ಧರ್ಮದ ಕುಡಿ / ಸಂಚಿಕೆ-14

ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಮೊದಲನೆಯದಾಗಿ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು

ಮಕ್ಕಳಿಗೆ ಶೈಕ್ಷಣಿಕ ಜ್ಞಾನ ಎಷ್ಟು ಮುಖ್ಯನೊ ಧಾರ್ಮಿಕ ಜ್ಞಾನ ಕೂಡ ಅಷ್ಟೆ ಮುಖ್ಯ. ಧಾರ್ಮಿಕಾಸಕ್ತಿ ಮತ್ತು ಆಭಿರೂಚಿಯನ್ನು ಗುರುತಿಸಿ ಅಂತಹ ಮಕ್ಕಳನ್ನು ಪ್ರೊತ್ಸಾಹಿಸುವ ನಮ್ಮ ಜ್ವಾಲಮಾಲ ನ್ಯೂಸ್  ನ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ.

ನಮ್ಮೊಂದಿಗೆ ಇಂದಿನ ಕಾರ್ಯಕ್ರಮದಲ್ಲಿ ಸಾರ್ಥಕ್ ಎಂ ಎಸ್ ಶೆಟ್ಟಿ ಬನ್ನಿ ಅವರ ಕಿರುಪರಿಚಯವನ್ನು ವಿ ಟಿ ಮುಖಾಂತರ ನೋಡಿಕೊಂಡು ಬರೋಣ.

ಸಾರ್ಥಕ್ ಎಂ ಎಸ್ ಶೆಟ್ಟಿ, ಮೂರನೇ ತರಗತಿಯಲ್ಲಿ ಓದುತ್ತಿರುವ ಈತನ ತಂದೆ ಶೈಲೇಂದ್ರ, ಜ್ವಾಲಿನಿ. ಮೂಲತಃ ಹೊರನಾಡಿನವರಾದ ಇವರು ವಾಸಿಸುತ್ತಿರುವುದು ಬೆಂಗಳೂರಿನಲ್ಲಿ  ಈತನ ಹವ್ಯಾಸಗಳು ಕ್ಲೇ ಮಾಡ್ಲಿಂಗ್ ಡ್ರಾಯಿಂಗ್ ಕೆರಂ ಲೂಡೊ ಶೆಟಲ್ ಕೂಡ ಹಾಡುತ್ತಾನೆ. ಸೈಕಲ್ಲಿಂಗ್ ಹಾಗೂ ಸ್ಕೆಟಿಂಗ್ ಕೂಡ ಗೊತ್ತು. ಕೀಬೋರ್ಡ್ ಮತ್ತು ಡ್ರಮ್ಸ್ ಕೂಡ ನುಡಿಸುತ್ತಾನೆ, ಫ್ಯಾನ್ಸಿ ಡ್ರಸ್ ಕಾಂಪಿಟೇಷನ್ ನಲ್ಲಿ ಭಾಗವಹಿಸಿ ಅನೇಕ ಬಹುಮಾನಗಳು ಬಂದಿವೆ. ಯೋಗ ಹಾಗೂ ಕರಾಟೆ ಕೂಡ ಗೊತ್ತು, ಸ್ವಾತಂತ್ರ್ಯ ದಿನಾಚರಣೆಯಂದು ಪಿಯನೋದಲ್ಲಿ ರಾಷ್ಟ್ರಗೀತೆ ನುಡಿಸುವ ಮೂಲಕ ಶಾಲೆಯನ್ನು ಪ್ರತಿನಿಧಿಸಿ ಪ್ರಶಂಸೆಗೆ ಪಾತ್ರನಾಗಿರುತ್ತಾನೆ. ವಿವಿಧ ಛದ್ಮವೇಷ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿರುತ್ತಾನೆ. ಕ್ಲೇ ಮಾಡ್ಲಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ. ಅಷ್ಟೆ ಅಲ್ಲದೇ ಧಾರ್ಮಿಕ ಚಟುವಟಿಕೆಗಳಾದ ಸಂಧ್ಯಾ ವಂದನ ಮಂತ್ರ ತೀರ್ಥಂಕರರ ಹೆಸರು ನಮೋಕಾರ ಜೊತೆಗೆ ಪದ್ಮಾವತಿ ಅಮ್ಮನವರ ಮಂತ್ರ ಹಾಗೂ ಜಿನ ಭಜನೆಗಳು ಪುಂಜ ಇಡುವುದರಲ್ಲಿ ಈತನ ಆಸಕ್ತಿ ಬಹಳಷ್ಟಿದೆ. ತ್ರಿಲೋಕವನ್ನು ಬಿಡಿಸಿ ಮಾಹಿತಿ ಸಹಿತ ವಿವರಿಸುತ್ತಾನೆ. ಕ್ಲೇನಲ್ಲಿ ಜಿನ ಬಿಂಬ ಕೂಡ ಮಾಡುತ್ತಾನೆ. ಇಂತಹ ಈ ಪುಟ್ಟ ಬಾಲಕನ  ಧಾರ್ಮಿಕ ಶ್ರದ್ದೆಯನ್ನು ಕಮೆಂಟ್ ಮತ್ತೆ ಲೈಕ್ ಮೂಲಕ ಪ್ರೊತ್ಸಾಹಿಸಿ.

ನಿರೂಪಕರು :- ಜೈಜಿನೇಂದ್ರ ಸಾರ್ಥಕ್ ಕಾರ್ಯಕ್ರಮಕ್ಕೆ ಸ್ವಾಗತ.

ಸಾರ್ಥಕ್ ಎಂ ಎಸ್ ಶೆಟ್ಟಿ :- ಜೈಜಿನೇಂದ್ರ.

ನಿರೂಪಕರು :- ನೀವು ಯಾವ ತರಗತಿಯಲ್ಲಿ ಓದುತ್ತಿದ್ದಿರಾ.

ಸಾರ್ಥಕ್ ಎಂ ಎಸ್ ಶೆಟ್ಟಿ :- ಮೂರನೇ ತರಗತಿ.

ನಿರೂಪಕರು :- ಎಸ್ ವೆರಿ ಗುಡ್ ನಾನು ಕೇಳಲ್ಪಟ್ಟೆ ನೀವು ಮಂತ್ರಗಳನ್ನು ಕಲಿತಿದ್ದೀರಾ ಅಂತ ನಮ್ಮ ಇಂದಿನ ಕಾರ್ಯಕ್ರಮವನ್ನು ಮಂತ್ರಗಳಿಂದ ಶುರು ಮಾಡೊಣ್ಣ. ಓಕೆ.

(ಸಾರ್ಥಕ್ ಎಂ ಎಸ್ ಶೆಟ್ಟಿ ರವರು ಒಂದು ಸುಂದರವಾದ ಮಂತ್ರ ಹೇಳಿದರು).

ನಿರೂಪಕರು :- ಅದ್ಬುತ ಸಾರ್ಥಕ್, ನಿಮ್ಮ ಮಂತ್ರದಿಂದ ನಮ್ಮ ಕಾರ್ಯಕ್ರಮಕ್ಕೆ ಒಳ್ಳೆಯ ಆರಂಭ ಸಿಕ್ಕಿದೆ, ನಾನು ಕೇಳಲ್ಪಟ್ಟೆ ನಿಮಗೆ ಜಿನ ಭಕ್ತಿ ಗೀತೆ ಹಾಡುವುದು, ಹಲವಾರು ಭಜನೆಗಳನ್ನು ಹಾಡುವುದರಲ್ಲಿ ತುಂಬ ಆಸಕ್ತಿಯಂತ, ತುಂಬಾ ಚೆನ್ನಾಗಿ ಹಾಡುತ್ತೀರ ಅಂತ ಗೊತ್ತಾಯಿತು. ನಮಗಾಗಿ ಒಂದು ಜಿನ ಭಜನೆ ಭಕ್ತಿಗೀತೆಯನ್ನು ಹಾಡುತ್ತೀರ.

(ಸಾರ್ಥಕ್ ಎಂ ಎಸ್ ಶೆಟ್ಟಿ ರವರು ಮಧುರವಾಗಿ ಜಿನ ಭಜನೆ ಭಕ್ತಿಗೀತೆಯನ್ನು ಹಾಡಿದರು).

