ವಾರಪತ್ರಿಕೆ ಜೈನ ಸುದ್ದಿ-15

ಜೈ ಜಿನೇಂದ್ರ ವೀಕ್ಷಕರೆ, ಈ ವಾರದ ಸುದ್ದಿಗಳನ್ನು  ವೀಕ್ಷಿಸಲು ನಿಮ್ಮನೆಲ್ಲಾ ಸ್ವಾಗತಿಸುತ್ತ ಮುಖ್ಯಾಂಶಗಳೆಡೆಗೆ ಒಂದು ನೋಟ.

ಮುಖ್ಯಾಂಶಗಳು:-

ಮೂಡುಬಿದ್ರೆಯ ಬಾಹುಬಲಿ ಮೂರ್ತಿ ಸಾಗಾಣಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತವೃಂದ.

ನೀರಿನಿಂದ ಹೊರತಂದ ಜಿನಬಿಂಬ ಸೇರಿದ್ದು ಪುಣ್ಯಭೂಮಿ ಕನಕಗಿರಿಗೆ.

ನಮ್ಮ ಸಮುದಾಯಕ್ಕೆ ಹೆಮ್ಮೆ ತಂದುಕೊಟ್ಟ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.

ಹುಬ್ಬಳ್ಳಿ ಸಮೀಪ ಜಿನಾಲಯ ಒಂದರಲ್ಲಿ ಮಾನಸ್ಥಂಭ ನಿರ್ಮಾಣಕ್ಕಾಗಿ ನಡೆದ ಭೂಮಿಪೂಜೆ.

ಶಿವಮೊಗ್ಗ ನಗರದ ಮಹಾವೀರ ವೃತ್ತಕ್ಕಾಗಿ ಜೈನಪರ ಹೋರಾಟ.

ರಾಜ್ಯಮಟ್ಟದ ನೃತ್ಯಸ್ಪರ್ಧೆ ಯಶಸ್ವಿ ಸಮಾರೋಪ ಸಮಾರಂಭ.

ಬಹುನಿರೀಕ್ಷಿತ ಸುಹಾಸ್ತಿ ಜೈನ್ ಮಿಲನ್ ಜಿನ ಸಮ್ಮಿಲನದ ಥೀಮ್ ಲಾಂಚ್ ಕಾರ್ಯಕ್ರಮ.

ಸುದ್ದಿಗಳ ವಿವರ:-

ಬಹುದಿನಗಳಿಂದ ತಾತ್ಕಾಲಿಕ ನೆಲೆಯಲ್ಲಿರಿಸಿದ ಶ್ರೀ ಬಾಹುಬಲಿ ಮೂರ್ತಿಯ ಸಾಗಾಣಿಕೆ ಕಾರ್ಯ ಸ್ವಸ್ತಿಶ್ರೀ ಚಾರಿಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳ ಮಾರ್ಗ ದರ್ಶನದಲ್ಲಿ ನಡೆಯಿತು.

2013 ಜೂನ್ 8ರಂದು ಮೂಡುಬಿದ್ರೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿರಿಸಿದ ದಾನಿ ಬಿಸಿ ಕಾಸ್ಲಿವಾಲ್ ದಾನವಾಗಿ ನೀಡಿದ 15.5 ಅಡಿ ಎತ್ತರ ಹಾಗೂ 16 ಟನ್ ಬಾರದ ಶ್ರೀ ಬಾಹುಬಲಿ ಮೂರ್ತಿ ಇದು. ಮೂರ್ತಿಯನ್ನು ಮಂಗಳೂರಿನಿಂದ ತರಿಸಿದ ಎರಡು ಕ್ರೇನ್ ಹಾಗೂ ಟ್ರಾಲಿ ಸಹಾಯದಿಂದ ಸರಾಗವಾಗಿ 19-10-2020 ರಂದು ಮಧ್ಯಾಹ್ನ ಮೂಡುಬಿದ್ರೆಗೆ ಶ್ರೀ ಮಠದ ಪರಿಸರದಿಂದ ಸಾಗಾಟ ನಡೆಯಿತು. ಪ್ರತಿಮೆ ತೆಗೆಯುವಾಗ ಹಾಗೂ ಪೀಠದಲ್ಲಿ ಕೂರಿಸುವ ಸಂದರ್ಭದಲ್ಲಿ ತುಂತುರು ಮಳೆ ಹನಿಯಾಡಿದ್ದು ವಿಶೇಷವಾಗಿತ್ತು. ಇದೀಗ ಬೈರವರಸರ ಪ್ರಥಮ ರಾಜಧಾನಿ ಕರ್ವಾಶೆ ಹತ್ತಿರ ಬಜಗೋಳಿ ಇಂದ ಒಂದೂವರೆ ಕಿ.ಮೀ ದೂರದ ಸಹ್ಯಾದ್ರಿ ಮಡಿಲಿನ ಸುಮ್ಮಹೊತ್ತು ಬಂಡಶಾಲೆ ಬಳಿಗೆ 19-10-2020ರಂದು ಪ್ರತಿಮೆ ಮಧ್ಯಾಹ್ನ 2:30ಕ್ಕೆ ಶ್ರೀ ಮಠದಲ್ಲಿ ಪೂಜೆ ನೆರವೇರಿಸಿ ಶ್ರೀಗಳವರು ಸಾಗಾಟಕ್ಕೆ ಚಾಲನೆ ನೀಡಿದರು. ಪಟ್ನ ಶೆಟ್ಟಿ ಸುರೇಶ್ ರವರು, ದಿನೇಶ್ ಕುಮಾರ್, ಡಾ|| ಮೋಹನ್ ಹಾಳ್ವ, ಶ್ರೀ ಆಭಯ್ ಚಂದ್ರ ಜೈನ್, ಕೆ ಪಿ ಜಗದೀಶ್ ಅಧಿಕಾರಿ, ಶೈಲೆಂದ್ರ ಜೈನ್, ಶ್ವೇತ ಜೈನ್, ಧನಕೀರ್ತಿ ಬಲಿಪಾ, ತಿಲಕ್ ಪ್ರಸಾದ್ ಭಕ್ಕಾರು.

