ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಮಕ್ಕಳಲ್ಲಿ ಬಾಲ್ಯದಿಂದಲೆ ಧಾರ್ಮಿಕ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸುವುದು ಅತಿ ಅವಶ್ಯಕ, ಆ ಪ್ರಯತ್ನದಲ್ಲಿ ಕೈ ಜೋಡಿಸಲು ನಡೆಸಲಾಗುತ್ತಿರುವ ನಮ್ಮ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.
ಇವತ್ತು ನಮ್ಮೊಂದಿಗೆ ನಮ್ಮ ಕಾರ್ಯಕ್ರಮದಲ್ಲಿ ಸ್ಥವನ್ ಪ್ರವಿಣ್ ಜೈನ್ ರವರು ಇದ್ದಾರೆ ಬನ್ನಿ ಅವರ ಒಂದು ಕಿರುಪರಿಚಯವನ್ನು ವಿ ಟಿ ಮುಖಾಂತರ ನೊಂಡಿಕೊಂಡು ಬರೋಣ.
ಸ್ಥವನ್ ಪ್ರವಿಣ್ ಜೈನ್ ಇವರ ವಯಸ್ಸು 13 ಇರುವುದು ಬಾಂಬೆಯಲ್ಲಿ, ಆದರೆ ಮೂಲತಃ ಮೂಡುಬಿದ್ರೆಯವರು ಇವನ ತಂದೆ ಪ್ರವೀಣ್ ಚಂದ್ರ ತಾಯಿ ಅನಿತಾ, ಓದಿನಲ್ಲಿ ಮುಂದಿರುವ ಈತನ ಹವ್ಯಾಸ ಡ್ರಾಯಿಂಗ್ ಮತ್ತು ಸ್ಕೆಚಿಂಗ್ . ಬ್ಯಾಟ್ ಮಿಟನ್ ನಲ್ಲಿ ಅನೇಕ ಪಾರಿತೋಷಕಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಇಂತಹ ಹುಡುಗ ಗೊಮ್ಮಟ ಸ್ತುತಿ ಭಕ್ತಾಂಬರ ಸ್ತೋತ್ರ ಮಹಾವೀರಾಷ್ಟಕ ಚತುರ್ವಂಶತಿ ಸ್ತೋತ್ರ ಶೃತ ಭಕ್ತಿ ಆಚಾರ್ಯ ಭಕ್ತಿ ಮಂಗಳಾಷ್ಟಕ ಸ್ತೋತ್ರ ಇನ್ನೂ ಹಲವಾರು ಸ್ತೋತ್ರವನ್ನು ಬಲ್ಲವನು ಹಾಗೂ ಧಾರ್ಮಿಕ ವಿಚಾರಧಾರೆಗಳನ್ನು ನಿರ್ರಗಳವಾಗಿ ಮಂಡಿಸಬಲ್ಲ ಈ ಬಗ್ಗೆ ಅವನು ಮುಂದೆ ಮಂಡಿಸಲಿರುವ ವಿಚಾರ ಧಾರೆಯಲ್ಲಿ ನಿಮಗೆ ಗೊತ್ತಾಗಲಿದೆ, ಏಕೆಂದರೆ ಕನ್ನಡ ಮಾತನಾಡಲು ಅಷ್ಟು ಸಲಿಸಾಗಿ ಬರದಿದ್ದರು ಅವನ ಪ್ರಯತ್ನ ದೊಡ್ಡದು. ಅವನಿಗೆ ನಿಮ್ಮ ಲೈಕ್ ಮತ್ತೆ ಕಮೆಂಟ್ ಮೂಲಕ ಅವನನ್ನು ಪ್ರೊತ್ಸಾಹಿಸಿ.
ನಿರೂಪಕರು :- ಜೈ ಜಿನೇಂದ್ರ ಸ್ಥವನ್ ಕಾರ್ಯಕ್ರಮಕ್ಕೆ ಸ್ವಾಗತ.
ಸ್ಥವನ್ ಪ್ರವಿಣ್ ಜೈನ್ :- ಜೈ ಜಿನೇಂದ್ರ ಆಯೋಜಕರಿಗೆ ಧನ್ಯವಾದಗಳು.
ನಿರೂಪಕರು :- ಸ್ಥವನ್ ರವರೆ ನೀವು ಹೇಳುವ ಭಕ್ತಾಂಬರದ ಮೂಲಕ ಕಾರ್ಯಕ್ರಮವನ್ನು ಶುರುಮಾಡೊಣ ಒಂದು ಭಕ್ತಾಂಬರ ಸ್ಲೋಕವನ್ನು ಹೇಳುತ್ತೀರ.
(ಸ್ಥವನ್ ಪ್ರವಿಣ್ ಜೈನ್ ರವರು ಭಕ್ತಾಂಬರ ಸ್ತೋತ್ರವನ್ನು ಹೇಳಿದರು).
ನಿರೂಪಕರು :- ಸ್ಥವನ್ ರವರೆ ತುಂಬ ಭಕ್ತಿಯಿಂದ ಸ್ಪಷ್ಟವಾಗಿ ಭಕ್ತಾಂಬರ ಸ್ತೋತ್ರವನ್ನು ಹೇಳಿದ್ದಿರ, ನಿಮಗೆ ಡ್ರಾಯಿಂಗ್ ಮತ್ತು ಸ್ಕೆಚಿಂಗ್ ನಲ್ಲಿ ತುಂಬಾ ಆಸಕ್ತಿಇರುವುದು ಗೊತ್ತಾತಿತ್ತು. ನೀವು ನಮ್ಮ ಮುಂದೆ ಧಾರ್ಮಿಕ ಪೈಟಿಂಗ್ ಮಾಡಿ ತೋರಿಸುತ್ತೀರ.
(ಸ್ಥವನ್ ಪ್ರವಿಣ್ ಜೈನ್ ರವರು ಧಾರ್ಮಿಕ ಪೈಟಿಂಗ್ ಮಾಡಿ ತೋರಿಸಿದರು).
ನಿರೂಪಕರು :- ನೀವು ಮಾಡಿರುವಂತಹ ಪೈಟಿಂಗ್ ತುಂಬಾ ಚೆನ್ನಾಗಿತ್ತು, ನೀವು ಹೀಗೆ ಅಭ್ಯಾಸ ಮಾಡಿ ಇನ್ನೂ ಅತಿಹೆಚ್ಚು ಸಾಧನೆಗಳನ್ನು ಮಾಡಿ ಎಂದು ಆಶೀಸುತ್ತೀವಿ. ಮತ್ತು ನೀವು ಹಲವಾರು ಶ್ಲೋಕಗಳು ಸ್ತೋತ್ರಗಳನ್ನು ಕಲ್ತಿದ್ದೀರ ಅಂತ ಗೊತ್ತಾಯಿತು. ಈಗ ನಮಗಾಗಿ ಒಂದು ಶೃತ ಭಕ್ತಿಯನ್ನು ಹಾಡುತ್ತೀರ.
(ಸ್ಥವನ್ ಪ್ರವಿಣ್ ಜೈನ್ ರವರು ಶೃತ ಭಕ್ತಿಯನ್ನು ಹಾಡಿದರು).
ನಿರೂಪಕರು :- ತುಂಬ ಭಕ್ತಿಯಿಂದ ಶ್ರದ್ದೆಯಿಂದ ನೀವು ಜಿನ ವಾಣಿಯನ್ನು ಹೇಳಿದ್ದೀರ ಸ್ಥವನ್ ತುಂಬ ಖುಷಿಯಾಯಿತು. ನಾನು ಕೇಳ್ಪಟೆ ನೀವು ಏಳನೇ ವಯಸ್ಸಿನಿಂದ ಪಾಠಶಾಲೆಗೆ ಹೋಗುತ್ತಿದ್ದೀರ ಅಂತ, ಹಾಗಾಗಿ ನಿಮಗೆ ಧಾರ್ಮಿಕ ವಿಚಾರಗಳು ತುಂಬಾ ಗೊತ್ತಿರುತ್ತದೆ, ನೀವು ನಮಗಾಗಿ ದ್ರವ್ಯದ ಬಗ್ಗೆ ವಿವರಣೆಯನ್ನು ನೀಡುತ್ತೀರ.