ನಿರೂಪಕರು :- ನಿಮ್ಮ ಭಕ್ತಿಪೂರ್ವಕ ಗೀತೆಯನ್ನು ಕೇಳಿ ಮನಸ್ಸಿಗೆ ತುಂಬಾ ಖುಷಿಯಾಯಿತು, ತುಂಬಾನೇ ಚೆನ್ನಾಗಿ ಹಾಡಿದ್ದೀರಿ ಸಾರ್ಥಕ್, ನೀವು ಜಿನ ಭಕ್ತಿಗೀತೆಗಳನ್ನು ಹಾಡುವುದರ ಜೊತೆಗೆ ಅದರ ರಾಗದಲ್ಲಿ ಕೀಬೋರ್ಡ ಕೂಡ ನುಡಿಸುತ್ತೀರ ಅಂತ ಕೇಳಲ್ಪಟ್ಟೆ ಇದನ್ನು ಕೇಳಿ ನನಗಂತೂ ತುಂಬಾ ಖುಷಿಯಾಯಿತು ಈ ಒಂದು ಕಲೆಯನ್ನು ಕೂಡ ವೀಕ್ಷಕರಿಗೆ ತೋರಿಸಿ.

(ಸಾರ್ಥಕ್ ಎಂ ಎಸ್ ಶೆಟ್ಟಿ ರವರು ಜಿನ ಭಕ್ತಿಗೀತೆಯನ್ನು ಪಿಯಾನೊದಲ್ಲಿ ಅದ್ಬುತವಾಗಿ ನುಡಿಸಿದರು).

ನಿರೂಪಕರು :- ವೆರಿ ನೈಸ್ ಸಾರ್ಥಕ್, ತುಂಬ ಚೆನ್ನಾಗಿ ಕೀಬೋರ್ಡ್ ಟ್ಯೂನ್ ನುಡಿಸಿದ್ದೀರಿ,

ನಿರೂಪಕರು :- ವೀಕ್ಷಕರೆ ಸಾರ್ಥಕ್ ಹಾಡಿದ ಜಿನ ಭಕ್ತಿಗೀತೆ ಮಂತ್ರ ಮತ್ತು ನುಡಿಸಿದ ಕೀಬೋರ್ಡ್ ಟ್ಯೂನ್ ಕೇಳಿ ಈಗಾಗಲೆ ನಮಗೆ ಗೊತ್ತಾಗಿದೆ, ಈ ಪುಟ್ಟ ಮಗುವಿಗೆ ಧಾರ್ಮಿಕ ವಿಷಯಗಳಲ್ಲಿ ಎಷ್ಟು ಆಸಕ್ತಿಯಂತ. ಸಾರ್ಥಕ್ ಈಗ ನಮಗೆ ಸ್ಪಷ್ಟವಾಗಿ ಸ್ವಸ್ತಿಕದ ಚಿತ್ರವನ್ನು ಬಿಡಿಸಿ ಅದರಲ್ಲಿ ಇರುವ ಚಿಹ್ನೆಗಳ ಅರ್ಥವನ್ನು ಹೇಳುತ್ತಾರಂತೆ, ಬನ್ನಿ ನೋಡಿಕೊಂಡು ಬರೋಣ.

(ಸಾರ್ಥಕ್ ಎಂ ಎಸ್ ಶೆಟ್ಟಿ ರವರು ಸ್ವಸ್ತಿಕದ ಚಿತ್ರವನ್ನು ಬಿಡಿಸಿ ಅದರಲ್ಲಿ ಇರುವ ಚಿಹ್ನೆಗಳ ಅರ್ಥವನ್ನು ಬಹಳ ಸ್ಪಷ್ಟವಾಗಿ ತಿಳಿಸಿದರು).

