ಧರ್ಮದ ಕುಡಿ

ಎಲ್ಲರಿಗೂ ಜೈ ಜಿನೇಂದ್ರ,  ನಾನು ನಿಮ್ಮ ಸಂಸ್ಕೃತಿ ಎಂ ಜೈನ್ ಏಳನೀರು, ಮಕ್ಕಳಿಗೆ ಧಾರ್ಮಿಕ ಜ್ಞಾನದ ಅರಿವು ಮೂಡಿಸುವುದು ತುಂಬಾ ಮುಖ್ಯ ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾರ್ಯದಲ್ಲಿ ನಾವು ವಿಪಲರಾಗುತ್ತಾಇದ್ದೀವಿ, ಜ್ವಾಲಮಾಲ ನ್ಯೂಸ್ ಕಡೆಯಿಂದ ಅದೇ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನ ಅದುವೇ ನಮ್ಮ ಧರ್ಮದ ಕುಡಿ ಕಾರ್ಯಕ್ರಮ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.

ಇಂದಿನ ಕಾರ್ಯಕ್ರಮದಲ್ಲಿ ಶ್ರೇಯ ಮಧನ್ ಮೊಹರೆ ಇವರು ನಮ್ಮೊಂದಿಗಿದ್ದಾರೆ ಬನ್ನಿ ಇವರ ಕಿರು ಪರಿಚಯವನ್ನು ವಿ ಟಿ ಮುಖಾಂತರ ನೋಡಿಕೊಂಡು ಬರೋಣ.

ಹೆಸರು ಶ್ರೇಯ, ಮಧನ್ ತವನಪ್ಪ ಮೊಹರೆ, ಅನುಪಮ ಮಧನ್ ಮೊಹರೆ ಇವರುಗಳ ಏಕಮಾತ್ರ ಪುತ್ರಿ, ಇನ್ನೂ ಎಂಟನೇ ತರಗತಿಯನ್ನು ಓದುತ್ತಿರುವ ಈಕೆ ಚಿತ್ರಕಲೆ ಮಾತ್ರ ಪ್ರಬುದ್ದವಾಗಿದೆ ಹಾಗೂ ಚಿತ್ರಕಲೆಯಲ್ಲಿ ಹಲವಾರು ಮಾದರಿಯನ್ನು ಅರಿತವಳು ಇವಳ ಎಲ್ಲಾ ಪೈಟಿಂಗ್ಸ್ ಕೂಡ ಉತ್ತಮವಾದ ದೊಡ್ಡಮಟ್ಟದ  ಕಲಾವಿದೆಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಇವಳ ಈ ಹವ್ಯಾಸದೊಂದಿಗೆ ಬ್ಯಾಟ್ ಮಿಟನ್ ಮತ್ತು ಓಟದ ಸ್ಪರ್ಧೆಗಳಲ್ಲಿ ಕೂಡ ಭಾಗವಹಿಸಿದ್ದಾಳೆ. ಇಸ್ಕಾನ್ ಅಯೋಜನೆಯ ವ್ಯಾಲ್ಯು ಎಜುಕೇಶನ್ ಕಾಂಟೆಸ್ಟ್ ನಲ್ಲಿ ಭಾಗವಹಿಸಿದಾಳೆ. ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಗ್ಲೋಬಲ್ ಆರ್ಟ್ ಇಂಡಿಯಾಸ್ ಆರ್ಟ್ ಕಾಂಪಿಟೆಶನ್ ನಲ್ಲಿ ಗೆದ್ದಿದ್ದಾಳೆ, ಹಲವಾರು ಪ್ರಶಸ್ತಿಗಳು ಇವಳದ್ದಾಗಿದೆ. ಅಷ್ಟೇ ಅಲ್ಲದೆ ಜಿನ ಭಕ್ತಿ ಗೀತೆಗಳಲ್ಲಿ ಆಸಕ್ತಿ ಇದೆ, ಲಾಕ್ ಡೌನ್ ಪಿರಿಯಡ್ ನಲ್ಲಿ ಭಕ್ತಾಂಬರ ಕೂಡ ಕಲಿತಿದ್ದಾಳೆ. ಈಕೆಯನ್ನು ಪ್ರೋತ್ಸಾಹಿಸಿ ಲೈಕ್ ಮತ್ತು ಕಮೆಂಟ್ ಗಳನ್ನು ನೀಡಿ.

