ಅಲ್ಪಸಂಖ್ಯಾತ ಆಯೋಗಕ್ಕೆ ಜೈನರನ್ನು ಪರಿಗಣಿಸಲು ಆದೇಶ.
ರಾಜ್ಯದ ಹಲವೆಡೆ ನವರಾತ್ರಿಯ ಆಚರಣೆ.ಯ ಸಿದ್ದತೆ.
ಗಂಧ ಕುಟಿಯಲ್ಲಿ ನಡೆದ ಭಗವಾನ್ ಪಾರ್ಶ್ವನಾಥರ ಜಿನಬೊಂಬಗಳ ದರ್ಶನ.
ಭೂಮಿಯ ಒಡಲಿನಲ್ಲಿ ದೊರೆತ ಪುರಾತನ ಜಿನಬಿಂಬಗಳು
ಭಾರತೀಯ ಜೈನ್ ಮಿಲನ್ ವಲಯ 8 ರಿಂದ ವೊದಲ ಪಾಕ್ಷಿಕ ಸಭೆ.
ಭಾರತೀಯ ಜೈನ್ ಮಿಲನ್ ವಲಯ 8 ರಿಂದ ಅನಿತಾ ಸುರೇಂದ್ರಕುಮಾರ್ ಅವರ ಶಷ್ಡಬ್ದಿ ಆಚರಣೆ.
ಸುದ್ದಿಗಳ ವಿವರ:
ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರುಗಳ ಸ್ಥಾನಕ್ಕೆ ಮುಸ್ಮೇತರ ಸಮುದಾಯದವರನ್ನು ಪರಿಗಣಿಸುವಂತೆ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಆದೇಶ ನೀಡಿದೆ.
ಶಿವಮೊಗ್ಗ ವಕೀಲ ಪಿ ವಿನೋದ್ ಸಲ್ಲಿಸದ ಪಿ ಐ ಎಲ್ ನ್ನು ಮುಖ್ಯ ನ್ಯಾಯ ಮೂರ್ತಿಗಳಾದ ಎನ್ . ಕೆ ಮುಖರ್ಜಿ ಹಾಗೂ ನ್ಯಾಯಾದೀಶರಾದ ಪಿ. ಎ ದಿನೇಶ್ ಕುಮಾರ್ ರವರು ಇದ್ದ ವಿಭಾಗೀಯ ಪೀಠ ಶುಕ್ರವಾರ ಇತ್ಯರ್ಥಗೊಳಿಸಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಎಲ್ಲರಿಗೂ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಇಲಾಖೆಯ ಕಾರ್ಯದರ್ಶಿಗೆ ಅರ್ಜಿದಾರರು ಮನವಿ ಸಲ್ಲಿಸಬೇಕು. ಅದನ್ನು ಅವರು ಪರಿಶೀಲಿಸಿ ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ಆದೇಶ ನೀಡಿದ್ದರು.
ಕರೋನಾ ಸಂಕಷ್ಟದ ನಡುವೆಯೂ ನಮ್ಮ ಧಾರ್ಮಿಕ ಪರ್ವಾಚರಣೆಗಳು ಯಾವುದೇ ತೊಡಕಿಲ್ಲದೆ ಹಾಗೂ ಸುರಕ್ಷಿತ ಕ್ರಮಗಳೊಂದಿಗೆ ಪಾಕ್ಷಿಕ ಹಾಗೂ ಬಸದಿಗಳಲ್ಲಿ ಸರಳವಾಗಿ ಬೆಳೆದುಬಂದಿದೆ. ನವರಾತ್ರಿ ಉತ್ಸವ ಕೂಡ ಇದಕ್ಕೆ ಹೊರತಾಗಿಲ್ಲ. ಶೀತಕಲ್ಲಿನ ನವರಾತ್ರಿ ಉತ್ಸವ ಕ್ಕೆ ನಡೆದುದ ತಯಾರಿಯನ್ನು ಒಮ್ಮೆ ನೋಡಿಬರೋಣ ಬನ್ನಿ. ಇಲ್ಲಿನ ಜಿನಾಲಯದಲ್ಲಿ ನವರಾತ್ರಿ ಮಹೋತ್ಸವ ದಿನಾಂಖ 17/10/2020 ರಿಂದ 26/10/2020 ರವರೆಗೆ ಇಲ್ಲಿನ ಪರ್ವದ ತಯಾರಿಯ ಕ್ಷಣಗಳು ಇಲ್ಲಿವೆ. ಹಾಗೂ ಜ್ವಾಲಾಮಾಲಾ ನ್ಯೂಸ್ ವತಿಯಿಂದ ಒಂದು ಅಪೂರ್ವ ಅವಕಾಶವೇನೆಂದರೆ ನಿಮ್ಮ ಊರಿನ ಬಸದಿ ನವರಾತ್ರಿ ಆಚರಣೆ, ದಸರಾ ಗೊಂಬೆಯ ದೃಶ್ಯಾವಳಗಳನ್ನು ನಮ್ಮ ಜ್ವಾಲಾ ಮಾಲಾ ನ್ಯೂಸ್ ನ ವಾಟ್ಸ್ ಆಪ್ ನಂಬರಿಗೆ ಕಳುಹಿಸಿದಲ್ಲಿ ಮುಂದಿನ ವಾರದ ಸುದ್ದಿಗಳಲ್ಲಿ ಪ್ರದರ್ಶಿಸಲಾಗುವುದು. ಉತ್ತಮ ಗುಣಮಟ್ಟದ ದೃಶ್ಯಾವಳಿಗಳೊಂದಿಗೆ ವಿವರಗಳೊಂದಿಗೆ ದಾಖಲಿಸಿ ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ.
ಗಂಧಗುಟಿ ಫೇಸ್ಬುಕ್ ಪೇಜ್ ನಲ್ಲಿ ಪಾರ್ಶ್ವನಾಥ ತೀರ್ಥಂಕರರ ಜಿನಬಿಂಬದ ದರ್ಶನದ ಕಾರ್ಯಕ್ರಮ ಆಯೋಜಿಸಲಾಗಿತ್ತು . ಹೊಂಬುಜ ಶ್ರೀಗಳ ಆಶೀರ್ವಾದದೊಂದಿಗೆ ಶ್ರೀಮತಿ ನಾಗಶ್ರೀ ಮುಪ್ಪಾನೆ , ಉದಯ ಪಾಟೀಲ್ , ದೀಪಾಂಜಲಿ ಗೌರಜ್, ಗಾನ ವಿಶಾರದೆ ಜಯಶ್ರೀ ಹೊರನಾಡು ಇವರುಗಳ ಆಯೋಜನೆಯಲ್ಲಿ ಶ್ರೀಯುತರಾದ ಏ ಪಿ ಪ್ರಸನ್ನಕುಮಾರ್ ರವರಿಂದ ವಿಂಬಗಳ ದರ್ಶನ ಹಾಗೂ ವಿವರಣೆಯನ್ನು ನೀಡಲಾಯಿತು.
ಗುಜರಾತಿನ ಕಾಟೇಯವಾಡಿನ ನಾಗಕ್ಷೇತ್ರದಲ್ಲಿ ಒಂದುವಾರದ ಹಿಂದೆ ಮನೆ ಕಟ್ಟುವ ಉದ್ದೇಶದಿಂದ ಭೂಮಿ ಅಗೆಯುವಾಗ ಪುರಾತನ ಜೈನ ತೀರ್ಥಂಕರರ ಮೂರ್ತಿ ಮತ್ತು ಒಂದು ಜೈನ ಸರಸ್ವತಿ ಮೂರ್ತಿ ದೊರೆತಿದ್ದು ಒಟ್ಟು 6 ಜಿನಬಿಂಬಗಳು ಅಲ್ಲಿಯ ಜೈನ ಸಮುದಾಯದವರಿಗೆ ಸಿಕ್ಕವೆ. ಇದರಿಂದ ಜೈನ ಇತಿಹಾಸದ ಅಗಾಧತೆಯ ಅರಿವು ಮತ್ತೆ ಮತ್ತೆ ಮೂರ್ತಿಗಳು ಭೂಮಿಯಲ್ಲಿ ಪ್ರತ್ಯಕ್ಷವಾಗುವಂತೆ ಮೂಡಿಸುತ್ತಿವೆ.
