ಜೈ ಜಿನೇಂದ್ರ . ಪಶ್ಚಿಮ ಕರಾವಳಿ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಲೆನಾಡಿನ ತಪ್ಪಲಿನ ರಮಣೀಯ ಬೆಟ್ಟಗಳ ಸಾಲಿನ ಮಧ್ಯೆ ಕಂಗೊಳಿಸಿರುತ್ತಿರುವುದು ಆತಿಶು ಶ್ರೀ ಕ್ಷೇತ್ರ ಶಿರ್ಲಾಲು. ಶ್ರೀ ಅನಂತನಾಥ ಬಸದಿ . ಶತಮಾನಗಳ ಇತಿಹಾಸವನ್ನು ಹೊಂದಿರುವ ಈ ಬಸದಿ ತನ್ನದೇ ಆದ ಸುಮಾರು 16 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಇಲ್ಲಿನ ಮೂಲ ದೇವತೆ ಪದ್ಮಾವತಿ ಅಮ್ಮನವರು .
ವರ್ಷ ವರ್ಷವೂ ಕೂಡ ಉತ್ಸವವನ್ನು ಮಾಡುವಂತಹ ವ್ಯವಸ್ಥೆಯನ್ನು ನಿಯಮ ಮಾಡಿಕೊಂಡಿದ್ದಾರೆ.
ಹಾಗೂ ನಮ್ಮ ಧರ್ಮದ ಮಹಾಸ್ವಾಮೀಜಿಗಳು , ಶ್ರೀ ವೀರೇಂದ್ರ ಹಗ್ಗಡೆಯವರ ಪ್ರೇರಣೆಯಂತೆ ಹಾಗೂ ಇನ್ನೂ ಅನೇಕ ಗಣ್ಯರುಗಳ ಸಹಭಾಗಿತ್ವದಲ್ಲಿ ಈ ಉತ್ಸವ ಕಾರ್ಯವನ್ನು ನಾವು ಪ್ರತಿವರ್ಷವೂ ಸಹ ನಡೆಸಿಕೊಂಡು ಬಂದಿದ್ದೇವೆ.
ಅಕ್ಷಯ ತೃತೀಯದ ದಿವಸ ಬೆಳ್ಳಿ ರಥೋತ್ಸವದೊಂದಿಗೆ ಮಹಾಮಸ್ತಕಾಭಿಷೇಕವನ್ನು ಕೂಡ ಪ್ರತಿವರ್ಷವೂ ಸಂಘಟಿಸಬೇಕೆಂದು ಕೂಡ ಸಂಕಲ್ಪ ರತ್ನವರ್ಮಪೌಣಿ ಅವರ ಕುಟುಂಬಸ್ಥರು ಮುಖ್ಯವಾಗಿ ಈಗಿನ ಕಮಿಟಿಯ ಅಧ್ಯಕ್ಷರು ಆಗಿರುವಂತಹ ಡಾ|| ಮಹಾವೀರ್ , ಸುದರ್ಶನ್ ಮತ್ತು ಆಡಳಿತ ಕಮಿಟಿಯ ಎಲ್ಲರ ಒಂದು ಒಪ್ಪಿಗೆಯ ಮೇರೆಗೆ ಪ್ರತಿವರ್ಷವೂ ಸಹ ಭಕ್ತಾದಿಗಳಿಗೆ ಭಾಗವಹಿಸಲು ಮತ್ತು ಪಾಲ್ಗೊಳ್ಳಲು ಒಂದು ಪುಣ್ಯ ಭಾಗ್ಯವನ್ನು ಪ್ರತಿವರ್ಷ ಈ ದಿವಸ ಆಚರಣೆಮಾಡಿಕೊಂಡು ಬಂದಿದ್ದೇವೆ. ಈ ಉತ್ಸವ ಮೂರು ದಿವಸಗಳ ಕಾಲ ನಡೆಯುವುದು, ವಿವಿಧ ಆರಾಧನೆಗಳು, ಪದ್ಮಾವತಿ ಅಮ್ಮನವರವ ಪ್ರತಿಷ್ಠಾಪನೆ ಹೀಗೆ ಬೇರೆಬೇರೆ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನೊಳಗೊಂಡು ಇಲ್ಲಿ ನಮ್ಮ ದೇವರಾಜುರವರು ಅವರು ಕೂಡ ಇದರಲ್ಲಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಎಲ್ಲಾ ಭಕ್ತಾದಿಗಳು ಒಂದೊಂದು ಕೆಲಸವನ್ನು ನಮಗಾಗಿ ಪ್ರತಿಯೊಬ್ಬರು ಸಹ ನಮಗೆ ಇಲ್ಲಿ ಆಗಬೇಕಾದ ಕೆಲಸಗಳನ್ನು ಅತಿ ಉತ್ಸಾಹದಿಂದ ನಮ್ಮೊಂದಿಗೆ ಸಹಕರಿಸುತ್ತಾರೆ.
1949ರಲ್ಲಿ ದಿವಂಗತ ಶ್ರೀ ಸಿದ್ದಪ್ಪ ಹೆಗ್ಗಡೆ ಮತ್ತು ಶ್ರೀಮತಿ ಲಕ್ಷ್ಮೀಮತಿ ಅಮ್ಮ ದೊಡ್ಡಮನೆ ಶಿರ್ಲಾಲು ಇವರ ಮುಂದಾಳತ್ವದಲ್ಲಿ ಬಸದಿಯ ಜೀರ್ಣೋದ್ಧಾರ ಹಾಗೂ ಧಾಮಸಂಪ್ರೋಕ್ಷಣೆಯ ಕಾರ್ಯ ನಡೆಯುತ್ತದೆ. ಅಂದಿನಿಂದ ನಿತ್ಯ ಪೂಜೆ ನಡೆಯುತ್ತಾ ಬಂದು ಮುಂದೆ ಈ ಕ್ಷೇತ್ರ ಪ್ರಚಲಿತಕ್ಕೆ ಬಂದಿದ್ದು ಅಭಿವೃದ್ದಿಗೆ ನಾಂದಿ ಹಾಡಿದ್ದು 1990ನೇ ಇಸವಿಯಲ್ಲಿ. ವಿಶ್ವ ನಂದಿ ಮುನಿಮಹಾರಾಜರ ಚಾತುರ್ಮಾಸದ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದವರು ಜಿನರಾಜ್ ಹೆಗ್ಗೆಡೆಯವರು. ಮತ್ತೊಮ್ಮೆ 1999 ರಲ್ಲಿ ಶಿರ್ಲಾಲಿ ಬಸದಿ ಜೀರ್ಣೋದ್ದಾರ ಸಮಿತಿ ರಚನೆಗೊಂಡು ಬಸದಿಯ ಮೂಲ ವ್ಯವಸ್ಥೆ ಕಾರ್ಯ ಜೀರ್ಣೋದ್ದಾರ ಪ್ರಾರಂಭಗೊಂಡು ಬಸದಿಯ ಪಂಚ ಕಲ್ಯಾಣ 2004 ರಲ್ಲಿ ನಡೆದು ಸದ್ದಾಲಕ್ಷ್ಮೀ ಸಭಾ ಭವನ ಕೂಡ ಪ್ರಾರಂಭಗೊಂಡಿತು. ಅಂದಿನಿಂದ ಇಲ್ಲಿಯವರೆಗೂ ಪ್ರತಿ ಶುಕ್ರವಾರ ಪದ್ಮಾವತಿ ಅಮ್ಮನವರ ವಿಶೇಷ ಪೂಜೆ ಅನ್ನ ಸಂತರ್ಪಣೆ ನಡೆಯುತ್ತದೆ.
2007 ರಲ್ಲಿ ಸ್ವರ್ಗೀಯ ರತ್ನವರ್ಮ ಪೂರ್ಣಿ ವಿನಂತಿ ರತ್ನವರ್ಮ ಪೂರ್ಣಿ ದಂಪತಿಗಳು ಅನಂತನೋಂಪಿ ಉದ್ಯಾಪನೆ ಸಂದರ್ಭದಲ್ಲಿ ಸುಂದರ ಕೆತ್ತನೆ ಕೆಲಸವುಳ್ಳ ಪಲ್ಲಕ್ಕಿಯನ್ನು ಹಾಗೂ ಬೆಳ್ಳಿ ರಥವನ್ನು ಸಹ ಈ ದಂಪತಿಗಳು ನೀಡಿರುತ್ತಾರೆ. 2011 ರಲ್ಲಿ ಯಾತ್ರಿ ನಿವಾಸ ಪ್ರಾರಂಭಗೊಂಡಿತು. ಶ್ರೀ ಕ್ಷೇತ್ರ ಮತ್ತೆ ಬೆಳಕಿಗೆ ಬಂದಿದ್ದು 2013ನೇ ಇಸವಿಯಲ್ಲಿ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ 11 ಅಡಿ ಎತ್ತರದ ಆದಿನಾಥ ತೀರ್ಥಂಕರರು , ಭರತಕೇವಲಿ ಹಾಗೂ ಬಾಹುಬಲಿ ಸ್ವಾಮಿಯ ತ್ರಿಮೂರ್ತಿಗಳು ಈಗ ಶಿಲೆಯಲ್ಲಿ ಏಕಸ್ಥಳದಲ್ಲಿ ಪ್ರತಿಷ್ಠಾಪನೆಯಾದಾಗ . ಸ್ವರ್ಗೀಯ ರತ್ನವರ್ಮ ಪೂರ್ಣಿ ವಿನಂತಿ ರತ್ನವರ್ಮ ಪೂರ್ಣಿ ದಂಪತಿಗಳ ನೇತೃತ್ವದಲ್ಲಿ ಅವರ ಸಂಕಲ್ಪದಂತೆ ಈ ಮೂರು ಮೂರ್ತಿಗಳು ಪ್ರತಿಷ್ಠಾಪನೆ ಗೊಳ್ಳುತ್ತವೆ. ಶ್ರವಣಬೆಳಗೊಳದ ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪ್ರೇರಣೆ ಹಾಗೂ ಧರ್ಮಸ್ಥಳ ಶ್ರೀ ವೀರೆಂದ್ರ ಹೆಗ್ಗಡೆಯವರ ಆಶೀರ್ವಾದ ಡಾ|| ಎಂ.