ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಮಕ್ಕಳಲ್ಲಿ ಪ್ರತಿಭೆಗಳು ಹಾಗೂ ಅವರಲ್ಲಿರುವ ಧಾರ್ಮಿಕ ಆಸಕ್ತಿಯನ್ನು ಗುರುತಿಸಿ ಅವರನ್ನು ನಮ್ಮ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.
ಇವತ್ತು ನಮ್ಮೊಂದಿಗೆ ಅವನಿ ರವರು ಇದ್ದಾರೆ ಬನ್ನಿ ಅವರ ಒಂದು ಕಿರುಪರಿಚಯವನ್ನು ವಿ ಟಿ ಮುಖಾಂತರ ನೊಂಡಿಕೊಂಡು ಬರೋಣ.
ಅವನಿ ಬಿ ಅರ್ದಿ ಬೆಂಗಳೂರಿನ ವಿಪುಲ್ ಹಾಗೂ ಪ್ರತಿಭಾ ವಿ ಅರ್ದಿ ರವರುಗಳ ಪುತ್ರಿ 9 ವರ್ಷದ ಈಕೆ ಹಾಡುಗಾರಿಕೆ ಚಿತ್ರಕಲೆ ಮತ್ತು ಕ್ರಾಫ್ ನಲ್ಲಿ ಕೂಡ ಆಸಕ್ತಿ ಹೊಂದಿದ್ದಾಳೆ. ಈಕೆ ಲಾಕ್ ಡೌನ್ ಪಿರ್ಯಡ್ ನಲ್ಲಿ ತನ್ನ ಧಾರ್ಮಿಕ ಆಸಕ್ತಿ ಬೆಳೆಸಿಕೊಳ್ಳುತಿರುವುದಲ್ಲೆದೆ, ಅದನ್ನು ಬಹಳ ಖುಷಿಯಿಂದ ಮುಂದುವರೆಸುತ್ತಿದ್ದಾಳೆ. ಬನ್ನಿ ವೀಕ್ಷಕರೆ ಇವಳ ಚಿಗುರೊಡೆಯುತ್ತಿರುವ ಆಸಕ್ತಿಗೆ ಪ್ರೊತ್ಸಾಹಿಸೋಣ.
ನಿರೂಪಕರು :- ಜೈ ಜಿನೇಂದ್ರ ಅವನಿ ಕಾರ್ಯಕ್ರಮಕ್ಕೆ ಸ್ವಾಗತ.
ಅವನಿ ಬಿ ಅರ್ದಿ :- ಜೈ ಜಿನೇಂದ್ರ.
ನಿರೂಪಕರು :- ಅವನಿ ರವರೆ ನೀವು ಹೇಳುವ ಭಕ್ತಾಂಬರದ ಮೂಲಕ ಕಾರ್ಯಕ್ರಮವನ್ನು ಶುರುಮಾಡೊಣ. ಮೊದಲು ನೀವು ಭಕ್ತಾಂಬರದ 9ನೇ ಶ್ಕೋಕವನ್ನು ಹೇಳುತ್ತೀರ.
(ಅವನಿ ಬಿ ಅರ್ದಿ ರವರು 9ನೇ ಭಕ್ತಾಂಬರ ಶ್ಕೋಕವನ್ನು ಹೇಳಿದರು).
ನಿರೂಪಕರು :- ಅವನಿ ರವರೆ ತುಂಬ ಸ್ಪಷ್ಟವಾಗಿ ಭಕ್ತಿಯಿಂದ ಹೇಳಿದ್ದಿರ, ನಾವು ಬಸದಿಗೆ ಹೋದಾಗ ದರ್ಶನ ಸ್ತುತಿಯನ್ನು ಹೇಳುತ್ತೀವಿ, ಹಾಗೆ ನೀವು ತುಂಬ ಚೆನ್ನಾಗಿ ದರ್ಶನ ಸ್ತುತಿಯನ್ನು ಹೇಳುತ್ತೀರ ಅಂತ ಗೊತ್ತಾಯಿತು.
(ಅವನಿ ಬಿ ಅರ್ದಿ ರವರು ದರ್ಶನ ಸ್ತುತಿಯನ್ನು ಹೇಳಿದರು).
ನಿರೂಪಕರು :- ಅದ್ಬುತ ತುಂಬಾ ಚೆನ್ನಾಗಿ ಹೇಳುತ್ತೀರ, ನಿಮ್ಮ ವಿ ಟಿ ಯನ್ನು ನೋಡಿದೆ ನೀವು ಕರಾಟೆ ಚಾಂಪಿಯನ್ ಅಂತ ಗೊತ್ತಾಯಿತು, ನೀವು ಕರಾಟೆಯಲ್ಲಿ ಹಳದಿ ಬೆಲ್ಟ್ ತೆಗೆದು ಕೊಂಡಿದ್ದೀರಂತ, ನಿಮಗೆ ಕರಾಟೆಯನ್ನು ಕಲಿಯಲು ಯಾರು ಇನ್ಸ್ಪಿರೇಶನ್ ಹಾಗೆ ನೀವು ಬಂದ ಹಾದಿ ಯಾವ ರೀತಿ ಇತ್ತು.
