ಜೈ ಜಿನೇಂದ್ರ ವೀಕ್ಷಕರೆ, ಅಷ್ಟಾನಿಕ ಪರ್ವವನ್ನು ಆಚರಿಸುತ್ತಿರುವ ಸಮಸ್ತ ಶ್ರಾವಕ ಶಾವಕಿಯರಿಗೂ ಅಷ್ಟಾನಿಕ ಪರ್ವದ ಶುಭಾಷಯಗಳನ್ನ ತಿಳಿಸುತ್ತ ವಾರದ ಜೈನ ಸುದ್ದಿಗಳೊಂದಿಗೆ ನಿಮ್ಮೆಲ್ಲರಿಗೂ ಸ್ವಾಗತ.
ಮುಖ್ಯಾಂಶಗಳು:-
ಶ್ರೀ ಕ್ಷೇತ್ರ ಹೊಂಬುಜದ ಶ್ರೀ ಗಳಿಂದ ಮಾನ್ಯ ಮುಖ್ಯ ಮಂತ್ರಿಗಳಿಗೆ ಅಲ್ಪ ಸಂಖ್ಯಾತರ ಸರ್ಕಾರಿ ಸೌಲಭ್ಯಗಳಿಗಾಗಿ ಮನವಿ.
ಸರಳವಾಗಿ ಸಮೃದ್ಧವಾಗಿ ನಡೆದ ಗೊಮ್ಮಟಗಿರಿ ಮಸ್ತಕಾಭಿಷೇಕ.
ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ಮುನಿಶ್ರೀ ಚಂದ್ರಸಾಗರ ಪುಣ್ಯ ಸ್ಮರಣೆ.
ಜೈನ ಧರ್ಮ ಅದ್ಯಯನಪೀಠ ಸ್ಥಾಪಿಸಿದ ಅಮೆರಿಕ ವಿ ವಿ.
ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಸರಕಾರಿ ಕಾರ್ಯಕ್ರಮದ ಉದ್ಘಾಟನೆ ಶ್ರೀ ಡಿ ಸುರೇಂದ್ರ ಕುಮಾರ್ ರವರಿಂದ.
ಸಂಸದ ತೇಜಸ್ವಿಸೂರ್ಯ ರವರು ಜೈನ ಮಂದಿರಕ್ಕೆ ಭೇಟಿ.
ಹುಬ್ಬಳ್ಳಿಯಲ್ಲಿ ನಡೆದ ನಿರ್ವಾಣೋತ್ಸವ ಸಂಭ್ರಮ.
ಗಳತಗಾದಲ್ಲಿ ಜಲ ಗ್ರಹಣನಿರತ ಶ್ರಾವಿಕೆ ನಿಯಮ ಸಲ್ಲೇಖನದಿಂದ ಸಮಾಧಿ ಮರಣ.
ಸುದ್ದಿಗಳ ವಿವರ:-
ಶ್ರೀ ಕ್ಷೇತ್ರ ಗೊಮ್ಮಟ ಗಿರಿಯಲ್ಲಿ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಹೊಂಬುಜ ಶ್ರೀಗಳ ಆಶೀರ್ವಾದದೊಂದಿಗೆ ಸರಳವಾಗಿ ನಡೆದರು ಸಮೃದ್ಧಿಯಾಗಿ ನಡೆಯಿತು.