ನಿರೂಪಕರು :- ಆ ಹಾ ಅದೇಷ್ಟು  ಸ್ಪಷ್ಟವಾಗಿ ಎಷ್ಟು ಚೆನ್ನಾಗಿ ಆರ್ಥಮಾಡಿಸಿದಿರ ಸಾರ್ಥಕ್ ತುಂಬ ಖುಷಿಯಾಯಿತು, ಚೆರಿ ಗುಡ್. ನೀವು ಇಷ್ಟು ಸಣ್ಣ ವಯಸ್ಸಿಗೆ ಎಷ್ಟೊಂದು ಕಲಿತಿರುವುದು ತುಂಬಾನೆ ಗ್ರೇಟ್, ವೆರಿ ಗುಡ್ ಸಾರ್ಥಕ್, ತುಂಬಾ ಖುಷಿಯಾಗುತ್ತೆ. ನೀವು ಮಹಾವೀರ ತೀರ್ಥಂಕರರ ಮೂರ್ತಿಯನ್ನು ಕೂಡ ಮಾಡುತ್ತೀರ ಅಂತ ಗೊತ್ತಾಯಿತು ನಮಗೂ ತೊರಿಸುತ್ತೀರ ನಿಮ್ಮ ಮಹಾವೀರ ತೀರ್ಥಂಕರರ ಮೂರ್ತಿ ಹೇಗೆ ತಯಾರಾಗುತ್ತೆ ಅಂತ.

(ಸಾರ್ಥಕ್ ಎಂ ಎಸ್ ಶೆಟ್ಟಿ ರವರು ಸುಂದರವಾಗಿ ಮಹಾವೀರ ತೀರ್ಥಂಕರರ ಮೂರ್ತಿಯನ್ನು ತಯಾರಿಸಿದರು).

ನಿರೂಪಕರು :- ನೀವು ಮಾಡಿದ ಮೂರ್ತಿ ತುಂಬಾ ಚೆನ್ನಾಗಿತ್ತು ಸಾರ್ಥಕ್, ನೋಡಿ ತುಂಬ ಖುಷಿಯಾಯಿತು.

ನಿರೂಪಕರು :- ವೀಕ್ಷಕರೆ, ಸಾರ್ಥಕ್ ಹೆಸರಿನಲೇ ಸಾರ್ಥಕಥೆ ಇರುವ ಈ ಪುಟಾಣಿ ಇಂದು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮೆಲ್ಲರ ಮನಸ್ಸನ್ನು ಗೆದ್ದಿದ್ದಾರೆ ನನಗಂತೂ ಸಾರ್ಥಕ್ ನಲ್ಲಿ ಇರುವ ಧಾರ್ಮಿಕ ಆಸಕ್ತಿ ಹಾಗೂ ಅವರ ಪ್ರತಿಭೆಗಳನ್ನು ನೋಡಿ ತುಂಬಾ ಖುಷಿಯಾಯಿತು, ಅವರು ಇನ್ನೂ ಹೆಚ್ಚು ಸಾಧನೆಗಳನ್ನ ಮಾಡಲಿ ಹಾಗೇ ಅವರ ಧಾರ್ಮಿಕ ಆಸಕ್ತಿ ಇನ್ನೂ ಬೆಳೆಯಲ್ಲಿ ಅಂತ ನಾವೆಲ್ಲರೂ ಆಶಿಸೋಣ.

ಸಾರ್ಥಕ್ ನಮ್ಮ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಧನ್ಯವಾದಗಳು.

 

 

 

 

‘ಧರ್ಮದ ಕುಡಿ’

ಧರ್ಮದ ಬೆಳೆ ಬಿತ್ತೋಣ

‘ಧರ್ಮ ಪಾಠ’

ಧೀರಜ್ ಜೈನ್, ಹೊಳೆನರಸಿಪುರ.

ಜೈ ಜಿನೇಂದ್ರ ಮಕ್ಕಳೆ ಜ್ವಾಲಮಾಲ ಡಾಟ್ ನ್ಯೂಸ್ ಸಮರ್ಪಿಸುವ ಜೈನ ಧರ್ಮ ಪಾಠ ಅಭ್ಯಾಸ ಮಾಲಿಕೆ ಕಾರ್ಯಕ್ರಮಕ್ಕೆ ಮತ್ತೊಮ್ಮೆ ನಿಮ್ಮಗೆಲ್ಲರಿಗೂ ಸ್ವಾಗತ.

