ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಮಕ್ಕಳಲ್ಲಿರುವ ಧಾರ್ಮಿಕ ಆಸಕ್ತಿ ಮತ್ತು ಅವರಲ್ಲಿರುವ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಹಿಸುವ ನಮ್ಮ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.
ಮತ್ತೊಂದು ವಿಶೇಷ ಪ್ರತಿಭೆಯೊಂದಿಗೆ ಇವತ್ತು ನಾವು ನಿಮ್ಮ ಮುಂದೆ ಬಂದಿದ್ದೀವಿ, ಇವತ್ತು ನಮ್ಮೊಂದಿಗೆ ಸಮಕಿತ್ ರವರು ಇದ್ದಾರೆ ಬನ್ನಿ ಅವರ ಒಂದು ಕಿರುಪರಿಚಯವನ್ನು ವಿ ಟಿ ಮುಖಾಂತರ ನೊಂಡಿಕೊಂಡು ಬರೋಣ.
ಸಮಕಿತ್ ಸುಧೀರ್ ಕುರುಕುರೆ, 10ವರ್ಷದ ಈತ ಸುಧೀರ್ ಎನ್ ಕುರುಕುರೆ ಹಾಗೂ ಪದ್ಮಿನಿ ಎಸ್ ಕುರುಕುರೆ ದಂಪತಿಗಳ ಪುತ್ರ, ಧಾರ್ಮಿಕ ವಿಚಾರಗಳಲ್ಲಿ ಅದ್ಬುತ ಎನ್ನುವಷ್ಟು ಅಗಾಧ ಆಸಕ್ತಿಯನ್ನು ಹೊಂದಿರುವ ಇತನು ಭಕ್ತಾಂಬರ ತತ್ವಾರ್ಥ ಸ್ತೋತ್ರ ಹತ್ತು ಅಧ್ಯಾಯ ಅಷ್ಟು ಧರ್ಮ ಗ್ರಂಥಗಳ ಮಂಗಳಾಷ್ಟಕ ನಿತ್ಯ ಪೂಜೆ ರತ್ನಕರಂಡಕ ಶ್ರಾವಕಾಚರಾದ 28 ಶ್ಲೋಕ ಭಟ್ಟಾಕಲಂಕರ ಶ್ಲೋಕಗಳು, ಸಪ್ತತತ್ವಗಳು ಆರು ದ್ರವ್ಯಗಳು ಒಂಬತ್ತು ಪದಾರ್ಥಗಳು 24 ಪರಿಗ್ರಹಗಳು ಇತ್ಯಾದಿ ಇನ್ನೂ ಅನೇಕ ಧರ್ಮ ಗ್ರಂಥಗಳ ಪಠಣ ಹಾಗೂ ಮನನ ಮಾಡುತ್ತಿದ್ದಾನಲ್ಲದೇ ತನ್ನದೆ ಯೂಟ್ಯೂಬ್ ವೀಡಿಯೊಸ್ ಗಳನ್ನು ಕೂಡ ಅಪ್ಲೋಡ್ ಮಾಡಿದ್ದಾನೆ. ಧಾರ್ಮಿಕವಾಗಿ ಎಷ್ಟು ಹೇಳಿದರು ಮುಗಿಯದ ಅವನ ಶ್ರದ್ದೆ ವಿಚಾರಗಳು ಇತರೆ ವಿಷಯಗಳಲ್ಲು ಪಠ್ಯ ಹಾಗೂ ಪಠ್ಯೆತ್ತರ ವಿಚಾರಗಳಲು ಅವನು ಇನ್ನೂ ಹೆಚ್ಚಿನ ಪ್ರತಿಭೆ ಉಳ್ಳವನಾಗಿದ್ದಾನೆ. ಡ್ರಾಯಿಂಗ್ ನಲ್ಲಿ ಧಾರ್ಮಿಕ ವಿಚಾರಗಳನ್ನು ತಂದಿದ್ದಾನೆ. ಅವನು ಶಾಲೆಯಲ್ಲಿ ವಿಶೇಷ ದಿನಗಳಲ್ಲಿ ಹಾಗೂ ಸೈನ್ಸ್ ಎಗ್ಸಿಮಿಷನ್ ಗಳಲ್ಲಿ ಅವನ ಪಾಲ್ಗೊಳ್ಳುವ ರೀತಿ ಪ್ರಶಂಸನೀಯವಾದುದ್ದು.
