲವು ದೃಷ್ಯಾವಳಿಗಳು ನಿಮ್ಮ ಮುಂದೆ.
ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಶ್ರೀಕ್ಷೇತ್ರ ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರಿಂದ ಭಕ್ತಿ ಭಕ್ತಿ ಕಾಣಿಕೆ ಸಮರ್ಪಿಸಲಾಯಿತು.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಭಕ್ತಿ ಕಾಣಿಕೆ ನೀಡಿದರು ಸ್ವಾಮೀಜಿಯವರು ಪಟ್ಟಣದ ಶ್ರೀ ಖಾನಜಿ ಯಾತ್ರಿಕಾಶ್ರಮದಲ್ಲಿ ಇಂದು ಅಯೋಜಿಸಿದ್ದ ಭಕ್ತಿ ಕಾಣಿಕೆ ಸಮರ್ಪಣ ಕಾರ್ಯಕ್ರಮದಲ್ಲಿ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿಗೆ 1,11,111 ರೂಪಾಯಿಗಳನ್ನು ಡಿ ಡಿ ಮೂಲಕ ಭಕ್ತಿ ಕಾಣಿಕೆ ಸಮರ್ಪಿಸಿದರು.
ಜಾಹೀರಾತು.
ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ವಿದ್ಯಾರ್ಥಿಗಳಿಗೆ ಪೀಠೋಪಕರಣಗಳ ವಿತರಣೆ ಮಾಡಲಾಗಿದೆ ಎಂದು ಸ್ವತಃ ಡಾ|| ವೀರೇಂದ್ರ ಹೆಗ್ಗಡೆಯವರು ಘೋಷಿಸಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ರಾಜ್ಯಾಧ್ಯಂತ ಈ ವರ್ಷ 10,200 ವಿಧ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಸುಮಾರು 1,78,00,000/- ರೂಪಾಯಿ ಮೌಲ್ಯದ ಶಾಲಾ ಪೀಠೋಪಕರಣಗಳನ್ನು ವಿತ್ತರಿಸಲಾಗೂವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆ ಘೋಷಿಸಿದರು. ಅವರು ಕರ್ನಾಟಕದ ವಿವಿಧ ಜಿಲ್ಲೆಗಳ 288 ಶಾಲೆಗಳಿಗೆ 2,550 ಡೆಸ್ಕ್ ಹಾಗೂ ಬೆಂಚ್ ಗಳನ್ನು ವಿತ್ತರಿಸುತ್ತಾ ಮಾತನಾಡುತ್ತ ಕಳೆದ ಒಂದು ದಶಕಗಳಲ್ಲಿ ಶ್ರೀಕ್ಷೇತ್ರದ ವತಿಯಿಂದ ಕರ್ನಾಟಕದ 29 ಜಿಲ್ಲೆಗಳ 9,513 ಶಾಲೆಗಳಿಗೆ 58,915 ಪೀಠೋಪಕರಣಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ದಿನಾಂಕ 29-12-2020ರಂದು ಮೈಸೂರಿನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಮೂಗೂರಿನ ಜಿನಾಲಯದ ಜೀರ್ಣೋದ್ದಾರ ಪ್ರಕ್ರಿಯೆ ಸಮಿತಿಯನ್ನು ರಚಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್ ರವರು ತೀರ್ಥಕ್ಷೇತ್ರ ಕಮಿಟಿ ಅಧ್ಯಕ್ಷರಾದ ವಿನೋದ್ ಭಾಕ್ಲಿವಾಲ ರವರು, ಶ್ರೀಮತಿ ಶಿಲಾ ಅನಂತರಾಜರವರು ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಇವರುಗಳ ಮಾರ್ಗ ದರ್ಶನದಲ್ಲಿ ಸಮಿತಿಯನ್ನು ರಚಿಸಿಲಾಗಿ ಶ್ರೀಮತಿ ಶಿಲಾ ಅನಂತರಾಜ್ ರವರು ಅಧ್ಯಕ್ಷರಾಗಿ ಹಾಗೂ ಸುಮಾ ಧಯಾಕರ್ ರವರನ್ನು ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು.
ಈಗ ಪ್ರಕಟಣೆಗಳು.
ಕನ್ನಡದಲ್ಲಿ ಗತಕಥನ ಎಂಬ ಅರ್ಧವಾರ್ಷಿಕ ನಿಯತಕಾಲಿಕ ಪ್ರಕಟಗೊಳ್ಳುತ್ತಿದೆ. ಇದು ಇತಿಹಾಸ ಪುರಾತತ್ವ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಸಂಶೋಧನ ಮತ್ತು ಚಿಂತಾನಾತ್ಮ ಲೇಖನಗಳನ್ನು ಒಳಗೊಂಡಿರುತ್ತದೆ. ಆಸಕ್ತರು ಇದಕ್ಕೆ ಚಂದದಾರರಾಗಬಹುದು. ಸಂಪರ್ಕ ಸಂಖ್ಯೆ 9901249579.
ಕಾರ್ಕಳ ಅಲ್ಲರ ಬಸದಿ ರಥೋತ್ಸವ ಕಾರ್ಯಕ್ರಮ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕರ ಮಹಾಸ್ವಾಮೀಜಿಯವರ ಪಾವನ ಉಪಸ್ಥಿತಿಯಲ್ಲಿ ವಿಧಿ ಪೂರ್ವಕವಾಗಿ ನಡೆದ ದೃಷ್ಯಾವಳಿಗಳು ನಿಮಗಾಗಿ ಪ್ರಸ್ತುತ ಪಡಿಸಲಾಗಿದೆ.
ಹೊರ ರಾಜ್ಯಗಳ ಸುದ್ದಿಗಳಲ್ಲಿ ಸಿದ್ದಾಯತ್ನ ಸ್ಪಟಿಕದ ಸಿದ್ದ ಪ್ರತಿಮೆ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ. ಇಲ್ಲಿದೆ ಇದರ ವಿಸೃತ ವರದಿ.
11 ಕ್ವಿಂಟಾಲ್ ನ ಸ್ಪಟಿಕ ಕಲ್ಲನ್ನು 18 ತಿಂಗಳು ಕೆತ್ತಲಾಗಿದೆ ನಂತರ ಸಿದ್ದ ದೇವರ ಪ್ರತಿಮೆಯನ್ನು ದರ್ಶನಕ್ಕಾಗಿ ನಿರ್ಮಿಸಿ ವಿಶೇಷ ರಕ್ಷಣೆ ನೀಡಲಾಗಿದೆ. ವಿಶ್ವ ದಾಖಲೆಗಳನ್ನು ಗಿನ್ನಿಸ್ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಸಿದ್ದ ದೇವರ ಜೈನ ಪ್ರತಿಮೆಯನ್ನು ಗಿನ್ನಿಸ್ ದಾಖಲೆಯಲ್ಲಿ ದಾಖಲಿಸಿರುವುದು ಜೈನ ಸಮಾಜದ ಒಂದು ಭಾಗ್ಯ, ಸಾಗರ್ನಾ ಸಿದ್ದಯತನ್ನ್ ಅಲ್ಲಿ ಕುಳಿತುಕೊಳ್ಳುವ ಸಿದ್ದ ಭಗವಂತನ ಪ್ರತಿಮೆಯನ್ನು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ದಾಖಲಿಸಲಾಗಿದೆ. ವಿಶ್ವದ ಅತಿ ದೊಡ್ಡ ಸ್ಪಟಿಕ ಪ್ರತಿಮೆಯು ಗಿನ್ನಿಸ್ ವಿಶ್ವ ದಾಖಲೆ ನೀಡಿದ ಪ್ರಮಾಣ ಪತ್ರದಲ್ಲಿ 32 ಇಂಚುಗಳಷ್ಟು ಎತ್ತರ 24 ಇಂಚುಗಳ ಅಗಲವನ್ನು ಹೊಂದಿದೆ. ಸ್ಪಟಿಕ ರತ್ನದ ಅಂತಹ ಪ್ರತಿಮೆ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲಾ ಏಕ ಸ್ಪಟಿಕದಿಂದ ಮಾಡಿದ ವಿಶ್ವದ ಏಕೈಕ ಪ್ರತಿಮೆ ಇದಾಗಿದೆ ಎಂದು ಪ್ರೋಫೆಸರ್ ಅರುಣ್ ಕುಮಾರ್ ಶಾಂಡಿಲ್ಯ ಹೇಳುತ್ತಾರೆ. ಕಲ್ಲಿನ ಪ್ರತಿಮೆ ನಿರ್ಮಿಸಿದ ನಂತರ ಇದು 130 ಕೆ ಜಿ ತೂಕ ವಿರುತ್ತದೆ. ಇದರ ವಿಗ್ರಹ ಪೂರೈಕೆದಾರ ಸಾಗರ್ನ ಶ್ರೀ ಪ್ರಮೋದ್ ಬಡ್ದಾನ. ಸುಮಾರು ಒಂದು ಸಾವಿರದ ನೂರು ಕೆ ಜಿ ವ್ಯಾಸದ ಸ್ಪಟಿಕದ ಕಲ್ಲು ಪಡೆದು ಈ ಕಲ್ಲಿನ ಬಂಡೆಯು ಸುಮಾರು ಆರು ತಿಂಗಳ ದೂರದಲ್ಲಿ ಜೈಪುರವನ್ನು ತಲುಪಿದೆ. ಜೈಪುರದ ಅಧಿಕೃತ ಜಿಮ್ ಟೆಸ್ಟಿಂಗ್ ಲ್ಯಾಬ್ ಅನ್ನು ಭಾರತ ಜೈನ ಟೆಸ್ಟಿಂಗ್ ಲ್ಯಾಬ್ ಪರಿಕ್ಷಿಸಿತು. ಇದರೊಂದಿಗೆ ಡಾ|| ಆರಿಸಿಂಗ್ ಅವರು ವಿಶ್ವವಿದ್ಯಾನಿಲಯದ ಭೂವಿಜ್ಞಾನಿಗಳು ಪ್ರಾಯುವಿಕ ಪರಿಕ್ಷೇಯ ನಂತರ ಕಲ್ಲಿನಿಂದ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದರು. ಗಿನ್ನಿಸ್ ಪುಸ್ತಕ ದಾಖಲೆಯಲ್ಲಿ ದಾಖಲಿಸುವ ಮುನಃ ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಪೋಫೆಸರ್ ಎಲ್ ಪಿ ಚೌಲಿಸಾಯ ಮಾಹಿತಿ ನೀಡಿದರು. ಇದು ಸ್ಪಟಿಕ ರತ್ನದಿಂದ ಮಾಡಿದ ವಿಶ್ವದ ಅತಿ ದೊಡ್ಡ ಪ್ರತಿಮೆ ಸಿದ್ದ ಚಿತ್ರದಲ್ಲಿ ಕಂಡು ಬರುವ ಗುಣ ಲಕ್ಷಣಗಳ ಸೇರ್ಪಡೆ ಅದು ಎಲ್ಲಿಯೂ ಕಾಣಿಸುವುದಿಲ್ಲಾ, ಈ ಪ್ರತಿಮೆಯೂ ಸಿದ್ದಿಲಾದಲ್ಲಿ ಸ್ಥಾಪಿಸಲಾದ ಮೊದಲ ಚಿತ್ರವಾಗಿದೆ. ಇದರ ಖ್ಯಾತಿಯನ್ನು ಅನೇಕ ವೈಶಿಷ್ಟಗಳಿಗೆ ಅಯೋಜಿಸಲಾಗಿದೆ. ಒಮ್ಮೆ ಭೇಟಿ ನಿಡಿ ಪ್ರಪಂಚದ ಅಭೂತ ಪೂರ್ವ ಅದ್ಬುತವನ್ನು ನೋಡಲೆ ಬೇಕು. ಈ ಸ್ಥಳವು ಸಾಗರ್ ನ ಭಾಗ್ಯದೆಯಿಂದ ಒಂದು ಕೀಲೋಮೀಟರ್ ದೂರದಲ್ಲಿ ಈ ಅಭೂತ ಪೂರ್ವ ವಿಶಿಷ್ಠ ಭಗವಾನ್ ಪ್ರತಿಮೆಯನ್ನು ಸಾಗರ ಕೊರೈ ರಸ್ತೆಯ ಮಹಾವೀರ್ ನಗರದಲ್ಲಿರುವ ಸಿದ್ದಾಯತ್ನ್ ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ವಿಶ್ವದ ಅತಿ ದೊಡ್ಡ ಸ್ಪಟಿಕ ರತ್ನ ಎಂದು ಹೇಳಲಾಗುತ್ತದೆ.
ವಾರದ ಜೈನ ಸುದ್ದಿಗಳು ವೀಕ್ಷಸಿದ ನಿಮ್ಮಗೆಲ್ಲರಿಗೂ ಧನ್ಯವಾದಗಳು
ಹೀಗೆ ಪ್ರತಿ ವಾರವು ವೀಕ್ಷಿಸುತಿರಿ, ವಾರದ ಜೈನ ಸುದ್ದಿಗಳು ಪ್ರತಿ ಶನಿವಾರ ರಾತ್ರಿ 07:30ಕ್ಕೆ ಸರಿಯಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