ಎಂ ರಾಜೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಸರ್ವಕಾರ್ಯವೂ ವಿಧಿವತ್ತಾಗಿ ಮತ್ತು ಮಂಗಳಪೂರ್ವಕವಾಗಿ ನಡೆಯುತ್ತದೆ. ಸುತ್ತಲೂ ಉದ್ಯಾನವನದ ವಾತಾವರಣದ ಸೃಷ್ಠಿಯೊಂದಿಗೆ ಬಸದಿಗೆ ಬೇಕಾಚಂತಹ ಆರ್ಥಿಕ ಸಂಪನ್ಮೂಲಕ್ಕಾಗಿ ಅಡಿಕೆ ತೋಟ ಕೂಡ ಮಾಡಲಾಗಿದೆ. ಇಂತಹ ಒಂದು ಬಸದಿ ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದು ಅಕ್ಷಯ ತೃತೀಯ ದಿನದಂದು ಪ್ರತಿ ವರ್ಷವೂ ಇಲ್ಲಿ ಆದಿನಾಥರಿಗೆ ಭರತ ಬಾಹುಬಲಿ ಮೂರ್ತಿಗೆ ಮಹಾ ಮಸ್ತಕಾಭಿಷೇಕ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಸುತ್ತಲಿನ ಜನರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂದು ನಡೆಯುವ ರಥೋತ್ಸವವನ್ನು ಮಹಾ ಮಸ್ತಕಾಭೀಷೇಕವನ್ನು ಯಶಸ್ವಿಗೊಳಿಸುತ್ತಾರೆ.ಅದರಂತೆ ದಿನಾಂಕ 7/5/2019 ರಂದು ಶ್ರವಣಬೆಳಗೊಳದ ಜೈನ ಮಠಾದೀಶರಾದ ಜಗದ್ಗುರು ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕರ ಪ್ರೇರಣೆ. ಕಾರ್ಕಳ ಜೈನ ಮಠಾಧೀಶರಾದ ರಾಜಗುರು ಪರಮಪೂಜ್ಯ ಸ್ವಸ್ತಿಶ್ರೀ ಲಲಿತಾಕೀರ್ತಿ ಭಟ್ಟಾರಕರ ಮೂಡುಬಿದಿರೆಯ ಪರಮಪೂಜ್ಯ ಭಾರತಭೂಷಣ ಸ್ವಸ್ಥಿಶ್ರೀ ಚಾರುಕೀರ್ತಿ ಪಂಡಿತಾಚರ್ಯವರ್ಯ ಮಹಾಸ್ವಾಮೀಜಿಗಳ ಶ್ರೀ ಕ್ಷೇತ್ರ ಕನಕಗಿರಿ ಶ್ರೀಗಳಾದ ಪರಮಪೂಜ್ಯ ಭುವನಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಮಹಾಸ್ವಾಮೀ ಜಿಗಳ ಪಾವನ ಸಾನಿಧ್ಯ ಹಾಗೂ ಶ್ರೀಮತಿ ಹೇಮಾವತಿ ಹೆಗ್ಗೆಡೆಯವರ ದಿವ್ಯ ಉಪಸ್ಥಿತಿಯಲ್ಲಿ ಡಾ|| ಎಮ್. ಎನ್. ರಾಜೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ನಡೆದ ಉತ್ಸವವನ್ನು ಸುದರ್ಶನ್ ಅತಿಕಾರಿ ಮತ್ತು ಡಾ|| ಮಹಾವೀರ್ ಜೈನ್ ಭಗವಾನ್ ಅನಂತನಾಥ ಸ್ವಾಮಿ ಬಸದಿ ಸಮಿತಿಯ ಅಧ್ಯಕ್ಷರು ಹಾಗೂ ಪದಾದಿಕಾರಿಗಳು ನಿಂತು ಅದ್ದೂರಿಯಾಗಿ ನಡೆಸಿದರು.
ವರಂಗ ಮತ್ತು ಕಾರ್ಕಳ ಮೂಡುಬಿದ್ರೆಯ ಮಧ್ಯದಲ್ಲಿರುವ ಸಹ್ಯಾದ್ರಿ ಮತ್ತು ಅಜ್ಜಿಕುಂಜ ಎಂದು ಕರೆಯಲ್ಪಡುವ ಸಸ್ಯಶಾಮಲವಾಗಿರುವಂತಹ ಪ್ರಕೃತಿ ರಮಣೀಯವಾಗಿರುವಂತಹ ಕೇಂದ್ರದ ಮಧ್ಯದಲ್ಲಿರುವ ಕ್ಷೇತ್ರವೇ ಶಿರ್ಲಾಲು. ಇದು ಮುನಿಗಳ ವಿಹಾರದ ಕೇಂದ್ರಗಳಲ್ಲಿ ಇದೂ ಸಹ ಒಂದಾಗಿದ.