ವಿಜಯ ದಶಮಿಯ ಶುಭದಿನದಂದು ಧರ್ಮಕ್ಕೆ ವಿಜಯ ದೊರೆತ ಕ್ಷಣ, ಹಾಗೂ ಶ್ರೀ ಪಾರ್ಶ್ವನಾಥ ಸ್ವಾಮಿ ಕೊಳಚೆ ನೀರಿನಿಂದ ಹೊರತೆಗೆದು ಪುಣ್ಯ ಭೂಮಿ ತಲುಪಿ ಪೂಜೆಗೊಳಗಾದ ಕಥೆ.

ಹೌದು ವೀಕ್ಷಕರೆ ಫಿಲ್ಟರ್ ಹುಕಾಕ್ ಕೆಫೆ ಹೆಸರಿನ ಬೆಂಗಳೂರಿನ ಬಿಡದಿ ಸಮೀಪದ ಹೋಟೆಲ್ ಒಂದರಲ್ಲಿ ಶೋ ಪಿಸ್ ರೀತಿಯಲ್ಲಿ ಕೊಳಚೆ ನೀರಿನಲ್ಲಿ ಇಡಲಾಗಿದ್ದ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಬಿಂಬ ವಿಚಾರದ ಬಗ್ಗೆ ಶಿವಮೊಗ್ಗದ ರತ್ನ ಕುಮಾರ್ ಮಾಹಿತಿಯಂತೆ ಶ್ರೀ ನಿರಂಜನ್ ಜೈನ್ ಕುದ್ಯಾಡಿರವರು ಒಂದು ಲೇಖನ ಪ್ರಕಟಿಸಿದೆ ತಡ ಅಲ್ಲೆ ಬೆಂಗಳೂರಿನಲ್ಲಿದ ಸಮಾಜ ಸೇವಕ ಮಾಳ ಹರ್ಷೇಂದ್ರ ಜೈನ್, ಪಣಿರಾಜ್, ಮಹಾವೀರ ಆಳ್ವ, ವೀರೇಂದ್ರ ಜೈನ್ ಹಾಗೂ ಭಗವಾನ್ ಮಹವೀರ್ ಜೈನ್ ಅಸೋಸಿಯೇಶನ್ ಸದಸ್ಯರು ಚಿತ್ರ ಕಲಾವಿದ ಚಿತ್ತಾ ಜಿನೇಂದ್ರ ಅವರುಗಳ ತಂಡ ಅಂದರೆ ಧರ್ಮಾಸಕ್ತರುಗಳಾದ ಕೆ ಜೆ ಶ್ರೀ ಬಿ ಆರ್ ಶಿತಲ್ ಕುಮಾರ್ ನೇತೃತ್ವದಲ್ಲಿ ಶ್ರೀ ಜೆ ಎ ಬ್ರಹ್ಮಪ್ಪ, ವೈಭವ್ ಹಾಗೂ ಇನ್ನೂ ಹಲವರು ಜೊತೆಗೂಡಿ ಸ್ಥಳಕ್ಕೆ ಬೇಟಿ ನೀಡಿದರು.

