ಜೈ ಜಿನೇಂದ್ರ ವೀಕ್ಷಕರೆ, ಈ ವಾರದಲ್ಲಿ ಅನೇಕ ಮುನಿ ಸಂಘದವರು ಚಾರುರ್ಮಾಸವನ್ನು ಮುಗಿಸಿ ವಿಹಾರವನ್ನು ಕೈಗೊಂಡಿದ್ದಾರೆ ಆಚಾರ್ಯಶ್ರೀ ವಿದ್ಯಾಸಾಗರ ಮುನಿಮಹಾರಾಜರ ವಿಹಾರದಲ್ಲಿ ಪಾಲ್ಗೊಂಡಿರುವ ಜನ ಸಾಗರವನ್ನು ಗಮನಿಸಿದಾಗ ನಮ್ಮ ಜೈನ ಮುನಿಗಳ ಶಕ್ತಿ ಹಾಗೂ ಮುನಿ ಭಕ್ತಿ ಅರಿವು ಉಂಟಾಗುತ್ತದೆ. ಇಂತಹ ಒಂದು ಹೆಮ್ಮೆಯ ಸಮುದಾಯದ ಜೈನ ಸುದ್ದಿಗಳೊಂದಿಗೆ ನಾನು ನಿಮ್ಮೊಂದಿಗೆ ಇದ್ದೇನೆ
ಮುಖ್ಯಾಂಶಗಳು:-
ಮಹಾವೀರ ಮೋಕ್ಷ ಕಲ್ಯಾಣ ದೀಪಾವಳಿ ಭಕ್ತಿಯುತ ಆಚರಣೆ.
ಆಚಾರ್ಯ ಶ್ರೀ ಜ್ಞಾನಸಾಗರ ಮಹಾರಾಜರು ಹಾಗೂ ಆಚಾರ್ಯ ಶ್ರೀ ನಿರ್ಮಲ ಸಾಗರ ಮಹಾರಾಜರ ಸಮಾಧಿಮರಣ.
ಯುವ ಜೈನ್ ಬ್ರಿಗೇಡ್ ವತಿಯಿಂದ ಆನೆಕೆರೆ ಬಸದಿ ಸ್ವಚ್ಛತಾ ಕಾರ್ಯ.
ಪ್ರಪ್ರಥಮ ಬಾರಿಗೆ ಸಂಸ್ಕೃತದಲ್ಲಿ ಶ್ರೀ ಭಟ್ಟಾಕಲಂಕ ಚರಿತೆ.
ಜೈನ ಅಭಿವೃದ್ದಿ ಮಂಡಳಿ ರಚನೆಗಾಗಿ ಜೈನ ಸಂಘ ಸಂಸ್ಥೆಗಳಿಂದ ಮಠಾಧೀಶರಿಂದ ಆಗ್ರಹ.
ಆರತಿಪುರದಲ್ಲಿ ನಡೆದ ಭಕ್ತಾಂಬರ ಯಂತ್ರ ಪ್ರತಿಷ್ಠಾಪನೆ ಮಹೋತ್ಸವ .
ಹೊಸಹೊಳಲು ಗ್ರಾಮದಲ್ಲಿ ಶ್ರೀ ಬ್ರಹ್ಮದೇವರ ಪ್ರತಿಷ್ಠಾಪನೆ.
ಶ್ರವಣಬೆಳಗೊಳದ ಶ್ರೀಗಳಿಂದ ಯುಗಳ ಮುನಿಗಳ ದರ್ಶನಕ್ಕಾಗಿ ಮಂದಾರಗಿರಿಗೆ ಭೇಟಿ.
ಕೇರಳದ ವೈನಾಡಿನ ಜೈನ್ ಮಿಲನ್ ವತಿಯಿಂದ ಕೈಗೊಳ್ಳಲಾದ ಸಮಾಜಮುಖಿ ಕಾರ್ಯ.