ಅವನಿ ಬಿ ಅರ್ದಿ :- ಹೌದು ನಾನು ಕರಾಟೆಯಲ್ಲಿ ಹಳದಿ ಬೆಲ್ಟ್ ತೆಗೆದು ಕೊಂಡಿದೀನಿ ಅದರೆ ನಾನು ಕರಾಟೆ ಚಾಂಪಿಯನ್ ಅಲ್ಲಾ, ಕರಾಟೆ ಕಲಿಯಲು ನಮ್ಮ ಅಪ್ಪ ಅಮ್ಮನೇ ಸ್ಪೂರ್ತಿ ನನ್ನ ಕರಾಟೆ ಜರ್ನಿ ತುಂಬಾ ಕಠಿಣ ಆದರೂ ತುಂಬಾ ಚೆನ್ನಾಗಿದೆ.
ನಿರೂಪಕರು :- ವೆರಿ ಗುಡ್ ನೀವು ಇನ್ನೂ ಕರಾಟೆಯಲ್ಲಿ ಮುಂದುವರೆದು ಇನ್ನೂ ಉತ್ತಮ ಸ್ಥಾನ ದೊರೆಯಲ್ಲಿ ಎಂದು ನಾವು ಆಶಿಸೋಣ. ನೀವು ತುಂಬಾ ಚೆನ್ನಾಗಿ ಜಿನ ಭಕ್ತಿಗೀತೆಯನ್ನು ಹಾಡುತ್ತೀರ ಅಂತ ಗೊತ್ತಾಯಿತು, ನೀವು ನಮಗಾಗಿ ಒಂದು ಜಿನ ಭಕ್ತಿ ಗೀತೆಯನ್ನು ಹಾಡುತ್ತೀರ.
(ಅವನಿ ಬಿ ಅರ್ದಿ ರವರು ಜಿನ ಭಕ್ತಿ ಗೀತೆಯನ್ನು ಹಾಡಿದರು).
ನಿರೂಪಕರು :- ತುಂಬ ಚೆನ್ನಾಗಿ ಮತ್ತು ಮಧುರವಾಗಿ ಹಾಡಿದ್ದೀರಿ, ನೋಡಿದಿರಲ್ಲವ ವೀಕ್ಷಕರೆ ಈ ಹುಡುಗಿಯಲ್ಲಿ ಎಷ್ಟೇಲ್ಲಾ ಪ್ರತಿಭೆಗಳು ಕರಾಟೆಯಲ್ಲಿ ಕೂಡ ಚಾಂಪಿಯನ್ ಹಾಗೂ ಧಾರ್ಮಿಕ ವಿಚಾರದಲ್ಲಿ ಕೂಡ ಸೈ ಇದೆ ರೀತಿ ಮುಂದುವರೆಯುತ್ತಾ ಇನ್ನೂ ಹೆಚ್ಚು ಸಾಧನೆಗಳನ್ನು ಮಾಡಿ ಎಂದು ಆಶಿಸುತ್ತೇವೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಧನ್ಯವಾದಗಳು. ಜೈ ಜಿನೇಂದ್ರ.
ಈಗ ನಿಮ್ಮ ಮುಂದೆ ಧರ್ಮದ ಪಾಠ ಪ್ರಸಾರವಾಗಲ್ಲಿದೆ ಧರ್ಮದ ಪಾಠವನ್ನು ಕೇಳಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಈ ಕೂಡಲೇ ವಾಟ್ಸ್ ಆ್ಯಪ್ ಮಾಡಿ.
‘ಧರ್ಮದ ಕುಡಿ’
ಧರ್ಮದ ಬೆಳೆ ಬಿತ್ತೋಣ
‘ಧರ್ಮ ಪಾಠ’
ಧೀರಜ್ ಜೈನ್, ಹೊಳೆನರಸಿಪುರ.
ಜೈ ಜಿನೇಂದ್ರ ಮಕ್ಕಳೆ ಜ್ವಾಲಮಾಲ ಡಾಟ್ ನ್ಯೂಸ್ ಸಮರ್ಪಿಸುವ ಜೈನ ಧಾರ್ಮಿಕ ಪಾಠ ಮಾಲಿಕೆ ಕಾರ್ಯಕ್ರಮಕ್ಕೆ ನಿಮ್ಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ.
