ಜೈ ಜಿನೇಂದ್ರ ವೀಕ್ಷಕರೆ, ಧಾರ್ಮಿಕ ಭೋದನೆಗಳು ಚಿಂತನೆಗಳು ಕಾರ್ಯಕ್ರಮಗಳು ಹಾಗೂ ಇದರ ಮೌಲ್ಯಯುತ ಪ್ರಚಾರ ಇವುಗಳನ್ನ ನೊಳಗೊಂಡ ಧಾರ್ಮಿಕ ಸುದ್ದಿ ಸೌವೋಚ್ಚಯ ವಾರದ ಜೈನ ಸುದ್ದಿ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಸ್ವಾಗತ.
ಮುಖ್ಯಾಂಶಗಳು :-
ಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮ.
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು.
ರಾಯಭಾಗದ ಜಿನವಾಣಿ ಮಹಿಳಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾವೇಶ.
ಅಂತರಾಷ್ಟ್ರೀಯ ಜಿನ ಸಮ್ಮಿಲನ ಆನ್ ಲೈನ್ ಕಾರ್ಯಕ್ರಮ.
ಇತ್ತೀಚಿಗೆ ಜಾಲತಾಣಗಳಲ್ಲಿ ಜೈನ ಧರ್ಮದ ಬಗೆಗಿನ ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಪ್ರತಿಭಟನೆ.
ಕೆಂಗೇರಿ ಜೈನ್ ಮಿಲನ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ.
ಹಂಪನಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರಾಗಿ ಆಯ್ಕೆ.
ಸುದ್ದಿಗಳ ವಿವರ:-
ಕಾರ್ತಿಕಮಾಸ ಎಲ್ಲೆಲ್ಲೂ ದೀಪೊತ್ಸವಗಳ ಮೇಳ ಈ ಮಾಸದಲ್ಲಿ ರಾಜ್ಯದ ಹಲವೆಡೆಗಳ ಲಕ್ಷ ದೀಪೋತ್ಸವಗಳ ವರದಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೇವೆ.
ಮೈಸೂರಿನ ಶ್ರೀ ಕೋಟೆ ಶಾಂತಿನಾಥ ಸ್ವಾಮಿ ಬಸದಿ ಪದ್ಮಶ್ರೀ ಜೈನ ಮಹಿಳಾ ಸಮಾಜ ವತಿಯಿಂದ ದಿಗಂಬರ ಜೈನ ಸಮಾಜ ಮತ್ತು ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ ಸಹಕಾರದೊಂದಿಗೆ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ವೈಭವವಾಗಿ ಕಂಗೊಳಿಸಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಅವುಗಳಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸಂವತ್ಸರಣ ಪೂಜೆಯ ಸುದ್ದಿಯನ್ನು ನಿಮಗಾಗಿ ತಂದಿದ್ದೇವೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೂತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸರ್ವಧರ್ಮ ಸಮ್ಮೇಳನ ದಿನಾಂಕ 13-12-2020ರಂದು ಮಾನ್ಯ ಸಚಿವ ಸೋಮಣ್ಣನವರ ಉದ್ಘಾಟನೆಯೊಂದಿಗೆ ಪರಮ ಪೂಜ್ಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ಯವರ ಅಧ್ಯಕ್ಷತೆಯಲ್ಲಿ ಹಾಗೂ ಪೂಜ್ಯ ಶ್ರೀ ಕಾವಂದರ ನೇತೃತ್ವದಲ್ಲಿ ನಡೆಯಿತು.
ಡಾ|| ಡಿ ವೀರೇಂದ್ರ ಹೆಗ್ಗಡೆ ಯವರು ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅಧ್ಯಕ್ಷರಾದ ಪರಮ ಪೂಜ್ಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ಯವರ ಧರ್ಮ ಸಮ್ಮೇಳನ ಮತ್ತು ಧರ್ಮವನ್ನು ಕುರಿತು ಮಾತನಾಡಿದರು.
