ಧರ್ಮೋತ್ತನ ಟ್ರಸ್ಟ್

ಧರ್ಮೋತ್ಥಾನ ಟ್ರಸ್ಟ್ ಸಂಸ್ಥೆಗೆ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ.  ನಾವು ಮೊದಲನೆಯದಾಗಿ ಧರ್ಮೋತ್ಥಾನ ಟ್ರಸ್ಟನ ಬಗ್ಗೆ ತಿಳಿದುಕೊಳ್ಳೋಣ.  ಈ ಟ್ರಸ್ಟ್ ಹೇಗೆ ರಚನೆಯಾಯಿತು ಎಂದರೆ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ  ಟ್ರಸ್ಟ್ – ಇದನ್ನು ಚಿಕ್ಕದಾಗಿ ಎಸ್ ಡಿ ಎಮ್ ಡಿ  ಎಂದು ಕೂಡ ಕರೆಯುತ್ತಾರೆ.  ಕರ್ನಾಟಕದ ಐತಿಹಾಸಿಕ ಸಾಂಸ್ಕ್ರತಿಕ  ಪ್ರಾಚೀನ ಪರಂಪರೆಯನ್ನು ಹೊಂದಿರುವಂತಹ  ಸ್ಮಾರಕಗಳನ್ನು ದೇವಾಲಯಗಳನ್ನು ರಕ್ಷಣೆ ಮಾಡುವಂತಹ ಒಂದು  ಅದಮ್ಯ ವಾಗಿರುವಂತಹ ಒಂದು ಉದ್ದೇಶವನ್ನು ಇಟ್ಟುಕೊಂಡು  ಈ ಟ್ರಸ್ಟ್ ನ್ನು ಸ್ಥಾಪನೆ  ಮಾಡಲಾಗಿದೆ.  ಈ ಟ್ರಸ್ಟ್ ಸ್ಥಾಪನೆಯಾಗಿದ್ದು 1991 ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾದಂತಹ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ  ಈ ಟ್ರಸ್ಟ್ ನ್ನು ಸ್ಥಾಪನೆ ಮಾಡಲಾಯಿತು. ಧರ್ಮಸ್ಥಳ ಇದರ ಕೇಂದ್ರ ಸ್ಥಳವಾಗಿದೆ. ಹಾಗೆಯೇ ಈ ಒಂದು ಟ್ರಸ್ಟ್ ನ ಕೇಂದ್ರ ಕಛೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪನೆ  ಮಾಡಲಾಗಿದೆ.  

 

ಈ ಟ್ರಸ್ಟ್ ವಿನಾಶದ ಅಂಚಿನಲ್ಲಿರುವ  ದೇವಾಲಯಗಳು ಸ್ಮಾರಕಗಳನ್ನು  ಜೀರ್ಣೋದ್ಧಾರ ಮಾಡುವಂತಹ ಕೆಲಸವನ್ನು ಮಾಡುತ್ತಿದೆ ಅವುಗಳನ್ನು ಮತ್ತೆ ಜೀವವನ್ನು ಕೊಟ್ಟು ನಮ್ಮ ಸಂಸ್ಕ್ರತಿಯನ್ನು ಉಜ್ವಲವಾಗಿ ಪ್ರಜ್ವಲಿಸುವಂತಹ ಕೆಲಸವನ್ನು ಈ ಒಂದು ಟ್ರಸ್ಟ್ ಹಲವಾರು ವರ್ಷಗಳಿಂದ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಸರಿ ಸುಮಾರು 3 ದಶಕಗಳಿಂದ  ಕೂಡ ಕರ್ನಾಟಕದ ಸಂಸ್ಕ್ರತಿಯನ್ನು ಹಾಗೂ ಪರಂಪರೆಯನ್ನು ಉಳಿಸುವಂತಹ ಕೆಲಸವನ್ನು ಮಾಡುತ್ತಾ ಬಂದಿದೆ. ಇದುವರೆಗೂ 200 ಕ್ಕೂ ಹೆಚ್ಚು  ಜೈನ ದೇಗುಲಗಳಿಗೇ ಜೀವ ತುಂಬುವಂತಹ ಕೆಲಸಗಳನ್ನು ಈ ಟ್ರಸ್ಟ್ ಮಾಡಿದೆ. ಹಾಗಾದರೆ ಈ ಧರ್ಮೋತ್ಥಾನ ಟ್ರಸ್ಟನ ಗುರಿಗಳೇನು?  ಇದರ ಕಾರ್ಯಗಳೇನು?  ಇದರ ಚಟುವಟಿಕೆಗಳು ಏನು ಎಂಬುದನ್ನು  ನಾವು ತಿಳಿದುಕೊಳ್ಳೋಣ.

