ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ ನಿಮ್ಮನ್ನೆಲ್ಲಾ ಈ ವಾರದ ಸುದ್ದಿ ಸಂಚಿಕೆಗೆ ಸ್ವಾಗತ:
ಮುಖ್ಯಾಂಶಗಳು:
ಬಾರಕೂರಿನ ಆಕ್ರಮಿತ ಬಸದಿ ಬಿಡುಗಡೆಗೆ ಆಗ್ರಹ
ಅರಟಾಳದಲ್ಲಿ ನಡೆದ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಹಾಗೂ ಪೂಜ್ಯ ಆರ್ಯಿಕಾ 105 ಜ್ನಾನಮತಿ ಮಾತಾಜಿಯವರ ಜನ್ಮಜಯಂತಿ
ಕೊರೋನಾ ಕಾರಣ ವಿಳಂಬವಾದ ಈ ಬಾರಿಯ ಪ್ರಾಕೃತ ಪರೀಕ್ಷೆ ದೇಶದಲ್ಲೆಡೆಯಂತೆ ಹುಬ್ಬಳ್ಳಿಯಲ್ಲಿ ನಡೆದ ಪರೀಕ್ಷೆ.
ಬೆಳಗಾವಿಯಲ್ಲಿ ಸಂಕಷ್ಟದಲ್ಲಿರುವ ಜೈನ ಕುಟುಂಬಗಳಿಗೆ ನೆರವು.
ಆರತಿಪುರದಲ್ಲಿ ಶ್ರೀ ಭಕ್ತಾಂಬರ ಯಂತ್ರ ಪ್ರತಿಷ್ಠಾಪನೆ.
ರತ್ನಕರಂಡಕ ಶ್ರಾವಕಚಾರ ಸ್ವಾಧ್ಯಯ ಗಣದಿಂದ ನಡೆದ ದೀಪಾರಾಧನೆ.
ಸುದ್ದಿಗಳ ವಿವರ:
ಬಾರಕೂರಿನ ಅನೇಕ ಪುರಾತನ ಜೈನ ಬಸದಿಗಳು ಅನ್ಯರ ಆಕ್ರಮಣಕ್ಕೆ ತುತ್ತಾಗಿದ್ದು, ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಒಂದು ಸುದ್ದಿಯ ವಿವರ ಇಲ್ಲಿದೆ. ಒಂದು ಕಾಲದಲ್ಲಿ ಪ್ರಾಚೀನ ತುಳುನಾಡಿನ ರಾಜಧಾನಿ ಬಾರಕೂರು. ಹಾಗೆಯೇ ಬಾರಕೂರಿನಲ್ಲಿ ಅನೇಕ ಜೈನ ಬಸದಿಗಳಿದ್ದವು. ಇದೀಗ ಪುರಾತನ ಬಸದಿಗಳು ಅನ್ಯರ ಆಕ್ರಮಣಕ್ಕೆ ತುತ್ತಾಗಿದೆ. ಈ ಆಕ್ರಮಣವನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು ದಿನಾಂಕ 11/11/2020 ರ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ತಹಸೀಲ್ದಾರರು ಬಾರಕೂರಿನ ಆಕ್ರಮಿತ ಬಸದಿಗೆ ಸರ್ವೆ ಮಾಡಲು ಭೇಟಿ ನೀಡಿದ್ದರು. ಈ ಸಮಯದಲ್ಲಿ ಜೈನ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತ್ಯಕ್ಷವಾಗಿ ಸ್ಥಳಕ್ಕೆ ಬಂದು ಬಸದಿಯ ಆಕ್ರಮಣವನ್ನು ವಿರೋದಿಸುತ್ತಿರುವ ಡಾ|| ಆಕಾಶ್ ರಾಜ್ ಜೈನ್ ರವರಿಗೆ ನೈತಿಕ ಸ್ಥೈರ್ಯ ಹಾಗೂ ಸಮಾಜಕ್ಕೆ ಸ್ಪಷ್ಟ ಸಂದೇಶವನ್ನು ನೀಡಲು ತಮ್ಮ ಸಹಕಾರವನ್ನು ಪ್ರಬಲವಾಗಿ ವ್ಯಕ್ತ ಪಡಿಸುವಂತೆ ಆಗ್ರಹಿಸಲಾಗಿತ್ತು. ಈ ಸಂದರ್ಭದಲ್ಲಿ ಉಡುಪಿ ಜೈನ್ ಮಿಲನ್ , ಕಾರ್ಕಳ ಜೈನ್ ಮಿಲನ್ ,ಬಜಕೋಳಿ ಜೈನ್ ಮಿಲನ್ , ಮುಲ್ಕಿ ಜೈನ್ ಮಿಲನ್ ಸದಸ್ಯರು ಭಾಗವಹಿಸಿ ಶ್ರೀಯುತ ಆಕಾಶ್ ರಾಜ್ ರವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.