ಈ ಹಿಂದಿನ ಸಂಚಿಕೆಗಳಲ್ಲಿ ನಾವು ಭಗವಂತನ ದರ್ಶನ ಅಭಿಷೇಕ ಪೂಜೆ ಹಾಗೂ ಗಂಧೊದಕದ ಮಹತ್ವದ ಬಗ್ಗೆ ನಾವು ತಿಳಿದು ಕೊಡಿದ್ದೀವಿ. ಯಾವ ರೀತಿಯಿಂದ ಏನು ಪುಣ್ಯ ಬರುತ್ತದೆ ಭಗವಂತನ ದರ್ಶನ ಮಾಡಿದಾಗ ಅಭಿಷೇಕವನ್ನು ಮಾಡಿದಾಗ ಅದೆ ರೀತಿ ಗಂಧೊದಕವನ್ನು ತೆಗೆದುಕೊಂಡಾಗ  ಯಾವ ರೀತಿಯ ಭಾವನೆಯಲ್ಲಿ ಇರಬೇಕು ಅನ್ನುವುದರ ಬಗ್ಗೆ ತಿಳಿದು ಕೊಂಡಿದ್ದಿವಿ.

ಇಂದಿನ ಸಂಚಿಕೆಯಲ್ಲಿ ಮೊದಲೆ ತಿಳಿಸಿದ ಹಾಗೆ ಅಭಿಷೇಕದ ನಂತರ ಯಾವರೀತಿಯ ಕೆಲಸಗಳನ್ನು  ಮಾಡಬೇಕು  ಅಂದರೆ ಬಸದಿಯಲ್ಲಿ ಅಷ್ಟ ವಿದಾರ್ಚನೆ ಮೂಲಕ ಭಗವಂತನಿಗೆ ಪೂಜೆಯನ್ನು ಮಾಡಬೇಕು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಾರೆ, ದೇವ ಶಾಸ್ತ್ರ ಗುರು ಪೂಜೆಯಲ್ಲಿ ಮೊದಲನೇಯದಾಗಿರುವಂತ ದೇವ ಪೂಜೆಯಲ್ಲಿ ಅಷ್ಟವಿಧಾರ್ಚನೆಯನ್ನು ಹೇಗೆ ಮಾಡ ಬೇಕು ಎಂಬುವುದನ್ನು ಈ ಒಂದು ಮಾಲಿಕೆಯಲ್ಲಿ ತಿಳಿದು ಕೊಳ್ಳೊಣ.

ಹಾಗಾದರೆ ಅಷ್ಟ ವಿಧಾರ್ಚನೆ ಎಂದರೆ ಏನು? ಬಹಳ  ಸರಳವಾಗಿ ನಮ್ಮ ಶಾಸ್ತ್ರದಲ್ಲಿ ಹೇಳಿದ್ದಾರೆ, ಅಷ್ಟ ವಿಧಾರ್ಚನೆ ಅಂದರೆ ಭಗವಂತನ ಪೂಜೆಯನ್ನು ಮಾಡುವಾಗ ಎಂಟು ವಿಧವಾದಂತಹ ಅಂದರೆ ಅಷ್ಟ ಎಂದರೆ ಎಂಟು, ಈ ಎಂಟು ವಿಧಾವಾದಂತಹ ವಸ್ಥುಗಳನ್ನು ಬಳಸಿ ನಾವು ಭಗವಂತನಿಗೆ ಸಮರ್ಪಣೆಯನ್ನು ಮಾಡುತ್ತೇವೆ. ಅಂದರೆ ಈ ಎಂಟು ವಸ್ತುಗಳು ಅದರದೆಯಾದ ಮಹತ್ವವನ್ನು ಪಡೆದುಕೊಂಡಿರುತ್ತವೆ, ಅದ್ದರಿಂದ ಈ ಎಂಟು ವಸ್ತುಗಳನ್ನು ಪೂಜೆಯಲ್ಲಿ ಬಳಸುತ್ತೇವೆ. ಹಾಗಾದರೆ ಈ ಎಂಟು ದ್ರವ್ಯಗಳು ಅಂದರೆ ಅಷ್ಟ ದ್ರವ್ಯಗಳು ಅಂದರೆ ಯಾವುದು? ಬಹಳ ದುರ್ಲಭವಾಗಿರುವಂತಹ ವಸ್ತುಗಳನ್ನು ನಮ್ಮ ಶಾಸ್ತ್ರದಲ್ಲಿ ಹೇಳಿಲ್ಲ, ನಾವು ದೈನಂದಿನ ಕಾರ್ಯಗಳಲ್ಲಿ ಬಳಸುತ್ತೇವೆ, ಯಾವುದು ಹಾಗಾದರೆ ಮೊದಲನೆಯದಾಗಿ ಜಲ ಅಂದರೆ ನೀರು, ನೀರನ್ನು ಬಟ್ಟೆಯಿಂದ ಸೊಸಿ ಕಾಯಿಸಿ ಹಾರಿಸಿರುವಂತಹ ನೀರನ್ನು ಪೂಜೆಗೆ ಬಳಸ ಬೇಕು, ಈ ಹಿಂದೆ ಹೇಳಿರುವಂತಹ ಪ್ರಾಸುಕ ಜಲ ಅಂದರೆ ಕಾಯಿಸಿ ಹಾರಿಸಿರುವಂತಹ ಜಲವನ್ನು ಅಭಿಷೇಕ್ಕೆ ಬಳಸುತೇವೆಯೋ ಅದೆ ರೀತಿ ಅಷ್ಟ ವಿಧಾರ್ಚನೆ ಪೂಜೆಯಲ್ಲಿ ಪ್ರಾಸುಕ ಜಲವನ್ನು ಪೂಜೆಗೆ ಬಳಸ ಬೇಕು.

