ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ನಮಸ್ಕರಿಸುತ್ತಾ, ಹಾಗೂ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾ ಸರ್ವೋದಯ ಧರ್ಮ ಚಿಂತನ ಮಂಥನ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತಿಸುತ್ತಾ
ಈ ವಾರದ ವಿಷಯ: ಗುರುಪಾಸ್ತಿ
. ಈ ವಿಷಯದ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ವಿದೂಷಿ ತೇಜಸ್ವಿನಿ ಜೈನ್ ಅಧ್ಯಕ್ಷರು ನ್ಯಾಮುಷ್ಠಿ ಸೇವಾಸಮಿತಿ ಕರ್ನಾಟಕ ವಿಭಾಗ . ಮೊದನೆಯದಾಗಿ ಪ್ರಾರ್ಥನೆ ಕುಮಾರಿ ಮೋಕ್ಷ ಜೈನ ವೈನಾಡು ಇವರಿಂದ ನಡೆಯಿತು ಇವರಿಗೆ ಧನ್ಯವಾದಗಳು . ನಂತರ ಸ್ವಾಗತ ಮತ್ತು ಪರಿಚಯ ಭಾಷಣ ನಿರಂಜನ್ ಜೈನ್ ಕುದ್ಯಾಡಿ ಇವರಿಂದ . ಪರಮಪೂಜ್ಯ ಸ್ವಾಮೀಜಿಯವರಿಗೆ ಇಚ್ಛಾಮಿಗಳನ್ನು ನಮಿಸುತ್ತಾ ಎಲ್ಲರಿಗೂ ಜೈ ಜಿನೇಂದ್ರ ಇಂದಿನ ಸರ್ವೋದಯ ಚಿಂತನ ಮಂಥನ ಕಾರ್ಯಕ್ರಮದಲ್ಲಿ ನಮ್ಮೆಲ್ಲರನ್ನೂ ಆಶೀರ್ವದಿಸಲಿರುವ ನಮ್ಮೆಲ್ಲರನ್ನೂ ಆಶೀರ್ದಿಸಲಿರುವ ಪರಮಪೂಜ್ಯ ಭಾನುಕೀರ್ತಿ ಸ್ವಾಮೀಜಿಯವರು ಕಂಬದಹಳ್ಳಿ. ದಿಗಂಬರ ಜೈನ ಮಠ
ಇವರು ಕಂಬದ ಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಜಿನಧರ್ಮದ ಪ್ರಭಾವನೆಯನ್ನು ಮಾಡುತ್ತಿದ್ದಾರೆ. ಪ್ರಾಚೀನ ಜೈನಕ್ಷೇತ್ರವಾದ ಕಂಬದಹಳ್ಳಿಯನ್ನು ಜೈನಧರ್ಮದ ಹಿರಿಮೆ ಗರಿಮೆಯನ್ನು ರಕ್ಷಣೆಯನ್ನು ಮಾಡುತ್ತಿದ್ದಾರೆ. ಪೂಜ್ಯರ ಆಶೀರ್ವಾದದಿಂದ ಕ್ರಿಯಾಶೀಲತೆಯಿಂದ ಕಂಬದಹಳ್ಳಿಯು ಜೈನರ ಪವಿತ್ರ ಕ್ಷೇತ್ರವಾಗಿ ಉಳಿದಿದೆ. ಇದಕ್ಕಾಗಿ ಪೂಜ್ಯರಿಗೆ ಸಕಲ ಜೈನ ಮಿಲನ್ ವಲಯ 8 ರ ಪರವಾಗಿ ಪರಮಪೂಜ್ಯರ ಪಾದಾರಾವಿಂದಗಳಿಗೆ ಭಕ್ತಿಯಿಂದ ಇಚ್ಛಾಮಿಗಳು. ನಮೋಸ್ತು ಸೇವಾ ಸಮಿತಿ ಕರ್ನಾಟಕ ವಿಭಾಗದ ಅಧ್ಯಕ್ಷೆ ಪ್ರತಿದಿನ ನೂರಾರು ಜನರಿಗೆ ಸ್ವಾಧ್ಯಾಯವನ್ನು ಮಾಡಿಸುತ್ತಿರುವ ಗುರುವಾಗಿ ಸಂಸ್ಕೃತ ಭಾಷೆಯ ಪಂಡಿತೆಯಾಗಿ ದಿವ್ಯವಾಣಿಯ ಪ್ರಭೆಯನ್ನು ನಾಡಿನದ್ಯಂತ ಪಸರಿಸುತ್ತಿರುವವರೂ ಆಗಿರುವ ಡಾ|| ತೇಜಸ್ವಿನಿ ಮೈಸೂರು ಇವರು . ಪೂಜ್ಯ ಮುನಿವರೇಣ್ಯರಿಗೆ , ಮಾತಾಜಿಗಳಿಗೆ ಸಂಸ್ಕೃತದ ಪಾಠಮಾಡುತ್ತಾ ಭಕ್ತಿಭಾವದಿಂದ ಮುನಿಸೇವೆ, ತ್ಯಾಗಿ ಸೇವೆಗಳನ್ನು ಮಾಡುತ್ತಾ ಶ್ರಾವಕ ಕರ್ತವ್ಯಗಳಲ್ಲಿ ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡಿರುತ್ತಾರೆ. ಹಲವು ಕೃತಿಗಳನ್ನು ರಚಿಸಿರುವ ತೇಜಸ್ವಿನಿ ಯವರು ಅವರ ಹಲವಾರು ಶಾಸ್ತ್ರ ಗ್ರಂಥಗಳ ಅನುವಾದವನ್ನು ಕೂಡ ಮಾಡಿರುತ್ತಾರೆ. ಮೈಸೂರು ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿರುವ ತೇಜಸ್ವಿನಿ ಮೇಡಂ ರವರಿಗೆ ಜ್ವಾಲಾಮಾಲಾ ನ್ಯೂಸ್ ಹಾಗೂ ಜೈನ್ ಮಿಲನ್ ವಲಯ 108 ರ ಪರವಾಗಿ ಆತ್ಮೀಯ ಸ್ವಾಗತವನ್ನು ಬಯಸುತ್ತೇನೆ.
