ವ್ಯವಸ್ಥಾಪಕ ನಿರ್ದೇಶಕರು ಜ್ವಾಲಾಮಾಲಾ ನ್ಯೂಸ್ ಇವರಿಂದ : ಭಗವಾನ್ ಶ್ರೀ ಮಹಾವೀರ ಸ್ವಾಮಿ ನಮಃ ಪರಮಪೂಜ್ಯ ಮುನಿ ವರ್ಗಕ್ಕೆ ಭಕ್ತಿಯಿಂದ ನಮೋಸ್ತುಗಳನ್ನು ಅರ್ಪಿಸುತ್ತಾ ಗುರುಹಿರಿಯರ ಆಶೀರ್ವಾದವಿಲ್ಲದೇ ಯಾವ ಕಾರ್ಯವೂ ಸುಗಮವಾಗಿ ಸಂಪನ್ನವಾಗುವುದಿಲ್ಲ. ಧಾರ್ಮಿಕ ಚಿಂತನೆಯನ್ನು ನಡೆಸಬೇಕಾದರೆ ಧರ್ಮ ಗುರುಗಳ ಆಶೀರ್ವಾದ ಅತ್ಯವಶ್ಯಕ . ಇಂತಹ ಕಾರ್ಯಕ್ರಮವನ್ನು ಅಲ್ಪಜ್ನರಾದ ನಾವು ಕೈಗೆತ್ತಿಕೊಂಡಾಗ ಅದು ಸುಸೂತ್ರವಾಗಿ ನಡೆಯಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹರಸಿರುವಂತಹ ಕರ್ನಾಟಕದ ಸಮಸ್ತ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರಿಗೆ ಕೃತಜ್ನತಾಪೂರ್ವಕ ಇಚ್ಛಾಮಿಗಳನ್ನು ಸಲ್ಲಿಸುತ್ತಿದ್ದೇನೆ. ಹಾಗೂ ಇಂದಿನ ಕಾರ್ಯಕ್ರಮದ ಪಾವನ ಉಪಸ್ಥಿತಿಯಲ್ಲಿ ಧರ್ಮಾಸಕ್ತರುಗಳಿಗೆ ಸಮಾಧಾನವನ್ನು ನೀಡಲಿರುವ ಅಪೂರ್ವ ಜ್ನಾನಿಗಳು ಧವಳ ಧರ್ಮ ಗ್ರಂಥ ಸಂರಕ್ಷಕರು ಆಗಿರುವ ವಿಶೇಷವಾಗಿ ಹೇಳುವುದಾದರೆ ಜ್ವಾಲಾಮಾಲಾ ನ್ಯೂಸ್ ಗೆ ಸದಾ ಅನುಗ್ರಹ ಪೂರಕ ಮಾರ್ಗದರ್ಶನ ಹಾಗೂ ಆಶೀರ್ವಾದವನ್ನು ನೀಡುತ್ತಿರುವ ಪರಮಪೂಜ್ಯ ಜಗದ್ಗುರು ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮೂಡುಬಿದ್ರೆ ಸ್ವಾಮಿಗಳು ಜೈನಮಠ. ಮಹಾಸ್ವಾಮೀಜಿಗಳವರಿಗೆ ಭಕ್ತಿಪೂರ್ವಕ ಇಚ್ಛಾಮಿಗಳನ್ನು ಸಲ್ಲಿಸುತ್ತಿದ್ದೇನೆ .