(ಸ್ಥವನ್ ಪ್ರವಿಣ್ ಜೈನ್ ರವರು ದ್ರವ್ಯದ ಬಗ್ಗೆ ವಿವರಣೆಯನ್ನು ನೀಡಿದರು).
ನಿರೂಪಕರು :- ನೀವು ಇಷ್ಟು ಪುಟ್ಟ ವಯಸ್ಸಿನಲ್ಲಿ ಇಷ್ಟೊಂದು ಧಾರ್ಮಿಕ ವಿಚಾರಗಳು ಜೊತೆಗೆ ಬೇರೆ ಬೇರೆ ಚಟುಚಟಿಕೆಯಲ್ಲು ಕೂಡ ಭಾಗವಹಿಸುತ್ತ ಇರುವ ರೀತಿ ತುಂಬಾ ಗಮನಾರ್ಹ ಇದೆರೀತಿ ಮುಂದುವರೆಯುತ್ತಾ ಇನ್ನೂ ಹೆಚ್ಚು ಸಾಧನೆಗಳನ್ನು ಮಾಡಿ ಎಂದು ಆಶಿಸುತ್ತೇವೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಧನ್ಯವಾದಗಳು ಸ್ಥವನ್ ರವರೆ. ಜೈ ಜಿನೇಂದ್ರ.
ಈಗ ನಿಮ್ಮ ಮುಂದೆ ಧರ್ಮದ ಪಾಠ ಪ್ರಸಾರವಾಗಲ್ಲಿದೆ ಧರ್ಮದ ಪಾಠವನ್ನು ಕೇಳಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಈ ಕೂಡಲೇ ವಾಟ್ಸ್ ಆ್ಯಪ್ ಮಾಡಿ.
‘ಧರ್ಮದ ಕುಡಿ’
ಧರ್ಮದ ಬೆಳೆ ಬಿತ್ತೋಣ
‘ಧರ್ಮ ಪಾಠ’
ಧೀರಜ್ ಜೈನ್, ಹೊಳೆನರಸಿಪುರ.
ಜೈ ಜಿನೇಂದ್ರ ಮಕ್ಕಳೆ ಜ್ವಾಲಮಾಲ ಡಾಟ್ ನ್ಯೂಸ್ ಸಮರ್ಪಿಸುವ ಜೈನ ಧಾರ್ಮಿಕ ಪಾಠ ಮಾಲಿಕೆ ಕಾರ್ಯಕ್ರಮಕ್ಕೆ ನಿಮ್ಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ.
ಈ ಹಿಂದಿನ ಸಂಚಿಕೆಗಳಲ್ಲಿ ನಾವು ಶಂಭವನಾಥ ತೀರ್ಥಂಕರರ ಬಗ್ಗೆ ತಿಳಿದು ಕೊಂಡಿದೆವು, ಇಂದಿನ ಸಂಚಿಕೆಯಲ್ಲಿ ಅದೆ ಮಾಲಿಕೆಯನ್ನು ಮುಂದುವರೆಸುತ್ತಾ ವರ್ತಮಾನ ಕಾಲದ ನಾಲ್ಕನೇ ತೀರ್ಥಂಕರರಾದ ಅಭಿನಂದನ ತೀರ್ಥಂಕರರ ಬಗ್ಗೆ ತಿಳಿದುಕೋಳ್ಳಣ.
ಅಭಿನಂದನ ತೀರ್ಥಂಕರರು ಹುಟ್ಟಿದ್ದು ಇಕ್ಷ್ವಾಕು ವಂಶದಲ್ಲಿ ಮತ್ತು ಅವರು ಹುಟ್ಟಿದ್ದ ಸ್ಥಳ ಅಯೋಧ್ಯೆ. ಅಯೋಧ್ಯೆಯಲ್ಲಿ ಹೆಚ್ಚು ತೀರ್ಥಂಕರರು ಹುಟ್ಟಿದ್ದಾರೆ, ಹಿಂದುಗಳಿಗೆ ಹೇಗೆ ಅಯೋಧ್ಯೆ ಪವಿತ್ರವಾದಂತಹ ಸ್ಥಳವು ಹಾಗೆ ಜೈನರಿಗೂ ಕೂಡ ಪರಮ ಪವಿತ್ರವಾದ ಸ್ಥಳ.
