ವಾರ್ಷಿಕ ಜೈನ್ ಸುದ್ದಿಗಳು-21

ಜೈ ಜಿನೇಂದ್ರ ವೀಕ್ಷಕರೆ, ಧರ್ಮ ಪ್ರಚಾರಕ್ಕೆ ಹಾಗೂ ಧರ್ಮ ಪ್ರಭಾವನೆಗೆ ಒತ್ತು ನೀಡುತ್ತೀರುವ ವಾರದ ಜೈನ ಸುದ್ದಿಗಳಿಗೆ ತಮ್ಮೆಲ್ಲರನ್ನು ಸ್ವಾಗತಿಸುತ್ತ ಮುಖ್ಯಾಂಶಗಳೆಡೆಗೆ ಒಂದು ನೋಟ. 

ಮುಖ್ಯಾಂಶಗಳು :-

ತುಮಕೂರಿನ ಮಂದಾರಗಿರಿಯಲ್ಲಿ ಸುಂದರ ಧಾರ್ಮಿಕ ಕಾರ್ಯಕ್ರಮಗಳು.

ಅಭೂತಪೂರ್ವ ಯಶಸ್ಸುಕಂಡ ಜಿನ ಸಮ್ಮಿಲನ.

ಜೈನ ಸಮಾಜದ ಯುವಕರಿಂದ ಶಾಂತಿ ಸದ್ಭಾವನ ಸೈಕಲ್ ಜಾಥಾ.

ಮುನಿಗಳ ವಿಹಾರ, ಒಂದು ಪರಿಚಯ.

ಸಮಾಜ ಸೇವಕ ಹಾಗೂ ಸಾಮಾಜಿಕ ಹೋರಾಟಗಾರ ಮಾಳ ಹರ್ಷೇಂದ್ರ ಜೈನ್ ರವರಿಗೆ ವರ್ಲ್ಡ್ ಅಪ್ರಿಸಿಯೇಶನ್ ಪ್ರಶಸ್ತಿ.

ಯಶಸ್ವಿಯಾಗಿ ನಡೆದ ಅಹಿಂಸಾ ಸಮ್ಮೇಳನ.

ದೇಶದೆಲ್ಲೆಡೆಯಿಂದ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಿ ದಾಖಲೆ ಸೃಷ್ಠಿಸಿದ ಭಾರತೀಯ ಜೈನ್ ಮಿಲನ್ ವರ್ಚುವಲ್ ಮಹಾವೀರ್ ಮಹಾ ರ‍್ಯಾಲಿ.

ಸುದ್ದಿಗಳ ವಿವರ:-

ತುಮಕೂರಿನ ಮಂದಾರಗಿರಿಯಲ್ಲಿ ಯುಗಳ ಮುನಿಗಳ ಸಾನಿಧ್ಯದಲ್ಲಿ ಅನೇಕ ಧಾರ್ಮಿಕ ಚಟುವಟಿಕೆಗಳು ಕಾರ್ಯಕ್ರಮಗಳು ಸಾಲು ಸಾಲಾಗಿ ನಡೆಯುತ್ತಿವೆ.

ಪೂಜ್ಯ 108 ಯುಗಳ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹರಅಂತ ಗಿರಿ, ಕನಕ ಗಿರಿ, ಕಂಬದ ಹಳ್ಳಿ, ಎನ್ ಆರ್ ಪುರ ಬಸದಿ ಮಠ, ಆರತಿ ಪುರ ಜೈನ ಮಠದ ಭಟ್ಟಾರಕ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಮಂಧಾರ ಗಿರಿಯ ಬಸದಿ ಬೆಟ್ಟದ ಮೇಲಿನ ಮೂಲ ನಾಯಕರಾದ ಭಗವಾನ್ 1008 ಚಂದ್ರ ನಾಥ ಸ್ವಾಮಿಯ ಮೂರ್ತಿಗೆ ಸುವರ್ಣ ಲೇಪಿತ ಪ್ರಭಾವಳಿ ಕವಚ ಸಮರ್ಪಣೆ ಮತ್ತು ಜಿನ ಮಂದಿರಗಳ ಮುಖ್ಯದ್ವಾರ ಗರ್ಭ ಗುಡಿಗಳ ಸುಂದರ ಕೆತ್ತನೆಯ ದ್ವಾರ ಬಾಗಿಲಿನ ಉದ್ಘಾಟನೆಯ ಹಾಗೂ ಯುಗಳ ಮುನಿ ರಾಜರಲ್ಲಿ ಒಬ್ಬರಾದ ಮುನಿ ಶ್ರೀ 108 ಅಮೋಘ ಕೀರ್ತಿ ಮಹಾರಾಜರ ಜನ್ಮ ಜಯಂತಿ ಕಾರ್ಯಕ್ರಮವು ದಿನಾಂಕ 20-12-2020ರಂದು ಅದ್ದುರಿಯಾಗಿ ನೆರವೇರಿತು.