ಕಳೆದ ಸಂಚಿಕೆಗಳಲ್ಲಿ ನಾವು ಅಭಿನಂದನ ತೀರ್ಥಂಕರರ ಬಗ್ಗೆ ತಿಳಿದು ಕೊಂಡಿದೆವು, ಇಂದಿನ ಸಂಚಿಕೆಯಲ್ಲಿ ಮುಂದುವರೆಸುತ್ತಾ ವರ್ತಮಾನ ಕಾಲದ ಐದನೇ ತೀರ್ಥಂಕರರಾದ ಸುಮತಿನಾಥ ತೀರ್ಥಂಕರರ ಬಗ್ಗೆ ತಿಳಿದುಕೋಳ್ಳಣ. ಅವರ ವೈಶಿಷ್ಟ್ಯ ಅವರ ಗುಣಗಳು ಮತ್ತ ಅವರ ತಪಸ್ಸಿನ ಬಗ್ಗೆ ತಿಳಿದುಕೊಳ್ಳೋಣ.
ಸುಮತಿನಾಥ ತೀರ್ಥಂಕರರು ಹುಟ್ಟಿದ್ದು ಅಯೋಧ್ಯೆಯಲ್ಲಿ. ಮೇಘರಥ ಮತ್ತು ಸುಮಂಗಲ ದೇವಿ ಎನ್ನುವ ರಾಜ ಮತ್ತು ರಾಣಿಯ ಮಗನಾಗಿ ಸುಮತಿನಾಥ ತೀರ್ಥಂಕರರು ಜನ್ಮವನ್ನು ತಾಳುತ್ತಾರೆ. ಸುಮಾರು 300 ಬಿಲ್ಲುಗಳಷ್ಟು ಎತ್ತರ ಅಂದರೆ ಸುಮಾರು 1400 ಮೀ ನಷ್ಟು ಎತ್ತರವಿರುತ್ತಾರೆ. 40ಲಕ್ಷ ಆಯಸ್ಸು ಹೊಂದಿರುತ್ತಾರೆ. ನಾವು ಇಲ್ಲಿ ಗಮನಿಸಿದರೆ ಮೊದಲನೇ ತೀರ್ಥಂಕರರಿಗೂ ಮತ್ತು ನಾವು ತಿಳದುಕೊಳ್ಳುತ್ತೀರುವ ಐದನೇ ತೀರ್ಥಂಕರರಾದ ಸುಮತಿನಾಥ ತೀರ್ಥಂಕರರವರೆಗೂ ಆಯಸ್ಸು ಕಡಿಮೆಯಾಗುತ್ತಾ ಬರುತ್ತಿದೆ. ಕಾಲ ದೋಷದ ಪರಿಣಾಮ ತೀರ್ಥಕರರ ಆಯಸ್ಸು ಕಡಿಮೆಯಾಗುತ್ತಾ ಬರುತ್ತಿದೆ.
ಅನೇಕ ವರ್ಷಗಳ ಕಾಲ ರಾಜ್ಯಭಾರವನ್ನು ಮಾಡುತ್ತಾರೆ, ಬಹಳ ಸುಖವಾಗಿ ಜೀವನ ನಡೆಸುತ್ತ ಇರುತ್ತಾರೆ. ಅವರಿಗೆ ವೈರಾಗ್ಯ ಬರಲು ಅಂತಹ ಯಾವುದೇ ನಿಮ್ಮಿತ ವಿರಲಿಲ್ಲಾ ಅವರಿಗೆ ಅವರ ತಂದೆ ತಾಯಿ ನೀಡಿರುವಂತಹ ಸುಸಂಸ್ಕಾರದಿಂದ ಆತ್ಮ ಮತ್ತು ಶರೀರದ ಚಾರಿತ್ರಾತ್ಮಕ ವಿಷಯಗಳು ಮತ್ತು ಆತ್ಮದ ಒಂದು ಸ್ವರೂಪವನ್ನು ತಿಳಿದಾಗ ಆತ್ಮದ ಮೋಕ್ಷ ಕಲ್ಯಾಣವಾಗಬೇಕು ಎನ್ನುವುದು ಪುಣ್ಯವಾದಂತಹ ಕೆಲಸ ಎಂದು ಸನ್ಯಾಸತ್ವವನ್ನು ತೆಗೆದುಕೊಂಡು ಮುನಿ ದೀಕ್ಷೆಯನ್ನು ಪಡೆಯುತ್ತಾರೆ.