ಸಮಾಜದಲ್ಲಿ ಯಾವುದೇ ಉತ್ತಮ ಕೆಲಸವಾಗಬೇಕಾದರೂ ಅದಕ್ಕೆ ಒಪ್ಪಿಗೆಯನ್ನು ಸೂಚಿಸಿ ಬೆಂಬಲಿಸುವವರು ಧರ್ಮಸ್ಥಳದ ಶ್ರೀ ಡಿ. ಸುರೇಂದ್ರ ಕುಮಾರ್ ರವರು ಹಾಗೂ ಅನಿತಕ್ಕ ಎಂದೇ ಪ್ರಸಿದ್ಧಿಯಾಗಿರುವ ನಮ್ಮ ಅನಿತಕ್ಕನವರು . ನಮ್ಮ ಹೃದಯಾಂತರಾಳದಲ್ಲಿ ನಿಂತ ದಂಪತಿಗಳು. ಗುಣದಿಂದಲೂ ಶ್ರೀಮಂತಿಕೆಯಿಂದಲೂ ಹೃದಯ ವೈಶಾಲ್ಯತೆಯಿಂದಲೂ ಉಳ್ಳಂತಹ ಇವರು ನನ್ನನ್ನು ಹರಸಿ ಜ್ವಾಲಾಮಾಲಾದ ಪ್ರತಿ ಕಾರ್ಯಕ್ರಮಕ್ಕೂ ಆಹ್ವಾನಿಸುತ್ತಿದ್ದೇನೆ. ಧಾರ್ಮಿಕ ವಿಷಯಗಳಲ್ಲಿ ಅನೇಕ ಕುತೂಹಲವನ್ನು ಮನದಲ್ಲಿ ಉಳ್ಳಂತಹ ಜೈನ ಬಾಂಧವರು ಧರ್ಮ ಗ್ರಂಥಗಳ ಆಧಾರದ ಉತ್ತರವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಡೆಯಲಿರುವ ಪ್ರಶ್ನಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರುತಿದ್ದೇನೆ. ಧಾರ್ಮಿಕ ಹಾಗೂ ಸಾಮಾಜಿಕ ಚಟುವತಿಕೆಗಳು ಎಂದಾಕ್ಷಣ ನಿರಂಜನ್ ಜೈನ್ ಕುದ್ಯಾಡಿಯವರ ಲೇಖನಗಳು ನೋಡಲು ಸಿಗುತ್ತವೆ. ಜೈನರೆಲ್ಲರನ್ನು ಧಾರ್ಮಿಕವಾಗಿ ಸಾಮಾಜಿಕವಾಗಿ ಒಗ್ಗೂಡಿಸಿ ಕಾರ್ಯ ಪ್ರವೃತ್ತರಾಗುವಂತೆ ತಮ್ಮ ನಿರಂತರ ಪ್ರಯತ್ನದಿಂದ ಬರವಣಿಗೆಗಳ ಮೂಲಕ ಮುನ್ನುಡಿ ಬರೆಯುತ್ತಿದ್ದಾರೆ. ಶ್ರೀ ಜಿರಂಜನ್ ಜೈನ್ ಕುದ್ಯಾಡಿಯವರಿಗೂ ಸ್ವಾಗತವನ್ನು ಬಯಸುತ್ತಿದ್ದೇನೆ.
ಜೈನ ಸಮುದಾಯದ ಏಳಿಗೆಗಾಗಿ ಸಂಘಟನೆಗಾಗಿ ಜೈನ್ ಮಿಲನ್ ವತಿಯಿಂದ ಉತ್ತಮ ಕಾರ್ಯಗಳು ನಡೆಯುತ್ತಾ ಬಂದಿದ್ದು ಕನಕಗಿರಿಯ ಮಹಾಮಸ್ತಕಾಭಿಷೇಕದ ನಂತರ ಜ್ವಾಲಾಮಾಲಾ ನ್ಯೂಸ್ ಚಾನೆಲ್ ಪರಿಚಿತವಾಗಿದ್ದು ಜೈನ್ ಮಿಲನ್ ಕಾರ್ಯಕ್ರಮಗಳ ಮೂಲಕ ಇನ್ನುವುದನ್ನು ನಾನು ಮರೆಯುವುದಿಲ್ಲ. ಪ್ರಾರಂಭದ ಭದ್ರ ಬುನಾದಿಯನ್ನು ನೀಡುವಲ್ಲಿ ಸಹಕರಿಸಿದ ಅಂದಿನ ಅಧ್ಯಕ್ಷರಾದ ಅಜ್ಜಪ್ಪನವರು ಹಾಗೂ ಈಗಿನ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ರವರು ಎಲ್ಲರ ಹೆಸರನ್ನು ಈ ಸಮಯದ ಅಭಾವದಲ್ಲಿ ತೆಗೆದುಕೊಳ್ಳಲು ಆಗದಿದ್ದರೂ ಎಲ್ಲರೂ ಪ್ರತಿಯೊಬ್ಬರೂ ಎಲ್ಲಾ ಪದಾದಿಕಾರಿಗಳು ಪ್ರೋತ್ಸಾಹವನ್ನು ನೀಡಿದ್ದಾರೆ. ಇಂತಹ ಜೈನ್ ಮಿಲನ್ ವತಿಯಿಂದ ಇಂದಿನ ಕಾರ್ಯಕ್ರಮದ ಉದ್ದೇಶವನ್ನು ತಮ್ಮ ಪ್ರಾಸ್ಥಾವಿಕ ನುಡಿಯಲ್ಲಿ ಪ್ರಸ್ತುತಪಡಿಸಲಿರುವ ಜೈನ್ ಮಿಲನ್ ಬೆಂಗಳೂರು ವಿಭಾಗದ ಕಾರ್ಯದರ್ಶಿಗಳಾದ ವಿಲಾಸ್ ಪಾಸಣ್ಣನವರಿಗೂ ಸ್ವಾಗತವನ್ನು ಕೋರುತ್ತಿದ್ದೇನೆ. ಸಲಹೆ ಸಹಕಾರ ನೀಡುತ್ತಾ ಎಲ್ಲ ಕಾರ್ಯಕ್ರಮವನ್ನು ಪ್ರೋತ್ಸಾಹವನ್ನು ನೀಡುತ್ತಿರುವ ಯುವ ಅಜಿತ್ ರವರಿಗೂ ಸ್ವಾಗತವನ್ನು ಬಯಸುತ್ತಿದ್ದೇನೆ. ಇನ್ನು ಝೂಮ್ ಪೇಜ್ ತಾಂತ್ರಿಕ ವರ್ಗದವರಾದ ನಮ್ಮ ವಿದ್ಯಾರಣ್ಯಪುರಂ ಯುವಜೈನ್ ಮಿಲನ್ ಇವರಿಗೂ ಕೂಡ ಸ್ವಾಗತವನ್ನು ಬಯಸುತ್ತಿದ್ದೇನೆ. ನಮ್ಮ ತಂಡದವರನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪ್ರೋತ್ಸಾಹಿಸಿದ ಎಲ್ಲರನ್ನು ನೆನಪಿಸಿಕೊಳ್ಳುತ್ತಾ ಅತಿ ಮುಖ್ಯವಾಗಿ ನಮ್ಮ ಎಲ್ಲಾ ಕಾರ್ಯಕ್ರಮವನ್ನು ಯೂಟ್ಯೂಬ್ ಮೂಲಕ , ಫೇಸ್ ಬುಕ್ ನಲ್ಲಿ ಹಾಗೂ ವಾಟ್ಸಾಪ್ ನಲ್ಲಿ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಇರಬಹುದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸುತ್ತಿರುವ ವೀಕ್ಷಕ ಬಾಂಧವರೆಲ್ಲರಿಗೂ ಹೃದಯ ಪೂರ್ವಕ ಸ್ವಾಗತವನ್ನು ಬಯಸುತ್ತಿದ್ದೇನೆ. ಎಲ್ಲರಿಗೂ ಜೈ ಜಿನೇಂದ್ರ . ಈಗ ಪ್ರಾಸ್ಥಾವಿಕ ನುಡಿ ವಿಲಾಸ್ ಪಾಸಣ್ಣನವರು ಭಾರತೀಯ ಜೈನ್ ಮಿಲನ್ ವಲಯ 8 ಬೆಂಗಳೂರು ವಿಭಾಗದ ಕಾರ್ಯದರ್ಶಿಗಳು. ಮಾತನಾಡಿ ಈ ದಿನದಿಂದ ಆರಂಭಗೊಳ್ಳುತ್ತಿರುವ
ಧಾರ್ಮಿಕ ಕಾರ್ಯಕ್ರಮ ಸರ್ವೋದಯ ಧರ್ಮ , ಚಿಂತನ ಮಂಥನ ಕಾರ್ಯಕ್ರಮ ಪ್ರಾಸ್ಥಾವಿಕ ನುಡಿಯನ್ನು ಭಾರತೀಯ ಜೈನ್ ಮಿಲನ್ ವಲಯ 8 ಬೆಂಗಳೂರು ವಿಭಾಗದಿಂದ ನಡೆಸಿಕೊಡಲಾಗುತ್ತಿದೆ. ಜಿನೇಂದ್ರ ಭಗವಂತನ ದಿವ್ಯ ವಾಣಿಯಲ್ಲಿ ಅರ್ಥವಾಗದಂತಹ ಅನೇಕ ವಿಷಯಗಳು ಹಾಗೂ ಅವುಗಳಲ್ಲಿನ ಹಲವಾರು ಪದಪುಂಜಗಳು ಜನಸಾಮಾನ್ಯರಿಗೆ ಅರ್ಥವಾಗದಿದ್ದಾಗ ಅವುಗಳನ್ನು ಸರಿಯಾಗಿ ಅರ್ಥೈಸಿ ತಿಳಿಸಿಕೊಡುವುದು