 ಕಾರ್ಯಕ್ರಮದ ಆರಂಭದಲ್ಲಿ ಅಲ್ಪಸ್ವಲ್ಪ ತಾಂತ್ರಿಕ ದೋಷ ಕಾಣಿಸಿದಷ್ಟೆ ನಂತರ ನಡೆದ್ದಿದು ಅವೇಲ್ಲವನ್ನು ಮರೆಸುವಷ್ಟು ಯಶಸ್ವಿ ಕಾರ್ಯಕ್ರಮ. ನಡೆದಾಡುವ ದೇವರೆಂದೆ ಭಾವಿಸಲಾಗುವ ಪರಮ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ದೊರೆತ ನಂತರ  ಎಲ್ಲವು ಸಲಿಸಾಗಿ ಸಾಗಿತ್ತು. ಇದು ಅಂತರಾಷ್ಟ್ರೀಯ ಜಿನ ಸಮ್ಮಿಲನದ ಕಾರ್ಯಕ್ರಮದ ಯಶಸ್ವಿ ಕಥೆ. ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ ಬಳಗದಿಂದ ನಡೆದ ಅಂತರಾಷ್ಟ್ರೀಯ ಜಿನ ಸಮ್ಮಿಲನ ಕಾರ್ಯಕ್ರಮ 20-12-2020ರಂದು ಬಹಳ ಯಶಸ್ವಿಯಾಗಿ ನಡೆಯಿತು.

ಪರಮ ಪೂಜ್ಯ ಮುನಿಶ್ರೀ 108 ಪ್ರಸಂಗ ಸಾಗರ ಮುನಿ ಮಹಾರಾಜರ ಮತ್ತು ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ಹೊಂಬುಜ ಕ್ಷೇತ್ರದ ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಧರ್ಮ ಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಅಂತರಾಷ್ಟ್ರೀಯ ಜಿನ ಸಮ್ಮಿಲನದ ಕಾರ್ಯಕ್ರಮವನ್ನು ಉದ್ಗಾಟನೆಮಾಡುತ್ತ ಜೈನ ಧರ್ಮದ ಆಚಾರ ವಿಚಾರಗಳು ಮಹಾನತೆಯಿಂದ ಕೂಡಿದ್ದು ಜೈನ ಧರ್ಮಗಳ ತತ್ವ ಸಿದ್ದಾಂತಗಳು ಜಗತ್ತಿನಾದ್ಯಂತ ಪ್ರಸಾರ ಆಗ ಬೇಕಾದ ಅಗತ್ಯವಿದೆ ಎಂದು ನುಡಿದರು.

ಅಹಿಂಸೆ ಅಪರಿಗ್ರಹ ಇಂದಿನ ಸಮಾಜಕ್ಕೆ ಅತಿ ಅಗತ್ಯವಾಗಿದ್ದು ಜಗತ್ತು ಇದನ್ನು ಅನುಗ್ರಹಿಸಲು ಯೋಗ್ಯವಾಗಿದೆ ಎಂದು ನುಡಿದರು. ಅಂತರಾಷ್ಟ್ರೀಯ ಜಿನ ಸಮ್ಮಿಲನದ ಕಾರ್ಯಕ್ರಮ ಅಯೋಜನೆ ಮಾಡಿದಕ್ಕೆ ತನ್ನ ಸಂತಸವನ್ನು ವ್ಯಕ್ತಪಡಿಸಿದ ಪೂಜ್ಯ ಕಾವಂದರು ಇನ್ನೂ ಮುಂದೆಯು ಇಂತಹ ಕಾರ್ಯಕ್ರಮಗಳು ನಡೆದು ಜೈನ ಧರ್ಮದ ಸಂದೇಶ ಜಗತ್ತಿನಾದ್ಯಂತ ಪಸರಿಸಲಿ ಎಂದು ಶುಭಾಷಯಗಳನ್ನು ನುಡಿದರು.

ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವನ್ನು ವಹಿಸಿ ಆಶೀರ್ವಚನವನ್ನು ದಯಪಾಲಿಸಿದ ಹೊಂಬುಜ ಶ್ರೀ ಜೈನ ಮಠದ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಜಗತ್ತು ಸುಖ ಶಾಂತಿಯಿಂದ ಇರಬೇಕಾದರೆ ಜೈನ ಧರ್ಮದ ತತ್ವ ಸಿದ್ದಾಂತಗಳು ಪೂರಕವಾಗಿದೆ ಎಂದು ನುಡಿದರು. ಹಿಂಸೆ ಯಿಂದ ಜಗತ್ತು ತಲ್ಲಣ ಗೊಂಡಿರುವ ಈ ಸಮಯದಲ್ಲಿ ಜೈನ ಧರ್ಮದ ತತ್ವ ಸಿದ್ದಾಂತಗಳಲ್ಲಿ ಪ್ರಮುಖವಾದ ಅಹಿಂಸೆಯು ಜಗತ್ತಿನ ಅಭೀವೃದ್ದಿಗೆ ಪೂರಕವಾಗಲ್ಲಿದೆ ಎಂದು ಆಶೀರ್ವಚನ ಗೈದರು. ಅಂತರಾಷ್ಟ್ರೀಯ ಜಿನ ಸಮ್ಮಿಲನದಲ್ಲಿ ಉದ್ಗಾಟನಾ ಸಮಾರಂಭದ ನಂತರ ಅಂತರಾಷ್ಟ್ರೀಯ ಜೈನ ಕನ್ನಡಿಗರ ಸಮ್ಮಿಲನ ಭಾಗ ಒಂದು ನಡೆಯಿತು. ನಂತರ ರಸಪ್ರೇಶ್ನೆ ಕಾರ್ಯಕ್ರಮವು ಬಹಳ ಸೊಗಸಾಗಿ ನಡೆಯಿತು. ಚಾವಡಿ ಚರ್ಚೆಯು ನಡೆದು ಬಹು ಜನರನ್ನು ಆಕರ್ಷಿಸಿತು. ಜೈನ ಧರ್ಮಗಳ ವಿಚಾರಗಳಿಗೆ ಸಂಬಂಧ ಪಟ್ಟಂತಹ ಕಿರು ಚಲನಚಿತ್ರಗಳು ಪ್ರದರ್ಶನಗೊಂಡು ಬಹಳ ಜನರನ್ನು ಮುದಗೊಳಿಸಿದವು.

ನಂತರ ಅಂತರಾಷ್ಟ್ರೀಯ ಜೈನ ಕನ್ನಡಿಗರ ಸಮ್ಮಿಲನ ಭಾಗ ಎರಡು ನಡೆಯಿತು. ಕೊನೆಯಲ್ಲಿ ಸಮಾರೋಪ ಸಮಾರಂಭವು ನಡೆದು ಜಿನ ಸಮ್ಮಿಲನ ಕಾರ್ಯಕ್ರಮವು ಸಮಾಪ್ತಿಯಾಯಿತು.

ಜಾಹೀರಾತು.

ಜೈನ ಸಮಾಜದ 80 ಜನ ಯುವಕರಿಂದ ಶಾಂತಿ ಸದ್ಭಾವನ ಜಾಥಾ ರ‍್ಯಾಲಿ ಧಾರವಾಡ ದಿಂದ ಹುಬ್ಬಳ್ಳಿ ತಲುಪಿದಾಗ ಅಲ್ಲಿನ ಜೈನ ದಿಗಂಬರ ಸಮಾಜ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಂತಿ ಸದ್ಬಾವನ ಸೈಕಲ್ ಜಾಥಾ, 80ಜನ ಯುವಕರಿಂದ ಪ್ರಚಾರ ಯಾತ್ರೆ, ಮಹಾರಾಷ್ಟ್ರದ ಜೈನ ಕ್ಷೇತ್ರ ಬಾಹುಬಲಿಯಿಂದ ಕನ್ಯಾಕುಮಾರಿಯವರಗೆ 2051 ಕಿ.ಮೀ. ಅಂತರದ ಶಾಂತಿ ಸದ್ಬಾವನ ಪ್ರಚಾರಯಾತ್ರೆಯನ್ನು ಹಮ್ಮಿಕೊಂಡಿರುವ ಜೈನ ಸಮಾಜದ 80 ಯುವಕರ ಸೈಕಲ್ ಜಾಥವು ಶುಕ್ರವಾರ ಧಾರವಾಡದಿಂದ ಹುಬ್ಬಳ್ಳಿಗೆ ಅಗಮಿಸಿದಾಗ ದಿಗಂಬರ ಜೈನ ಸಮಾಜದಿಂದ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸ್ವಾಗತಿಸಿ ಸನ್ಮಾನಿಸಲಾಯಿತ್ತು. ಈ ಯುವಕರ ತಂಡವು ಪ್ರತಿವರ್ಷವು ಅಹಿಂಸೆ, ಸಸ್ಯಹಾರ, ವ್ಯಸನ ಮುಕ್ತಿ, ಪರಿಸರ ರಕ್ಷಣೆ,, ರಾಷ್ಟ್ರೀಯ ಭಾವೈಕ್ಯತೆ, ಮಾತೃ ಬಾಷೆಯಲ್ಲಿ ಶಿಕ್ಷಣ ಮುಂತಾದವುಗಳನ್ನು ಕುರಿತು ಜನ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಜೈನ ಸಮಾಜದ ಪರವಾಗಿ ಅಧ್ಯಕ್ಷರಾದ ರಾಜೇಂದ್ರ ಬೆಳಗಿ, ಉಪಾಧ್ಯಕ್ಷರಾದ ವಿಮಲ್ ತಾಳಿಕೋಟೆ, ಪೂರ್ವಾಧ್ಯಕ್ಷರಾದ ಶಾಂತಿನಾಥ ಹೊತಪೇಟಿ, ಬಾಬು ಭದ್ರಪುರ, ಲತಾ ದಯಣ್ಣನವರ್ ಮತ್ತಿತರು ತಂಡಕ್ಕೆ ಶುಭಾ ಹಾರೈಸಿದರು. ಹಾರತಾಳ, ಸೋಂಧ ಮಾರ್ಗವಾಗಿ ಜಾಥಾ ಮುಂದುವರೆಯಿತು. ಈ ಸೈಕಲ್ ಜಾಥಾವು ಬೆಳ್ಳೂರಿಗು ಸಹ ಭೇಟಿ ನೀಡಿ ಬೆಳ್ಳೂರಿನ ಜಿನ ಸಮಾಜದ ಅಧ್ಯಕ್ಷರು ಮತ್ತು ಸದಸ್ಯರು ಕೂಡ ಅವರನ್ನು ಸತ್ಕತಿಸಿ ಬಿಳ್ಕೊಟರು.