ಸುದ್ದಿಗಳ ವಿವರ:-
ಜೈನ ವರ್ತಮಾನ ತೀರ್ಥಂಕರರಲ್ಲಿ ಕೊನೆಯವರಾದರು ಜಗತ್ತಿಗೆ ಅತ್ಯಂತ ಪ್ರಬಲವಾಗಿ ತತ್ವಗಳನ್ನು ಸಾರಿದ ಭಗವಾನ್ ಮಹಾವೀರರ ಮೋಕ್ಷ ಕಲ್ಯಾಣವನ್ನು ಧರ್ಮ ಜ್ಯೋತಿ ಜ್ಞಾನ ಜ್ಯೋತಿ ಬೆಳಗಿದ ಪ್ರತೀಕವಾಗಿ ದೀಪಾವಳಿ ಹಬ್ಬವಾಗಿ ದೀಪಗಳನ್ನು ಬೆಳಗಿಸುವುದರ ಮೂಲಕ ಹಬ್ಬವನ್ನು ಆಚರಿಸುತ್ತೇವೆ.
ಸುಕುಮಾರ ಬಲ್ಲಾಳ್ ರವರು ಮಾತನಾಡಿ ಮಂಗಳೂರಿನ ಬಜಲಕೇರಿಯಲ್ಲಿರುವ ಭಗವಾನ್ 1008 ಆದಿನಾಥ ಸ್ವಾಮಿಯ ಸನ್ನಿಧಿಯಲ್ಲಿ ಮಂಗಳೂರಿನ ವೀರ ರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಪದಾಧಿಕಾರಿಗಳು ಭಗವಾನ್ ಮಹಾವೀರ ತೀರ್ಥಂಕರರ ನಿರ್ವಾಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ಭಾರತೀಯ ಜೈನ್ ಮಿಲನ್ ಸಹಭಾಗಿತ್ವದಲ್ಲಿ ಜ್ವಾಲಮಾಲ ನ್ಯೂಸ್ ಅರ್ಪಿಸುವ ಅದ್ಬುತ ಯಶಸ್ವಿನೊಂದಿಗೆ ನಡೆದ ಸರ್ವೋದಯ ಧರ್ಮ ಚಿಂತನ ಮಂಥನ ಕಾರ್ಯಕ್ರಮ ಶ್ರೀಯುತರಾದ ಡಿ, ಸುರೇಂದ್ರ ಕುಮಾರ್ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರಿಂದ ನಡೆದ ಉದ್ಘಾಟನ ಕಾರ್ಯಕ್ರಮ ಅವರ ಅರ್ಥಪೂರ್ಣ ಉದ್ಘಾಟನ ನುಡಿಗಳು ಪ್ರಶ್ನಾರ್ಥಿಗಳು ಕೇಳುವ ಅತ್ಯುತ್ತಮ ಪ್ರಶ್ನೆಗಳಿಗೆ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಡಿತಚಾರ್ಯ ವರ್ಯ ಮಹಾಸ್ವಾಮೀಜಿಗಳಿಂದ ವಿವರಣಾತ್ಮಕ ಸೂಕ್ತ ಸಮಾಧಾನ ಹಾಗೂ ಪ್ರವಚನದೊಂದಿಗೆ ಸುಂದರವಾಗಿ ಮೂಡಿಬಂತು.
ದವಲ ಗ್ರಂಥ ಸಂರಕ್ಷಕರು ಹಾಗಿರುವ ವಿಶೇಷವಾಗಿ ಹೇಳುವುದಾದರೆ ಜ್ವಾಲಮಾಲ ನ್ಯೂಸ್ ಗೆ ಸದಾ ಅನುಗ್ರಹ ಪೂರ್ವಕ ಮಾರ್ಗದರ್ಶನ ಹಾಗೂ ಆಶೀರ್ವಾದವನ್ನು ನೀಡುತ್ತಿರುವ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮೂಡುಬಿದ್ರೆ ಸ್ವಾಮಿಗಳು ಜೈನ ಮಠ ಸ್ವಾಮೀಜಿಗಳವರಿಗೆ ಭಕ್ತಿ ಪೂರ್ವಕ ಈಚ್ಚಾಮಿಗಳನ್ನು ಸಮರ್ಪಿಸುತ್ತಿದೇನೆ.
ಶ್ರೀಯುತರಾದ ಡಿ, ಸುರೇಂದ್ರ ಕುಮಾರ್ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಮತ್ತು ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಡಿತಚಾರ್ಯ ವರ್ಯ ಮಹಾಸ್ವಾಮೀಜಿಗಳು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು, ಪ್ರಶ್ನಾರ್ಥಿಗಳು ತಮಗೆ ಇದ್ದಂತಹ ಸಂದೇಹವನ್ನು ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಂಡರು.