 

ಮೊದಲನೆಯದಾಗಿ  ಧರ್ಮೋತ್ಥಾನ ಟ್ರಸ್ಟ ದೇವಾಲಯಗಳ ಜೀರ್ಣೋದ್ಧಾರ ಮಾಡುವಂತಹುದು. ಅಂದರೆ ದೇವಾಲಯಗಳು ಅಳಿವಿನ ಅಂಚಿನಲ್ಲಿರುವಂತಹ ದೇವಾಲಯಗಳನ್ನು  ಹುಡುಕಿ ಜನರ ಹಾಗೂ ಸರ್ಕಾರದ ಕಣ್ಣಿಗೆ ಬೀಳದೆ ಇರುವಂತಹ  ದೇವಾಲಯಗಳನ್ನು ಪತ್ತೆ ಮಾಡಿ ಅವುಗಳಿಗೆ ಜೀವ ತುಂಬುವ ಕಾರ್ಯಗಳನ್ನು ಈ ಟ್ರಸ್ಟ್ ಮಾಡುತ್ತಿದೆ.  ಈವರೆಗಿನ ಅಂಕಿಅಂಶದ ಪ್ರಕಾರ 224  ಹೆಚ್ಚು ದೇವಾಲಯಗಳನ್ನು  ಜೀರ್ಣೋದ್ಧಾರ ವನ್ನು ಮಾಡುತ್ತಾ ಇದೆ.  ಸುಮಾರು 200 ವರ್ಷಗಳ ಪುರಾತನವಾದ  ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು  ಅವರ  ಜೀರ್ಣೋದ್ಧಾರ ಕಾರ್ಯಗಳನ್ನು ಮಾಡುತ್ತಾರೆ. ಹೊಸ ದೇವಾಲಯಗಳನ್ನು  ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಐತಿಹಾಸಿಕ ಹಾಗೂ ಪ್ರಾಚೀನ ಕಾಲದ ರಾಜಮಹಾರಾಜರ  ಪರಂಪರೆಯಲ್ಲಿ  ಕಟ್ಟಿಸಿರುವಂತಹ ದೇವಾಲಯಗಳನ್ನು  ಈ ಒಂದು ಜೀರ್ಣೋದ್ಧಾರ ಕಾರ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ಟ್ರಸ್ಟ್ ನ ಮತ್ತೊಂದು ಗುರಿ  ಪ್ರಾಚೀನ  ಸಂಸ್ಕ್ರತಿಯನ್ನು ಸಂರಕ್ಷಣೆ ಮಾಡುವಂತಹುದು. ಇವತ್ತು ಮುಂದಿನ ಪೀಳಿಗೆಗೆ  ನಮ್ಮಸಂಸ್ಕ್ರತಿಯನ್ನು ಮೆರೆಯುವಂತಹ  ಸಂದರ್ಭಗಳು ಎದುರಾಗುತ್ತಿವೆ.  ಮುಂದಿನ ಜನಾಂಗ ನಮ್ಮ ಭಾಷೆ  ನಮ್ಮ ಜಲದ ಆಂತರ್ಯವನ್ನು ಮರೆಯುವಂತಹ ಸಮಯ ಎದುರಾಗಿದೆ.  ಹಾಗಾಗಿ ನಮ್ಮ ಭವ್ಯವಾಗಿರುವಂತಹ  ಭಾರತೀಯ ಪರಂಪರೆಯನ್ನು ಉಳಿಸಿಕೊಂಡು ನಿಮ್ಮ ಪೀಳಿಗೆ ಗೆ ರವಾನಿಸುವಂತಹ ಕೆಲಸ ಈ ಸಂದರ್ಭದಲ್ಲಿ ಅವಶ್ಯಕತೆ ಇದೆ.