ಇಲ್ಲೊಂದು ಮುನಿಗಳ ವಿಹಾರದಲ್ಲಿ ಹಾಗುವ ಅನುಬವದ ಬಗೆಗಿನ ಒಂದು ಲೇಖನ ನೋಡಿ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದಂತು ನಿಜ.

ಇಲ್ಲಿ ನೋಡುತ್ತಿರುವುದು ಅಚಾರ್ಯ ವಿಶುದ್ದ ಸಾಗರ ಮಹಾರಾಜರ ಸಂಘದ ವಿಹಾರ ಬಿಹಾರದಲ್ಲಿ ನಡೆಯುತ್ತಿರುವ ಒಂದು ದೃಷ್ಯ. ಈ ದೃಷ್ಯವನ್ನು ತೋರಿಸಿ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದ ಸುಂದರ ಲೇಖನ ಒಂದನ್ನು ಓದಿ ಹೇಳುತ್ತೇವೆ. ಈಗ ಚಾತುರ್ಮಾಸ ಮುಗಿದ ನಂತರ ಮುನಿಶ್ರೀಯವರ ಮಾತಾಜೀ ಆರಿಕಾ ಸಂಘ ಸಮೇತರಾಗಿ ಚುರುಕಿನ ವಿಹಾರ ಅತಿಂದಿತ್ತ ಹಲವುಕಡೆ ವಿಹಾರ ನಡೆದಿದೆ. ಒಂದುಸಲ ಯೋಚಿಸಿ ವಿಹಾರದಲ್ಲಿ ಎಷ್ಟು ತೊಂದರೆಯಾಗುತ್ತದೆ ಗೊತ್ತ. ಪ್ರತಿಯೊಂದು 10-15 ಕಿ.ಮೀ ದೂರ ಮುಂಚಿತವಾಗಿ ಹೋಗಿ ಆಹಾರ ಚರ್ಯ ವಾಸ್ತವ್ಯ ಎಲ್ಲಿ ಯಾವ ಶಾಲೆ ಹೊಸ ಕಟ್ಟಡ ಸಿಗುತ್ತದೆಯೊ ಇಲ್ಲವೊ ಕೊಡುತ್ತಾರೆಯೊ ಇಲ್ಲವೊ ನೀರಿನ ಅನುಕೂಲ ನೋಡಬೇಕು ವಾಹನಗಳ ಇಂಧನ ಯಾರು ಹಾಕುತ್ತಾರೆ ಹಣ್ಣು ಹಪಲು ಹಾಲು ಸಿಗುತ್ತದೆಯೊ ಇಲ್ಲವೊ ಇವೇಲ್ಲವೂ ಗಮನಿಸ ಬೇಕು. ಬಿಡುವಿಲ್ಲದ ಕೆಲಸ ರಸ್ತೆಯೇನೊ ಚಿತ್ರದಲ್ಲಿ ಕಾಣಬಹುದು ಆದರೆ ದಾರಿ ಕ್ರಮಿಸಿದಾಗ ಎಷ್ಟು ಪಾದಗಳು ಕೊರೆಯುತ್ತದೆ ಗೊತ್ತಾಗುತ್ತದೆ. ದೂರದ ಗುಡ್ಡ ಕಣ್ಣಿಗೆ ಚಂದಕಾಣುತ್ತದೆ. ಹಾಗಂತಹ ವಿಹಾರದಲ್ಲಿ ಭಾಗವಹಿಸುವುದು ಬಿಡುವುದಲ್ಲಾ. ವಾಕಿಂಗ್ ಮಾಡುವುದೇ ಬೇರೆ ವಿಹಾರ ಮಾಡುವುದೇ ಬೇರೆ ಇವತ್ತು ಯೋಚಿಸ ಬೇಕಾದ ವಿಷಯ ಇದು ನನಗೆ ಅನಿಸಿದ್ದು. ಮತ್ತೇಕೆ ತಡ, ಒಂದು ದಿನಾವಾದರು ಬರಬಾರದೆ ನಾಲ್ಕು ಗೊಡೆಗಳ ಬಿಟ್ಟು ಚಳಿಯಲ್ಲಿ ಬೆಚ್ಚಗಿನ ಅನುಭವ. ಮುನಿಶ್ರೀ ಮಾತಾಜೀಯವರ ಜೊತೆ ಜೊತೆಗೆ ವಿಹಾರ ಮಾಡಿದರೆ ಅದರ ಅನುಭವವೆ ಬೇರೆ. ಮನ ಮನುಷ್ಯನ ದೇಹದ ಆರೋಗ್ಯದ ಜೊತೆಗೆ ಮನುಷ್ಯ ಗಟ್ಟಿಯಾಗುತ್ತಾನೆ, ವರ್ಷದ 365ರಲ್ಲಿ 6 ದಿನವಾದರು ಮೀಸಲ್ಲಿಟ್ಟು ನೋಡಿ. ಧರ್ಮದ ಜಾಗೃತಿ ಜೊತೆಗೆ ಧರ್ಮ ದ್ವಜವನ್ನು ಹಾರಿಸಿದ ಅನುಭವ ಹಿಡಿವರ್ಷ ನಿಮ್ಮ ಬಳಿ ಇರುತ್ತದೆ. ನಾವು ಈ ವಿಹಾರದ ಹಿಂದೆ ನಡೆಯದ್ದಿದರೆ ಮುಂದೆಯಾರು ಬರುವವರು, ಯೋಚನೆ ಮಾಡಿ ಬನ್ನಿ ದಿನದ ನಡಿಗೆ ಮುಂದಿನ ಪೀಳಿಗೆಗೆ ಮಾದರಿಯಾಗಲ್ಲಿ ಅಂತ, ಎನ್ನು ಅಂತಿರಿ.