ಸೋಂಧಾ ಶ್ರೀಮಠ ಶ್ರೀ ಆದಿನಾಥ ಜಿನಾಲಯದಲ್ಲಿ ನಡೆದ ಕಾರ್ಯಕ್ರಮವು ವಿಶೇಷವಾಗಿ ನೆರವೇರಿತು. ಶ್ರೀಗಳವರು ಮಾತನಾಡಿ ಜ್ವಾಲಮಾಲ ನ್ಯೂಸ್ ನವರ ಕಾರ್ಯವೈಕರಿಯನ್ನು ಪ್ರಶಂಶಿಸಿದರು, ಇನ್ನೂ ಹೆಚ್ಚಿನ ಧರ್ಮ ಕಾರ್ಯಗಳನ್ನು ಮಾಡಲಿ ಎಂದು ಆಶೀರ್ವಾದಿಸಿದರು.
ದಿನಾಂಕ 15-11-2020ರಂದು ಆಚಾರ್ಯ ಶ್ರೀ ಜ್ಞಾನ ಸಾಗರ ಮುನಿ ಮಹಾರಾಜರ ಹಾಗೂ ದಿನಾಂಕ 17-11-2020ರಂದು ಆಚಾರ್ಯ ಶ್ರೀ ನಿರ್ಮಲ ಸಾಗರ ಮುನಿ ಮಹಾರಾಜರ ಸಮಾಧಿ ಮರಣ ಪ್ರಪ್ತಿಯಾಗಿದ್ದು ಮೊಕ್ಷಗಾಮಿಗಳಾದ ಅವರ ವಿಚಾರಧಾರೆಗಳನ್ನು ಗೌರವಿಸಿ ಪಾಲಿಸುವುದರ ಮೂಲಕ ಮೃತ್ಯು ಮಹೋತ್ಸವವನ್ನು ಆಚರಿಸಿದ ಅವರನ್ನು ನಿರಂತರವಾಗಿ ನೆನೆಯೋಣ.
ಅವರ ಈ ಮೃತ್ಯು ಮಹೋತ್ಸವದ ಅಂಗವಾಗಿ ಮೈಸೂರಿನ ಜೈನ ಸಮಾಜದ ವತಿಯಿಂದ ಹಾಗೂ ಕರ್ನಾಟಕ ಜೈನ ಧರ್ಮ ಪೇಸ್ ಬುಕ್ ಪೆಜ್ ನಿಂದಲು ಕೂಡ ಬಾವಾಂಜಲಿ ಕಾರ್ಯಕ್ರಮವನ್ನು ನಡೆಸಿದರು.
ಇಂದಿನ ಸುದ್ದಿಗಳಲ್ಲಿ ಕಾರ್ಕಳದ ಬಸದಿಯ ಆವರಣದಲ್ಲಿ ಪ್ರವಾಸಿಗರ ವರ್ತನೆಯ ಬಗ್ಗೆ ತಿಳಿಸಲಾಗಿತ್ತು. ಇದರ ಫಲ ಶೃತಿಯಂತೆ ದಿನಾಂಕ 15-11-2020ರಂದು ಕಾರ್ಕಳ ಆನೆಕೆರೆ ಬಸದಿ ಸೂಚನ ಫಲಕವನ್ನು ಅಳವಡಿಸಲಾಗಿದೆ. ಹಾಗೂ ಬಸದಿಯ ಸುತ್ತಸ್ವಚತಾ ಕಾರ್ಯವನ್ನು ಕಾರ್ಕಳ ಜೈನ್ ಬ್ರಿಗೆಡ್ ವತಿಯಿಂದ ಮಾಡಲಾಗಿದೆ. ಇವರ ಈ ಧರ್ಮಪರ ಕಾಳಜಿಗೆ ಜ್ವಾಲಮಾಲ ವಂದನೆಗಳನ್ನು ಸಲ್ಲಿಸುತ್ತದೆ.
ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಭಟ್ಟಾಕಲಂಕ ಚರಿತ್ರೆಯನ್ನು ಹಿಡಿದಿಡುವ ಸಂಸ್ಕೃತ ನಾಟಕವನ್ನು ಲಿಪಿಬದ್ದ ಗೊಳಿಸಲಾಗಿದೆ.
ಅದೊಂದು ನಮ್ಮ ದೇಶದ ಹಲವೆಡೆಗಳಿಂದ ಪುಟಾಣಿಗಳು ಭಾಗವಹಿಸಿ ನಾಟಕ ರೂಪದಲ್ಲಿ ಸಂಸ್ಕೃತ ದಲ್ಲಿ ಪ್ರಸ್ತುತ ಪಡಿಸಿದ ಅಭೂತ ಪೂರ್ವ ಕಾರ್ಯಕ್ರಮ. ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರ ಪಾವನ ಉಪಸ್ಥಿತಿ ವಿದುಶಿ ತೇಜಸ್ವಿನಿಯವರ ಮಾರ್ಗದರ್ಶನದಲ್ಲಿ ನಡೆದು ಈ ಕಾರ್ಯಕ್ರಮದಲ್ಲಿ ಭಟ್ಟಾಕಲಂಕ ಚರಿತೆ ಹಿಂದಿ ಹಾಗೂ ಆಂಗ್ಲಭಾಷೆಯಲ್ಲಿರುವ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಸಂಸ್ಕೃತ ಭಾಷೆಯ ಕಾಲ ಮತ್ತೆ ಮರುಕಳಿಸಿದ ಅನುಭವವನ್ನು ನೀಡಿದ ಮಕ್ಕಳ ಪ್ರಯತ್ನ ಹಲವರ ಪ್ರಶಂಸೆಯನ್ನು ತಮ್ಮದಾಗಿಸಿತ್ತು.
ಜಾಹೀರಾತು
ರಾಜ್ಯದಲ್ಲಿ ವೀರ ಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆ ಹಿನ್ನೆಲೆಯಲ್ಲಿ, ಜೈನ ಸಮುದಾಯದ ಅಭಿವೃದ್ಧಿಗಾಗಿಯು ಕೂಡ ಪ್ರಾಧಿಕಾರದ ಅವಶ್ಯಕತೆಯನ್ನು ವಿವರಿಸಿ ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕರು ಸರ್ಕಾರಕ್ಕೆ ಆಗ್ರಹಿಸಿದ್ದು ಜೈನ್ ಮಿಲನ್ ರಾಷ್ಟೀಯ ಕಾರ್ಯದ್ಯಕ್ಷರಾದ ಡಿ ಸುರೇಂದ್ರ ಕುಮಾರ್ ರವರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದರ ಮೂಲಕ ಸೂಕ್ತ ನಡೆಯನ್ನು ಸಮುದಾಯದ ಪರವಾಗಿ ತೆಗೆದುಕೊಂಡಿರುವುದು ಶ್ಲಾಘನೀಯವಾಗಿದೆ. ಹಾಗೂ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಬಿ ಪ್ರಸನ್ನಯ್ಯ ನವರು ಕೂಡ ಮನವಿ ಸಲ್ಲಿಸಿರುವುದಲ್ಲದೆ, ಶಾಸಕ ಅಭಯ ಚಂದ್ರ ಜೈನ್ ರವರು ಈ ವಿಷಯವಾಗಿ ಆಗ್ರಹಿಸಿದ್ದಾರೆ.
ಶ್ರೀ ಕ್ಷೇತ್ರ ಆರತಿಪುರ ಜೈನ ಮಠದಲ್ಲಿ ಭಕ್ತಾಂಬರ 48 ಕಾವ್ಯಗಳ ಪ್ರತ್ಯೇಕ ಯಂತ್ರಗಳ ಹಾಗೂ ಬೈರವ ಪದ್ಮಾವತಿ ಅಮ್ಮನವರ ನೂತನ ಮೂರ್ತಿಯ ಪ್ರತಿಷ್ಟಾಪನೆ ವಿಧಿಪೂರ್ವಕವಾಗಿ ನೆರವೇರಿತು.