ಸರ್ವೋದಯ ಧರ್ಮ ಚಿಂತನ ಮಂಥನ ಕಾರ್ಯಕ್ರಮದ ಮೂಲಕ ಪ್ರಶ್ನೆ ಕೇಳಲಿರುವ ಬಂಧುಗಳೆಲ್ಲರಿಗೂ ಜ್ವಾಲಾಮಾಲಾ ನ್ಯೂಸ್ ಹಾಗೂ ಭಾರತೀಯ ಜೈನ್ ಮಿಲನ್ ವಲಯ 8ರ ಪರವಾಗಿ
ಆತ್ಮೀಯ ಸ್ವಾಗತವನ್ನು ಬಯಸುತ್ತೇನೆ. ಹಾಗೂ ವೀಕ್ಷಿಸುತ್ತಿರುವ ಎಲ್ಲರಿಗೂ ಸಹ ಜ್ವಾಲಾಮಾಲಾ ನ್ಯೂಸ್ ಹಾಗೂ ಭಾರತೀಯ ಜೈನ್ ಮಿಲನ್ ವಲಯ 8ರ ಪರವಾಗಿ ಆತ್ಮೀಯ ಸ್ವಾಗತವನ್ನು ಬಯಸುತ್ತೇನೆ . ಹಾಗೂ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿಸಹಕಾರವನ್ನು ನೀಡುತ್ತಿರುವ ತಾಂತ್ರಿಕ ವರ್ಗ, ನಿರೂಪಕರು, ಹಾಗು ಪ್ರತಿಯೊಬ್ಬರಿಗೂ ಸಹ ಸ್ವಾಗತವನ್ನು ಬಯಸುತ್ತೇನೆ.
ನಂತರ ಪೂಜ್ಯ ಸ್ವಾಮೀಜಿಯವರು ಮಾತನಾಡಿ ಗುರುಪಾಸ್ತಿಯ ಬಗ್ಗೆ ತಿಳಿಸುತ್ತಾ ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಕೆಲವು ಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಗುರುಪಾಸ್ತಿಯೆಂದರೆ ಯಾರು ಜಪ ತಪ ಪೂಜಾ ಭಕ್ತಿ ಭಾವದಿಂದ ಹಾಗೂ ಶ್ರದ್ದೆಯಿಂದ ಆಚರಣೆ ಮಾಡುವರೋ ಅವರಿಗೆ ನಿಜವಾದ ಗುರುಪಾಸ್ತಿಯೆಂದು ಕರೆಯುತ್ತಾರೆ. ಅವರನ್ನು ನಾವು ಶ್ರದ್ಧೆಯಿಂದ ಪೂಜೆ ಮಾಡಬೇಕು. ಯಾರು ನಮ್ಮ ಅಜ್ನಾನವನ್ನು ಹೋಗಲಾಡಿಸುತ್ತಾರೋ ಮತ್ತು ಸುಜ್ನಾನವನ್ನು ಕೊಡುತ್ತಾರೆ ಅಂತಹವರ ಆಂತರ್ಯವನ್ನು ಗೌರವಿಸುವುದು ನಮ್ಮ ಕರ್ತವ್ಯ ವಾಗಿದೆ. ಗುರುಗಳು ಅಂದರೆ ಅಕ್ಷರ ಕಲಿಸುವವರೆ ಅಂತ ಅಲ್ಲ ಪ್ರತಿಯೊಂದು ಹಂತದಲ್ಲು ನಮಗೆ ಹಿರಿಯರೇ ಆಗಲಿ ಅಥವಾ ಕಿರಿಯರೇ ಆಗಲಿ ಜ್ನಾನವನ್ನು ತುಂಬುವವರೇ ನಿಜವಾದ ಗುರುಗಳು. ಎಂದು ತಿಳಿಸಿದರು.
ನಂತರ ವಿದೂಷಿ ತೇಜಸ್ವಿನಿ ಡಿ ಜೈನ್ ರವರು ನಮ್ಮ ಪ್ರಶ್ನಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಕೊಟ್ಟು ಉತ್ತಮವಾದ ಸಲಹೆ ಸೂಚನೆಗಳನ್ನು ಕೊಟ್ಟು ಎಲ್ಲರಿಗೂ ಉತ್ತರುಸಿದರು. ಇವರಿಗೆ ನಮ್ಮ ತಂಡದ ಪರವಾಗಿ ಧನ್ಯವಾದಗಳು .ನಂತರ ವಂದನಾರ್ಪಣೆ ಕಾರ್ಯಕ್ರಮವನ್ನು ಕುಮುದಾ ನಾಗಭೂಷಣ್ ರವರು ನಡೆಸಿಕೊಟ್ಟರು.ಕಾರ್ಯಕ್ರಮಕ್ಕೆ ಸಹಕಾರವನ್ನು ಕೊಟ್ಟ ಎಲ್ಲರಿಗೂ ನಮ್ಮ ಧನ್ಯವಾದಗಳು .