ಅಭಿನಂದನ ತೀರ್ಥಂಕರರ ತಂದೆ ಸ್ವಯಂವರ ತಾಯಿ ಸಿದ್ದಾರ್ಥ ಮಹಾದೇವಿ. ತೀರ್ಥಂಕರರು ಹುಟ್ಟುವಂತಹ ತಾಯಿಗೆ16 ರೀತಿಯ ಸ್ವಪ್ನಗಳು ಬರುತ್ತವೆ. ಆ ಸ್ವಪ್ನಗಳು ಒಂದು ಸಂಕೇತವನ್ನು ಕೊಡುತ್ತವೆ, ಆ ಸಂಕೇತದಲ್ಲಿ ನಿಮ್ಮ ಗರ್ಭದಲ್ಲಿ ಜನಿಸುವಂತಹ ಮಗು ಮುಂದೆ ತೀರ್ಥಕರರಾಗುತ್ತಾರೆ ಅಂತ.
ಅಭಿನಂದನ ತೀರ್ಥಂಕರರು ಸುಮಾರು 50ಲಕ್ಷ ಆಯಸ್ಸು ಹೊಂದಿರುತ್ತಾರೆ ಮತ್ತು ಮೂನ್ನೂರು ಬಿಲ್ಲುಗಳಷ್ಟು ಎತ್ತರ ಅಂದರೆ ಸುಮಾರು 1600 ಮೀ ನಷ್ಟು ಎತ್ತರವಿರುತ್ತಾರೆ. ನೋಡಲು ಬಹಳ ಸುಂದರವಾಗಿರುತ್ತಾರೆ, ಅನೇಕ ವರ್ಷಗಳ ಕಾಲ ರಾಜ್ಯಭಾರವನ್ನು ಮಾಡುತ್ತಾರೆ.
ಅವರಿಗೆ ವೈರಾಗ್ಯಬರಲು ಕಾರಣ ಇಂದ್ರ ಆಕಾಶದಲ್ಲಿ ಒಂದು ಮಾಯನಗರವನ್ನು ಸೃಷ್ಟಿಸಿರುತ್ತಾರೆ ಅ ನಗರ ಒಂದು ಕ್ಷಣ ಅಭಿನಂದನ ತೀರ್ಥಂಕರರಿಗೆ ಕಾಣಿಸಿಕೊಳ್ಳುತ್ತದೆ ಆ ಒಂದು ಘಟನೆಯನ್ನು ಕಂಡ ಅವರಿಗೆ ಕ್ಷಣ ಮಾತ್ರದಲ್ಲಿ ವೈರಾಗ್ಯ ಬಂದು ಮುನಿ ದೀಕ್ಷೆಯನ್ನು ಪಡೆಯುತ್ತಾರೆ.
ಆರು ಉಪವಾಸಗಳ ನಂತರ ಪ್ರಪ್ರಥಮವಾಗಿ ಅಯೋಧ್ಯೆ ನಗರದ ಇಂದ್ರ ದತ್ತ ಎನ್ನುವ ರಾಜ ಆಹಾರ ದಾನವನ್ನು ಮಾಡುತ್ತಾರೆ. ಇದೇ ರೀತಿಯಾಗಿ ಅಭಿನಂದನ ತೀರ್ಥಂಕರರು ಕೂಡ ಬೇರೆಯಲ್ಲ ತೀರ್ಥಂಕರರ ರೀತಿಯಲ್ಲಿ ತಪಸ್ಸನ್ನುಮಾಡುತ್ತ ಅನೇಕ ವರ್ಷಗಳ ವರೆಗೆ ಜೈನ ಧರ್ಮದ ಬಗ್ಗೆ ಪ್ರಚಾರವನ್ನು ಮಾಡುತ್ತಾರೆ.
ಕೊನೆಯಲ್ಲಿ ಬಂದು ಸಂವೇದ ಗಿರಿಯ ಆನಂದ ಕೂಟದಲ್ಲಿ ಕಕ್ಕೆ ಎನ್ನುವ ಮರದ ಕೆಳಗಡೆ ಕೇವಲ ಜ್ಞಾನ ಪ್ರಾಪ್ತಿಯಾಗುತ್ತದೆ. ಮತ್ತು ಸಂವೇದ ಗಿರಿಯ ಆನಂದ ಕೂಟದಲ್ಲಿ ಮೋಕ್ಷವನ್ನು ಹೊಂದಿ ಸಿದ್ದ ಪರಮೇಷ್ಟಿಗಳು ಹಾಗುತ್ತಾರೆ.