ಮುನಿ ದೀಕ್ಷೆಯ ನಂತರ ಆರು ದಿನಾ ಉಪವಾಸ ಮತ್ತು ಕಠಿಣ ಧ್ಯಾನವನ್ನು ಮಾಡುತ್ತಾರೆ ನಂತರ ಸೌಮಸ ನಗರಕ್ಕೆ ಬಂದು ಪದ್ಮರಾಜ ಎನ್ನುವಂತಹ ಒಬ್ಬ ಶ್ರಾವಕರಿಂದ ಆಹಾರವನ್ನು ಗ್ರಹಣೆಯನ್ನು ಮಾಡುತ್ತಾರೆ, ಅಂದರೆ ಮುನಿಯಾಗಿ ಪ್ರಪ್ರಥಮವಾಗಿ ಆಹಾರವನ್ನು ಗ್ರಹಣೆಯನ್ನು ಮಾಡುತ್ತಾರೆ. ಸುಮತಿನಾಥ ತೀರ್ಥಂಕರರ ಇನ್ನೊಂದು ವಿಶೇಷತೆ ಏನ್ನು ಎಂದರೆ ಅವರಿಗೆ ಸ್ವತಃ ಸೌಧರ್ಮೆಂದ್ರ ಇಂದ್ರ ಪರಿವಾರದವರೆ ಸುಮತಿನಾಥ ಎನ್ನುವ ಹೆಸರನ್ನು ಸೂಚಿಸಿದ್ದಾರೆ ಎನ್ನುವುದು ವಿಶೇಷ. ಸುಮಾರು 20ವರ್ಷಗಳ ವರೆಗೆ ಮೌನಾಚರಣೆಯನ್ನು ಮಾಡುತ್ತಾರೆ. ಸಂವೇದ ಪರ್ವತದ ಅವಿಚಲ ಕೂಟದಲ್ಲಿ ನಿರ್ವಾಣವನ್ನು ಹೊಂದಿ ಸಿದ್ದ ಪರಿಮೇಷ್ಟಿಗಳಾಗುತ್ತಾರೆ.
ಸುಮತಿನಾಥ ತೀರ್ಥಂಕರರ ಲಾಂಛನ ಚಕ್ರವಾಕ. ಚಕ್ರವಾಕ ಎನ್ನುವುದು ಒಂದು ಪಕ್ಷಿ. ಸುಮತಿನಾಥ ತೀರ್ಥಂಕರರ ಯಕ್ಷ ತುಂಬುರು ಮತ್ತು ಯಕ್ಷಿಣಿ ವಜ್ರಾಂಕುಶೆ. ಇದು ಸುಮತಿನಾಥ ತೀರ್ಥಕರರ ವೈಶಿಷ್ಟ್ಯ. ಮುಂದಿನ ಸಂಚಿಕೆಯಲ್ಲಿ ಮುಂದಿನ ತೀರ್ಥಂಕರರ ಬಗ್ಗೆ ತಿಳಿದುಕೊಳ್ಳೋಣ ಮತ್ತು ಜೈನ ಧರ್ಮದ ಬಗ್ಗೆ ಹೆಚ್ಚು ಆಸಕ್ತಿಯನ್ನು ಬೆಳೆಸೋಣ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ.
ಜೈ ಜಿನೇಂದ್ರ
ಈ ವಾರದ ಪ್ರಶ್ನೆಗಳು
- ಹಿಂದಿನ ಪಾಠದಲ್ಲಿ ಏನನ್ನು ತಿಳಿದುಕೊಂಡಿರಿ?
- ಸುಮತಿನಾಥರು ಎಲ್ಲಿ ಜನಸಿದರು?
- ಅವರ ಆಯಸ್ಸು ಮತ್ತು ಎತ್ತರ ಎಷ್ಟು?
- ಅವರಿಗೆ ಮೊದಲ ಆಹಾರ ನೀಡಿದ ರಾಜ ಯಾರು?
- ಕೇವಲ ಜ್ಞಾನ ಎಲ್ಲಿ ಯಾವ ವೃಕ್ಷದಡಿ ಪ್ರಾಪ್ತವಾಯಿ?
ವೀಕ್ಷಕರೆ ಮುಂದಿನ ಭಾನುವಾರ ಬೆಳಗ್ಗೆ ಸರಿಯಾಗಿ 10:30ಕ್ಕೆ ನಿಮ್ಮ ಮುಂದೆ ಮತ್ತೊಂದು ಪುಟ್ಟ ಪ್ರತಿಭೆಯೊಂದಿಗೆ ನಾನು ಬರುತ್ತೇನೆ ಅಲ್ಲಿಯವರೆಗೂ ನೀವು ನೋಡುತ್ತಾಯಿರಿ ಜ್ವಾಲಮಾಲ ನ್ಯೂಸ್.
ಜೈ ಜೀನೆಂದ್ರ,
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