ಸುಮಾರು ಎಂಟು ಗಂಟೆಗಳ ಅವಿರತ ಪ್ರಯತ್ನದ ಫಲವಾಗಿ ಮೂರ್ತಿಯನ್ನು ಹೊರತೆಗೆದು ಕೆ ಜಿ ಎ ನಲ್ಲಿ ಇರಿಸಲಾಗಿತ್ತು ನಂತರ ಮೂರ್ತಿಯನ್ನು ಶ್ರೀ ಕ್ಷೇತ್ರ ಕನಕ ಗಿರಿ ಶ್ರೀಗಳ ಆಶಯದಂತೆ ಕನಕ ಗಿರಿಕ್ಷೇತ್ರಕ್ಕೆ ಕೊಂಡೊಯ್ಯಲಾಗಿದೆ. ಅಲ್ಲದೆ ಅಲ್ಲಿ ಅದರ  ಸೂಕ್ತ ಸಂರಕ್ಷಣೆ ಮಾಡಿ ಪೂಜೆಗೆ ಯೋಗ್ಯಗೊಳಿಸಲಾಗುವುದು. ಇಂತಹ ಅದ್ಬುತ ಕಾರ್ಯದಲ್ಲಿ ಭಾಗವಹಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಮೂಡುಬಿದ್ರೆ ಶ್ರೀಗಳು ದೂರವಾಣಿ ಮುಖಾಂತರ ಅಭಿನಂದನೆ ತಿಳಿಸಿದು ಎಲ್ಲಾ ಮಹತ್ಕಾರ್ಯಕ್ಕೆ ಸಹಕರಿಸಿದ ಎಲ್ಲರನ್ನು ಎಲ್ಲರ ಕಾರ್ಯವನ್ನು ಶ್ಲಾಘೀಸೋಣ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಸ್ವತಃ ಶ್ರಮ ವಹಿಸಿ ಭಾಗವಹಿಸುವ ಇಂತಹ ಧರ್ಮಾಸಕ್ತರುಗಳ ಅದ್ಬುತ ಕಾರ್ಯಕ್ಕೆ  ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.

ಧರ್ಮ ಸ್ಥಳದ ಧರ್ಮಮೋತ್ತಾನ ಮಹತ್ಕಾರ್ಯ ಗುತಿಸಿ ರಾಜ್ಯಸರ್ಕಾರ ಕನ್ನಡ ರಾಜ್ಯೋತ್ಸವ  ನೀಡಿ ಗೌರವಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ದೇವೇಂದ್ರ ಪಾಯನ್ ಅಕ್ಕಿ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ಎಂ ಕೆ ವಿಜಯ್ ಕುಮಾರ್ ರವರನ್ನು ಗುರುತಿಸಿ ಪ್ರಶಸ್ತಿನೀಡಿದೆ.

ಭಾರತ ವರ್ಷೀಯ ಜೈನ್ ದಿಗಂಬರ ಜೈನ ಸಂರಕ್ಷಣೆ ಮಹಾಸಭೆ, ಮುನಿ ಸೇವ ಸಮಿತಿಯ ರಾಷ್ಟ್ರೀಯ ಕಾರ್ಯಧ್ಯಕ್ಕೆಯಾಗಿ ಆಯ್ಕೆಯಾದ ಶ್ರೀ ಮತಿ ಅನಿತಾ ಸುರೇಂದ್ರ ಕುಮಾರ್ ರವರಿಗೆ ಜ್ವಾಲಮಾಲ ನ್ಯೂಸ್ ತಂಡದ ಪರವಾಗಿ ಹಾರ್ದಿಕ ಅಭಿನಂದನೆಗಳು.

ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀ ನೇಮಿರಾಜ ಆರಿಗ ಇವರಿಗೆ ಜ್ವಾಲಮಾಲ ನ್ಯೂಸ್ ತಂಡದ ಪರವಾಗಿ ಅಭಿನಂದನೆಗಳನ್ನ ಸಲ್ಲಿಸುತ್ತಿದೇವೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2017 ಹಾಗೂ 19ನೇ ಸಾಲಿನ ಎರಡು ವರ್ಷದ ಎಂ ಎಲ್ ಸಿ ಯಲ್ಲಿ ವಿಶ್ಲೇಷಣಾ ರಸಾಯನಿಕ ಶಾಸ್ತ್ರದಲ್ಲಿ ಮೂರು ಸ್ವರ್ಣ ಹಾಗೂ ನಗದು ಪುರಸ್ಕಾರವನ್ನು ಪಡೆದ ಕುಮಾರಿ ವರ್ಷ ಜೈನ್ ರವರಗೆ ಜ್ವಾಲಮಾಲ ನ್ಯೂಸ್ ತಂಡದ ಪರವಾಗಿ ಅಭಿನಂದನೆಗಳನ್ನ ಸಲ್ಲಿಸುತ್ತಿದೇವೆ. ಇವರು ಶಿವಮೊಗ್ಗದ ಗಾಂಧಿನಗರದ ನಿವಾಸಿಯಾದ ಶ್ರೀ ಆಶೋಕ್ ಕುಮಾರ್ ಹಾಗೂ ಶ್ರೀಮತಿ ಜ್ಯೋತಿ ಆಶೋಕ್ ಕುಮಾರ್ ರವರ ಪುತ್ರಿ.