ಧರ್ಮಸ್ಥಳದಲ್ಲಿ ಸಂವತ್ಸರಣ ಪೂಜೆ ತೀರ್ಥಂಕರರು ತಮ್ಮ ದಿವ್ಯ ದ್ವನಿಯ ಮೂಲಕ ಧರ್ಮೋಪದೇಶ ನೀಡುವ ಧಾರ್ಮಿಕ ಸಭೆಗೆ ಸಂವತ್ಸರಣ ಎನ್ನುತ್ತಾರೆ. ಇಲ್ಲಿ ಸಕಲ ಪ್ರಾಣಿ ಪಕ್ಷಿಗಳಿಗೂ ಸರ್ವಧರ್ಮಿಯರಿಗೂ ಅವರವರ ಭಾಷೆಯಲ್ಲಿ ಧರ್ಮೋಪದೇಶ ಕೇಳುವ ಅವಕಾಶವಿದೆ. ಜೈನ ಆರಾಧನ ಕೇಂದ್ರಗಳಾದ ಬಸದಿಗಳು ಈ ಸಂವತ್ಸರಣ ಪ್ರತೀಕವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಸಂವತ್ಸರಣ ಪೂಜೆ ನಡೆಯಿತು.
ಶಶೀರ್ ಇಂದ್ರನ ನೇತೃತ್ವದಲ್ಲಿ ಅಷ್ಟವಿಧಾರ್ಚನೆ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನವು ನಡೆದವು. ಸೌಮ್ಯ, ಸಾವಿತ್ರಿ, ಮಂಜುಳ, ಮತ್ತು ಅಭಿಜ್ಞ ಅವರು ಭಜನೆ ಸ್ತೋತ್ರ ಹಾಗೂ ಪೂಜಾ ಮಂತ್ರ ಪಠಣ ಮಾಡಿದರು. ಎಸ್ ಡಿ ಎಂ ತಂಡದ ತೃಪ್ತ ಜೈನ್, ಸುಮನ್ ಜೈನ್, ಸಂಯುಕ್ತ ಜೈನ್, ರಂಜಿತ್ ಮತ್ತು ವಿನ್ಯಾಸ್ ಜೈನ್ ಬಳಗದವರು ಸುಶ್ರಾವ್ಯವಾಗಿ ಜಿನ ಭಜನೆಗಳನ್ನು ಹಾಡಿದರು. ಬಾಹುಬಲಿ ಸೇವಾ ಸಮಿತಿ ಸದಸ್ಯರು ಸಹಕರಿಸಿದರು. ಮಹಾಮಂಗಳಾರತಿ ಮತ್ತು ಶಾಂತಿ ಮಂತ್ರದ ಪಠಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಧರ್ಮ ಸ್ಥಳ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆ, ಡಿ ಸುರೇಂದ್ರ ಕುಮಾರ್, ಅನಿತ ಸುರೇಂದ್ರ ಕುಮಾರ್, ಡಿ ಹರ್ಷೇಂದ್ರ ಕುಮಾರ್, ಸುಪ್ರಿಯ ಹರ್ಷೇಂದ್ರ ಕುಮಾರ್, ಡಾ|| ಯಶೋವರ್ಮ, ಶ್ರದ್ದ ಅಮಿತ್, ಶ್ರತ ಮೈತ್ರಿ, ಡಿ ಶ್ರೇಯಸ್ ಕುಮಾರ್, ಡಿ ನಿಶ್ಚಲ್ ಕುಮಾರ್ ಮತ್ತು ಮಹಾನಿಲಯದ ಮೋಹನ್ ದಾಸ್ ಸ್ವಾಮೀಜಿ ಉಪಸ್ಥಿತರಿದ್ದರು. ಉಜ್ಜಿರೆಯ ಮಹಾವೀರ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಕವಿ ಸಮ್ಮಿಲನ ರೈತ ಸಮ್ಮಿಲನದಂತಹ ಅನೇಕ ಅಭೂತ ಪೂರ್ವ ಕಾರ್ಯಕ್ರಮಗಳೊಂದಿಗೆ ಕಾಲ ಸಮ್ಮಿಲನವೇ ಸುಹಾಸ್ತಿ ಯುವ ಜೈನ್ ಮಿಲನ್ ವತಿಯಿಂದ ನಡೆಯಿತು.