ಶ್ರೀ ಗೊಮ್ಮಟ ಗಿರಿ ಕ್ಷೇತ್ರ ಸೇವಾ ಸಮಿತಿ ಮೈಸೂರು ಮಹಾ ಪೊಷಕರು ಸಂರಕ್ಷಕರು ಹಾಗೂ ಮಾರ್ಗ ದರ್ಶಕರಾದ ಪರಮ ಪೂಜ್ಯ ಜಗದ್ಗುರು ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾ ಸ್ವಾಮಿಗಳು ಶ್ರೀ ಕ್ಷೇತ್ರ ಹೊಂಬುಜ ಇವರ ಆಶೀರ್ವಾದ ಪಡೆದು 21-11-2020ರ ಶನಿವಾರ ಶ್ರೀ ಕ್ಷೇತ್ರದಲ್ಲಿ ಶುದ್ದ ಕಾರ್ಯ ನಿಮ್ಮಿತವಾಗಿ ಶ್ರೀ ಗೊಮ್ಮಟೇಶ್ವರ ಸ್ವಾಮಿಗೆ ತೈಲ ಲೇಪನ ಬ್ರಹ್ಮ ದೇವರಿಗೆ ಚಂದ್ರ ಲೇಪನ ಹಾಗೂ ಹೋಮಗಳನ್ನು ವಿಧಿವತ್ತಾಗಿ ನಡೆಸಲಾಯಿತ್ತು. ದಿನಾಂಕ 22-11-2020ರಂದು ಅಷ್ಟ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಮಸ್ತಕಾಭಿಷೇಕ ವಿಧಿವತ್ತಾಗಿ ನಡೆಯಿತು. ಹಾಗೂ ಶ್ರೀ ಗೊಮ್ಮಟಗಿರಿ ಸೇವಾ ಸಮಿತಿ ಪ್ರಕಟಣೆಯಂತೆ ಪ್ರತಿ ತಿಂಗಳು ಮೂರನೇ ಭಾನುವಾರ ಶ್ರೀ ಕ್ಷೇತ್ರ ಗೊಮ್ಮಟಗಿರಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಪಾದ ಪೂಜೆ ಮತ್ತು ಕಂಬದ ಕುದುರೆ ಬ್ರಹ್ಮ ದೇವರಿಗೆ ಪೂಜೆ ನಡೆಸಲಾಗುತ್ತಿದೆ. ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆದೇಶದಂತೆ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಪೂಜಾ ಕಾರ್ಯಕ್ಕೆ ನೀವು ಭಾಗಿಯಾಗ ಬಹುದು ರೂಪಾಯಿ ಮೂರು ಸಾವಿರ ನೀಡಿ ನಿಮ್ಮ ಪರಿವಾರದೊಂದಿಗೆ ಪಾದಭಿಷೇಕ ಮಾಡಿ ಪುಣ್ಯ ಭಾಗಿಗಳಾಗಬಹುದು ಅಥವಾ ನಿಮ್ಮ ಕುಟುಂಬದ ಹೆಸರಿನಲ್ಲಿ ಪೂಜೆ ಮಾಡಿಸಲು ಬಹುದು ಪ್ರಸಾದವನ್ನು ಪೊಸ್ಟ್ ಮೂಲಕ ಕಳುಹಿಸಿಕೊಡುತ್ತೇವೆ.ಸ್ಥಳದಲ್ಲಿ ಬೆಳಿಗ್ಗೆ ಲಘು ಉಪಹಾರದ ವ್ಯವಸ್ಥೆ ಇರುತ್ತದೆ.
ಶ್ರೀ ಹೊಂಬುಜದ ಶ್ರೀಗಳು ಮಾನ್ಯ ಮುಖ್ಯ ಮಂತ್ರಿಗಳಿಗೆ ಅಲ್ಪ ಸಂಖ್ಯಾತರ ಕಾರ್ಯ ಸೌಲಭ್ಯಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸುದ್ದಿಗೂ ಮೊದಲು ಶ್ರೀಕ್ಷೆತ್ರದ ಪ್ರಮುಖ ಸುದ್ದಿ ಹಾಗೂ ಸಂಭ್ರಮವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೇವೆ. ಶ್ರೀ ಕ್ಷೇತ್ರ ಹೊಂಬುಜದ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ದಾರ ಕಾರ್ಯದ ನಿಮ್ಮಿತ್ತ ದಿನಾಂಕ 19-11-2020 ರಂದು ಬಸದಿಯ ಆರಾಧನ ಮಂಟಪ ಭೂಮಿ ಪೂಜೆ ಪರಮ ಪೂಜ್ಯ ಸ್ವಸ್ತಿಶ್ರೀ ಜಗದ್ಗುರು ದೇವೇಂದ್ರ ಕೀರ್ತಿ ಭಟ್ಟಾರಕರ ನೇತೃತ್ವ ಹಾಗೂ ಬಹುತೇಕ ಮಠಾಧೀಶರ ಪಾವನ ಸಾನಿಧ್ಯದಲ್ಲಿ ವಿಧಿಪೂರ್ವಕವಾಗಿ ನಡೆಯಿತು.
