ವಾರಪತ್ರಿಕೆ ಜೈನ ಸುದ್ದಿ-14

ಈ ಸಂಚಿಕೆ ಶರನ್ ನವರಾತ್ರಿಯ ವಿಶೇಷ ಸಂಚಿಕೆಯಾಗಿದೆ. ಇಲ್ಲಿ ಸಂಭ್ರಮಾಚರಣೆಗಳನ್ನು ಮಾತ್ರ ಪ್ರಧಾನವಾಗಿಸಿದೆ, ರಾಜ್ಯದೇಲ್ಲೆಡೆಯ ಜಿನ ಮಂದಿರದ ನವರಾತ್ರಿ ಉತ್ಸವದ ಸಂಭ್ರಮಾಚರಣೆ ನಿಮ್ಮಗಳ ದರ್ಶನ ಭಾಗ್ಯಕ್ಕಾಗಿ ಸಂಯೋಜಿಸಲಾಗಿದೆ, ವೀಕ್ಷಿಸಿ.

ಶ್ರೀ ಕ್ಷೇತ್ರ ಶ್ರವಣ ಬೆಳಗೊಳ, ನಿಟ್ಟೂರು, ಬೆಟ್ಕೇರಿ, ಹಾವೇರಿ, ಕೊಪ್ಪಳ, ಸೂರಾಲು-ಕೊಕ್ಕರ್ಣೆ ಮತ್ತು ಕಾರ್ಕಳದಲ್ಲಿ ಶರನ್ ನವರಾತ್ರಿ ಉತ್ಸವ ಬಹಳ ಸಂಭ್ರಮದಿಂದ ನಡೆಯಿತು.

ನವರಾತ್ರಿಯ ಇನ್ನೊಂದು ವಿಶೇಷ ಪರಂಪರಾಗತವಾಗಿ ಬಂದಿರುವ ದಸರ ಬೊಂಬೆ ಪ್ರದರ್ಶನ, ನಮ್ಮ ಸಮುದಾಯದವರ ಮನೆಗಳಲ್ಲಿ ಎಲ್ಲೆಲ್ಲಿ ಹೇಗೆ ನಡೆಯುತ್ತಿದೆ ನೋಡೋಣ ಬನ್ನಿ.

ರೂಪ ನಾಗರಾಜು ಮೈಸೂರು, ಬೆಂಗಳೂರಿನ ಬಾಣಸವಾಡಿ ಡಾ|| ಅಶ್ವಿನಿ ಮನೆ, ಡಾ|| ಆದಿನಾಥ ಪದ್ಮ ಅರಹನ್ ಮನೆ, ಪ್ರಸನ್ನ ಕುಮಾರ್ ಮೈಸೂರು, ಪದ್ಮಿನಿನಾಗರಾಜು ಬೆಂಗಳೂರು, ಪದ್ಮಶ್ರೀ ಬೆಂಗಳೂರು, ಸುಮತಿಕುಮಾರ್ ಹೊಸದುರ್ಗ ಮತ್ತು ರೇಖಾ ಅಭಯ್ ಬೆಂಗಳೂರು ಇವರುಗಳ ಮನೆಗಳಲ್ಲಿ  ಶರನ್ ನವರಾತ್ರಿಯ ದಸರ ಬೊಂಬೆ ಪ್ರದರ್ಶನ ತುಂಬಾ ಸುಂದರವಾಗಿತ್ತು.

ಜಾಹಿರಾತು.

ಬಾಹುಬಲಿ ಕಾಲೇಜ್ ಆಫ್‍್ ಇಂಜಿನಿಯರಿಂಗ್ ಗೊಮ್ಮಟನಗರ, ಶ್ರವಣಬೆಳಗೊಳ. ವಿದ್ಯಾಭ್ಯಾಸಕ್ಕೆ ಅನುಕೂಲಕರವಾದ ಪ್ರಶಾಂತವಾದ ವಾತಾವರಣ,

ನಮ್ಮಲ್ಲಿರುವ ಕೋರ್ಸ್ ಗಳ ವಿವರ : ಬಿ.ಇ ನಲ್ಲಿ

ಮೆಕಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್. ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್.

ಎಂ ಟೆಕ್ ನಲ್ಲಿ ಎಂ ಟೆಕ್ ಇನ್ ಇಂಜಿನಿಯರಿಂಗ್ ಮ್ಯಾನೆಜ್ ಮೆಂಟ್ ಎಂ ಇ ಎಂ ಕೋರ್ಸ್ ಗಳಿಗಾಗಿ ದಾಖಲಾತಿ ಪ್ರಾರಂಭವಾಗಿದೆ.