ನಿರೂಪಕರು :- ಜೈಜಿನೇಂದ್ರ ಶ್ರೇಯ, ಕಾರ್ಯಕ್ರಮಕ್ಕೆ ಸ್ವಾಗತ.

ಶ್ರೇಯ ಮಧನ್ ಮೊಹರೆ :- ಜೈಜಿನೇಂದ್ರ ಎಲ್ಲರಿಗೂ.

ನಿರೂಪಕರು :- ನಾವು ನಮ್ಮ ಪ್ರತಿ ಎಪಿಸೊಡ್ ನ ಮಕ್ಕಳು ಹೇಳುವ ಹಾಡು ಮಂತ್ರ ಹಾಗೂ ಸ್ತೋತ್ರಗಳಿಂದ ಶುರುಮಾಡುತ್ತಿವಿ ಹಾಗೆ ನೀವು ಭಕ್ತಂಬರ ಸ್ತೋತ್ರ ಕೂಡ ಕಲ್ಲತ್ತಿದ್ದೀರ ಅಂತ ಗೊತ್ತಾಯಿತು ನಮ್ಮ ಮುಂದೆ 15ನೇ ಶ್ಲೋಕ ಹಾಡ್ಬಹುದ.

ಶ್ರೇಯ ಮಧನ್ ಮೊಹರೆ :- ನಾನು ಭಕ್ತಾಂಬರ ಶ್ಲೋಕ ಕಲಿಯುತ್ತಾ ಇದ್ದೀನಿ, 28ನೇ ಶ್ಲೋಕದವರೆಗೂ ಕಲಿಯುತ್ತಾ ಇದ್ದೀನಿ ಇನ್ನೂ ಕಲಿಯ ಬೇಕು, ನಾನು 15ನೇ ಶ್ಲೋಕವನ್ನು ಹೇಳುತ್ತೇನೆ.

(ಶ್ರೇಯ ಮಧನ್ ಮೊಹರೆ ರವರು 15ನೇ ಭಕ್ತಾಂಬರ ಶ್ಲೋಕ ಹೇಳಿದರು).

ನಿರೂಪಕರು :- ತುಂಬಾ ಚೆನ್ನಾಗಿ ಹಾಡಿದ್ದೀರ ಶ್ರೇಯ. ವೆರಿ ಗುಡ್, ನಾನು ನಿಮ್ಮ ವಿ ಟಿ ನಲ್ಲಿ ನೋಡಿದೆ ನೀವು ತುಂಬ ಚೆನ್ನಾಗಿ ಡ್ರಾಯಿಂಗ್ ಪೈಟಿಂಗ್ ಮಾಡಿದ್ದೀರ ತುಂಬ ಖುಷಿಯಾಯಿತ್ತು ನೋಡಿ. ನಮಗೆ ಈ ಒಂದು ವಿಷಯದಲ್ಲಿ ಅಸಕ್ತಿ ಹೇಗೆ ಬಂತು ಮತ್ತು ಯಾರಿಂದ ಇನ್ಸ್ ಪೈರ್ ಹಾದರೀ.

ಶ್ರೇಯ ಮಧನ್ ಮೊಹರೆ :- ನಾನು ಚಿಕ್ಕ ವಯಸ್ಸಿ ನಿಂದ ನನಗೆ ಆಸಕ್ತಿ ಇತ್ತು ಡ್ರಾಯಿಂಗ್ ಪೈಟಿಂಗ್ ಎರಡರಲ್ಲೂ ಇತ್ತು ನನಗೆ ಅಪ್ಪ ಅಮ್ಮ ಇಬ್ಬರು ಪ್ರೋತ್ಸಾಹ ಕೊಟ್ಟರು, ಇಬ್ಬರು ಚೆನ್ನಾಗಿ ಮಾಡುತ್ತಾರೆ ಡ್ರಾಯಿಂಗ್ ಪೈಟಿಂಗ್, ಅದರಲ್ಲಿ ಅಪ್ಪ ತುಂಬಾ ಚೆನ್ನಾಗಿ ಮಾಡುತ್ತಾರೆ.