ಅಂತ ನಾನೊಂದು ದಿಗಂಬರ ಜೈನ ಮುನಿಗಳ ಭಕ್ತ ಎಂದು ಹೇಳಿಕೊಳ್ಳತ್ತ ಬರೆದ ಲೇಖನವಿದು. ಔದಲ್ಲವೇ ಬಂಧುಗಳೆ ಇದರಲ್ಲಿ ಎಷ್ಟು ಸತ್ಯ ಆಡಗಿದೆ, ಇನ್ನು ನಮ್ಮ ದಿಗಂಬರ ಮುನಿಗಳ ವಿಹಾರದ ಬಗ್ಗೆ ಯೋಚಿಸಿ ನೋಡಿ. ನಮ್ಮ ಜೈನ ಧರ್ಮದಲ್ಲಿ ಇರುವ ಇಷ್ಟು ಧರ್ಮ ಶ್ರದ್ಧೆ ಜೈನನಾಗಿದಕ್ಕೆ ಸಾರ್ಥಕ ಭಾವವನ್ನು ಮೂಡಿಸುತ್ತದೆ.

ಈಗ ಅಭಿನಂದೆಗಳು ಹಾಗೂ ಪ್ರಕಟಣೆಯ ಸಮಯ

ಕೊರೊನ ಸಂದರ್ಭದಲ್ಲಿನ ಸಮಾಜ ಸೇವೆಗಾಗಿ ಲಯನ್ಸ್ ಕ್ಲಬ್ ಬೆಂಗಳೂರು ಮಲ್ಲೇಶ್ವರಂ ಹೆರಿಟೆಜ್ ನವರು ಮಳಾ ಹರ್ಷೇಂದ್ರ ಜೈನ್ ರವರಿಗೆ ವಲ್ಡ್ ಅಪ್ರಿಯೃಶನ್ಸ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮಳಾ ಹರ್ಷೇಂದ್ರ ಜೈನ್ ರವರು 42 ದಿನಗಳ ಕಾಲ ಕೊರೊನ ಲಾಕ್ ಡೌನ್ ನಲ್ಲಿ ಹಸಿದವರ ಹಸಿವು ನೀಗಿಸುವ ನಿಟ್ಟಿನಲ್ಲಿ ಕಷ್ಟದಲ್ಲಿರುವವರಿಗೆ ಧೈರ್ಯ ತುಂಬಿ ಸುಮಾರು 27ಸಾವಿರ ಹಸಿದ ಹೊಟ್ಟೆಗಳಿಗೆ ಊಟವನ್ನು ನೀಡಿದ್ದರು. ಸುಮಾರು 175 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಿದ್ದಾರೆ. 60ಹೆಚ್ಚು ಬಾರಿ ರಕ್ತ ದಾನ ಮಾಡಿ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಸಮಾಜ ಸೇವೆಗೆ ತಮ್ಮನ್ನು ತಾವು ಮುಡಿಪಾಗಿಟ್ಟು ಕೊಂಡಿದ್ದಾರೆ. ಸಮಾಜದ ಹಲವಾರು ಕ್ಲೀಷ್ಟ ಸಂದರ್ಭಗಳಲ್ಲಿ ಸಮಾಜಿಕ ಹೋರಾಟಗಾರರಾಗಿಯು ಹಲವಾರು ವರ್ಷಗಳಿಂದ ದುಡಿಯುತ್ತಿದ್ದಾರೆ. ಈ ಸೇವಾ ಮನೋಭಾವವನ್ನು ಲಯನ್ಸ್ ಕ್ಲಬ್ ಬೆಂಗಳೂರು ಮಲ್ಲೇಶ್ವರಂ ಹೆರಿಟೆಜ್ ನವರು ವಿಶೇಷವಾಗಿ ಗುರುತಿಸಿ ನೆನ್ನೆ ದಿನ ನಡೆದ ವಲ್ಡ್ ಅಪ್ರಿಯೃಶನ್ಸ್ ಡೆ ಕಾರ್ಯಕ್ರಮದಲ್ಲಿ ಅಪ್ರಿಯೃಶನ್ಸ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ದೃಢವಾದ ನಿರ್ಧಾರ ನಿರಂತರ ಪರಿಶ್ರಮ ಒಳ್ಳೆಯ ಹೊಸ ಅಲೋಚನೆಗಳಿಗೆ ತೆರೆದುಕೊಳ್ಳುವ ಮನಸ್ಸು ಇದ್ದರೆ ಜೀವನದಲ್ಲಿ ಯಶಸ್ಸು ಹುಡುಕಿಕೊಂಡು ಬರುತ್ತದೆ. 42 ದಿನ ಸುಮಾರು 650 ಗಂಟೆ 5 ಸಾವಿರ ಕಿಲೋ ಮೀಟರ್ ಗಳ ಓಡಾಟ ಸಾವಿರಾರು ಹಸಿದ ಹೊಟ್ಟೆಗಳ ಕೊಂಚ ಹಸಿವನ್ನು ನೀಗಿಸಿದ್ದ ಸಂತೃಪ್ತಿ ಹೇಳುವ ಮಳಾ ಹರ್ಷೇಂದ್ರ ಜೈನ್ ರವರು ಈ ಪ್ರಶಸ್ತಿಯನ್ನು ಅವರ ಮಾತೃಶೀ ಸುಮನಾಜೀ ಅಮ್ಮನವರಿಗೆ ಸಮರ್ಪಿಸಿದ್ದಾರೆ.

ವೀರ್ ಪ್ರಸನ್ನ ಕುಮಾರ್ ರವರು ಭಾರತೀಯ ಜೈನ್ ಮಿಲನ್ 2020-21ನೇ ಸಾಲಿಗೆ ಅಂತರಾಷ್ಟ್ರೀಯ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಸಂತಸ ತಂದಿದ್ದು ಅವರಿಗೆ ಜ್ವಾಲಮಾಲ ನ್ಯೂಸ್ ಅಭಿನಂದನೆಯನ್ನು ಸಲ್ಲಿಸುತ್ತದೆ.

ಬಿ ಎ ಮತ್ತು ಎಂ ಎ ಪದವಿಯಲ್ಲಿ 45ರಷ್ಟು ಶೇಕಡ  ಪಲಿತಾಂಶವನ್ನು ಪಡೆದ ಆಸಕ್ತರು ಮೈಸೂರಿನ ಜೈನ ಶಾಸ್ತ್ರ ವಿಭಾಗದಲ್ಲಿ ಅಧ್ಯಾಯನ ಮಾಡಬಹುದಾಗಿದೆ. ಈ ವಿಷಯವನ್ನು ನೀವು ತಿಳಿದು ನಿಮ್ಮವರಿಗು ತಿಳಿಸಿ. ಏಕೆಂದರೆ ಜೈನ ಶಾಸ್ತ್ರದ ಬಗ್ಗೆ ಪ್ರೋತ್ಸಹ ನೀಡುವುದು ಜೈನರಾದ ನಮ್ಮವರ ಕರ್ತವ್ಯವಾಗಿದೆ.

ಶ್ರೀ ಶ್ರೀ 1008 ನೇಮಿನಾಥ ತೀರ್ಥಂಕರ ದಿಗಂಬರ ಜೈನ ಮಂದಿರ ಕಮಲ ಬಸದಿ, 816ರ ಪ್ರತಿಷ್ಠಾಪನಾ ವರ್ದಂತಿ ಕಾರ್ಯಕ್ರಮ ಪರಮ ಪೂಜ್ಯ ವಾತ್ಸಲ್ಯವಾರಿದಿ 108 ಆಚಾರ್ಯ ಶ್ರೀ ವರ್ಧಮಾನ ಸಾಗರ ಜಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ದಿನಾಂಕ 25-12-2020ರಂದು ನಡೆಯಲಿದೆ. ಸ್ಥಳ : ಕಮಲ ಬಸದಿ, ಕೋಟೆ ಆವರಣ, ಬೆಳಗಾವಿ.