ಎರಡನೇಯದಾಗಿ ಗಂಧ ಅಂದರೆ ನಾವು ಏನು ಮಾಡಬೇಕು ಅಂದರೆ ಗಂಧದ ಕಲ್ಲು ಮತ್ತು ಗಂಧದ ತುಂಡನ್ನು ಬಳಸಿ ಗಂಧದ ಕಲ್ಲಿನ ಮೇಲೆ ತೈಯಬೇಕು. ತೈದ ಮೇಲೆ ಬರುವಂತಹ ಅಂಶ ಗಂಧ.

ನಂತರ ಅಕ್ಷತೆ ಅಥವಾ ಅಕ್ಕಿ, ಬಹಳ  ಶುದ್ದವಾಗಿರುವಂತಹ ಜಲದಿಂದ ತೊಳೆದ್ದು ನಂತರ ಬಳಸ ಬೇಕು, ಅದನ್ನ ಅಕ್ಷತೆ ಎಂದು ಹೇಳುತ್ತೇವೆ,

ಅದಾದ ಮೇಲೆ ಪುಷ್ಪ ಅಂದರೆ ಹೂವು, ಕೆಲವರು ಹೂವು ಸಿಗಲ್ಲಿಲವೆಂದರೆ ಲವಂಗವನ್ನು ಪುಷ್ಪಕ್ಕೆ ನಾವು ಬಳಸಿಕೊಳ್ಳಬಹುದು.

ಅದಾದನಂತರ ಚರು, ಚರು ಅಂದರೆ ಕೊಬ್ಬರಿಯನ್ನು ಹೆಚ್ಚಿ ಇಡಬಹುದು, ಕಲ್ಲು ಸಕ್ಕರೆ ಇಡಬಹುದು ಅಥವಾ ಮನೆಯಲ್ಲಿ ಇರುವಂತಹ ಖಾಧ್ಯ ಅಥವಾ ನೈವೇದ್ಯವನ್ನು ಚರು ಅಂತ ಹೇಳುತೇವೆ ಅದನ್ನು ಇಡಬಹುದು.

ಅದಾದ ನಂತರ ದೀಪ, ಅದಾದ ನಂತರ ಧೂಪ ಅಂದರೆ ಗಂಧದ ಕಡ್ಡಿಯನ್ನು ಇಡಬಹುದು.

ಇದಾದ ನಂತರ ಫಲ, ಫಲ ಅಂದರೆ ಯಾವುದೇ ರೀತಿಯಾದ ಹಣ್ಣು. ಹಣ್ಣು, ತೆಂಗಿನ ಕಾಯಿ, ಬಾಳೆಹಣ್ಣು, ಸೇಬು, ಕಿತ್ತಳೆ ಹಣ್ಣು ಎಲ್ಲಾ ರೀತಿಯ ಹಣ್ಣನ್ನು ನಾವು ಫಲಕ್ಕೆ ಅರ್ಪಿಸಬಹುದು. ಹಣ್ಣು ಸಿಗದ್ದಿದಾಗ ನಾವು ಬಾದಾಮಿ ಕಾಯಿಯನ್ನು ಫಲಕ್ಕೆ ಸಮರ್ಪಿಸ ಬಹುದು.