ನಿರೂಪಕರು :- ವೆರಿ ಗುಡ್, ನಾವು ಹೀಗಾಗಲೆ ನಿಮ್ಮ ವಿ ಟಿ ಯಲ್ಲಿ ನಿವು ಮಾಡಿರುವ ಸೂಪರ್ ಡ್ರಾಯಿಂಗ್ ನೋಡಿದ್ದೀವಿ, ನೀವು ಇದನ್ನು ಹೇಗೆ ಕಲ್ತಿದ್ದೀರಿ, ಡ್ರಾಯಿಂಗ್ ಕ್ಲಾಸಸ್ ಅಟೆಂಡ್ ಮಾಡಿದ್ದೀರಾ.

ಶ್ರೇಯ ಮಧನ್ ಮೊಹರೆ :- ಡ್ರಾಯಿಂಗ್ ಕ್ಲಾಸಸ್ ಗೆ ಹೊಗುತ್ತಿದೇನೆ, ಲಾಕ್ ಡೌನ್ ನಿಂದ ಅನ್ ಲೈನ್ ನಲ್ಲಿ ಡ್ರಾಯಿಂಗ್ ಕ್ಲಾಸಸ್ ಇರುತ್ತದೆ. ನನ್ನ ಡ್ರಾಯಿಂಗ್ ಕ್ಲಾಸಸ್ ಹೆಸರು ಗ್ಲೋಬಲ್ ಆರ್ಟ್ ಅಂತ ಬೆಂಗಳೂರಿನಲ್ಲಿ ಇದೆ. ಗ್ಲೋಬಲ್ ಆರ್ಟ್ ತುಂಬ ವಿಶೇಷವಾಗಿ  ಹೇಳಿಕೊಡುತ್ತಾರೆ, ಚೆನ್ನಾಗಿ ಹೇಳಿಕೊಡುತ್ತಾರೆ.

ನಿರೂಪಕರು :- ನೀವು ಡ್ರಾಯಿಂಗ್ ಅಂಡ್ ಪೈಟಿಂಗ್ ಹೇಗೆ ಕಲ್ತರಿ ಅಂತ ಗೊತ್ತಾಯಿತು, ಈ ಆರ್ಟ್ ನಲ್ಲಿ ತುಂಬಾ ವೆರೈಟಿ ಇರುತ್ತದೆ, ಆದರೆ ನಿಮಗೆ ಯಾವುದು ಇಷ್ಟ.

ಶ್ರೇಯ ಮಧನ್ ಮೊಹರೆ :- ನೂರಕ್ಕೂ ಹೆಚ್ಚಿನ ಪೈಟಿಂಗ್ಸ್ ಇರುತ್ತದೆ ನನಗೆ ಎಲ್ಲಾ ಪೈಟಿಂಗ್ಸ್ ಬರುತ್ತದೆ ಮತ್ತು ನನಗೆ ಎಲ್ಲಾ ಪೈಟಿಂಗ್ಸ್ ಕೂಡ ಇಷ್ಟ, ನಾನು ಅತಿ ಹೆಚ್ಚು ಬಳಸುವ ಪೈಟಿಂಗ್ ಅಕ್ರಿಲಿಕ್ ಪೈಟಿಂಗ್ ಮತ್ತು ಪೆನ್ಸಿಲ್ ಸ್ಕೆಚ್ ಅವೆರಡೂ ನನಗೆ ಇಷ್ಟ

ನಿರೂಪಕರು :- ವಾವ್  ನೀವು ಡ್ರಾಯಿಂಗ್ ನಲ್ಲಿ ಇಷ್ಟೆಲ್ಲಾ ಮಾಡುವುದು ನಿಜ ನೀವು ಗ್ರೆಟ್, ವೀಕ್ಷಕರೆ ಶ್ರೇಯ ರವರ ಇನ್ನೊಂದು ವಿಷಯ ಕೇಳಿ ನನಗೆ ತುಂಬಾ ಖುಷಿಯಾಯಿತ್ತು ಅವರು ತನ್ನ ಹವ್ಯಾಸದಲ್ಲು ಕೂಡ  ಧಾರ್ಮಿಕ ಚಿಂತನೆ ಕೂಡ ಅಳವಡಿಸಿಕೊಂಡಿದ್ದಾರೆ ಅವರು ಮಾಡುವಂತಹ ಮಾಡ್ರನ್ ಆರ್ಟ್ ಜೊತೆಗೆ  ಬಾಹುಬಲಿ ಸ್ವಾಮಿ ಪೈಟಿಂಗ್ ಹಾಗೂ ಅತ್ತಿಮಬ್ಬೆ ಪೈಟಿಂಗ್ ಇಂತಹ ಹಲವಾರು ಪೈಟಿಂಗ್ ಕೂಡ ಮಾಡಿದ್ದಾರೆ, ಬನ್ನಿ ಅವರು ಮಾಡಿರುವ ಇಂತಹ ಒಂದೆರಡು ಪೈಟಿಂಗ್ ನೋಡಿಕೊಂಡು ಬರೋಣ.