ಜಿನ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ನಡೆದಿದ್ದ ಅಹಿಂಸ ಸಮ್ಮೇಳನ ವಿವಿಧ ರೀತಿಯ ಸಫಲತೆಯನ್ನು ಕಂಡಿತ್ತು.

ಯಶಸ್ವಿಯಾಗಿ ನಡೆದ ಅಹಿಂಸಾ ಸಮ್ಮಿಲನ 2020. ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ ಪುಟದ ಸಹಭಾಗಿತ್ವದೊಂದಿಗೆ ಭಾನುವಾರ ಆನ್ ಲೈನ್ ಮೂಲಕ  ಅಹಿಂಸಾ ಸಮ್ಮಿಲನ ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮವನ್ನು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣದ ಅಧ್ಯಕ್ಷರಾದ ಡಾ|| ಎಂ ಮೋಹನ್ ಆಳ್ವಾ ಉದ್ಘಾಟಿಸಿ ಹಿಡಿ ಜಗತ್ತು ಅಹಿಂಸೆಯನ್ನು ಪ್ರತಿಪಾದಿಸಿದಲ್ಲಿ ಜಗತ್ತಿನ ಕಲ್ಯಾಣ ಅತಿ ಬೇಗನೆ ಹಾಗುತ್ತದೆ. ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆಗಳಲ್ಲಿ ಹೆಚ್ಚು ಹೆಚ್ಚು ಹಾಗಬೇಕು ಎಂದರು. ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ವಿದಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪಟನ್ ಗಣೇಶ್  ಯುವ ಬ್ರಿಗೆಡ್ ನ ಸ್ಥಾಪಕರು ಖ್ಯಾತ ವಾಗ್ಮಿ ಚಕ್ರವರ್ತಿ ಸುಲಿಬೆಲೆ, ಐಕೋರ್ಟ್ ನ್ಯಾಯವಾದಿ ಪಿ ಪಿ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉತ್ತಮ ವಿಚಾರಗಳನ್ನು ತಿಳಿಸಿದರು. ಶ್ರೀ ಕ್ಷೇತ್ರ ಎನ್ ಆರ್ ಪುರ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನಾ ಭಟ್ಟಾರಕರ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಪಾವನ ಸಾನಿಧ್ಯವನ್ನು ವಹಿಸಿ ಆಶೀರ್ವಚನವನ್ನು ನೀಡಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ತುಳಸಿ ಹಾಗೂ ಜ್ಯೋತಿ ಬೆಳ್ತಂಗಡಿ ಮತ್ತು ಬಳಗದವರಿಂದ ಸ್ಯಾಕ್ಸಫೋನ್ ವಾಚನ ನಡೆಯಿತು. ಜಯಶ್ರೀ ಡಿ ಜೈನ್ ಹೊರನಾಡು ಪ್ರಾರ್ಥನೆ ನೆರವೇರಿಸಿದರು. ನಿಂಜನ್ ಜೈನ್ ಕುದ್ಯಾಡಿ ಸ್ವಾಗತಿಸಿ ಸುನೈನ್ ಜೈನ್ ಬೆಂಗಳೂರು ಪ್ರಸ್ತಾವನೆ ಗೈದರು. ದರ್ಶನ್ ಎಂ ಡಿ ವಂದಿಸಿದರು, ಶ್ವೇತ ಜೈನ್ ಮೂಡಬಿದ್ರೆ ನಿರೂಪಿಸಿದರೆ ಶ್ರೀ ಮನ್ಮ ಬಳ್ಳಾಲ್ ಶಾಂತಿ ಮಂತ್ರ ಪಠಣೆ ಮಾಡಿದರು.

ಕೆಲವೊಂದು ಹೊರರಾಜ್ಯದ ಸುದ್ದಿಗಳನ್ನು ಪ್ರಸ್ತುತ ಪಡಿಸುತ್ತಿದೇವೆ ನೋಡಿ ಬರೋಣ ಬನ್ನಿ.

ಮಿರತ್ನ ಶಾಂತಿಸಾಗರ ರೈಲ್ವೆ ಸ್ಟೆಷನ್ ರೋಡ್ನ ಜಿನಾಲಯ ಒಂದರಲ್ಲಿ ಕಳ್ಳತನ ನಡೆದಿದ್ದು ಲಕ್ಷಾಂತರ ಹಣ ಮತ್ತು ಮೂರ್ತಿಗಳು ಕಳವಾಗಿದೆ. ಘಟನೆಯ ದೃಶ್ಯಾವಳಿಗಳು ಸಿ ಸಿ ಟಿ ವಿ ಯಲ್ಲಿ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದು ಅತಿ ಶೀಘ್ರದಲ್ಲಿ ಕಳ್ಳರನ್ನು ಪತ್ತೆ ಹಚ್ಚುವ ನಿರಿಕ್ಷೇ ಇದೆ.