ಲೈಫ್ ಇನ್ ಶೂರೆನ್ಸ್ ಕಾರ್ಪುರೇಷನ್ ಇಂಡಿಯಾದ ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾದ ಶ್ರೀ ಪುಷ್ಪರಾಜ್ ಹೆಗ್ಗಡೆಯವರಿಗೆ ಜ್ವಾಲಮಾಲ ಜ್ವಾಲಮಾಲ ನ್ಯೂಸ್ ತಂಡದ ಪರವಾಗಿ ಅಭಿನಂದನೆಗಳನ್ನ ಸಲ್ಲಿಸುತ್ತಿದೇವೆ.

ಮುನಿ ಸೇವಾ ಸಮಿತಿಯ ರಾಷ್ಟ್ರೀಯ ಮಂತ್ರಿಯಾಗಿ ಶ್ರೀ ವಿನೋದ್ ದೊಡ್ಡಣ್ಣನವರನ್ನು ಆಯ್ಕೆಮಾಡಲಾಗಿದ್ದು  ಜ್ವಾಲಮಾಲ ಜ್ವಾಲಮಾಲ ನ್ಯೂಸ್ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನ ಸಲ್ಲಿಸುತ್ತಿದೇವೆ.

ಶ್ರೀ ಕ್ಷೇತ್ರ ಹೊಂಬುಜದಲ್ಲಿ ಮಹಾಮಾತೇ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ದಾರ ಕಾರ್ಯಕ್ಕಾಗಿ 26-10-2020ನೇ ವಿಜಯ ದಶಮಿಯಂದು ಶ್ರೀಗಳ ನೇತೃತ್ವದಲ್ಲಿ ಸಂಕಲ್ಪವನ್ನು ಕೈ ಗೊಳಲಾಯಿತು. ಈ ಕಾರ್ಯಕ್ರಮಕ್ಕೆ ಜ್ವಾಲಮಾಲ ಜ್ವಾಲಮಾಲ ನ್ಯೂಸ್ ಶುಭಾಶಯವನ್ನು ಕೋರುತ್ತಿದೆ.

ಹುಬ್ಬಳ್ಳಿ ಸಮೀಪ ಗ್ರಾಮ ಒಂದರ ಪುರಾತನ ಜಿನ ಮಂದಿರದ ಮಾನಸ್ಥಂಭ ನಿರ್ಮಾಣಗೊಳ್ಳಲ್ಲಿದು ಭೂಮಿಪೂಜೆ ಕಾರ್ಯ ವಿಜಯ ದಶಮಿಯಂದು ನೆರವೇರಿತು.