ಪ್ರವೇಶಾತಿಗಾಗಿ ಸಂಪರ್ಕಿಸಿ, ಪ್ರಾಂಶುಪಾಲರು ಬಾಹುಬಲಿ ಕಾಲೇಜ್ ಆಫ‍್ ಇಂಜಿನಿಯರಿಂಗ್ ಗೊಮ್ಮಟನಗರ, ಶ್ರವಣಬೆಳಗೊಳ. ಮೊಬೈಲ್ ಸಂಖ್ಯೆ: 9448705707 – 9980665745.

ಈ ಒಂದು ಸಂಕಷ್ಟ ಪರಿಸ್ಥಿತಿಯಲ್ಲಿ ಜಿನ ಮಂದಿರಗಳ ಪೂಜಾರಾಧನೆಗಳಲ್ಲಿ ಪಾಲ್ಗೊಳಲಾಗದಿದ್ದರು ಈ ಬಾರಿ ಜಾಲತಾಣಗಳು ಈ ವಿಶಿಷ್ಟ ಸುವರ್ಣವಾಕಶವನ್ನು ಕಲ್ಪಿಸಿದ ರೀತಿ ವೈಶಿಷ್ಟವಾಗಿತ್ತು. ನೀವು ಇದ್ದಲಿಯೇ ತಲುಪಿಸಿದ ಈ ಒಂದು ಕಾರ್ಯ ಉತ್ತಮ ಕಾರ್ಯವಾಗಿದೆ.

ಈ ಬಾರಿಯ ನವರಾತ್ರಿ ಸಂಭ್ರಮಾಚರಣೆ ಪ್ರತಿರ್ಷಕ್ಕಿಂತ ಭಿನ್ನವಾಗಿದಂತ್ತು ನಿಜ, ನಮ್ಮ ಪ್ರಾದೇಶಿಕ ಮಟ್ಟದ ಧಾರ್ಮಿಕ ಚಟುವಟಿಕೆಗಳಿಗೆ ಸಾಂಸ್ಕೃತಿಕ ಆಚರಣೆಗಳಿಗೆ ಸಿಮ್ಮಿತವಾದ ಈ ಆಚರಣೆ ಈ ಬಾರಿ ರಾಜ್ಯದ ಮೂಲೆ ಮೂಲೆಗಳಿಂದ ನಾವು ಮನೆಯಿಂದಲೇ ಭಾಗವಹಿಸುವ ದೇವಿ ಪೂಜೆ ಅರ್ಚನೆ ಸೇವೆಗಳನ್ನು ನಾವಿದ್ದಲ್ಲಿಂದಲೆ ಕಣ್ತುಂಬಿಕೊಂಡು ವೀಕ್ಷಿಸಿ ಪಾಲ್ಗೊಳ‍್ಳುವ ಅವಕಾಶವನ್ನು ಆಧುನಿಕ ತಂತ್ರಜ್ಞಾನ ಬಳಸಿ ಜಾಲತಾಣಗಳು ಒಬೊಬ್ಬರು ಒಂದೊಂದು ರೀತಿಯಲ್ಲಿ ಎಲ್ಲರನ್ನು ಒಗ್ಗೂಡಿಸಿ ಆಚರಿಸಿ ಸಂಭ್ರಮಿಸಿದ್ದಾರೆ. ಹೆಚ್ಚು ಪ್ರಚಾರಗೊಂಡ ಆದಷ್ಟು ಎಲ್ಲಾ ಕಾರ್ಯಕ್ರಮಗಳನ್ನು ಇಲ್ಲಿ ತಂದಿದ್ದೇವೆ. ನಿಮ್ಮ ಸುತ್ತಮುತ್ತಲಿನ ಆಚರಣೆಯು ಈ ರೀತಿ ಸುಂದರ ಆಯೋಜನೆ ಯೊಂದಿಗೆ ಸಂಪನ್ನಗೊಂಡಿದ್ದಲ್ಲಿ ನಮಗೆ ಖಂಡಿತಾ ತಿಳಿಸಿ.