ಎಷ್ಟು ಹೇಳಿದರು ಕಡಿಮೆ ಇಂತಹ ಅದ್ಬುತ ಪ್ರತಿಭೆಯನ್ನು ಪಾಂಡಿತ್ಯ ಉಳ್ಳ ಸಮಕಿತ್ ಸುಧೀರ್ ಕುರುಕುರೆ ಇವರಿಗೆ ನಿಮ್ಮ ಲೈಕ್ ಮತ್ತೆ ಕಮೆಂಟ್ ಮೂಲಕ ಪ್ರೊತ್ಸಾಹಿಸಿ.
ನಿರೂಪಕರು :- ಜೈ ಜಿನೇಂದ್ರ ಸಮಕಿತ್ ಕಾರ್ಯಕ್ರಮಕ್ಕೆ ಸ್ವಾಗತ.
ಸಮಕಿತ್ ಸುಧೀರ್ ಕುರುಕುರೆ :- ಜೈ ಜಿನೇಂದ್ರ ಧನ್ಯವಾದಗಳು ಆಯೋಜಕರಿಗೆ.
ನಿರೂಪಕರು :- ನಿಮ್ಮಲ್ಲಿ ಇರುವ ಧಾರ್ಮಿಕ ಆಸಕ್ತಿ ನೋಡಿ ನನಗೆ ತುಂಬ ಖುಷಿಯಾಯಿತು. ನೀವು ಕಲಿತಿರುವ ಸ್ತೋತ್ರಗಳು ಶ್ಲೋಕಗಳು ಹಾಗೂ ಧರ್ಮದ ಬಗ್ಗೆ ಇರುವ ನಿಮ್ಮ ಆಸಕ್ತಿಯನ್ನು ತಿಳಿದು ಕೊಳ್ಳಲು ಕಾಯುತ್ತ ಇದ್ದೀನಿ. ಮೊದಲು ನೀವು ಕಲಿತಿರುವ ಭಕ್ತಾಂಬರ ಸ್ತೋತ್ರದಿಂದ ಕಾರ್ಯಕ್ರಮವನ್ನು ಶುರುಮಾಡೊಣ.
(ಸಮಕಿತ್ ಸುಧೀರ್ ಕುರುಕುರೆ ರವರು ಭಕ್ತಾಂಬರ ಸ್ತೋತ್ರವನ್ನು ಹೇಳಿದರು).
ನಿರೂಪಕರು :- ತುಂಬ ಭಕ್ತಿ ಪೂರ್ವಕವಾಗಿ ಭಕ್ತಾಂಬರ ಸ್ತೋತ್ರವನ್ನು ಹೇಳಿದ್ದಿರ, ತುಂಬ ಖುಷಿಯಾಯಿತು. ನಿಮಗೆ ಜೈನ ಧರ್ಮದ ಬಗ್ಗೆ ಏನೇನು ಗೋತ್ತಿದೆ.
(ಸಮಕಿತ್ ಸುಧೀರ್ ಕುರುಕುರೆ ರವರು ಜೈನ ಧರ್ಮದ ಬಗ್ಗೆ ವಿವರಣೆಯನ್ನು ನೀಡಿದರು).
ನಿರೂಪಕರು :- ನಾನು ಕೇಳಿದ ಹಾಗೆ ನೀವು ಹಲವಾರು ಗ್ರಂಥಗಳಿಂದ ಬೇರೆ ಬೇರೆ ರೀತಿ ಮಂಗಳಾಷ್ಟಕ ಹೇಳುತ್ತೀರ ಅಂತ ನಾವೇಲ್ಲರು ಅದನ್ನು ಕೇಳಲು ಕಾಯುತ್ತ ಇದ್ದೀವಿ ನಮ್ಮ ಮುಂದೆ ಅದನ್ನು ಹೇಳುತ್ತೀರ.