ಹುಬ್ಬಳ್ಳಿ ಹಿಂದ 7ಕಿ.ಮೀ. ಅಂತರದಲ್ಲಿರುವ ಬುಡರ ಸಿಂಗೆ ಗ್ರಾಮದಲ್ಲಿ ಶ್ರೀ ವರ್ಧಮಾನ ಗಿರಿ ಕ್ಷೇತ್ರದಲ್ಲಿ ವಿರಾಜಮಾನ 11ನೇ ಶತಮಾನದ ಪ್ರಾಚೀನ ಚತುರ್ವಂಶ ಜಿನ ಬಿಂಬ ಮೂಲ ನಾಯಕ ಭಗವಾನ್ ಶ್ರೀ ಮಹಾವೀರ ಸ್ವಾಮೀಜಿ ಜಿನ ಬಿಂಬವನ್ನು ಹೊಂದಿರುವ ಬಸದಿಗಾಗಿ ಮಾನಸ್ಥಂಭವನ್ನು ನಿರ್ಮಿಸಿಕೊಡಲು ಸ್ವರ್ಗಿಯ ಜಗತ್ ಪಾಲಕ್ಕೆ ಹೊತ ಪೇಟೆಯವರು ನೀಡಿದ ವಾಗ್ದಾನದಂತೆ ಅಂದು ಭೂಮಿ ಪೂಜೆಯನ್ನು ನೆರವೇರಿಸಲಾಯಿತ್ತು. ಪರಮ ಪೂಜ್ಯ ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜರು ಹಾಗೂ ಸ್ವಸ್ತಿಶ್ರೀ ಧರ್ಮ ಸೇನಾ ಭಟ್ಟಾರಕ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ವಿಜಯ ದಶಮಿಯ ಶುಭ ದಿನದಂದು ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅಭಿಷೇಕ ನಂತರ ನಡೆದ ಭೂಮಿ ಪೂಜಾ ವಿಧಿಯನ್ನು ನೆರವೇರಿಸಿ ಸನ್ಮತಿ ಜೆ ಹೊತ ಪೇಟೆ, ಸಚಿನ್ ಜೆ ಹೊತ ಪೇಟೆ ನಿರ್ಮಾಣ ಜಾಗದಿಂದ ಮಣ್ಣು ತೆಗೆಯುವ ಮೂಲಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಶಾಂತಿನಾಥ ಹೊತ ಪೇಟೆ ಹಾಗೂ ಕುಟುಂಬ ವರ್ಗದವರು ಸೇರಿದಂತೆ ಕ್ಷೇತ್ರ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎ ಸಿ ಜೈನ್ ಸಮಿತಿಯ ಸದಸ್ಯರಾದ ಧನಪಾಲ್, ರತ್ನಾಕರ ದಿನಕರ, ಬಾಪು ಸಾಹೇಬ ಚೌಕಲೆ, ಭರತ್ ಮುತ್ತಗಿ ಹಾಗೂ ಆನಂದ ಬಸದಿಯವರು ಭೂಮಿ ಪೂಜೆಯನ್ನು ನೆರವೇರಿಸಿದರು. ಜೀರ್ಣೋದ್ದಾರ ಸಮಿತಿಯ ವತಿಯಿಂದ ಇತ್ತೀಚೆಗೆ ಬಸದಿಯ ರಕ್ಷಣೆಗಾಗಿ ಆಚಾರ್ಯ ಶ್ರೀ ಹಾಗೂ ಭಟ್ಟಾರಕರ ಮಾರ್ಗ ದರ್ಶನದಲ್ಲಿ ಕ್ರಮ ಕೈಗೊಳಲಾಗುತ್ತಿದೆ. ವೀಕ್ಷಕರೆ ತಮಗೆ ಬಿಡುವು ದೊರೆತಾಗ ಖಂಡಿತ ಪ್ರಾಚೀನ ನಯನ ಮನೋಹರ ಈ ಅತಿಶಯ ಕ್ಷೇತ್ರವನ್ನ ಒಮ್ಮೆ ದರ್ಶನ ಮಾಡಿರಿ.

ಜಾಹೀರಾತು

ಶಿವಮೊಗ್ಗ ನಗರದ ಮಹಾವೀರ ವೃತ್ತದ  ಹೆಸರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೈನಪರ ಹೋರಾಟ ನಡೆಯಿತು. ಈ ಹೋರಾಟದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಭಾಗವಹಿಸಿದರು.

ಇತ್ತೀಚಿನ ಹಲವಾರು ಘಟನೆಗಳನ್ನು ಗಮನಿಸಿದಾಗ ಜೈನರು ತಮ್ಮ ಸಮುದಾಯದ ಒಳಿತಿಗಾಗಿ ಜಾಗೃತಿ ಮೂಡಿಸಿ ಅಹಿಂಸಾಯುತ ಹಾದಿಯಲ್ಲಿ ಹೋರಾಟ ಮಾಡಿ ಓಡಾಡಿ ಸಂಘಟಿತರಾಗಿ ಧರ್ಮಕ್ಕೆ ಘಾಸಿಗೊಳಿಸುವಂತಹ ಅನೇಕ ಕಾರ್ಯಗಳಲ್ಲಿ ನ್ಯಾಯ ದೊರಕಿಸಿಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಅದೆ ರೀತಿ 11-03-2020ರಂದು 1975ರಲ್ಲಿ ಶಿವಮೊಗ್ಗ ನಗರ ಸಭೆಯಿಂದ ನಾಮಕರಣಗೊಂಡ ನಮ್ಮ ಹೆಮ್ಮೆಯ ಮಹಾವೀರ ವೃತ್ತದ ಹೆಸರನ್ನು ಬದಲಿಸುವ ಉನ್ನಾರ ನಡೆದ್ದಿದ್ದು, ಇದನ್ನು ವಿರೋಧಿಸಿ ಅಲ್ಲಿನ ಸುತ್ತಮುತ್ತಲಿನ ದಿಗಂಬರ ಜೈನ ಸಮಾಜ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳ ಪಾಲ್ಗೊಂಡಿದರೆಂದು ಕೆ ಜೆ ಎ ನಿರ್ದೇಶಕರಾದ  ರತ್ನಕುಮಾರ್ ರವರು ತಿಳಿಸಿದ್ದಾರೆ. ಬಂಧುಗಳೆ ಇಂತಹ ಸಮಯದಲ್ಲಿ ನಾವೇಲ್ಲರು ಒಗ್ಗಟ್ಟಾಗಿ ಬೆಂಬಲಿಸುವುದು ಅತ್ಯವಾಗಿದೆ.