ಅಭಿನಂದನ ತೀರ್ಥಂಕರರ ಲಾಂಛನ ಮರ್ಕಟ ಎಂದರೆ ಕೋತಿ. ಅಭಿನಂದನ ತೀರ್ಥಂಕರರ ಯಕ್ಷ ಯಕ್ಷೆ ಯಾರು ಎಂದರೆ ಯಕ್ಷ ಯಕ್ಷೇಶ್ವರ ಮತ್ತು ಯಕ್ಷಿಣಿ ವಜ್ರಶುಂಕಲೆ.
ಮುಂದಿನ ಸಂಚಿಕೆಯಲ್ಲಿ ಮುಂದಿನ ತೀರ್ಥಂಕರರ ಬಗ್ಗೆ ತಿಳಿದುಕೊಳ್ಳೋಣ ವಂದನೆಗಳು. ಜೈ ಜಿನೇಂದ್ರ
ಹಿಂದಿನ ಪಾಠದಲ್ಲಿ ಏನನ್ನು ತಿಳಿದುಕೊಂಡಿರಿ
ಅಭಿನಂದನರು ಎಲ್ಲಿ ಜನಸಿದರು
ಅವರ ಅಯಸ್ಸು ಮತ್ತು ಎತ್ತರ ಎಷ್ಟು
ಅವರಿಗೆ ಮೊದಲ ಆಹಾರ ನೀಡಿದ ರಾಜ ಯಾರು
ಕೇವಲ ಜ್ಞಾನ ಎಲ್ಲಿ ಯಾವ ವೃಕ್ಷದಡಿ ಪ್ರಾಪ್ತವಾಯಿ
ಈ ಸಂಚಿಕೆಯ ಪ್ರಶ್ನೆಗಳು
- ಹಿಂದಿನ ಸಂಚಿಕೆಯಲ್ಲಿ ಏನನ್ನು ತಿಳಿದುಕೊಂಡಿದ್ದಿರಿ?
- ಅಜಿತನಾಥ ತೀರ್ಥಂಕರರು ಹಿಂದಿನ ಭವದಲ್ಲಿ ಏನಾಗಿದ್ದರು?
- ಪುಣ್ಯದಫಲದಿಂದ ಮುಂದಿನ ಭವದಲ್ಲಿ ಸ್ವರ್ಗದಲ್ಲಿ ಅವರು ಯಾರಗಿ?
- ಹಾಗೂ ಎಷ್ಟು ಕಾಲ ಇರುತ್ತಾರೆ?
- ಅಜಿತನಾಥ ತೀರ್ಥಂಕರರು ಎಲ್ಲಿ ಜನ್ಮ ತಾಳುತ್ತಾರೆ? 0
- ಅವರ ವರ್ಣ.ಎತ್ತರ ತಿಳಿಸಿ
- ಅವರಿಗೆ ಮೊದಲ ಬಾರಿಗೆ ಆಹಾರ ಯಾರು ?
- ಹಾಗೂ ಏನನ್ನು ನೀಡುತ್ತಾರೆ?
- ಅವರಿಗೆ ಯಾವಾಗ ಹಾಗೂ ಯಾವ ವೃಕ್ಷದ ಕೆಳಗೆ ಕೇವಲಜ್ಞಾನವನ್ನು ಪಡೆಯುತ್ತಾರೆ.
ಮುಂದಿನ ಭಾನುವಾರ ಬೆಳಗ್ಗೆ ಸರಿಯಾಗಿ 10:30ಕ್ಕೆನಿಮ್ಮ ಮುಂದೆ ಮತ್ತೊಂದು ಧರ್ಮದ ಕುಡಿಯೊಂದಿಗೆ ಬರುತ್ತೇನೆ ಜ್ವಾಲಮಾಲ ನ್ಯೂಸ್
ಜೈ ಜೀನೆಂದ್ರ,
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