ಭಾರತೀಯ ಜೈನ್ ಮಿಲನ್ ಕೇಂದ್ರಿಯ ಕಾರ್ಯಾಲಯದ ವತಿಯಿಂದ 13-12-2020ರಂದು ದಿಲ್ಲಿಯಲ್ಲಿ ಅಯೋಜನೆ ಗೊಂಡಿದ್ದ ವರ್ಚುಲ್  ಮಹಾವೀರ ಸಂದೇಶ ಮಹಾ ರ‍್ಯಾಲಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ದೇಶದ ಹಲವೇಡೆಯಲ್ಲಿ ವಿರಾಂಗನೇಯರು ಪಾಲ್ಗೊಂಡಿದ್ದು. ರಾಷ್ಟ್ರೀಯ ಅಧ್ಯಕ್ಷರು ಸುರೇಶ್ ಜೈನ್  ಋತುರಾಜ್ ನರೇಂದ್ರ ಜೈನ್ ಸುರೇಂದ್ರ ಜೈನ್ ಜೆ ಕೆ ಜೈನ್ ಉಪಸ್ಥಿತರಿದು ಮಾತನಾಡಿದರು. ಐತಿಹಾಸಿಕ ದಾಖಲೆಯನ್ನು ಮಾಡಿದ ಈ ಮಹಾ ರ‍್ಯಾಲಿ ಕಾರ್ಯಕ್ರಮವು ಜಿನವಾಣಿ ಮತ್ತು ಹಲವಾರು ಚಾನಲ್ ಗಳಲ್ಲಿ ಪ್ರಸಾರಗೊಂಡಿತ್ತು.

ಮಧ್ಯ ಪ್ರದೇಶದ ಇಂದೋರ್ ಜೈನ ಸಮಾಜದಿಂದ ಜೈನ ಸಮಾಜದ ಬಂಧುಗಳ ಮನೆಯ ವಿವಾಹ ಕಾರ್ಯಕ್ರಮಗಳ ವ್ಯವಸ್ಥೆಯನ್ನು ಅಪೇಕ್ಷಿತರಿಗೆ ಸಮಾಜವೇ ಮಾಡಿಕೊಡಲ್ಲಿದು, 1,61,000 ಸಾವಿರ ರೂಪಾಯಿಗಳನ್ನು ಪಾವತಿಸಿದಲ್ಲಿ ಸಮಾಜದ ವತಿಯಿಂದ ಕೆಳಗಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಗಾರ್ಡನ್ ಪರಿಸರದಲ್ಲಿ ಮದುವೆ, 1 ಹಾಲ್ 8 ಕೋಣೆಗಳು, ಡೆಕೋರೇಷನ್, ಟೆಂಟ್, ಲೈಟ್, ಪುರೋಹಿತರು, ಬ್ಯಾಂಡ್, ಕುದುರೆ, ಬೆಳಿಗ್ಗೆ 100 ಜನರಿಗೆ ತಿಂಡಿ, ಆರತಕ್ಷತೆ ನಂತರ 200 ಜನರಿಗೆ ರಾಜ ಭೋಜನ, ಸಂಜೆ ಸೂರ್ಯಾಸ್ತಕ್ಕೆ ಮುನ್ನ 100 ಜನರಿಗೆ ಭೋಜನ ವ್ಯವಸ್ಥೆಯ ಉಸ್ತುವಾರಿಗೆ ಯುವ ಸಂಘ ಅಥವಾ ಮಹಿಳಾ ಸಂಘದ ಐವರ ತಂಡವನ್ನು ನೇಮಿಸಲಾಗುತ್ತದೆ. ರಾತ್ರಿ ಭೋಜನ ಮತ್ತು ಕಂದಮೂಲಗಳಿಗೆ ಅವಕಾಶ ಇರುವುದಿಲ್ಲಾ. ವಿವಾಹವು ಜೈನ ಪದ್ದತಿಯಂತೆ ನಡೆಸ ಬೇಕು.

ವಾರದ ಜೈನ ಸುದ್ದಿಗಳು ವೀಕ್ಷಸಿದ ನಿಮ್ಮಗೆಲ್ಲರಿಗೂ  ಧನ್ಯವಾದಗಳು

ಹೀಗೆ ಪ್ರತಿ ವಾರವು ವೀಕ್ಷಿಸುತಿರಿ, ವಾರದ ಜೈನ ಸುದ್ದಿಗಳು ಪ್ರತಿ ಶನಿವಾರ ರಾತ್ರಿ 07:30ಕ್ಕೆ ಸರಿಯಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್