ಮತ್ತೊಂದು ಪ್ರಕರಣವನ್ನು ಗಮನಿಸಿದಾಗ ಕಾರ್ಕಳ ಮೂಡುಬಿದ್ರೆ ಎಂದ ಕ್ಷಣ ಉತ್ತರ ಭಾರತದ ಜೈನ ಬಾಂಧವರು ನೀಡುವ ಸ್ಥಾನಮಾನವೆ ಬೇರೆ ಗೌರವವೇ ಬೇರೆ ಪ್ರತಿ ದಿನ ಮುಂಜಾನೆ ಪೂಜೆಯಲ್ಲಿಯೂ ಇಲ್ಲಿನ ಮಣ್ಣಿನ ಗೌರವ ಸಲ್ಲುತ್ತದೆ. ಕಾರಣ ಇಲ್ಲಿರುವ ಪವಿತ್ರ ಜೈನ ತೀರ್ಥಗಳು. ಸರ್ವ ಧರ್ಮ ಸಮನ್ಮತೆಯನ್ನು ಸಾರುತ್ತ ಜಿನ ಧರ್ಮದ ತತ್ವಗಳನ್ನು ಲೋಕಕ್ಕೆ ಸಾರಿದ ಕೀರ್ತಿ ಇಲ್ಲಿಗೆ ಸಲ್ಲುತ್ತದೆ. ಹೀಗಿರುವಾಗ ಕಾರ್ಕಳದ ಹೆಗುರುತ್ತಾಗಿರುವ ಐತಿಹಾಸಿಕ ಪವಿತ್ರ ತೀರ್ಥ ಕ್ಷೇತ್ರಗಳಾದ ಆನೆಕೆರೆ ಬಸದಿ ಕಾರ್ಕಳ ಚರುತುರ್ಮುಖ ಬಸದಿ ದೇಶದಲ್ಲಿಯೆ ಎರಡನೇ ಅತಿ ಎತ್ತರದ ಬಾಹುಬಲಿ ಬೆಟ್ಟದ ಅವರಣವನ್ನು ಪಾರ್ಕ್ ನಂತೆ ಬಳಸಿಕೊಂಡು ಅದರ ಪಾವಿತ್ರತೆಯನ್ನು ಹಾಳುಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಇಂತಹ ಪವಿತ್ರ ಕ್ಷೇತ್ರಗಳಲ್ಲಿ ಅವರಣದ ಬಳಿಯಲ್ಲಿ ಯಾತ್ರಾರ್ಥಿಗಳಿಗೆ ಭಕ್ತರಿಗೆ ಮುಜುಗರ ಹಾಗುವ ರೀತಿಯಲ್ಲಿ ವೆಡ್ಡಿಂಗ್ ಫೋಟೊ ಶೂಟ್ ಗಳಂತಹ ಪ್ರಕ್ರಿಯಗಳು ಪುಂಡರು ಮಧ್ಯ ಮಾಡುವ ದುಷ್ಕೃತ್ಯಗಳು ಇತ್ತೀಚೆಗೆ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಹಾಗಿದ್ದವು. ದೇಶದ ಅನೇಕ ಭಾಗಗಳಿಂದ ಪೂಜ್ಯ ಮುನಿಗಳು ಜೈನ ಶ್ರಾವಕರು ಈ ಘಟನೆಗೆ ತೀವ್ರವಾಗಿ ಖಂಡನೆಯನ್ನು ವ್ಯಕ್ತಪಡಿಸಿರುತ್ತಾರೆ. ಇದನ್ನೂ ಮನಗೊಂಡು ಕಾರ್ಕಳ ಜೈನ್ ಬ್ರಿಗೆಡ್ ನ ಜೈನ ಸದಸ್ಯರು ಧಾರ್ಮಿಕ ಭಾವನೆಗಳಿಗೆ ಧಕ್ಕೆತರುವ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವವರನ್ನು ಕಾನೂನಿನ ಮೂಲಕ ಶಿಕ್ಷೆಗೆ ಗುರಿಪಡಿಸ ಬೇಕೆಂದು ಕಾರ್ಕಳ ತಹಶೀಲ್ದಾರರು ಕಾರ್ಕಳ ನಗರ ಠಾಣಾಧಿಕಾರಿಗಳು ಮತ್ತು ಕಾರ್ಕಳ ಪುರಸಭೆಯಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ತಹಶೀಲ್ದಾರರು ಮತ್ತು ಅಧಿಕಾರಿಗಳು ಇಂತಹ ಕೃತ್ಯದಲ್ಲಿ ತೊಡಗುವವರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳುತೇವೆ ಎಂಬ ಭರವಸೆಯನ್ನು ನೀಡಿದರ. ಆನೆಕೆರೆ ಬಸದಿ ಮೂಕ್ತೇಸರರಾದ ಶ್ರೀ ಉದಯ ಕಡಂಬ ಮತ್ತು ಬಸದಿಯ ಪೂರೋಹಿತರಾದ ಶ್ರೀ ಸುನೀಲ್ ಇಂದ್ರ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈಗ ಪ್ರಕಟಣೆಯ ಸರದಿ.