ಪ್ರಾಚೀನ ಪ್ರಾಕೃತ ಭಾಷೆಯನ್ನು ಅರಿತ ಉಳಿಸುವ ಬೆಳಸುವ ಹೊಣೆ ನಮ್ಮೆಲ್ಲರದಾಗಿದ್ದು ಈ ನಿಟ್ಟಿನಲ್ಲಿ ಶ್ರವಣಬೆಳಗೊಳದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪರೀಕ್ಷೆ ಈ ಬಾರಿ ಕರೋನ ಕಾರಣದಿಂದ ವಿಳಂಬವಾಗಿ ನಡೆಯಿತು. ಆದರೆ ಯಶಸ್ವಿಗೊಂಡಿದೆ.
ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಅಂತರ್ಗತ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಮೂಲಕ ಪ್ರಾಚೀನ ಪ್ರಾಕೃತ ಭಾಷೆಯ ಅಧ್ಯಯನ ಸಂಶೋಧನೆ ಪ್ರಚಾರ ಪ್ರಸಾರ ಸಂರಕ್ಷಣೆಗಾಗಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ದೇಶಾದ್ಯಂತ ಅಂಚೆ ಮೂಲಕ ಹಿಂದಿ ಹಾಗೂ ಕರ್ನಾಟಕದಲ್ಲಿ ಕನ್ನಡ ಭಾಷೆಗಳಲ್ಲಿ ಪ್ರಾಕೃತ ಸಾಹಿತ್ಯವನ್ನು ಒದಗಿಸಿ ಮನೆಯಲ್ಲಿಯೇ ಓದುವ ಅವಕಾಶವನ್ನು ಕೊಟ್ಟು ಪ್ರತಿವರ್ಷವೂ ವಿವಿಧ ಹಂತದ ಪರೀಕ್ಷೆಗಳನ್ನು ನಡೆಸಿ ಪ್ರತಿಭಾವಂತರನ್ನು ಪುರಸ್ಕರಿಸಲಾಗುತ್ತಿದೆ. ಈ ಮೂಲಕ ಭಾಷೆಯನ್ನು ಜನಪ್ರಿಯಗೊಳಿಸಲಾಗುತ್ತಿದೆ. ಕೊರೋನ ಕಾರಣ ಈ ವರ್ಷ ಪರೀಕ್ಷೆಗಳು ವಿಳಂಬಗೊಂಡು ಇದೇ ನವೆಂಬರ್ 7 ಮತ್ತು 8 ರಂದು ದೇಶಾದ್ಯಂತ ಪರೀಕ್ಷೆಗಳು ನಡೆದವು. ಅದರ ಭಾಗವಾಗಿ ಹುಬ್ಬಳ್ಳಿಯಲ್ಲಿಯೂ ಪರೀಕ್ಷೆಗಳನ್ನು ನಡೆಸಲಾಯಿತು. ಪ್ರಾಚೀನ ಪ್ರಾಕೃತ ಭಾಷೆಯನ್ನು ಅರಿಯುವ ಉಳಿಸುವ ಬೆಳೆಸುವ ಹೊಣೆ ನಮ್ಮೆಲ್ಲರದ್ದಾಗಿದೆ. ಹುಬ್ಬಳ್ಳಿ ಕೇಂದ್ರದ ಸಂಚಾಲಕರಾಗಿ ಶ್ರೀ ಶಾಂತಿನಾಥ ಹುದಪೇಟೆ ಕಾರ್ಯ ನಿರ್ವಹಿಸುತ್ತಿದ್ದು ಶ್ರೀಮತಿ ಸುಜಾತ ಗುಗ್ಗರಿ ಶ್ರೀಮತಿ ಸ್ವರೂಪ ಹೊಮಚಿಗೆ ಪರೀಕ್ಷಾ ಮೇಲ್ವಿಚಾರಕರಾಗಿದ್ದರು.