ಶ್ರೀ ಕ್ಷೇತ್ರ ಆರತಿಪುರ ಜೈನ ಮಠದಲ್ಲಿ ಭಕ್ತಾಂಬರ 48 ಕಾವ್ಯಗಳ ಪ್ರತ್ಯೇಕ ಯಂತ್ರಗಳ ಹಾಗೂ ಬೈರವ ಪದ್ಮಾವತಿ ಅಮ್ಮನವರ ನೂತನ ಮೂರ್ತಿಯ ಪ್ರತಿಷ್ಟಾಪನೆ ವಿಧಿಪೂರ್ವಕವಾಗಿ ನೆರವೇರಿತು.
ಅಲ್ಲದೆ ಶ್ರೀ ಪದ್ಮಾವತಿ ಅಮ್ಮನವರ ನೂತನ ಮೂರ್ತಿ ಪ್ರತಿಷ್ಟಾಪನೆ ಅಭಿಷೇಕಾಧಿ ಶೊಡಶೋಪಚಾರಗಳನ್ನು ಮಂಡ್ಯ ಮೈಸೂರು ಹಾಗೂ ಬೆಂಗಳೂರಿನಿಂದ ಬಂದ ಶ್ರಾವಕ ಶ್ರಾವಕಿಯರು ಭಕ್ತಿ ಪೂರ್ವಕವಾಗಿ ನೆರವೇರಿಸಿದರು.
ಕೆ ಆರ್ ಪೇಟೆ ಬಳಿಯಿರುವ ಹೊಸಹೊಳಲು ಗ್ರಾಮದ ಜಿನ ಮಂದಿರದಲ್ಲಿ ಶ್ರೀ ಬ್ರಹ್ಮ ಯಕ್ಷ ಮೂರ್ತಿಯನ್ನು ಪ್ರತಿಷ್ಟಾಪನೆಗೊಳಿಸಲಾಯಿತು.
ಸಮಿತಿ ಹಾಗೂ ಸಮಾಜದ ಮುಖಂಡರು ಮತ್ತು ಅಧ್ಯಕ್ಷರು ಉಪಸ್ಥಿತಿಯಲ್ಲಿದ್ದು ವಿಧಿ ಪೂರ್ವಕವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಪರಮ ಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಚಾರಿಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳು ಮಂಧಾರಗಿರಿಗೆ ಭೇಟಿ ನೀಡಿದ್ದಾರೆ.
ಯುಗಳ ಮುನಿಗಳ ದರ್ಶನದೊಂದಿಗೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಂಧಾರಗಿರಿ ಅಭಿವೃದ್ದಿಕಾರ್ಯ ಹಾಗೂ ಸಂವತ್ಸರಣ ನಿರ್ಮಾಣ ಸ್ಥಳದ ವೀಕ್ಷಣೆಯನ್ನು ಕೂಡ ಈ ಸಂದರ್ಭದಲ್ಲಿ ಮಾಡಿದ್ದಾರೆ.
ಇದೀಗ ಪ್ರಕಟಣೆಯ ಸಮಯ.
ಆಚಾರ್ಯ ವಿಷನ್ ಗುರುಕುಲ ಎಡು ಸರ್ವಿಸ್ ಮೈಸೂರು ಜಿನ ಭಕ್ತಿ ಗೀತೆಗಳು ಮತ್ತು ಜಿನ ಭಜನ ಸರಮಾಲೆ ಜಿನ ಸೌಧರ್ಮ ಕ್ರಿ,ಶ 2020ರ ಡಿಸೆಂಬರ್ ರಂದು ವಿಮೋಚನೆಗೊಳ್ಳಲ್ಲದ್ದು ಮೈಸೂರಿನ ಆಚಾರ್ಯ ವಿಷನ್ ಗುರುಕುಲ ಎಡು ಸರ್ವಿಸ್ ಪ್ರಕಾಶನದ ವತಿಯಿಂದ ಅದರ ಎರಡನೇ ಕೃತಿಯ ವಿದ್ಯಾವಾಚಸ್ಪತಿ ಡಾ. ಎಚ್ ಪಿ ಮೋಹನಕುಮಾರ ಅವರ ಸಂಪಾದಕತ್ವದಲ್ಲಿ ಹೊರ ಹೊಮ್ಮಲಿದ್ದು ಆಸಕ್ತ ಕವಿಗಳು ತೀರ್ಥಂಕರ ಯಕ್ಷ ಯಕ್ಷಿ ಬ್ರಹ್ಮಯಕ್ಷ, ಜೈನ ಧರ್ಮದ ಬಗ್ಗೆ ಎರಡು ಜಿನ ಗೀತೆಗಳನ್ನು ಈ ಕೆಳಕಂಡ ವಾಟ್ಸ್ ಆ್ಯಪ್ ನಂಬರ್ 9448443959 ಕ್ಕೆ ಡಿಸೆಂಬರ್ 1-2020ರ ಒಳಗೆ ಕಳುಹಿಸಲು ಕೋರಲಾಗಿದೆ.
ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ಹಾಗೂ ಮೈಸೂರು ವಿಭಾಗದ ಕೇರಳ ವೈಯನಾಡಿನ ಜೈನ ಮಿಲನ್ ವತಿಯಿಂದ ನಡೆದ ಸಮಾಜ ಮುಖಿ ಕಾರ್ಯಗಳ ಪುಟ್ಟ ವರದಿ ಇಲ್ಲಿದೆ.
ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ಜೈನ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಆಹ್ವಾನಿಸಲಾಗಿತ್ತು ಅರ್ಜಿ ಸಲ್ಲಿಸಿದ 36 ವಿದ್ಯಾರ್ಥಿಗಳಿಗೂ ಸಹ ಪ್ರತಿ ವಿದಯಾರ್ಥಿಗೂ 2 ಅಥವಾ 3 ಸಾವಿರದಂತೆ 97 ಸಾವಿರ ರೂಪಾಯಿಗಳನ್ನು ಹಸ್ತಾಂತರಿಸಲಾಯಿತು. ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಿರುವ ಭಾರತೀಯ ಜೈನ್ ಮಿಲನ್ ವಲಯ 8ರ ಮೆಚ್ಚುಗೆಗೆ ಪಾತ್ರವಾಗಿದೆ. ಕೇರಳದ ವೈಯನಾಡಿನ ರತ್ನಾತ್ರೇಯ ಜೈನ್ ಮಿಲನ್ ಸಭೆ 25-10-2020ರಂದು ವರಡೂರಿನಲ್ಲಿ ನಡೆದ್ದಿದ್ದು ಈ ಸಭೆಯಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. ಅದರಂತೆಯೇ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾ ಬಡ ವಿದ್ಯಾರ್ಥಿಯವರ ಕುಟುಂಬಕ್ಕೆ ಜೈನ ಮಿಲನ್ ವತಿಯಿಂದ ಒಟ್ಟು 1,55,000 ಹಣವನ್ನು ಸಂಗ್ರಹಿಸಿ ಪೊಷಕರಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಿಲನ್ ಫೌಂಡರ್ ಪ್ರಸಿಡೆಂಟ್ ಯಶೋಧ ಸ್ವಾಮಿ, ಮಿಲನ್ ಪ್ರಸಿಡೆಂಟ್ ರಾಜೇಂದ್ರ ಮಾಸ್ಟರ್, ಡೈರೆಕ್ಟರ್ ಜಯಮ್ಮ ಜೈನ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಅದೆ ರೀತಿ ಮಹಾವೀರ ಸ್ವಾಮಿ ಮೊಕ್ಷಕಲ್ಯಾಣ ಪ್ರಯುಕ್ತ ಸರಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಮನೆಯಲ್ಲಿ ತಯಾರಿಸಿದ ಆಹಾರ ಹಾಗೂ ಹಣ್ಣು ವಿತರಿಸಲಾಯಿತು. ಇಂತಹ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮಿಲನ್ ಸರ್ವ ಸದಸ್ಯರಿಗೂ ಜ್ವಾಲಮಾಲ ನ್ಯೂಸ್ ಅಭಿನಂದಿಸುತ್ತದೆ.
ವಾರದ ಜೈನ ಸುದ್ದಿಗಳು ವೀಕ್ಷಸಿದ ನಿಮ್ಮಗೆಲ್ಲರಿಗು ಧನ್ಯವಾದಗಳು
ಹೀಗೆ ಪ್ರತಿ ವಾರವು ವೀಕ್ಷಿಸುತಿರಿ, ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