(ಶ್ರೇಯ ಮಧನ್ ಮೊಹರೆ ರವರು ಸುಂದರವಾದಂತಹ ಪೈಟಿಂಗ್ ಮಾಡಿದರು).

ನಿರೂಪಕರು :- ಸುಂದರವಾಗಿತ್ತು ಶ್ರೇಯ, ತುಂಬಾ ಚೆನ್ನಾಗಿ ಪೈಟಿಂಗ್ ಮಾಡಿದ್ದೀರ, ನನಗಂತೂ ಸಾಕ್ಷಾತ್ ಗೊಮ್ಮಟೇಶ್ವರ ಮೂರ್ತಿ ನೋಡಿದ ಹಾಗೆ ಆಯಿತು. ನಾವು ಈಗಾಗಲೇ ವಿ ಟಿ ಯಲ್ಲಿ ನೀವು ಪೈಟಿಂಗ್ ಮಾಡುವುದರ ಜೊತೆಗೆ ಕ್ರಾಫ್ಟ್ ವರ್ಕ್ ಕೂಡ ತುಂಬ ಚೆನ್ನಾಗಿ ಮಾಡುತ್ತೀರ ಅಂತ ನೋಡಿದ್ದೀವಿ ನಮಗೆ ಈ ಕಲೆಯನ್ನು ಕೂಡ ತೋರಿಸಿ.

(ಶ್ರೇಯ ಮಧನ್ ಮೊಹರೆ ರವರು ಐಸ್ ಕ್ರೀಮ್ ಸ್ಟಿಕ್ ನಿಂದ ಮಾಡಿರು ಮತ್ತು ಇತರೆ ಕ್ರಾಫ್ಟ್ ಅನ್ನು ತೊರಿಸಿದರು).

ನಿರೂಪಕರು :- ಅಮೇಜಿ಼ಗ್  ಶ್ರೇಯ, ನೀವು ಎಷ್ಟು ಚೆನ್ನಾಗಿ ಪೈಟಿಂಗ್ ಮಾಡಿದ್ದೀರ ಅಷ್ಟೆ ಚೆನ್ನಾಗಿ ಕ್ರಾಫ್ಟ್ ವರ್ಕ್ ಕೂಡ ಮಾಡಿದ್ದೀರ, ವೀಕ್ಷಕರೆ ನೋಡಿದ್ದಿರಲ್ಲವ ಶ್ರೇಯಳಲ್ಲಿ ಇರುವಂತಹ ಪ್ರತಿಭೆ ತುಂಬಾ ವಿಶೇಷವಾದದ್ದು ಅವರು ಇನ್ನೂ ಹೆಚ್ಚು ಈ ಕ್ಷೇತ್ರದಲ್ಲಿ ಬೆಳೆಯುತ್ತಾ ಹೊಗಲ್ಲಿ ಹಾಗೆ ಅವರಲ್ಲಿ ಇರುವಂತಹ ಧಾರ್ಮಿಕ ಚಿಂತನೆ ಕೂಡ  ಹೀಗೆ ಮುಂದುವರೆಯಲ್ಲಿ ಅಂತ ನಾವೇಲ್ಲರು ಆಶಿಸೋಣ.

ಶ್ರೇಯ ಅವರೆ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಧನ್ಯವಾದಗಳು.

ಈಗ ನಿಮ್ಮ ಮುಂದೆ ಪ್ರಸಾರವಾಗಲ್ಲಿದೆ ಧರ್ಮದ ಪಾಠ.