ಜೈನ ಅಲ್ಪ ಸಂಖ್ಯಾತರಿಗೆ ಸರ್ಕಾರದ ಸೌಲಭ್ಯ ನೀಡುವ ಬಗ್ಗೆ ಭಾರತ ದೇಶದಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಜೈನರಿಗೆ ಮೊದಲು ನೀಡಿದ್ದು. ಕರ್ನಾಟಕ ರಾಜ್ಯ ಆರ್ಥಿಕವಾಗಿ ಹಿಂದುಳಿದಿರುವ ಜೈನ ಸಮಾಜದ ಬಾಂಧವರಿಗೆ ಸರಿಯಾಗಿ ಅನುದಾನದ ಲಾಭ ದೊರೆಯುತ್ತಿಲ್ಲ ಹೀಗಾಗಿ ಕರ್ನಾಟಕದಾದ್ಯಂತ ನಗರ ಪ್ರದೇಶಗಳಲ್ಲಿ 8 ಅಥವಾ 10 ಪ್ರತ್ಯೇಕ ಜೈನ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವುದು ಅಲ್ಪಸಂಖ್ಯಾತ ಜೈನರಿಗೆ ಸಾಲ ಸೌಲಭ್ಯಗಳು ವಿದ್ಯಾರ್ಥಿ ವೇತನ ಇನ್ನಿತರ ಸೌಲಭ್ಯಗಳನ್ನು ಸರಿಯಾದ ಪ್ರಮಾಣದಲ್ಲಿ ಹಂಚಿಕೆ ಮಾಡುವುದು ಬಜೆಟ್ ನಲ್ಲಿ ವಿಶೇಷ ನಿಧಿಯನ್ನು ಮೀಸಲಿಡುವುದು, ಅಲ್ಪ ಸಂಖ್ಯಾತ ಇಲಾಖೆಯಲ್ಲಿ ಜೈನರಿಗೆ ಶಾಶ್ವತ ಸದಸ್ಯತ್ವ ನೀಡುವುದು ಹಾಗೂ ಜೈನರಿಗೂ ಅಲ್ಪಸಂಖ್ಯಾತ ಇಲಾಖೆಯಲ್ಲಿ ಉಧ್ಯೊಗಾವಕಾಶವನ್ನು ನೀಡುವುದು, ರಾಜ್ಯಾದ್ಯಂತ ಪ್ರಾಚೀನ ಜೈನ ಬಸದಿಗಳು ಸ್ಮಾರಕಗಳ ರಕ್ಷಣೆಗೆ ವಿಶೇಷ ವಾರ್ಷಿಕ ಅನುದಾನ ನಿಗದಿಪಡಿಸಿ ನಿರ್ವಹಣೆಗೆ ಒಂದು ಸಮಿತಿಯನ್ನು ರಚಿಸುವುದು, ಸಂಪುಟದಲ್ಲಿ ಜೈನ ಶಾಸಕರಿಗೆ ರಾಜಕೀಯ ಪ್ರತಿನಿಧಿಗಳಿಗೆ ಸೂಕ್ತ ಸ್ಥಾನಮಾನ ನೀಡ ಬೇಕೆಂದು ಅತಿಶಯ ಶ್ರೀಕ್ಷೇತ್ರ ಹೊಂಬುಜದ ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿಯನ್ನು ಸಲ್ಲಿಸಿದರು.