ಈ ರೀತಿಯ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ ಹಾಗೂ ಫಲ. ಈ ಎಂಟು ಪದಾರ್ಥಗಳನ್ನು ಬಳಸಿಕೊಂಡು ನಾವು ಅಷ್ಟ ವಿಧಾರ್ಚನೆಯನ್ನು ಮಾಡುತ್ತೇವೆ. ಈ ಎಂಟು ವಸ್ಥಗಳನ್ನು ನಾವು ಯಾಕೆ ಬಳಸ ಬೇಕು? ಈ ವಸ್ತುಗಳ ಮಹತ್ವವೇನು? ಜಲದಿಂದ ನಾವು ಭಗವಂತನ ಪೂಜೆಯನ್ನು ಏಕೆ ಮಾಡಬೇಕು? ಗಂಧದಿಂದ ಏಕೆ ಪೂಜೆಯನ್ನು ಮಾಡಬೇಕು ಎನ್ನುವುದನ್ನು ಸವಿಸ್ತಾರವಾಗಿರುವಂತಹ ಅಷ್ಟ ವಿಧಾರ್ಚನೆಯ ಬಗ್ಗೆ ಇನ್ನೂ ಮಂದೆ ಬರುವಂತಹ ಸಂಚಿಕೆಗಳಲ್ಲಿ ನಾವು ತಿಳಿದುಕೊಳ್ಳೋಣ.

ಈ ವಾರದ ಪ್ರಶ್ನೆಗಳು

  1. ಹಿಂದಿನ ಪಾಠದಲ್ಲಿ ಏನನ್ನುತಿಳಿದುಕೊಂಡಿರಿ?
  2. ಅಷ್ಟವಿಧಾರ್ಚನೆ ಎಂದರೆ ಏನು ?
  3. ಎಷ್ಟು ದ್ರವ್ಯಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ ?
  4. ಆ ದ್ರವ್ಯಗಳು ಯಾವುದು?
  5. ಮುಂದಿನ ಪಾಠಗಳ ಏನನ್ನು ತಿಳಿದುಕೊಳ್ಳಲಿದ್ದೀರಿ ?

ಧರ್ಮದ ಪಾಠ ಕೇಳಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗೆ ಸರಿಯಾದ ಉತ್ತರವನ್ನು ಈ ಕೂಡಲೆ ವಾಟ್ಸ್ ಆಪ್ ಮಾಡಿ. ಹಾಗೆ ನಿಮಗೆ ಸಿಗುವ ಅಭಿನಂದನಾ ಪತ್ರ ಮುಂಬರುವ ದಿನಗಳಲ್ಲಿ ಜ್ವಾಲ ಮಾಲ ನ್ಯೂಸ್ ವಾಹಿನಿಕಡೆಯಿಂದ ಅಯೋಜಿಸಲಾಗುವ ಕ್ವಿಜ್ ಕಾಂಪಿಟೆಶನ್ನಲ್ಲಿ ಉಪಯೋಗವಾಗುವುದು. ವೀಕ್ಷಕರೆ ಮುಂದಿನ ಭಾನುವಾರ ಬೆಳಗ್ಗೆ 10:30ಕ್ಕೆ ಮತ್ತೊಂದು ಇಂತಹ ಪುಟ್ಟ ಪ್ರತಿಭೆಯೊಂದಿಗೆ ನಾನು ನಿಮ್ಮ ಮುಂದೆ ಬರುತ್ತೇನೆ. ತಪ್ಪದೆ ವೀಕ್ಷಿಸಿ ಧರ್ಮದ ಕುಡಿ ಕಾರ್ಯಕ್ರಮ ಜ್ವಾಲಮಾಲ ನ್ಯೂಸ್ ವಾಹಿನಿಯಲ್ಲಿ, ಜೈ ಜೀನೆಂದ್ರ,

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್