 

 ‘ಧರ್ಮದ ಕುಡಿ’

ಧರ್ಮದ ಬೆಳೆ ಬಿತ್ತೋಣ

‘ಧರ್ಮ ಪಾಠ’

ಧೀರಜ್ ಜೈನ್, ಹೊಳೆನರಸಿಪುರ.

ಜೈ ಜಿನೇಂದ್ರ ಮಕ್ಕಳೆ ಜ್ವಾಲಮಾಲ ಡಾಟ್ ನ್ಯೂಸ್ ಸಮರ್ಪಿಸುವ ಜೈನ ಧರ್ಮ ಪಾಠ ಅಭ್ಯಾಸ ಮಾಲಿಕೆ ಕಾರ್ಯಕ್ರಮಕ್ಕೆ ನಿಮ್ಮಗೆಲ್ಲರಿಗೂ ಸ್ವಾಗತ.

ಈ ಹಿಂದಿನ ಸಂಚಿಕೆಗಳಲ್ಲಿ ಈ ಹಿಂದಿನ ಸಂಚಿಕೆಯಲ್ಲಿ ನಾವು ಅಷ್ಟ ವಿಧಾರ್ಚನೆಯ ದ್ರವ್ಯಗಳ ಬಗ್ಗೆ ತಿಳಿದುಕೊಂಡಿದ್ದೀವಿ, ಈ ಒಂದು ಸಂಚಿಕೆಯಲ್ಲಿ ಅಷ್ಟ ವಿಧಾರ್ಚನೆಯ ಹೇಗೆ ಮಾಡಬೇಕು ಅದರ ಮಹತ್ವವೇನು ಪ್ರತಿಯೊಂದು ದ್ರವ್ಯ ಅಂದರೆ ಎಂಟು ದ್ರವ್ಯಗಳ ಮಹತ್ವವನ್ನು ತಿಳಿದುಕೊಳ್ಳೋಣ.

ನಮ್ಮ ಧರ್ಮದಲ್ಲಿ ಹೇಳಿರುವಂತೆ ಎರಡು ರೀತಿಯ ಪೂಜೆಗಳಿವೆ, ಒಂದು ಭಾವ ಪೂಜೆ, ಒಂದು ದ್ರವ್ಯ ಪೂಜೆ  ಭಾವಪೂಜೆ ಎಂದರೇನು ಎಂದರೆ, ಕೆಲವು ಸಂದರ್ಭದಲ್ಲಿ ನಮಗೆ ಮಡಿಯಾಗಿರದ ಕಾರಣ ಮತ್ತು ನಮ್ಮಲ್ಲಿ ದ್ರವ್ಯವಿಲ್ಲದ ಸಂದರ್ಭದಲ್ಲಿ ನಾವು ಭಾವ ಪೂಜೆಯನ್ನು ಮಾಡಬಹುದು ಅಂದರೆ ಭಾವನೆಯಿಂದ ಮಾಡುವುದು. ನಾವೇ ಪೂಜೆಯನ್ನು ಮಾಡುತ್ತಿದ್ದೇವೆ ಮತ್ತು ಇಂತಹ ದ್ರವ್ಯವನ್ನು ಬಳಸಿ ಪೂಜೆಯನ್ನು ಮಾಡುತ್ತಿದ್ದೇವೆ ನಾವು ಭಗವಂತನಿಗೆ ಇದನ್ನೆ ಸಮರ್ಪಣೆ ಮಾಡಿ ಪೂಜೆಯನ್ನು ಮಾಡುತ್ತಿದ್ದೇವೆ ಎನ್ನುವುದಕ್ಕೆ ಭಾವ ಪೂಜೆ ಎಂದು ಕರೆಯುತ್ತೇವೆ.