(ಸಮಕಿತ್ ಸುಧೀರ್ ಕುರುಕುರೆ ರವರು ಮಂಗಳಾಷ್ಟಕವನ್ನು ಹೇಳಿದರು).
ನಿರೂಪಕರು :- ತುಂಬ ಸ್ಪಷ್ಟವಾಗಿ ಚೆನ್ನಾಗಿ ಹೇಳಿದ್ದೀರ ತುಂಬ ಖುಷಿಯಾಯಿತು ಕೇಳಿ. ವೀಕ್ಷಕರೆ ನನಗೆ ಸಮಕಿತ್ ರವರ ಇನ್ನೊಂದು ವಿಷಯ ತುಂಬಾ ಆಶ್ಚರ್ಯ ಮೂಡಿಸಿತು. ಅವರು ಇಷ್ಟು ಸಣ್ಣ ವಯಸ್ಸಿನಲ್ಲಿ ಸಮಯಸಾರವನ್ನು ಕೂಡ ಹೇಳುತ್ತಾರಂತೆ ಅವರು ಹೇಳುವ ಒಂದು ಸಮಯಸಾರವನ್ನ ಕೇಳಿಕೊಂಡು ಬರೋಣ ಬನ್ನಿ.
(ಸಮಕಿತ್ ಸುಧೀರ್ ಕುರುಕುರೆ ರವರು ಸಮಯಸಾರವನ್ನ ಹೇಳಿದರು).
ನಿರೂಪಕರು :- ಕೊನೆಯದಾಗಿ ನೀವು ನಮ್ಮೊಂದಿಗೆ ಜೈನ ಕವಿಗಳ ಬಗ್ಗೆ ನಿಮಗೆ ಗೊತ್ತಿರುವುದನ್ನು ತಿಳಿಸುತ್ತಿರ.
ಸಮಕಿತ್ ಸುಧೀರ್ ಕುರುಕುರೆ ರವರು ರತ್ನಾಕರವರ್ಣಿ ಮಹಾಕವಿ ಯವರ ಬಗ್ಗೆ ಪರಿಚಯವನ್ನು ನೀಡಿದರು.
(ರತ್ನಾಕರವರ್ಣಿಯವರ ಜನನ 16ನೇ ಶತಮಾನ ತಂದೆ ದೇವರಾಜ ಎತ್ತು ಭೈರವ ರಾಜ್ಯದ ಆಸ್ಥಾನ ಕವಿಯಗಿದರು ಮತ್ತು ಭರತೇಶ ವೈಭವ ಎನ್ನುವ ಕೃತಿಯನ್ನು ಬರೆದಿದ್ದರು, ತ್ರಿಲೋಕ ಶತಕ, ಅಪರಾಜಿತ ಶತಕ ಮತ್ತು ರತ್ನಾಕರ ಶತಕವೆಂಬ ಮೂರು ಶತಕಗಳನ್ನು ಬರೆದಿದ್ದರು. ಅವರಿಗೆ ಶೃಂಗಾರ ಕವಿ ಎಂದು ಬಿರುದು ಕೊಟ್ಟಿದ್ದರು).
ನಿರೂಪಕರು :- ನಮ್ಮ ಜೊತೆ ಮಾತನಾಡಿ ತುಂಬಾ ಖುಷಿಯಾಯಿತು, ನಮ್ಮಲ್ಲಿ ಇರುವ ಧಾರ್ಮಿಕ ಚಿಂತನೆಗಳನ್ನು ಹೆಚ್ಚಿಸಿ ಕೊಳ್ಳಿ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿ ಎಂದು ಆಶಿಸುತ್ತೇವೆ.
ಸಮಕಿತ್ ಸುಧೀರ್ ಕುರುಕುರೆ ರವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಧನ್ಯವಾದಗಳು. ಜೈ ಜಿನೇಂದ್ರ.