ಅದೇ ರೀತಿ ಶ್ರೀ ಚಂಚ್ರಪ್ರಭ ತೀರ್ಥಂಕರರ ಜೈನ ಬಸದಿ ಹುಬ್ಬಳ್ಳಿ ಇಲ್ಲಿ ಗಂಧನೋಂಪಿ ಆಚರಣೆಯಲ್ಲಿ ಬಾಲಕಿಯರು ನಿರತರಾಗಿರುವ ಕ್ಷಣ.
ಅಂತಾಳ ಕ್ಷೇತ್ರದಲ್ಲಿ ಆಚಾರ್ಯ ಶ್ರೀ ಸಂತಶಿರೋಮಣಿ 108 ವಿದ್ಯಾಸಾಗರ ಮುನಿಮಹಾರಾಜ ಹಾಗೂ 105 ಜ್ನಾನಮತಿ ಮಾತಾಜಿಯವರ ಜನ್ಮಜಯಂತಿ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿತು.ದಿನಾಂಕ 1/11/2020 ರಂದು ಸುಕ್ಷೇತ್ರ ಅರಟಾಳದಲ್ಲಿ ಆಚಾರ್ಯ ಶ್ರೀ ಸಂತಶಿರೋಮಣಿ 108 ವಿದ್ಯಾಸಾಗರ ಮುನಿಮಹಾರಾಜ ಹಾಗೂ 105 ಜ್ನಾನಮತಿ ಮಾತಾಜಿಯವರ ಜನ್ಮಜಯಂತಿ ಮತ್ತು ಪರಮಪೂಜ್ಯ ವಾತ್ಸಲ್ಯ ಮೂರ್ತಿ 108 ಪುಣ್ಯ ಸಾಗರ ದೀಕ್ಷಾ ಜಯಂತಿ ಹಾಗೂ ಮದ್ಯಾಹ್ನ ಮೂರು ಗಂಟೆಗೆ ಆಧ್ಯಾತ್ಮ ನ್ಯಾಯ ದೀಪಿಕ ಶಾಸ್ತ್ಸ ಬಿಡುಗಡೆ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನೆರವೇರಿತು. ನಂತರ ಮುನಿಶ್ರೀ ಪುಣ್ಯಸಾಗರ ಮುನಿಮಹಾರಾಜರ ಪ್ರವಚನ ಹಾಗೂ ಬಾಲ ಬ್ರಹ್ಮಚಾರಿ ಸೋಮುದೇವ ಬಯ್ಯಾಜಿ ಅವರ ಪ್ರವಚನ ಮತ್ತು 105 ಶಿವಮತಿ ಮಾತಾಜಿಯವರ ಕಂಠದಲ್ಲಿ ಅವರೇ ಬರೆದು ಹಾಡಿದ ಜ್ನಾನಮತಿ ಮಾತಾಜಿಯವರ ಜನ್ಮ ಜಯಂತಿಯ ಒಂದು ಪುಣ್ಯ ಸಾಗರ ಮಹಾರಾಜರ ದೀಕ್ಷ ಜಯಂತಿಯ ಹಾಡುಗಳು ಈ ಎಲ್ಲಾ ಕಾರ್ಯಕ್ರಮದಲ್ಲಿ ಬೆರಗು ಮೂಡಿಸಿತು.