ದ್ರವ್ಯ ಪೂಜೆ ಎಂದರೆ ದ್ರವ್ಯಗಳನ್ನ ಬಳಸಿ ಭಗವಂತನ ಗುಣಗಾನವನ್ನು ಮಾಡುವುದು ಸಮರ್ಪಣೆಯನ್ನು ಮಾಡುವುದು ಈ ರೀತಿಯ ಎರಡು ವಿಧಾವಾಗಿರುವ ಪೂಜೆ. ಒಂದು ದ್ರವ್ಯ ಪೂಜೆ, ಒಂದು ಭಾವ ಪೂಜೆ. ಈ ದ್ರವ್ಯ ಪೂಜೆಗಳ ವಿಭಾಗದಲ್ಲೇ ಈ ಅಷ್ಟ ದ್ರವ್ಯಗಳು ಬರುತ್ತವೆ. ಅಷ್ಟ ದ್ರವ್ಯಗಳಿಗೆ ಪ್ರತಿಯೊಂದು ದ್ರವ್ಯಕ್ಕೂ ಅದರದೆ ಯಾದಂತಹ ಮಹತ್ವ ಇದೆ. ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ ಹಾಗೂ ಫಲ. ಈ ಎಂಟು ದ್ರವ್ಯಗಳ ಬಗ್ಗೆ ಪ್ರತಿಯೊಂದು ದ್ರವ್ಯಗಳನ್ನು ಯಾಕೆ ನಾವು ಬಳಸಬೇಕು ಅದರ ಮಹತ್ವವೇನು ಎಂದು ತಿಳಿದು ಕೊಳ್ಳೊಣ.

ಜಲ : ಜಲವನ್ನು ನಾವು ಯಾಕೆ ಬಳಸುತ್ತೇವೆ ಎಂದರೆ ಜನ್ಮ ಜರಾ ಮೃತ್ಯ ವಿನಾಶನಾಯ ಜಲಂ ಸಮರ್ಪಯಾಮಿ ಸ್ವಾಹಾ ಎಂದರೆ ಸಕಲ ಜೀವ ರಾಶಿಗಳಾದ 84 ಲಕ್ಷ ಜೀವಿಗಳಲ್ಲಿ ಈ ಒಂದು ಜೀವ ಬೇರೊಂದು ಜನ್ಮಕ್ಕೆ ಹೋಗಬೇಕು ಎಂದರೆ,  ನಾವು ಯಾವ ರೀತಿಯ ಧರ್ಮಕಾರ್ಯಳನ್ನು ಮಾಡಿದ್ದೇವೆ ಪುಣ್ಯ ಕಾರ್ಯಗಳನ್ನು ಮಾಡಿರುವುದರ ಆಧಾರದ ಮೇಲೆ ನಮ್ಮ ಮುಂದಿನ ಭವ ನಿರ್ಣಯವಾಗುತ್ತದೆ. ಈ ಒಂದು ಹುಟ್ಟು ಸಾವುಗಳನ್ನು ನಿವಾರಣೆ ಮಾಡಿಕೊಳ್ಳುವುದಕೊಸ್ಕರ ಭಗವಂತ ಜಿನೇಶ್ವರ ದೇವ ಹೇಗೆ ನೀವು ಮೋಕ್ಷವನ್ನು ಪ್ರಾಪ್ತಿಮಾಡಿಕೊಂಡರೊ ಹೇಗೆ ನೀವು ಹುಟ್ಟು ಸಾವಿನಲ್ಲಿ ಸಿಲುಕದಂತೆ ಹಾದೆಯೋ ಅಂತಹ ಒಂದು ಫಲ ಪ್ರಾಪ್ತಿಯಾಗಲ್ಲಿ ಎಂದು ಈ ಜಲವನ್ನು ನಿನಗೆ ಸಮರ್ಪಣೆಯನ್ನು ಮಾಡುತ್ತಿದ್ದೇವೆ.

ಗಂಧ : ಗಂಧವನ್ನು ನಾವು ಯಾಕೆ ಬಳಸುತ್ತೇವೆ ಎಂದರೆ, ಸಂಸಾರ ಭವ ತಾಪ ವಿನಾಶನಾಯ ಗಂಧಂ  ಸಮರ್ಪಯಾಮಿ ಸ್ವಾಹಾ. ಸಂಸಾರದಲ್ಲಿನ ತಾಪಗಳು ಕಷ್ಟಗಳು ಎಲ್ಲವು ನಿವಾರಣೆಯಾಗಲ್ಲಿ ಎಂದು ಗಂಧವನ್ನು ಸಮರ್ಪಣೆಯನ್ನು ಮಾಡುತ್ತೇವೆ.