ಪರಮ ಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಪಾವನ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ಪ್ರಾಥಸ್ಮರಣೀಯರಾದ ಮುನಿಶ್ರೀ 108 ಚಂದ್ರ ಸಾಗರ ಮುನಿ ಮಹಾರಾಜರ ಪುಣ್ಯ ಸ್ಮರಣೆ ನಿಮ್ಮಿತ್ತ ನಿರ್ಮಿಸಲಾದ ಸಮಾಧಿ ಮಂಟಪದಲ್ಲಿ ಪಾದಿಕೆಗಳಿಗೆ ಪಾದ ಪೂಜೆ ನೆರವೇರಿಸಲಾಯಿತು.
ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ಸಾಧನ ನಿರತರಾಗಿದ್ದ ಪರಮ ಪೂಜ್ಯ ಪ್ರಾಥಸ್ಮರಣೀಯ ಸಮಾಧಿಸ್ತ ಮುನಿ ಶ್ರೀ 108 ಚಂದ್ರ ಸಾಗರ ಮುನಿ ಮಹಾರಾಜರ 34ನೇ ಪೂಣ್ಯ ದಿನಾಚರಣೆಯನ್ನು ದಿನಾಂಕ 24-11-2020ರಂದು ನೂತನವಾಗಿ ನಿರ್ಮಿಸಿದ ಸಮಾಧಿ ಮಂಟಪದಲ್ಲಿ ಪೂಜ್ಯ ಮುನಿಗಳ ಪಾಧುಕೆಗಳಿಗೆ ಪಾದ ಪೂಜೆಯು ಪರಮ ಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಾವನ ನೇತೃತ್ವ ಹಾಗೂ ಪರಮ ಪೂಜ್ಯ ಸ್ವಸ್ತಿಶ್ರೀ ಧವಳ ಕೀರ್ತಿ ಭಟ್ಟಾರಕರು ಪರಮ ಪೂಜ್ಯ ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕರು ಪರಮ ಪೂಜ್ಯ ಸಿದ್ದಾಂತ ಕೀರ್ತಿ ಭಟ್ಟಾರಕರುಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಮಲೆಯೂರಿನ ಶ್ರಾವಕರಾದ ಶ್ರೀಮತಿ ಶಾರದಮ್ಮ ಮತ್ತು ಕುಟುಂಬ ವರ್ಗದವರು ನೂತನ ನಿಶ್ಚಿತ ಮಂಟಪದ ದಾನಿಗಳಾಗಿದ್ದಾರೆ.
ತೇಜಸ್ವಿಸೂರ್ಯ ರವರು ಹೈದರಾಬಾದಿನ ಜೈನ ಮಂದಿರಕ್ಕೆ ಭೇಟಿ ನೀಡಿ ಆಚರ್ಯಶ್ರೀ ಮಹಾಶ್ರಮಣ ಮಹಾರಾಜರಿನ ಆಶೀರ್ವಾದ ಪಡೆದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಕೊವಿಡ್ ಸಂಕಷ್ಟ ಸಮಯದಲ್ಲಿ ಜೈನ ಸಮಾಜ ತಮ್ಮ ಜೊತೆಗೆ ನಿಂತಿದ್ದನ್ನು ಎಂದು ಮರೆಯುವುದಿಲ್ಲಾ ಎಂದು ನೆನೆಸಿಕೊಂಡರು.
ಜಾಹೀರಾತು.
ವಿಧಾನ ಸೌಧದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಸರ್ಕಾರಿ ಕಾರ್ಯಕ್ರಮವನ್ನು ಶ್ರೀ ಡಿ ಸುರೇಂದ್ರ ಕುಮಾರ್ ರವರು ಉದ್ಘಾಟಿಸಿದರು.
ಮಾನ್ಯ ಮುಖ್ಯ ಮಂತ್ರಿಗಳು ಸಚಿವರು ಉಪಸ್ಥಿತರು ಇದ್ದ ಕಾರ್ಯಕ್ರಮದಲ್ಲಿ ಧಾರವಾಡದ ವಿಶ್ವ ವಿಧ್ಯಾನಿಲಯದ ವತಿಯಿಂದ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಯಿತು. ಶ್ರೀ ಡಿ ಸುರೇಂದ್ರ ಕುಮಾರ್ ದಂಪತಿಗಳು ಮಂದಾರ ಗಿರಿಗೆ ಭೇಟಿ ನೀಡಿ ಯುಗಳ ಮುನಿಗಳ ಆಶೀರ್ವಾದ ಪಡೆದರು.