 

ನಮ್ಮ ವಾಸ್ತುಶಿಲ್ಪದ ತವರೂರಾದ ಬೇಲೂರು, ಹಳೇಬೀಡು, ಬಾದಾಮಿ, ಐಹೊಳೆ, ಪಟ್ಟದಕಲ್ಲು,ಹಂಪೆ ಹೀಗೆ  ಇನ್ನೂ ಹಲವಾರು ವಾಸ್ತುಶಿಲ್ಪದ  ವೈಭವವನ್ನು ಸಾರುವ ನಮ್ಮ ನಾಡು  ಎಲ್ಲೋ ಒಂದು ಕಡೆ ವಿನಾಶದ ಅಂಚಿಗೆ ಹೋಗುತ್ತಿರುವುದು  ಒಂದು ಆತಂಕ ಕೂಡ ಇದೆ. ಹಾಗಾಗಿ ಅಂತಹ ವಾಸ್ತುಶಿಲ್ಪವನ್ನು  ಸಂರಕ್ಷಣೆ ಮಾಡುವಂತಹ ಅಮೂಲ್ಯವಾಗಿರುವಂತಹ ವಿಗ್ರಹಗಳು, ಕಂಬಗಳು ಹಾಗೂ ಈಗಿನ ತಂತ್ರಜ್ನಾನಕ್ಕೆ ಬಳಕೆಯಾಗುವಂತಹ ವಾಸ್ತುಶಿಲ್ಪಗಳು ನಮ್ಮಲ್ಲಿ ಇವೆ. ನಾವುಗಳು ಅವನ್ನೆಲ್ಲಾ ಉಳಿಸಿಕೊಂಡು ಹೋಗುವಂತಹ ಕೆಲಸವನ್ನು ಮಾಡಿಕೊಂಡು ಹೋಗಬೇಕಾಗಿದೆ. ಹಾಗೆ ಐತಿಹಾಸಿದ ಸ್ಮಾರಕಗಳ ಜೀರ್ಣೋದ್ಧಾರ ಮಾಡುವ ಕೆಲಸಗಳು ನಡೆಯುತ್ತಿವೆ.  ಬರೀ ದೇಗುಲಗಳು ಅಷ್ಟೇ ಅಲ್ಲ ಕಂಬಗಳು ಆಗಿರಬಹುದು , ಅಥವಾ ಕಟ್ಟಡಗಳು ಆಗಿರಬಹುದು  ಅವುಗಳ ಜೀರ್ಣೋದ್ಧಾರ ಮಾಡುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿವೆ.

 

ಹಾಗೆಯೇ ತಮ್ಮ ಊರಿನ ಸುತ್ತಮುತ್ತ ನಿಮಗೆ ಕಾಣುವಂತಹ ಶಿಥಿಲಾವಸ್ಥೆಯಲ್ಲಿರುವ ದೇಗುಲಗಳು ನಿಮಗೆ ಕಂಡುಬಂದರೆ ಈ ಒಂದು ಟ್ರಸ್ಟ್ ನ ಗಮನಕ್ಕೆ ತಂದರೆ ಅವರು ಕೂಡಲೇ ಅದರ ಬಗ್ಗೆ ಗಮನ ಹರಿಸಿ ಕೂಡಲೇ ಕಾರ್ಯ ಪ್ರವೃತ್ತರಾಗುತ್ತಾರೆ. ಮತ್ತೆ ಆ ಜಾಗಕ್ಕೆ ಬಂದು ಎಲ್ಲ ತರಹದ ಪರಿಶೀಲನೆಯನ್ನು ಮಾಡಿ  ಅದಕ್ಕೆ ಬೇಕಾದಂತಹ  ಸಲಕರಣೆಗಳು ಮತ್ತು ವ್ಯವಸ್ಥೆಗಳನ್ನು ಪರಿಶೀಲಿಸಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