ಮಠ ಮಾನ್ಯಗಳಿಂದಲು ಭಟ್ಟಾರಕರುಗಳ ನೇತೃತ್ವದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ನೇರ ಪ್ರಸಾರದಲ್ಲಿ ಪೂಜಾದಿ ಪ್ರಸಾದಗಳನ್ನು ನೀಡಿದ್ದು ಭಕ್ತರಲ್ಲಿ ಧನ್ಯತಾ ಭಾವವನ್ನು ಮೂಡಿಸುತ್ತಿದೆ.  ಜಿನ ಗಾನ ವಿಶಾರದೆ ಫೆಸ್ ಬುಕ್ ಫೆಜ್ ನಲ್ಲಿ ಈ ಹಿಂದೆ ದಶಲಕ್ಷಣ ಪರ್ವ ಆಚರಣೆಯಂತೆ ನವರಾತ್ರಿ ಉತ್ಸವಗಳು ಬಹುತೇಕ  ಜಯಶ್ರೀ ಹೊರನಾಡುರವರ ದೇವರ ಮನೆಯಿಂದ ಮೂಡಿ ಬಂದಿದ್ದಲ್ಲದೆ ಕುಟುಂಬದ ಎಲ್ಲರೂ ಧರ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಅವರ ಸಂಯೋಜನೆಯಲ್ಲಿ ಮೂಡಿಬಂದ ನರಸಿಂಹ ರಾಜಪುರದ  ನವರಾತ್ರಿ ಉತ್ಸವದ ನೇರಪ್ರಸಾರ ಜನಮನ್ನಣೆಗೆ ಪಾತ್ರವಾಯಿತ್ತು.

ನಾಗಶ್ರೀ ಮುಪ್ಪಾನೆಯವರ ಗಂಧ ಕುಟಿಯಲ್ಲಿ ನವರಾತ್ರಿಯ ಪ್ರತಿದಿನ ನಡೆದ ನವ ದೇವಿಯರ ಪೂಜೆ ಗೊಂಬೆಗಳ ಪ್ರದರ್ಶನ ಧಾಂಡ್ಯ ಕಾರ್ಯಕ್ರಮ ಯಶೋಧರ ಚರಿತ್ರೆ ಅದೆ ಪುಟದಲ್ಲಿ ನಡೆದಂತಹ ಶೀತಲ ನಾಥ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮ ಎಲ್ಲವು ಮನ ಮುಟ್ಟುವಂತಿತ್ತು ಜೀವ ಧಯಾಷ್ಟಮಿ ಆಚರಣೆಗಾಗಿ ನಡೆದ ಸುದೇಶ್ ಮಕ್ಕಿಮನಿ ಪುಟದಲ್ಲಿ ನಡೆದ ಜಯಶ್ರೀ ಅವರ ಪುತ್ರರಾದ ಧೀರಜ್ ಹಾಗೂ ನೇರಂಕಿ ಪಾರ್ಶ್ವನಾಥ ಹಾಗೂ ಪ್ರಸನ್ನ ಕುಮಾರ್ ಬೆಂಗಳೂರು ಇವರು ಹಾಗೂ ಇನ್ನೂ ಅನೇಕರ ಸಂಯೋಗದಲ್ಲಿ ಮೂಡಿಬಂದ ಬಸದಿ ಹಾಗೂ ಶೀಕರ್ಜಿ ದರ್ಶನ ಕಾರ್ಯಕ್ರಮ ಅತ್ಯುತ್ತಮವಾದ ಕಾರ್ಯಕ್ರಮವಾಗಿತ್ತು ಹಲವಾರು ಕಾರ್ಯಕ್ರಮಗಳಿಗೆ ವೇದಿಕೆಯಾದ ಕರ್ನಾಟಕ ಜೈನ ಧರ್ಮ ಪುಟ ಅದೆ ಜೀವ ಧಯಾಷ್ಟಮಿ ದಿನದಂದು ಯಶೋಧರ ಚರಿತ್ರೆಯ ಕಾವ್ಯವಾಚನ ಮತ್ತು ಪ್ರವಚನ ಕಾರ್ಯಕ್ರಮ ಸೊಗಸಾಗಿ ಮೂಡಿಬಂತು.

ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ಈ ಪುಟದಲ್ಲಿ ಕವನೊತ್ಸವ ಹಾಗೂ ಸರಸ್ವತಿ ಪೂಜೆ ಹೀಗೆ ಒಂಬತ್ತು ದಿನಗಳ ಕಾರ್ಯಕ್ರಮ ಸುಂದರವಾಗಿ ಆಯೋಜನೆಗೊಂಡಿತ್ತು.