ಹುಬ್ಬಳ್ಳಿಯಲ್ಲಿ ದೀಪಾವಳಿಯ ದಿನದಂದು ನಡೆದ ನಿರ್ವಾಣೋತ್ಸವ ಸಂಭ್ರಮವನ್ನೋಮ್ಮೆ ನೋಡಿ ಬರೋಣ ಬನ್ನಿ.
ಹುಬ್ಬಳ್ಳಿಯಲ್ಲಿ ನಿರ್ವಾಣೋತ್ಸವ ಸಂಭ್ರಮ ಅಹಿಂಸೆಯ ಅಗ್ರ ಪ್ರತಿಪಾದಕ ವರ್ತಮಾನ ಶಾಸನ ನಾಯಕ 24ನೇ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರ 2547ನೇಯ ನಿರ್ವಾಣ ಮಹೋತ್ಸವ ಪೂಜೆಯನ್ನು ನವೆಂಬರ್ 15ರ ಪ್ರಾಥಕಾಲ ಸಡಗರ ಶ್ರದ್ದೆ ಭಕ್ತಿ ಸಂಭ್ರಮಗಳಿಂದ ಆಚರಿಸಲಾಯಿತು. ಜನರು ಬಸದಿಗಳತ್ತ ದಾವಿಸಿ ಬಂದರು ನಗರದ ಏಳು ಬಸದಿಗಳು ಹೊರವಲಯದ ಮೂರು ಬಸದಿಗಳಲ್ಲಿಯೂ ಜನ ಸೇರಿ ಮಹಾವೀರ ಪ್ರಭುವಿನ ಸ್ಮರಣೆ ಮಾಡಿದರು. ಭಕ್ತಿ ನಮನ ಸಹಿತ ನಮನ ಸಲ್ಲಿಸಲಾಯಿತು. ಶ್ರಾವಕ ಶ್ರಾವಕಿಯರು ಪರಸ್ಪರ ಶುಭಾಶಯ ವಿನಿಮಯಗಳೊಂದಿಗೆ ದೀಪಾವಳಿಯ ಸಂತಸವನ್ನು ಹಂಚಿಕೊಂಡರು.
ಕೆಲವೊಂದು ವಿಶೇಷ ಸುದ್ದಿಗಳು
ಜೈನ ಧರ್ಮದ ಅಧ್ಯಯನ ಪೀಠವನ್ನು ಅಮೆರಿಕದ ಕ್ಯಾಲಿಫೋನಿಯದ ವಿ.ವಿ ಯಲ್ಲಿ ಸ್ಥಾಪಿಸಲಾಗಿದೆ.
ಪೀಠ ಸ್ಥಾಪನೆಗಾಗಿ ಭಾರತ ಮೂಲದ ಅಮೆರಿಕದ ದಂಪತಿಗಳು 7.3 ಕೋಟಿ ದೇಣಿಗೆ ನೀಡಿದ್ದಾರೆ. ಪೀಠಕ್ಕೆ ವಿಮಲನಾಥ ದತ್ತಿ ಪೀಠ ಎಂದು ಹೆಸರಿಸಲಾಗಿದೆ.
ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ದಿನಾಂಕ 22-11-2020ರಂದು ನಡೆದ ಜೈನ ಧಾರ್ಮಿಕ ಆನ್ ಲೈನ್ ನಲ್ಲಿ ಸುಮಾರು 661 ಜನ ಜೈನ ಧರ್ಮಬಂಧುಗಳು ಭಾಗವಹಿಸಿದ್ದು ಎಲ್ಲಾ ಧರ್ಮ ಬಂಧುಗಳ ಸಮಾಜದ ಕಲ್ಯಾಣಕಾಗಿ ಶ್ರೀಕ್ಷೇತ್ರ ಸ್ವಾದಿ ಜೈನ ಮಠ ಸೋಂಧದಲ್ಲಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಜೈನ ಧರ್ಮ ಬಂಧುಗಳು ಭಾಗವಹಿಸಿದ್ದು ಹೆಮ್ಮೆಯ ಸಂಗತಿ.