ಈಗ ನಿಮ್ಮ ಮುಂದೆ ಧರ್ಮದ ಪಾಠ ಪ್ರಸಾರವಾಗಲ್ಲಿದೆ ಧರ್ಮದ ಪಾಠವನ್ನು ಕೇಳಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ.
‘ಧರ್ಮದ ಕುಡಿ’
ಧರ್ಮದ ಬೆಳೆ ಬಿತ್ತೋಣ
‘ಧರ್ಮ ಪಾಠ’
ಧೀರಜ್ ಜೈನ್, ಹೊಳೆನರಸಿಪುರ.
ಜೈ ಜಿನೇಂದ್ರ ಮಕ್ಕಳೆ ಜ್ವಾಲಮಾಲ ಡಾಟ್ ನ್ಯೂಸ್ ಸಮರ್ಪಿಸುವ ಜೈನ ಧಾರ್ಮಿಕ ಪಾಠ ಕಾರ್ಯಕ್ರಮಕ್ಕೆ ನಿಮ್ಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ.
ಈ ಹಿಂದಿನ ಸಂಚಿಕೆಗಳಲ್ಲಿ ನಾವು ಆದಿನಾಥ ತೀರ್ಥಂಕರರ ಬಗ್ಗೆ ತಿಳಿದು ಕೊಂಡಿದೆವು, ಇಂದಿನ ಸಂಚಿಕೆಯಲ್ಲಿ ವರ್ತಮಾನ ಕಾಲದ ಎರಡನೇ ತೀರ್ಥಂಕರರಾದ ಅಜಿತನಾಥ ತೀರ್ಥಂಕರರ ಬಗ್ಗೆ ತಿಳಿದುಕೋಳ್ಳಣ.
ಅಜಿತನಾಥ ತೀರ್ಥಂಕರರು ಹಿಂದಿನ ಭವದಲ್ಲಿ ಜಂಬು ದ್ವೀಪದ ವಿದೇಹೆ ಕ್ಷೇತ್ರದ ಸೀತ ನದಿಯ ದಕ್ಷಿಣ ದಡದಲ್ಲಿ ಇರುವಂತಹ ವತ್ಸ ಎನ್ನುವ ದೇಶದ ಸುಸಿಮ ಎನ್ನುವ ನಗರದಲ್ಲಿ ವಿಮಲ ವಾಹನ ಎಂಬ ರಾಜನಾಗಿ ಆಳ್ವಿಕೆ ನಡೆಸುತ್ತಿದ್ದರು. ಜೈನ ಧರ್ಮದ ಬಗ್ಗೆ ಹೆಚ್ಚು ಅರಿವನ್ನು ಪಡೆದುಕೊಂಡಿದರು. ನಂತರ ವೈರಾಗ್ಯ ಹೊಂದಿದರು.
ಅವರ ತಂದೆ ಜಿತ ಶತೃ, ತಾಯಿ ವಿಜಯಾಂಭೆ. ಅವರ ಜನನ ಸ್ಥಳ ಅಯೋಧ್ಯೆ, ಅವರ ವರ್ಣ ಸ್ವರ್ಣ ವರ್ಣ, ಅವರ ಎತ್ತರ 450 ಬಿಲ್ಲಿನಷ್ಟು ಎತ್ತರವಿದ್ದರು. ಅವರ ಆಯಸ್ಸು 72 ಲಕ್ಷ ವರ್ಷಗಳಷ್ಟು.