ನಿಮ್ಮ ನೆಚ್ಚಿನ ಜ್ವಾಲಮಾಲ ನ್ಯೂಸ್ ಚಾನಲ್ ಕೂಡ ನವರಾತ್ರಿಯ ಪ್ರಯುಕ್ತ ಶಾಂತಿ ವಿಧಾನ, ಜಿನವಾಣಿ ಪೂಜೆ, ಮಕ್ಕಳಿಗಾಗಿ ವಿದ್ಯಾಪ್ರಾಪ್ತಿ ವಿಧಾನ, ಶ್ರೀರಂಗ ಪಟ್ಟಣ ನರಸಿಂಹ ರಾಜಪುರ ಹಾಗೂ ಹೊಂಬುಜದ ನವರಾತ್ರಿಯ ನೇರಪರಸಾರ ಹೀಗೆ ಹಲವಾರು ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು ಅದೆ ರೀತಿಯಾಗಿ ಮೋಹನ್ ಕುಮಾರ್ ಶಾಸ್ತ್ರಿಯವರು ಕೂಡ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಅನೇಕ ಕಾರ್ಯಕ್ರಮಗಳು  ಎಲ್ಲೆಡೆ ನಡೆದು ವೀಕ್ಷಕರು ಪುಣ್ಯ ಭಾಗಿಗಳಾಗಿದಲ್ಲದೆ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದಕ್ಕೆ ಅನಂತ ಅನಂತ ಧನ್ಯವಾದಗಳನ್ನು ಜ್ವಾಲಮಾಲ ಅರ್ಪಿಸುತ್ತದೆ.

ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಶಷ್ಟಾಭ್ದಿ ಆಚರಣೆ ಜಾಲತಾಣಗಳಲ್ಲಿ ಬಹಳ ಸದ್ದು ಮಾಡಿತ್ತು.

ಶ್ರೀಮತಿ ಅನಿತಾ ಸುರೇದ್ರ ಕುಮಾರ್ ರವರ 60ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಕ್ಕಾಗಿ ಮೂಡಿಬಂದ ಭಾರತೀಯ ಜೈನ್ ಮಿಲನ್ ವಲಯ ಎಂಟರ ವತಿಯಿಂದ ನಡೆದ ಕಾರ್ಯಕ್ರಮ ಎಂದಿನಂತೆ ಅಭೂತ ಪೂರ್ವ ಯಶಸ್ಸಿನೊಂದಿಗೆ ಮಾದರಿ ಕಾರ್ಯಕ್ರಮವಾಗಿ ಹೊರಹೊಮ್ಮಿತು. ಅಲ್ಲಿ ಅವರಿಗಾಗಿ ಹಾಡಿದ ಪ್ರಖ್ಯಾತ ಗಾಯಕರುಗಳ ಬಹು ಭಾಷಾ ಗೀತೆ ಮಾತನಾಡಿದ ಪ್ರತಿಯೊಬ್ಬರ ನುಡಿ ಅವರ ಕುಟುಂಬ ವರ್ಗದವರಾಗಿರಬಹುದು ಸ್ನೇಹಿತರು ಹಾಗೂ ಜೂ಼ನ್ ನ ಗಣ್ಯ ವ್ಯಕ್ತಿಗಳಾಗಿರಬಹುದು ಎಲ್ಲರ ನುಡಿಗಳು ಅಮೂಲ್ಯವಾಗಿತ್ತು ಅನಿತಕ್ಕನವರಿಗೆ ತೃಪ್ತಿಕೊಟ್ಟಿತ್ತು ಅಲ್ಲಿ ಪ್ರಸ್ತುತ್ತವಾದ ಅನಿತಕ್ಕನವರಿಗಾಗಿ ಜಯಶ್ರೀ ಹೊರನಾಡು ರಚನೆ ಹಾಗೂ ಜಿತೇಂದ್ರ ರವರ ಸಂಗೀತ ಹಾಗೂ ಜ್ವಾಲಮಾಲ ಸಂಯೋಜನೆಯಲ್ಲಿ ಜಿನ ಭಜನ ತಂಡದ ಕೊಡುಗೆಯಾಗಿ ನೀಡಿದ ಗೀತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಭಾರತೀಯ ಜೈನ್ ಮಿಲನ್ ವತಿಯಿಂದ ಇಂತಹ ಅತ್ಯುತ್ತಮ ಕಾರ್ಯಕ್ರಮ ಗಳು ಹೀಗೆ ಮೂಡಿಬರುತ್ತಿರಲ್ಲಿ  ಎಂದು ಆಶಿಸುತ್ತ ಅವರ  ಕಾರ್ಯಕ್ರಮಗಳಿಗೆ ಶುಭ ಕೊರುತ್ತೇವೆ.

ಈ ಬಾರಿಯ ವಿಶೇಷ ಸಂಚಿಕೆಯನ್ನು ವೀಕ್ಷಿಸಿದ ತಮ್ಮೆಲ್ಲರೀಗೂ ಧನ್ಯವಾದಗಳನ್ನು ತಿಳಿಸುತ್ತ.

ಪ್ರತಿವಾರವು ವೀಕ್ಷಿಸುತಿರಿ, ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್