ಸರ್ವೋದಯಧರ್ಮಚಿಂತನಮಂಥನಸಂಚಿಕೆ 2

ಸರ್ವೋದಯ ಧರ್ಮ ಚಿಂತನ ಮಂಥನ  ಕಾರ್ಯಕ್ರಮವನ್ನು ಮುಂದುವರೆಸುತ್ತಾ ಈ ವಾರದ ಚಿಂತನೆ .ಈ ವಾರದ  ವಿಷಯ : ಶ್ರಾವಕರ ಕರ್ತವ್ಯಗಳು.

 

ಮೊದಲಿಗೆ ಪ್ರಾರ್ಥನೆ  ಡಾ|| ಸ್ನೇಹಶ್ರೀ  ನಿರ್ಮಲ್ ಕುಮಾರ್ ಮೈಸೂರು ಇವರಿಂದ. ಮಹಾಕವಿ ರತ್ನಾಕರ ವರ್ಣಿ ಅವರ ಗೀತೆಯನ್ನು ಹಾಡಿದರು. ದಾನಕ್ಕೆ ಸಲ್ಲದ ಸಿರಿ ಇದ್ದರೇನು ಇಲ್ಲದಿದ್ದರೇನು? ಧ್ಯಾನಕ್ಕೆ ಬಾರದ ಬುದ್ದಿ ಇದ್ದರೇನು ಇಲ್ಲದಿದ್ದರೇನು? ಈ ಗೀತೆಗಳನ್ನು ಹಾಡಿದರು. ಧನ್ಯವಾದಗಳು ಇವರಿಗೆ.

 