ಅವರು ಅವರ ಅರಮನೆಯಲ್ಲಿ ಇದ್ದಂತ ಸಂದರ್ಭದಲ್ಲಿ ಉಲ್ಕಾಪಾತವಾಗುತ್ತದೆ ಆ ಉಲ್ಕಾಪಾತವನ್ನು ನೋಡಿದ ನಂತರ ಅವರಿಗೆ ವೈರಾಗ್ಯ ಬರುತ್ತದೆ. ಆಗ ಅವರು ರಾಜ್ಯವನ್ನು ತೊರೆದು ಮುನಿ ದೀಕ್ಷೆಯನ್ನು ಪಡೆಯುತ್ತಾರೆ. ಸಾಕೇತ ನಗರದ ರಾಜ ಬ್ರಹ್ಮ ಅನ್ನುವವರು ಮೊದಲ ಬಾರಿಗೆ ಆಹಾರವನ್ನು ನೀಡುತ್ತಾರೆ. ವಿಶೇಷವಾಗಿ ಪಾಯಸವನ್ನು ನೀಡುತ್ತಾರೆ. ಅವರಿಗೆ ಸಪ್ತವರ್ಣ ವೃಕ್ಷದ ಕೆಳಗೆ ಅವರಿಗೆ ಕೇವಲ ಜ್ಞಾನ ಪ್ರಾಪ್ತಿಯಾಗುತ್ತದೆ. ಸಮ್ವೇದಚಲ ಎನ್ನುವ ಒಂದು ಪರ್ವತದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ.
ಅಜಿತನಾಥ ತೀರ್ಥಂಕರರ ಲಾಂಛನ ಆನೆ.
ಮುಂದಿನ ಸಂಚಿಕೆಯಲ್ಲಿ ಶಂಭವನಾಥ ತೀರ್ಥಂಕರರ ಬಗ್ಗೆ ತಿಳಿದುಕೊಳ್ಳೋಣ ವಂದನೆಗಳು.
ಈ ಸಂಚಿಕೆಯ ಪ್ರಶ್ನೆಗಳು
- ಹಿಂದಿನ ಸಂಚಿಕೆಯಲ್ಲಿ ಏನನ್ನು ತಿಳಿದುಕೊಂಡಿದ್ದಿರಿ?
- ಅಜಿತನಾಥ ತೀರ್ಥಂಕರರು ಹಿಂದಿನ ಭವದಲ್ಲಿ ಏನಾಗಿದ್ದರು?
- ಪುಣ್ಯದಫಲದಿಂದ ಮುಂದಿನ ಭವದಲ್ಲಿ ಸ್ವರ್ಗದಲ್ಲಿ ಅವರು ಯಾರಗಿ?
- ಹಾಗೂ ಎಷ್ಟು ಕಾಲ ಇರುತ್ತಾರೆ?
- ಅಜಿತನಾಥ ತೀರ್ಥಂಕರರು ಎಲ್ಲಿ ಜನ್ಮ ತಾಳುತ್ತಾರೆ?
- ಅವರ ವರ್ಣ.ಎತ್ತರ ತಿಳಿಸಿ
- ಅವರಿಗೆ ಮೊದಲ ಬಾರಿಗೆ ಆಹಾರ ಯಾರು ?
- ಹಾಗೂ ಏನನ್ನು ನೀಡುತ್ತಾರೆ?
- ಅವರಿಗೆ ಯಾವಾಗ ಹಾಗೂ ಯಾವ ವೃಕ್ಷದ ಕೆಳಗೆ ಕೇವಲ ಜ್ಞಾನವನ್ನು ಪಡೆಯುತ್ತಾರೆ.
ವೀಕ್ಷಕರೆ ಮತ್ತೊಮ್ಮೆ ಹೀಗೆ ಪುಟ್ಟ ಪ್ರತಿಭೆಯೊಂದಿಗೆ ನಾವು ನಿಮ್ಮ ಮುಂದೆ ಬರುತ್ತೇವೆ. ಪ್ರತಿ ಭಾನುವಾರ ಬೆಳಗ್ಗೆ ಸರಿಯಾಗಿ 10:30ಕ್ಕೆ ನಿಮ್ಮ ಜ್ವಾಲಮಾಲ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾಗುವ ಧರ್ಮದ ಕುಡಿ ಕಾರ್ಯಕ್ರಮವನ್ನು ತಪ್ಪದೆ ವೀಕ್ಷಿಸಿ.
ಜೈ ಜೀನೆಂದ್ರ,
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