ಪದ್ಮಾವತಿ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಸುಧಾ ಶಿರಗುಪ್ಪಿಯವರು ಹೆಮ್ಮೆಯ ಕನ್ನಡತಿ ಪ್ರಶಸ್ತಿಗೆ ಭಾಜನವಾಗಿರುತ್ತಾರೆ. ಅವರಿಗೆ ಜ್ವಾಲಮಾಲ ನ್ಯೂಸ್ ಶುಭಕೊರುತ್ತದೆ.
ಇಂತಹ ವಿಶೇಷ ಸುದ್ದಿಗಳು ನಮ್ಮ ಸಮುದಾಯಕ್ಕೆ ಹೆಮ್ಮೆಯನ್ನು ಮೂಡಿಸುತ್ತದೆ.
ದಿನಾಂಕ 01-11-2020ರಂದು ತಮ್ಮ ಸ್ವಗೃಹದಲ್ಲಿ ನಿಯಮ ಸಲ್ಲೇಖನ ಸ್ವೀಕರಿಸಿದ ಶ್ರಾವಕಿಗೆ ದಿನಾಂಕ 23-11-2020ರಂದು ಸಮಾಧಿ ಮರಣ ಪ್ರಾಪ್ತಿಯಾಯಿತು.
ಪೂರ್ವಾಶ್ರಮದ ಶ್ರೀಮತಿ ನಿಲಾವತಿ ಕಲಗೌಡ ಪಾಟಿಲಾ ಅಕ್ಕೊಳ ಇವರ ಮಗಳಾದ ಸೌಭಾಗ್ಯವತಿ ಸುನಂದ ಕುಬೆರ ಚೌಗಳಿ ಗಳತಗ ಇವರು ತಮ್ಮ ಮನೆಯಲ್ಲಿ ದಿನಾಂಕ 1-11-2020ರಿಂದ ನಿಯಮ ಸಲ್ಲೇಖನವನ್ನು ಶಾಂತಿಸಾಗರ ತೀರ್ಥ ಪ್ರಣೇತ ಮತ್ತು ತಪ್ಪೊ ಭೂಮಿ ತೀರ್ಥ ಪ್ರಣೇತ 108 ಪ್ರಜ್ಞಾ ಸಾಗರ ಮುನಿ ಮಹಾರಾಜರ ಸಾನಿಧ್ಯದಲ್ಲಿ ಪುಜಾ ಗ್ರಾಮದಲ್ಲಿ ದೇವ ಶಾಸ್ತ್ರ ಗುರು ಸಾಕ್ಷ್ಯವಾಗಿ ತೆಗೆದುಕೊಂಡು ಮಂಗಳವಾರ ದಿನಾಂಕ 23-11-2020ರಂದು 23ನೇಯ ದಿವಸ ಸಮಾಧಿ ಪೂರ್ವಕ ಮರಣ ಹೊಂದಿದ್ದಾರೆ.
ವಾರದ ಜೈನ ಸುದ್ದಿಗಳು ವೀಕ್ಷಸಿದ ನಿಮ್ಮಗೆಲ್ಲರಿಗು ಧನ್ಯವಾದಗಳು
ಹೀಗೆ ಪ್ರತಿ ವಾರವು ವೀಕ್ಷಿಸುತಿರಿ, ವಾರದ ಜೈನ ಸುದ್ದಿಗಳು ಪ್ರತಿ ಶನಿವಾರ ರಾತ್ರಿ 07:30ಕ್ಕೆ ಸರಿಯಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