ಈಗ ಸ್ವಾಗತ ಮತ್ತು ಪರಿಚಯ ಭಾಷಣ ಕುಮುದ ನಾಗಭೂಷಣ್  ಮೈಸೂರು ಇವರಿಂದ. ಇಂದಿನ ನಮ್ಮ ಕಾರ್ಯಕ್ರಮದ ದಿವ್ಯಪಾವನ  ಸಾನಿಧ್ಯವನ್ನು  ದಯಪಾಲಿಸಿರುವಂತಹ ಶ್ರೀ ಕ್ಷೇತ್ರ ಅರಹಂತಗಿರಿಯ ಪರಮಪೂಜ್ಯ ಸ್ವಸ್ಥಿ ಶ್ರೀ ಧವಳಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಮಹಾಸ್ವಾಮೀಜಿಯವರ ಚರಣಗಳಲ್ಲಿ ನಮಸ್ಕರಿಸುತ್ತಾ , ಭಾರತೀಯ ಜೈನ್ ಮಿಲನ್ ನ ಸಹಭಾಗಿತ್ವದೊಂದಿಗೆ ಜ್ವಾಲಾಮಾಲಾ ನ್ಯೂಸ್ ಪ್ರಸ್ತುತ ಪಡಿಸಿತ್ತಿರುವಂತಹ ಸರ್ವೋದಯ ಧರ್ಮ ಚಿಂತನ ಮಂಥನ  ಕಾರ್ಯಕ್ರಮದ ಒಂದು ವಿಶೇಷ ಸಂಚಿಕೆಗೆ ಇವತ್ತು ನಾವೆಲ್ಲರೂ ಕೂಡ ಜೊತೆಯಾಗಿದ್ದೇವೆ. ಶ್ರಾವಕರ ಕರ್ತವ್ಯಗಳ ಕುರಿತಾದಂತಹ ಪ್ರಶ್ನಾರ್ಥಿಗಳ ಪ್ರಶ್ನೆಗಳಿಗೆ ನಮ್ಮ ಜಿಜ್ನಾಸೆಗಳನ್ನು ಸಂದೇಹಗಳನ್ನು ನಿವಾರಿಸಲಿಕ್ಕಾಗಿ ಈ ಕಾರ್ಯಕ್ರಮದ ದಿವ್ಯ ಪಾವನ ಸಾನಿಧ್ಯ ವನ್ನು ವಹಿಸಿದ್ದಾರೆ ಪರಮ ಪೂಜ್ಯ ಧವಳಕೀರ್ತಿ ಸ್ವಾಮೀಜಿಯವರು  ಪೂಜ್ಯರು . ಇವರಿಗೆ ನಮ್ಮ ಇಚ್ಛಾಮಿಗಳನ್ನು ಅರ್ಪಿಸುತ್ತಾ ಭಕ್ತಿಪೂರ್ವಕವಾಗಿ ಅವರೊಂದಿಗೆ ಆಹ್ವಾನ ಮಾಡಿಕೊಳ್ಳುತ್ತಾ ಈ ಒಂದು ಕಾರ್ಯಕ್ರಮಕ್ಕೆ ನಮಗೆ ಎಲ್ಲಾ ರೀತಿಯ ಸಹಕಾರ ಮತ್ತು ಸಹಯೋಗವನ್ನು ನೀಡುತ್ತಿರುವಂತಹ  ಭಾರತೀಯ ಜೈನ್ ಮಿಲನ್ ವಲಯ 8ರ ಎಲ್ಲಾ ಪದಾದಿಗಳಿಗೂ ಕೂಡ ಹೃತ್ಪೂರ್ವಕವಾದಂತಹ ಸುಸ್ವಾಗತವನ್ನು ಬಯಸುತ್ತೇನೆ. ನಂತರ ಸ್ವಾಮೀಜಿಯ ಬಗ್ಗೆ ಕೂಲಂಕುಷವಾಗಿ ವಿಸ್ತಾರವಾಗಿ ನಮಗೆಲ್ಲರಿಗೂ ಪರಿಚಯಿಸಿದರು. ಮತ್ತು ಕಾರ್ಯಕ್ರಮಕ್ಕೆ ಆಹ್ವಾನವನ್ನು ಮಾಡಿದರು. ಈ ಕಾರ್ಯಕ್ರಮ ಭಾರತೀಯ ಜೈನ್ ಮಿಲನ್ ನ ಸಹಯೋಗದೊಂದಿಗೆ ಜ್ವಾಲಾಮಾಲಾ ನ್ಯೂಸ್ , ಇಂತಹ ಅನೇಕ ಕಾರ್ಯಕ್ರಮಗಳೊಂದಿಗೆ ನಮ್ಮೆಲ್ಲರ ಹೃದಯವನ್ನು ಗೆದ್ದಿರುವ ನಿರಂಜನ್ ಜೈನ್ ರವರು ಇವರಿಗೂ ನಮ್ಮ ವಂದನೆಗಳು ತಿಳಿಸುತ್ತಾ ಅವರ ಬಗ್ಗೆ ಕಿರುಪರಿಚಯವನ್ನು ಮಾಡಿಕೊಟ್ಟರು. ಈ ಕಾರ್ಯಕ್ರಮ ಪ್ರಶ್ನೆ ಮತ್ತು ಉತ್ತರದ ಕಾರ್ಯಕ್ರಮವಾಗಿದ್ದು ಹಾಗಾಗಿ ನಮಗೆ ಹಲವಾರು ಪ್ರಶ್ನಾರ್ಥಿಗಳು ನೇರಪ್ರಸಾರದಲ್ಲಿ ಬಂದು ಆ ಪ್ರಶ್ನೆಗಳನ್ನು ಕೇಳುವವರಿದ್ದು , ನಿಮ್ಮ ಮನಸ್ಸಿನಲ್ಲಿರುವ ಸಂದೇಹಗಳು, ಪ್ರಶ್ನೆಗಳನ್ನು ಕೇಳಿ ನಿಮ್ಮ ಉತ್ತರಗಳನ್ನು ಪಡೆದುಕೊಳ್ಳಬೇಕಾಗಿ ಹೇಳುತ್ತೇನೆ. ನಂತರ ಸ್ವಾಮೀಜಿಗಳು ಶ್ರಾವಕ ಶ್ರಾವಕಿಯರು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಿ ತಮ್ಮ ಆಶೀರ್ವಚನದ ಮೂಲಕ ಎಲ್ಲರಿಗೂ ಪೂಜೆಗಳ ವಿಧಿ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು. ಧನ್ಯವಾದಗಳು ಸ್ವಾಮೀಜಿಯವರಿಗೆ ನಮ್ಮ ನಿಮ್ಮೆಲ್ಲರ ಹಾಗೂ ಕಾರ್ಯಕ್ರಮವನ್ನು ವೀಕ್ಷಿಸಿದ ಎಲ್ಲಾ ವೀಕ್ಷಕರಿಗೂ ಧನ್ಯವಾದಗಳು  . ಮತ್ತೆ ನಮ್ಮ ನಿಮ್ಮೆಲ್ಲರ ಭೇಟಿ ಮುಂದಿನವಾರ ಕಾರ್ಯಕ್ರಮದಲ್ಲಿ ಭೇಟಿಯಾಗೋಣ.