ವೀಕ್ಷಕ ಬಾಂಧವರಿಗೊಂದು ಸಿಹಿಸುದ್ದಿ ಜ್ವಾಲಮಾಲ ನ್ಯೂಸ್ ಅರ್ಪಿಸುತ್ತಿರುವ ವಿನೂತನ ಕಾರ್ಯಕ್ರಮ ದಿವ್ಯವಾಣಿ ಸರ್ವೋದಯ ಧರ್ಮ ಚಿಂತನ ಮಂತನ, ಕಾರ್ಯಕ್ರಮ ದಿನಾಂಕ 15-11-2020ರಂದು ಆರಂಭಗೊಳ್ಳಲಿದೆ. ಸಮಸ್ತ ಭಟ್ಟಾರಕರುಗಳ ಹಾಗೂ ವಿದ್ವಾಂಸರುಗಳ ಉಪಸ್ಥಿತಿಯಲ್ಲಿ ಪ್ರತಿ ಭಾನುವಾರ ಸಂಜೆ 7 ಗಂಟೆಗೆ ಸರಿಯಾಗಿ ಫೇಸ್ ಬುಕ್ ಪೇಜ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ವಿಷಯಾದರ ಪ್ರಶ್ನೋತ್ತರ ನಡೆಯಲ್ಲಿದು ವೀಕ್ಷಕರು ತಮ್ಮ ಸಂದೇಹಗಳ ನಿವಾರಣೆ ಮಾಡಿಕೊಳ್ಳಬಹುದು ಪ್ರಶ್ನೆ ಕೇಳುವ ಆಸಕ್ತರು ಹೆಸರನ್ನು ಮೊದಲೆ ನೊಂದಾಹಿಸಿಕೊಳ್ಳ ಬೇಕು ಹಾಗೂ ತಮ್ಮ ಪ್ರಶ್ನೆಗಳನ್ನು ಮೊದಲೆ ಕಳುಹಿಸ ಬೇಕು ಕಾರ್ಯಕ್ರಮ ಜೂಮ್ ಆ್ಯಪ್ ಮೂಲಕ ನಡೆಯಲ್ಲಿದು, ಪ್ರಶ್ನೆಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೂಡ ಕೇಳಬಹುದು ಪ್ರತಿ ವಾರವು ವಿಭಿನ್ನ ವಿಚಾರಗಳೊಂದಿಗೆ ವಿಭಿನ್ನಭಟ್ಟಾರಕರುಗಳ ಆಶೀರ್ವಾದ ಹಾಗೂ ಉಪಸ್ಥಿತಿಯಲ್ಲಿ ಹಾಗೂ  ವಿದ್ವಾಂಸರ ಸಹಕಾರದೊಂದಿಗೆ ನಿಮ್ಮ ಮುಂದೆ ಬರಲ್ಲಿದೇವೆ. ಎಂದಿನಂತೆ ನಮ್ಮ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ ಪ್ರಶ್ನೇಗಳೊಂದಿಗೆ ನೀವು ಬನ್ನಿ ಉತ್ತರದೊಂದಿಗೆ ನಾವಿದ್ದೇವೆ.

ಭಾರತೀಯ ಜೈನ್ ಮಿಲನ್ ಕಾರ್ಕಳ ಹಾಗೂ ಯುವ ಜೈನ್ ಮಿಲನ್ ಕಾರ್ಕಳ ಇವರ ವತಿಯಿಂದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಹಾಗೂ ಇದೆ ಸಮಾರೋಪ ಸಮಾರಂಭ ಅನ್ ಲೈನ್ ನಲ್ಲಿ ಫೆಸ್ ಬುಕ್ ನೇರ ಪ್ರಸಾರದಲ್ಲಿ ಅಚ್ಚುಕಟ್ಟಾಗಿ ಮೂಡಿಬಂತು.