ಜಿನ ಸಮ್ಮಿಲನ ಅಂತರಾಷ್ರ್ಟೀಯ ಜಿನ ಸಮ್ಮಿಲನ 2020ಕ್ಕೆ ಕ್ಷಣ ಗಣನೆ ಆರಂಭ ಭಾರತೀಯ ಜೈನ್ ಮಿಲನ್ ವಲಯ ಎಂಟರ ನೇತೃತ್ವದಲ್ಲಿ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ ಪುಟದ ಅಮೋಘ ಅಯೋಜಕತ್ವದಲ್ಲಿ ಇದೇ ಡಿಸೆಂಬರ್ 20ನೇ ಭಾನುವಾರ ಮುಂಜಾನೆ 9 ಗಂಟೆ ಯಿಂದ ಸಂಜೆ 5 ಗಂಟೆಯ ವರೆಗೆ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ ಪುಟದಲ್ಲಿ ನೇರ ಪ್ರಸಾರ ಗೊಳ‍್ಳಲ್ಲಿರುವ ಹಾಗೂ ವಿವಿಧ ಧಾರ್ಮಿಕ ಜಾಲತಾಣದಲ್ಲಿ ಮೂಡಿಬರುವ ಜನ ದಂಗಳದ ಜನ ಧರ್ಮೀಯರ ಅಪೂರ್ವ ಸಮ್ಮಿಲನವೇ ಅಂತರಾಷ್ಟ್ರೀಯ ಜಿನ ಸಮ್ಮಿಲನ 2020 ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರ ಸಹಿತ ಸಮಾಜದ ದೇಶ ವಿದೇಶದ ಹಲವು ಗಣ್ಯರ ಭಾಗವಹಿಸುವಿಕೆಯಿಂದ ಹಲವಾರು ಗೋಷ್ಠಿಗಳ ಸಹಿತ ಜರುಗಲ್ಲಿರುವ ಈ ಕಾರ್ಯಕ್ರಮವನ್ನು ಸಹಧರ್ಮ ಬಂಧುಗಳು ವೀಕ್ಷಿಸುವು ಮುಖಾಂತರ ಸಾಕ್ಷಿಕರಿಸ ಬೇಕೆಂದು ವಿನಂತಿ.
ಭಾರತೀಯ ಜೈನ್ ಮಿಲನ್ ವಲಯ ಎಂಟು ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು, ಕರ್ನಾಟಕ ಜೈನ ಧರ್ಮ ಫೇಸ್ ಬುಕ್ ಪುಟದಲ್ಲಿ.
ಜಾಹೀರಾತು.
ರಾಯಬಾಗ ತಾಲ್ಲೂಕಿನ ಜಿನವಾಣಿ ಮಹಿಳಾ ಮಂಡಳಿ ವತಿಯಿಂದ ಆರನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮೂಡುಬಿದ್ರೆ ಶ್ರೀಗಳ ಆಶೀರ್ವಾದದೊಂದಿಗೆ ಯಶಸ್ವಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.
ಇತ್ತೀಚಿಗೆ ಜಾಲತಾಣಗಳಲ್ಲಿ ಪ್ರಕಟವಾದ ಜೈನ ಧರ್ಮದ ಬಗೆಗಿನ ಹಾಗೂ ಧರ್ಮದ ಮುನಿಗಳ ಬಗೆಗಿನ ಅವಹೇಳನಕಾರಿ ಹೇಳಿಕೆಯ ವಿರುದ್ದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ.