ಗಣ ಧರ್ಮ. ಹಾಗೆಯೇ ಪರಂಪರಾಗತವಾಗಿ ಅರ್ಥವನ್ನು ನೀಡುತ್ತಾ ಬಂದವರು ನಮ್ಮ ಮುನಿಗಳು ಭಟ್ಟಾರಕರುಗಳು, ವಿದ್ವಾಂಸರು ಇಂತಹ ವಿದ್ಮತ್ತತೆಯನ್ನು ಉಳ್ಳ ವಿದ್ವಾಂಸರು ಕಷ್ಟಕಾಲದಲ್ಲಿ ಸಮರ್ಥರಾಗುತ್ತಾರೆ ಎಂದು ಚಂದ್ರಮುಕ್ತಸ್ವಪ್ನದ ಫಲಗಳಲ್ಲಿ ಒಂದಾಗಿದೆ. ಇಂತಹ ಪರಂಪರೆಯು ಮುಂದಾಗಲಿ ಎಂಬ ಕಾರಣಕ್ಕಾಗಿ ಸರ್ವೋದಯ ಧರ್ಮ ಚಿಂತನ ಮಂಥನ ಎಂಬ ಕಾರ್ಯಕ್ರಮವನ್ನು ಸದ್ಭಾವನೆಯಿಂದ ಆಯೋಜಿಸಲಾಗುತ್ತಿದೆ. ನಮಗೆ ಗೊತ್ತಿರುವ ಹಾಗೂ ಗೊತ್ತಿಲ್ಲದೆ ಇರುವ ಧರ್ಮದ ವಿಷಯಗಳ ಬಗ್ಗೆ ಸರ್ವೋದಯ ಧರ್ಮ ಚಿಂತನ ಮಂಥನ ಎಂಬ ಕಾರ್ಯಕ್ರಮ ಆಯೋಜಿಸಿರುವ ಕಾರ್ಯಕ್ರಮದ ರೂವಾರಿಗಳಾದ ಮೈಸೂರಿನ ಜ್ವಾಲಾಮಾಲಾ ನ್ಯೂಸ್ ನ ತಾಂತ್ರಿಕ ವರ್ಗ ಹಾಗೂ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀಮತಿ ವೈಶಾಲಿ ಚಂದ್ರಪ್ರಭುರವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಇವರ ಬಗ್ಗೆ ಹೇಳಬೇಕೆಂದರೆ ಇವರು ಕಳೆದ 20ವರ್ಷಗಳಿಂದಲೂ ದೃಶ್ಯ ಮಾಧ್ಯಮದಲ್ಲಿ ನಿರತರಾಗಿರುವವರು .ಕೇಬಲ್ ಫೀಲ್ಡ್ ಮೂಲಕ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಲೋಕಲ್ ಚಾನಲ್ ಗಳನ್ನು ನಡೆಸುತ್ತಾ ಬಂದಿದ್ದಾರೆ ಅದನ್ನೇ ಮುಂದುವರೆಸಿ ರಾಜ್ಯ ಮಟ್ಟದ ಚಾನೆಲ್ ನ್ನು ಮಾಡಬಹುದಾಗಿತ್ತು ಅಂತಹ ಅವಕಾಶವನ್ನು ತೊರೆದು ನಮ್ಮ ಧರ್ಮಕ್ಕಾಗಿ ಚಾನಲ್ ಒಂದರ ಅವಶ್ಯಕತೆ ಇದೆ ಎಂದು ಮನಗಂಡು ತಮ್ಮದೇ ಆದ ಜಾಲತಾಣದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆದ್ದರಿಂದ ಇದೇ ಮೊದಲ ಬಾರಿಗೆ ಸರ್ವೋದಯ ಧರ್ಮ ಚಿಂತನ ಮಂಥನ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿರುವುದು ತುಂಬಾ ದೊಡ್ಡ ವಿಷಯವಾಗಿದ್ದು ಈ ಕಾರ್ಯಕ್ರಮಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಅಗತ್ಯವೆಂದು ಹೇಳಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನುಕೋರಿದರು.
ಶ್ರೀಯುತ ಡಿ ಸುರೇಂದ್ರಕುಮಾರ್ ದಂಪತಿಗಳಿಂದ ಕಾರ್ಯಕ್ರಮದ ದೀಪಾರಾಧನೆ ನಡೆಯಿತು. ನಂತರ ಉದ್ಘಾಟನಾ ಭಾಷಣವನ್ನು ಶ್ರೀಯುತರು ಪ್ರಾರಂಬಿಸಿ ಪೂಜ್ಯ ಮೂಡುಬಿದಿರೆಯ ಸ್ವಾಮಿಜಿಯವರಿಗೆ ನಮಸ್ಕರಿಸಿ ಈ ಶುಭ ಸಂದರ್ಭದಲ್ಲಿ ದೀಪಾವಳಿ ಹಬ್ಬವನ್ನುಆಚರಿಸುವ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದು ತುಂಬಾ ಸಂತೋಷದ ವಿಷಯ. ಅವರು ಸ್ವಾಮೀಜಿಯವರ ಬಗ್ಗೆ ಮತ್ತು ಅವರ ಕಾರ್ಯ ವೈಖರಿಯ ಬಗ್ಗೆ ತಿಳಿಸಿ ಅವರನ್ನು ನೋಡಿದರೆ ಸ್ವಾಮಿ ವಿವೇಕಾನಂದರವರ ರೀತಿಯಲ್ಲಿ ದೇಶ ಹಾಗೂ ವಿದೇಶಗಳಲ್ಲಿ ಕಾರ್ಯಗಳನ್ನು ನಿರ್ವಹಿಸಿ ಇಡಿ ದೇಶ ವಿದೇಶದಲ್ಲೆ ಪ್ರಪಂಚ ಪರ್ಯಟನೆ ಮಾಡಿದ್ದಾರೆ. ಹಾಗೂ ಈ ಕಾರ್ಯಕ್ರಮವನ್ನು ನಿಯೋಜಿಸಿರುವ ಚಂದ್ರಪ್ರಭ ರವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು. ನಮ್ಮ ಧರ್ಮವನ್ನು ಶಾಂತಿರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡುತ್ತಿವೆ ಅದಕ್ಕೆ ನಮ್ಮ ಬೆಂಬಲ ಯಾವಗಲೂ ಇದ್ದೇ ಇರುತ್ತದೆ. ಎಂದು ತಿಳಿಸಿದರು.
ನಂತರ ಸ್ವಾಮೀಜಿಯವರನ್ನು ಎಲ್ಲರೂ ಸಹ ತಮ್ಮ ತಮ್ಮ ಅನಿಸಿಕೆ ಹಾಗೂ ಧರ್ಮದ ವಿಚಾರಗಳ ಬಗ್ಗೆ ಧರ್ಮದ ರೀತಿ ನೀತಿಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಮನುಷ್ಯನಿಗೆ ಬೇಕಾದ ಆರೋಗ್ಯ ಶಾಂತಿ ಹಾಗೂ ನೆಮ್ಮದಿಯ ಜೀವನವನ್ನು ಹೇಗೆ ರೂಡಿಸಿಕೊಳ್ಳಬೇಕು ಎಂದು ಎಲ್ಲರಿಗೂ ಸ್ವಾಮೀಜಿಯವರು ತಿಳಿಯುವಂತೆ ಸೂಚನೆಗಳನ್ನು ತಿಳಿಸಿಕೊಟ್ಟರು. ಧನ್ಯವಾದಗಳು ಸ್ವಾಮೀಜಿಯವರಿಗೆ.