ಶ್ರೀ ಕ್ಷೇತ್ರ ಕಂಬದಹಳ್ಳಿ ಜೈನ ಮಠದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಚತುರ್ಮುಖ ಬಸದಿಗೆ ಆಗಮಿಸಿರುವ ನೂತನ ಮುದ್ದಾದ ಜಿನಬಿಂಬಗಳ ದರ್ಶನ ನಿಮಗಾಗಿ.
ದಿನಾಂಕ 10/10/2020 ರಂದು ನಡೆದ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖಾ ಕಾರ್ಯ ನಿರ್ವಾಹಕ ನೌಕರರುಗಳ ಸಂಘ ಕೆ.ಆರ್ ಸರ್ಕಲ್ ಬೆಂಗಳೂರು ವತಿಯಿಂದ ರಾಜ್ಯ ಕಮಿಟಿಗೆ ನಡೆದ ಚುನಾವಣೆಯಲ್ಲಿ ಪ್ರಸ್ತುತ ಬೆಂಗಳೂರು ಜಿಲ್ಲಾಧಿಕಾರಿ ಗಳ ಕಛೇರಿಯಲ್ಲಿ ಸರ್ವೆ ಸೂಪರ್ ವೈಸರ್ ಆಗಿರುವ ಶ್ರೀ ಅಭಿನಂದನ್ ಕುಮಾರ್ ಜೈನ್ ರವರ ತಂಡ ಪ್ರಚಂಡ ಜಯಭೇರಿಯೊಂದಿಗೆ ಆಯ್ಕೆಯಾಗಿದ್ದಾರೆ. ಶ್ರೀ ಅಭಿನಂದನ್ ಕುಮಾರ್ ಜೈನ್ ರವರಿಗೆ ಜ್ವಾಲಾಮಾಲಾ ನ್ಯೂಸ್ ಅಭಿನಂದಿಸುತ್ತದೆ.
ಭಾರತೀಯ ಜೈನ್ ಮಿಲನ್ 8ರ ವತಿಯಿಂದ ನಡೆದ ಮೊದಲ ಪಾಕ್ಷಿಕ ಸಭೆಯ ವಿವರ ಹೀಗಿವೆ. ಭಾರತೀಯ ಜೈನ್ ಮಿಲನ್ ವಲಯ ಎಂಟರಿಂದ ಮೊದಲ ಪಾಕ್ಷಿಕ ಸಭೆ. ಇಂದು ನಡೆದ ಸಭೆಯಲ್ಲಿ ಶಿಕ್ಷಣ ಅಂದು ಇಂದು ಎಂದೆಂದೂ ಎನ್ನುವ ವಿಚಾರದಲ್ಲಿ ಮೂಡುಬಿದಿರೆಯ ಪ್ರತಿಷ್ಠಿತ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಪ್ರಖರ ವಾಘ್ಮಿ ನೇರ ಮಾತಿನ ಚಾಣಾಕ್ಷ ಮತಿ ವಿ. ಯುವರಾಜ್ ಜೈನ್ ರವರ ವಿಶೇಷ ಉಪಾನ್ಯಾಸ ಜನರ ಮನಸ್ಸಿನಲ್ಲಿ ಉಳಿಯುವಂತಾಗಿದೆ. ಶಿಕ್ಷಣದ ಮಹತ್ವ ಶಿಕ್ಷಣ ದೊಂದಿಗಿನ ಸಂಸ್ಕಾರ ದಿಂದ ಮಾತ್ರ ಜೀವನವನ್ನು ನಡೆಸುತ್ತದೆ. ಇಂದಿನ ಶಿಕ್ಷಣವು ಕೇವಲ ಅಂಕದ ಮಾನದಂಡಕ್ಕೆ ಮಾರುಹೋಗುತ್ತಿರುವುದು ಆಘಾತಕಾರಿ ವಿಚಾರ ವೆಂದು ನಿರರ್ಗಳವಾದ ತಮ್ಮ ಮಾತಿನಿಂದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯ ಅತಿಥಿಯಾಗಿ ಮಿಲನ್ ನ ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಶ್ರೀ ವಿ. ಸುರೇಂದ್ರ ಕುಮಾರ್ ರವರು ಮಾತನಾಡಿತ್ತಾ ಇಂತಹ ಸ್ಪೂರ್ತಿದಾಯಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದರು . ಸಾಗರದಾಚೆಯ ಮಿಲನ್ ನ ಉತ್ಸಾಹಿ ವೀರ್ ದೇವಕುಮಾರ್ ತಂಬಳಿರವರು ಅಲ್ಲಿನ ಮಿಲನ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ತಮ್ಮ ವಲಯಾಧ್ಯಕ್ಷರಾದ ಶ್ರೀ ಪುಷ್ಪರಾಜ್ ಜೈನ್ ರವರು ಪ್ರಸ್ಥಾವಿಸಿ ಸ್ವಾಗತಿಸಿದರು. ಕಾರ್ಯದರ್ಶಿ ವಿ. ರಾಜೇಶ್ ನಿರೂಪಿಸಿ ವಂದನಾರ್ಪಣೆಗೈದರು. ಅಕ್ಟೋಬರ್ 10 ರಂದು ನಡೆದ ಭಾರತೀಯ ಜೈನ್ ಮಿಲನ್ ವತಿಯಿಂದ ನಡೆದ 16ನೇ ರಾಷ್ಟ್ರೀಯ ಅಧಿವೇಶನದಲ್ಲಿ ಶ್ರೀಮತಿ ಅನಿತಾ ಸುರೇಂದ್ರಕುಮಾರ್ ರವರಿಗೆ ವಿಶ್ವ ಮಹಿಳಾ ಸನ್ಮಾನ್ ಗೌರವದೊಂದಿಗೆ ಸನ್ಮಾನಿಸಲಾಗಿದೆ. ಇಂತಹ ರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರರಾದ ಶ್ರೀಮತಿ ಅನಿತಾ ಸುರೇಂದ್ರಕುಮಾರ್ ರವರಿಗೆ ಜ್ವಾಲಾಮಾಲಾ ವತಿಯಿಂದ ಆತ್ಮೀಯವಾದ ಅಭಿನಂದನೆಗಳು. ಭಾರತೀಯ ಜೈನ್ ಮಿಲನ್ ವಲಯ 8ರ ಮಹಿಳಾ ವಿಭಾಗದ ಅಧ್ಯಕ್ಷರಾದ ವೀರಾಂಗನಾ ಅನಿತಾ ಸುರೇಂದ್ರ ಕುಮಾರ್ ರವರ ಶಷ್ಠಬ್ದಿ ಆಚರಣೆಯನ್ನು ಈ ಕೋವಿಡ್ ಮಹಾಮಾರಿಯ ಕಾಲಘಟ್ಟದಲ್ಲಿ ವಾಸ್ತವಕದಲ್ಲಿ ಎಲ್ಲರೂ ಸೇರಿ ಸಂಭ್ರಮಿಸಲಾಗದೆ ವೆಬ್ ಮೀಟಿಂಗ್ ಮೂಲಕ ಆಚರಿಸಲಾಗುತ್ತಿದ್ದು ದಿನಾಂಕ 18/10/2020 ರ ಮಧ್ಯಾಹ್ನ 4.00 ರಿಂದ ಸಂಜೆ 5.30 ರವರೆಗೆ ನಡೆಯಲಿದೆ. ಮೊಟ್ಟಮೊದಲ ಬಾರಿಗೆ ವಿಶೇಷ ಹಾಗೂ ವಿಶಿಷ್ಟ ಆಚರಣೆ ಯಾಗಿದ್ದು ನಿಮ್ಮ ಜ್ವಾಲಾಮಾಲಾ ನ್ಯೂಸ್ ನಲ್ಲಿ ಪ್ರಸಾರಗೊಳ್ಳಲಿದೆ . ಜೈನ ಬಾಂಧವರು ಜನ್ಮದಿನಾಚರಣೆಯಲ್ಲಿ ತಪ್ಪದೇ ಭಾಗವಹಿಸಬೇಕಾಗಿ ಜೈನ್ ಮಿಲನ್ ಹಾಗೂ ಜ್ವಾಲಾಮಾಲಾ ಡಾಟ್ ನ್ಯೂಸ್ ವತಿಯಿಂದ ವಿನಂತಿ.
ವಾರದ ವಾರ್ತೆಗಳನ್ನು ಪ್ರತಿವಾರವೈ ಹೀಗೆ ವೀಕ್ಸಿರುತ್ತಿರಿ ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿ. ಧನ್ಯವಾದಗಳು.