 

ಈ  ಟ್ರಸ್ಟ್ ನ್ನು ನಡೆಸಿಕೊಂಡು ಹೋಗುವುದಕ್ಕೆ ಒಬ್ಬರಿಂದ ಸಾಧ್ಯವಾಗುವುದಿಲ್ಲ ತಜ್ಙರ ತಂಡ ವ್ಯವಸ್ಥಿತವಾದಂತಹ ಸಲಹಾ ಮಂಡಳಿ, ಪುರಾತತ್ವ ತಜ್ಙರು,  ಇತಿಹಾಸಕಾರರುಗಳು , ಖ್ಯಾತ ಶಿಲ್ಪಿಗಳು ಇರುತ್ತಾರೆ  ಅವರೆಲ್ಲ ಕೂಡ ಚರ್ಚೆಗಳನ್ನು ಮಾಡಿ  ದೇವಾಲಯಕ್ಕೆ ಯಾವ ರೀತಿಯಲ್ಲಿ  ಜೀವನ್ನು ತುಂಬುವುದು ಎಂದು ಪರಸ್ಪರ ಚರ್ಚೆ ಮಾಡಿ  ಯೋಜನೆ ಸಿದ್ಧ ಪಡಿಸುತ್ತಾರೆ.  ಆ ಯೋಜನೆಯ ನಂತರ  ಆ ಒಂದು ದೇವಾಲಯದ ಜೀರ್ಣೋದ್ಧಾರದ ಕೆಲಸ ವನ್ನು ಪ್ರಾರಂಭಿಸುತ್ತಾರೆ.

 

ಈ ಜೀರ್ಣೋದ್ಧಾರ  ಕಾರ್ಯಕ್ರಮಕ್ಕೆ ಬೇಕಾಗುವಂತಹ ಖರ್ಚು ವೆಚ್ಚಗಳನ್ನು , ಹಣಕಾಸು ಸಂಪಲ್ಮೂಲಗಳನ್ನು ಇವರು ಹೇಗೆ  ಕ್ರೋಢಿಕರಿಸುತ್ತಾರೆ ಎಂದರೆ  ಸಾಮಾನ್ಯವಾಗಿ ಟ್ರಸ್ಟ್ 50% ನಷ್ಟುಹಣವನ್ನು ಸಂಪನ್ಮೂಲವನ್ನು  ಈ ಕಾರ್ಯಕ್ಕೆ ದಾನ ಮಾಡುತ್ತದೆ.  ಇನ್ನು ಉಳಿದಂತಹ 50% ನ್ನು ಸ್ಥಳೀಯರು ದಾನ ಮಾಡುತ್ತಾರೆ . ಸ್ಥಳೀಯ ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳು ಆಗಿರಬಹುದು ಅಥವ ದಾನ ಮಾಡುವಂತಹ ಯಾವುದೇ ವ್ಯಕ್ತಿಯಿಂದ ಹಣವನ್ನು ಸ್ವೀಕಾರ ಮಾಡಿ  ಈ ಒಂದು  ವೆಚ್ಚವನ್ನು ಈ ಯೋಜನೆಗೆ  ಬಳಸಿಕೊಳ್ಳುವಂತಹ ಕಾರ್ಯವನ್ನು ಮಾಡುತ್ತಾರೆ.