ಅಕ್ಷತೆ : ಅಕ್ಷತೆಯನ್ನು ಯಾಕೆ ಸಮರ್ಪಣೆ ಮಾಡುತ್ತೇವೆ ಎಂದರೆ, ಅಕ್ಷಯ ಫಲ ಪ್ರಾಪ್ತಾಯ ಅಕ್ಷತಂ ಸಮರ್ಪಯಾಮಿ ಸ್ವಾಹಾ. ಅಂದರೆ ಹುಟ್ಟು ಸಾವುಗಳೆ ಇಲ್ಲದಂತಹ ಅತ್ಯುನ್ನತ ಪದವಿ ಸಿದ್ದ ಪದವಿ ಅಂದರೆ ಅದು ಅಕ್ಷಯವಾಗಿರುವಂತಹ ಪದವಿ ಅಂದರೆ ಹೆಚ್ಚು ಜ್ಞಾನವಿರುವಂತಹದ್ದು ಅಂತಹ ಪದವಿಯನ್ನು ಅಥವಾ ಅಕ್ಷಯವನ್ನು ನಮಗೆ ಕೊಡು ಎಂದು ಅಕ್ಷತೆಯನ್ನು ಸಮರ್ಪಿಸುತೇವೆ.  

ಪುಷ್ಪ : ಪುಷ್ಪವನ್ನು ಯಾಕೆ ಸಮರ್ಪಣೆ ಮಾಡುತ್ತೇವೆ ಎಂದರೆ, ಕಾಮ ಬಾಣ ವಿದ್ವಂಸನಾಯ ಅಂದರೆ ನಮ್ಮ ಜೀವನದಲ್ಲಿ ಅತಿ ಹೆಚ್ಚು ಆಸೆಗಳು ಬಾರದಂತೆ ನಿವಾರಣೆಯಾಗಬೇಕು ಅಂತಹ ಆಸೆಗಳಿಂದ ನಾವು ದೂರವಿರ ಬೇಕು ಎಂದು ಅದರ ಪ್ರತಿಕವಾಗಿ ಪುಷ್ಪವನ್ನು ಸಮರ್ಪಿಸುತ್ತೇವೆ.

ಮುಂದುವರೆಯುವುದು…..

ಈ ವಾರದ ಪ್ರಶ್ನೆಗಳು

  1. ಹಿಂದಿನ ಪಾಠದಲ್ಲಿ ಏನನ್ನುತಿಳಿದುಕೊಂಡಿರಿ?
  2. ಪೂಜೆಯಲ್ಲಿ ಎಷ್ಟು ವಿಧ ? ಯಾವುವು ?
  3. ಜಲವನ್ನು ಸಮರ್ಪಣೆ ಮಾಡುವಾಗ ಹೇಳುವ ಮಂತ್ರ ಹೇಳಿ ?
  4. ಗಂಧವನ್ನು ಸಮರ್ಪಣೆ ಮಾಡುವಾಗ ಹೇಳುವ ಮಂತ್ರ ಹೇಳಿ ?
  5. ಮುಂದಿನ ಪಾಠಗಳ ಏನನ್ನು ತಿಳಿದುಕೊಳ್ಳಲಿದ್ದೀರಿ ?

ಧರ್ಮದ ಪಾಠ ಕೇಳಿದ ನಂತರ ಕೇಳಲಾಗುವ ಪ್ರಶ್ನೆಗಳಿಗೆ ಈ ಕೂಡಲೆ ಉತ್ತರವನ್ನು ವಾಟ್ಸ್ ಆಪ್ ಮಾಡಿ. ಹಾಗೂ ಅಭಿನಂದನಾ ಪತ್ರವನ್ನು ಪಡೆಯಿರಿ ಹಾಗೆಯೇ ಪ್ರತಿ ಭಾನುವಾರ ಬೆಳಗ್ಗೆ 10:30ಕ್ಕೆ ನಿಮ್ಮ ಜ್ವಾಲಮಾಲ ನ್ಯೂಸ್ ನಲ್ಲಿ ಪ್ರಸಾರವಾಗುವ ಧರ್ಮದ ಕುಡಿ ಕಾರ್ಯಕ್ರಮವನ್ನು ತಪ್ಪದೆ ವೀಕ್ಷಿಸಿ. ಜೈ ಜೀನೆಂದ್ರ,

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್