ನೆನ್ನೆಯಿಂದ ಫೇಸ್ ಬುಕ್ ನಲ್ಲಿ ಜೈನ ಧರ್ಮದ ಬಗ್ಗೆ ಜೈನ ಮುನಿ ಪರಂಪರೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವುದನ್ನು ಗಮನಿಸಿ ಹಾಗೂ ಇದನ್ನು ಖಂಡಿಸಿ ಮೂಡುಬಿದ್ರೆ ಜೈನ್ ಮಿಲನ್ ಹಾಗೂ ಯುವ ಜೈನ್ ಮಿಲನ್ ಮೂಡುಬಿದ್ರೆ ಮತ್ತು ಜೈನ ಧರ್ಮಿಯರು ಮೂಡುಬಿದ್ರೆ ಪೋಲಿಸ್ ಠಾಣೆಗೆ ಧರ್ಮದ ಬಗ್ಗೆ ಶಾಂತಿನೆಮ್ಮದಿ ಕೆದಕಿ ಸಮಾಜದ ಸ್ವಾಸ್ಥ್ಯ ಕದಡುವಂತಹ ಪ್ರಯತ್ನ ಹಾಗೂ ಧಾರ್ಮಿಕ ಭಾವನೆಗೆ ಧಾರ್ಮಿಕ ಸ್ವತಂತ್ರಕ್ಕೆ ಧಕ್ಕೆ ತರುವಂತವರ ವಿರುದ್ಧ ಕ್ರಮಕೈಗೊಳ ಬೇಕೆಂದು ದೂರು ಸಲ್ಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಅರೋಪಿಯನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿರುತ್ತಾರೆ. ಅದೇ ರೀತಿ ಪಡಂಗಡಿ ಪಾರ್ಶ್ವಪದ್ಮ ಯುವ ಜನ ಸಂಘದವರು ಕೂಡ ಬೆಳ್ತಂಗಡಿ ಪೋಲಿಸ್ ಠಾಣೆಗೆ ಸಮಾಜದಲ್ಲಿ ಅಶಾಂತಿ ದೊಂಬಿ ಗಲಾಟೆಗೆ ಪ್ರಚೋದಿಸಿ ಸಮಾಜದ ಸ್ವಾಸ್ಥ್ಯ ಕದಡುವಂತಹ ಪ್ರಯತ್ನ ಹಾಗೂ ಜೈನ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿರುವಂತವರ ವಿರುದ್ಧ ಅರೋಪಿಯನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ‍್ಳ ಬೇಕಾಗಿದೆ ಎಂದು ಸಲ್ಲಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಐದು ಜನರನ್ನು ಗೌರವ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು ಅದರಲ್ಲಿ ನಮ್ಮ ಸಮುದಾಯದ ಹೆಮ್ಮೆಯ ನಾಡೋಜ ಹಂಪನಾ ರವರು ಆಯ್ಕೆಯಾಗಿದ್ದಾರೆ. ಅವರಿಗೆ ಜ್ವಾಲಮಾಲ ಅಭಿನಂದನೆಯನ್ನು ತಿಳಿಸುತ್ತದೆ. ಅವರ ಬಾಬಾ ಸಾಹೇಬ ಮತ್ತು ಎನ್ನುವ ಮಕ್ಕಳ ಕಥೆಗಳ ಪುಸ್ತಕ ಬಿಡುಗಡೆಯಾಗಿದ್ದು ಈ ವಿಷಯವಾಗಿ ಕೂಡ ಅಭಿನಂದನೆ ತಿಳಿಸುತ್ತೇವೆ. ಮೂಡುಬಿದ್ರೆ ಶ್ರೀಗಳು ಕೂಡ ಪುಸ್ತಕಗಳ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈಗ ಪ್ರಕಟಣೆಯ ಸಮಯ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಅತಿಶಯ ಕ್ಷೇತ್ರ ಕಂಬದ ಹಳ್ಳಿಯ ಕಂಬದ ಮೇಲಿನ ಶ್ರೀ ಬ್ರಹ್ಮ ದೇವರ ಹಾಗೂ ಶ್ರೀ ಆದಿನಾಥ ತೀರ್ಥಂಕರರ ವಾರ್ಷಿಕ ಪೂಜಾ ಮಹೋತ್ಸವವು ದಿನಾಂಕ 08-01-2021ರಿಂದ ದಿನಾಂಕ 17-01-2021ರವರೆಗೆ ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನೆರವೇರಲಿದೆ.
ಭಗವಾನ್ ಶ್ರೀ 1008 ಶೀತಲನಾಥ ತೀರ್ಥಂಕರರರು ಹಾಗೂ ಭಗವಾನ್ ಶ್ರೀ 1008 ಬಾಹುಬಲಿ ಸ್ವಾಮಿಯವರ ಮಹಾ ಮಸ್ತಾಕಾಭಿಷೇಕ ಮತ್ತು ಶ್ರೀ ಕೊಂಡಿ ಬ್ರಹ್ಮ ದೇವರ 126ನೇ ವಾರ್ಷಿಕ ಪೂಜಾ ಮಹೋತ್ಸವವು ದಿನಾಂಕ 23-01-2021 ನೇ ಶನಿವಾರ ಹಾಗೂ 24-01-2021ನೇ ಭಾನುವಾರದಂದು ಕರ್ಮ ಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಶ್ರೀ ಕ್ಷೇತ್ರ ಜೈನ ಮಠ ಇವರ ಪಾವನ ಸಾನಿಧ್ಯದಲ್ಲಿ ನಡೆಯಲ್ಲಿದೆ.
ಕೇಂಗೆರಿ ಜೈನ್ ಮಿಲನ್ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜೂಮ್ ಮಿಟಿಂಗ್ ಮೂಲಕ ಅಚ್ಚುಕಟ್ಟಾಗಿ ಮೂಡಿಬಂತು.
ಸುಮಾರು ಮೂರು ದಿನಗಳಕಾಲ ನಮಗೆ ಈ ಜಾಲತಾಣದ ಬಗ್ಗೆ ಮಾಹಿತಿ ನೀಡಿ ತಿಳುವಳಿಕೆ ನೀಡಿ ಸಹಕರಿಸಿದ ವಿಭಾಗೀಯ ಕಾರ್ಯದರ್ಶಿಗಳಾದ ವೀರ್ ವಿಲಾಸ್ ಪಾಸಣ್ಣನವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಹಾಗೂ ಈ ಜಾಲತಾಣವನ್ನು ಜೈನ್ ಮಿಲನ್ ಗಾಗಿ ಸಿದ್ದಪಡಿಸಿ ಅದನ್ನು ಎಲ್ಲರಿಗೂ ಉಪಯುಕ್ತವಾಗುವಂತೆ ಮಾಡಿದ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷರಾದ ವೀರ್ ಧರ್ಮಸ್ಥಳ ಸುರೇಂದ್ರ ಕುಮಾರ್ ರವರಿಗೆ ಜಿನ ಭಜನ ರುವಾರಿಗಳು ಮತ್ತು ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾದ ವಿರಾಂಗನ ಅನಿತಾ ಸುರೇಂದ್ರ ಕುಮಾರ್ ರವರಿಗೆ ವಲಯ ಎಂಟರ ಅಧ್ಯಕ್ಷರಾದ ಪುಷ್ಪರಾಜ್ ರವರರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಬೆಂಗಳೂರು ವಿಭಾಗದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕುಮಾರಿ ಅನ್ವಿ ಎಂ ಜೈನ್ ಹಾಗೂ ಕುಮಾರಿ ಅವಿಶಿ ಎಂ ಜೈನ್ ರವರು ಮಧುರವಾಗಿ ಕನ್ನಡ ಗೀತೆಯನ್ನು ಹಾಡಿ ರಂಜಿಸಿದರು. ಮಧುರವಾಗಿ ಕನ್ನಡ ಗೀತೆಯನ್ನು ಹಾಡಿದ ಅದ್ವಿಕ್ ಎಂ ಜೈನ್ ರವರನ್ನು ಸಭೆ ಅಭಿನಂದಿಸಿತು.
ವಾರದ ಜೈನ ಸುದ್ದಿಗಳು ವೀಕ್ಷಸಿದ ನಿಮ್ಮಗೆಲ್ಲರಿಗು ಧನ್ಯವಾದಗಳು
ಹೀಗೆ ಪ್ರತಿ ವಾರವು ವೀಕ್ಷಿಸುತಿರಿ, ವಾರದ ಜೈನ ಸುದ್ದಿಗಳು ಪ್ರತಿ ಶನಿವಾರ ರಾತ್ರಿ 07:30ಕ್ಕೆ ಸರಿಯಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