 

ಈಗ ಹೊಸ ರೀತಿಯ ಪಿಪಿ ಮಾಡೆಲ್ , ಪಿ3 ಮಾಡೆಲ್ ನ್ನು ಅಳವಡಿಸಿಕೊಂಡು ತಮ್ಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಖಾಸಗಿ ಮತ್ತು ಸರ್ಕಾರ ಎರಡೂ ಸೇರಿ  ದೇವಾಲಯಗಳ ಪುನರುತ್ಥಾನ ಕಾರ್ಯಗಳನ್ನು  ಈ ಟ್ರಸ್ಟ್ ವತಿಯಿಂದ ನಡೆದುಬರುತ್ತಿದೆ. 2001 ರಲ್ಲಿ ನಮ್ಮ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕತ ಸಚಿವಾಲಯದವರು ಒಂದು ಟ್ರಸ್ಟ್ ನ ಕಾರ್ಯಕ್ರಮಗಳನ್ನು ಅದರ ಉದ್ದೇಶಗಳನ್ನು ಅವರ ಸಾಧನೆಗಳನ್ನು ಗುರುತಿಸಿ  ಅದರ ಜೊತೆಗೆ ಮಾಡುವಂತಹ ಕೆಲಸವನ್ನು ಜಾರಿಗೆ ತಂದಿದ್ದಾರೆ. ಇದನ್ನು  ಇದನ್ನೆ ನಾವು ಪಿಪಿ ಮಾದರಿ ಅಥವಾ ಪಿ3 ಮಾದರಿ ಎಂದು ಕರೆಯುತ್ತೇವೆ.

 

ಇವರು ಮಾಡಿರುವಂತಹ ಕಾರ್ಯಗಳಲ್ಲಿ ಉದಾಹರಣೆಗೆ ಹೇಳಬೇಕೆಂದರೆ ಚಿಕ್ಕಬಳ್ಳಾಪುರದ ಗುಡಿಬಂಡೆ ಬಸದಿಗಳು , ಅರಹಂತಗಿರಿ ಬಸದಿಗಳು, ನಿಟ್ಟೂರು ಬಸದಿ, ಪಿರಿಯಾಪಟ್ಟಣದ ಮಾಕೋಡು ಜಿನಾಲಯ, ಹಾಸನ ಜಿಲ್ಲೆಯ ಬೇಲೂರಿನ ಪಾತಾಳೇಶ್ವರ ದೇಗುಲ,  ಹಾವೇರಿ ಜಿಲ್ಲೆಯ ಕಬ್ಬುರದ ಕಲ್ಲೇಶ್ವರ ದೇಗುಲ , ಹಾಸನ ಜಿಲ್ಲೆಯ  ಚನ್ನರಾಯಪಟ್ಟಣದ ಆನೆಕೆರೆಯ ಚನ್ನಕೇಶವ  ದೇಗುಲ ಹೀಗೆ ಒಂದಾ ಎರಡಾ ಹೀಗೆ ಹತ್ತು ಹಲವಾರು ಬಸದಿಗಳನ್ನು ಜೀರ್ಣೋದ್ಧಾರ ಮಾಡಿದ ಹೆಗ್ಗಳಿಕೆ ನಮ್ಮ ಈ ಟ್ರಸ್ಟ್ ಗೆ ಸಲ್ಲುತ್ತದೆ. ಈ ಒಂದು ಮಹತ್ತರವಾದ  ಕಾರ್ಯವನ್ನು ನಾವು ನೀವುಗಳೆಲ್ಲರೂ ಸಹ ನೆನಪಿನಲ್ಲಿಟ್ಟುಕೊಂಡು ಅವರು ಮಾಡುತ್ತಿರುವ ಈ ಕಾರ್ಯಕ್ಕೆ ಸಹಕಾರವನ್ನು ನೀಡಿ ನಮ್ಮ ಪ್ರಾಚೀನ ಪರಂಪರೆಯನ್ನು ಉಳಿಸಿಕೊಂಡು ಹೋಗುವಲ್ಲಿ ನಾವೂ ಸಹ ಸಹಕಾರವನ್ನು ನೀಡಬೇಕೆಂದು ಈ ಮೂಲಕ ವಿನಂತಿಸಿ ಕೊಳ್ಳುತ್ತೇವೆ. ಹೀಗೆ ನಮ್ಮ ಚಾನಲ್ ನ್ನು ಪ್ರೋತ್ಸಾಹಿಸುತ್ತಿರಿ. ಧನ್ಯವಾದಗಳು.