ದಿವಾನ ಬಹದ್ದೂರ್ ಶ್ರೀ ಅಣ್ಣ ಸಾಹೇಬ ಫೌಂಡೇಷನ್ ಇವರ ವತಿಯಿಂದ ಕರೋನ ಕಾಲದಲ್ಲಿ ಸಂಕಷ್ಟದಲ್ಲಿ ಇರುವ ಜೈನ ಬಡ ಕುಟುಂಬಗಳಿಗೆ ದಿನಸಿ ಸಾಮಾನುಗಳ ವಿತರಣೆ ನಡೆಯಿತು. ದಿವಾನ ಬಹದ್ದೂರ್ ಶ್ರೀ ಅಣ್ಣ ಸಾಹೇಬ ಫೌಂಡೇಷನ್ ಇವರ ವತಿಯಿಂದ ಕರೋನ ಕಾಲದಲ್ಲಿ ಸಂಕಷ್ಟದಲ್ಲಿ ಇರುವ ಜೈನ ಸಮುದಾಯದ ಬಡ ಶ್ರಾವಕ ಶ್ರಾವಕಿಯರನ್ನು ಗುರುತಿಸಿ ಅವರಿಗೆ ಒಂದು ತಿಂಗಳ ದಿನಸಿ ಸಾಮಾನುಗಳನ್ನು ನೀಡಿತು. ಈ ಯೋಜನೆಗಳಲ್ಲಿಬೆಳೆತಗ ಜೈನ ಸಮಾಜದಿಂದ 7 ಜನ ಶ್ರಾವಕ ಶ್ರಾವಕಿಯರನ್ನು ಆಯ್ಕೆ ಮಾಡಿ ಅವರೆಲ್ಲರಿಗೂ ಇಂದು ಸಾಯಂಕಾಲ 1008 ಆದಿನಾಥ ದಿಗಂಬರ ಜಿನಾಲಯ ಬೆಳೆತಗದಲ್ಲಿ ಕರ್ನಾಟಕ ರಾಜ್ಯ ಜೈನ ಒಕ್ಕೂಟ ಬೆಂಗಳೂರು ಈ ಒಕ್ಕೂಟದ ಚಿಕ್ಕೋಡಿಯ ಶೈಕ್ಷಣಿಕ ಅಧ್ಯಕ್ಷರಾದ ಶ್ರೀ ಶೀತಲ್ ಕುಬೇರ ಚೌಗಲೆಯವರಿಂದ ಮತ್ತು ನಿಯೋಜಿತ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಒಕ್ಕೂಟದ ಸದಸ್ಯರಾದ ಶ್ರೀ ರಮೇಶ್ ಬಂಗ್ಯಾನುಕುಡಿ , ಪೋಪಟ ಚೋಗುಲಿ, ಶ್ರೀ ಅಜಿತ್ ಉಪಾದ್ಯಿಯವರಿಂದ ಕಿಟ‍್ ನ್ನು ವಿತನಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕುಮಾರಿ ಪುಷ್ಪ ಚೋಗುಲಿ , ಪದ್ಮ ಶ್ರೀ ಉಪಾಧ್ಯ , ರಾಜು ಪಾಟೀಲ್ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು. ಈ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಬೆಳಕಿಹಾಳ ಗ್ರಾಮದ ಶ್ರೀ ಬಾಳಸಾಬ್ ಪಾಟೀಲ್ ಮತ್ತು ವೀರಾಚಾರ್ಯ ಪರಿವಾರದವರು ಸಹಕರಿಸಿದರು. ಈ ಫೌಂಡೇಷನ್ ನ ಎಲ್ಲರಿಗೂ 1008 ಆದಿನಾಥ ದಿಗಂಬರ ಜಿನಾಲಯ ಬೆಳೆತಗ ಸಮಾಜದ ವತಿಯಿಂದ ನಮ್ಮೆಲ್ಲರ ಜೈ ಜಿನೇಂದ್ರ.
ಶ್ರೀ ಕ್ಷೇತ್ರ ಆರತಿಪುರ ಜೈನ ಮಠದಲ್ಲಿ ಶ್ರೀ ಭಕ್ತಾಂಬರ ಆರಾಧನೆಯ 48 ಪ್ರತ್ಯೇಕ ಯಂತ್ರಗಳನ್ನು ನೂತನವಾಗಿ ಮಾಡಲಾಗಿದೆ. ಈ 48 ಯಂತ್ರಗಳ ಪ್ರತಿಷ್ಠಾಪನೆಯನ್ನು ಪರಮಪೂಜ್ಯ ಸ್ವಸ್ಥಿಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಹಾಗೂ ನೇತೃತ್ವದಲ್ಲಿ ದಿನಾಂಕ 19/11/2020ರಂದು ಮಾಡಲಾಗುವುದು.
ಭಗವಾನ್ ಆದಿನಾಥ ತೀರ್ಥಂಕರರ ವಿಶಾಪಹರಸ್ತೋತ್ರ ದೀಪಾರಾಧನೆ ರತ್ನ ಕರ್ನಾಟಕ ಶ್ರಾವಕ ಚರಸ್ ಸ್ವಾಧ್ಯಾಯದ ವತಿಯಿಂದ ದಿನಾಂಕ 8/11/2020 ರಂದು ನಡೆಯಿತು.
ನಮ್ಮ ಜ್ವಾಲಾಮಾಲಾ ನ್ಯೂಸ್ ವೀಕ್ಷಿಸಿದ ನಿಮ್ಮೆಲ್ಲರಿಗೂ ವಂದನೆಗಳು.