ಭಾರತೀಯ ಜೈನ್ ಮಿಲನ್ ಕಾರ್ಕಳ ಮತ್ತು ಜೈನ್ ಮಿಲನ್ ಕಾರ್ಕಳ ಇದರ ಆಯೋಜಕತ್ವದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಗೆಜ್ಜೆನಾದ ಇದರ ಸಮಾರೋಪ ಸಮಾರಂಭವು ನವೆಂಬರ್ 1 ರಂದು ಕಾರ್ಕಳ ಜೈನ್ ಮಿಲನ್ ಅಧ್ಯಕ್ಷರಾದ ವೀರ್ ಅಮರ್ನಾಥ್ ಪ್ರಸಾದ್ ಇವರ  ಅಧ್ಯಕ್ಷತೆಯಲ್ಲಿ ಜರುಗಿತು ಭಾರತೀಯ ಜೈನ್ ಮಿಲನ್ ಇದರ ರಾಷ್ಟ್ರೀಯ ಅಧ್ಯಕ್ಷರಾದ ವಿ ಡಿ ಸುರೇಂದ್ರ ಕುಮಾರ್ ಧರ್ಮಸ್ಥಳ ಮತ್ತು ಮಹಿಳಾ ವಿಭಾಗದ ಅಧ್ಯಕ್ಷರಾದ ವಿರಾಂಗನ  ಅನಿತಾ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು ಮುಖ್ಯ ಅತಿಥಿಗಳಾಗಿ  ಜೈನ್ ಮಿಲನ್ ವಲಯ ಎಂಟರ ಅಧ್ಯಕ್ಷರಾದ  ಪುಷ್ಪರಾಜ್ ಜೈನ್ ಮತ್ತು ವಲಯ  ನಿರ್ದೇಶಕರಾದ ವೀರ್ ಮಹಾವೀರ್ ಹೆಗ್ಗಡೆ ಅಂಡಾರು, ಕಾರ್ಯದರ್ಶಿ ವಿ ಜಗದೀಶ್ ಹೆಗ್ಗಡೆಯವರು ಉಪಸ್ಥಿತರಿದ್ದರು. ಒಟ್ಟು ನಾಲ್ಕು ವಿಭಾಗದಲ್ಲಿ 70 ಸ್ಪರ್ಧಿಗಳು ಭಾಗವಹಿಸಿದರು. ಕಾರ್ಯಕ್ರಮವು ಫೇಸ್ ಬುಕ್ ಪೇಜ್ ಯುವ ಜೈನ್ ಮಿಲನ್ ಕಾರ್ಕಳ ಭಾರತೀಯ ಜೈನ್ ಮಿಲನ್ ವಲಯ ಎಂಟು, ಕರ್ನಾಟಕದಲ್ಲಿ ಜೈನ ಧರ್ಮ ಹಾಗೂ ಜ್ವಾಲಮಾಲ ನ್ಯೂಸ್ ಇವುಗಳಲ್ಲಿ ನೇರ ಪ್ರಸಾರಗೊಂಡಿತು.

ಬಹು ನಿರೀಕ್ಷಿತ ಜಿನ ಸಂಮ್ಮಿಲನ ಥೀಮ್ ಲಾಂಚ್ ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ಜೂಮ್ ಆ್ಯಪ್ ಮೂಲಕ ಫೇಸ್ ಬುಕ್ ಲೈವ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಪೋಸ್ಟರ್ ಹಾಗೂ ಥೀಮ್ ಲಾಂಚ್ ಅನ್ನು ಶ್ರೀ ಡಿ ಸುರೇಂದ್ರ ಕುಮಾರ್ ರವರು ನಡೆಸಿಕೊಟ್ಟರು. ಹಾಗೂ ಆರ್ ಜೆ ರಜತ್ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ  ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಹಾಗೂ ಮೈಸೂರಿನ ಪ್ರಸನ್ನ ಕುಮಾರ್ ರವರು ನಿರಂಜನ್ ಜೈನ್, ಶಿತಲ್ ಕುಮಾರ್, ತುನೈನ್ ಜೈನ್, ಅಧ್ಯಕ್ಷರಾದ ಸಂತೋಷ್ ಕುಮಾರ್ ಜೈನ್ ಹಾಗೂ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಾರದ ಜೈನ ಸುದ್ದಿಗಳು ವೀಕ್ಷಸಿದ ನಿಮ್ಮಗೆಲ್ಲರಿಗು ಧನ್ಯವಾದಗಳು

ಹೀಗೆ ವೀಕ್ಷಿಸುತಿರಿ, ವಾರದ ಜೈನ ಸುದ್ದಿಗಳು ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್