ಧರ್ಮವು ಬದುಕುವ ಶ್ರೇಷ್ಠ ವಿಧಾನವಾದರೆ ಸಂಸ್ಕೃತಿ ಧರ್ಮದ ರಕ್ಷಣೆಗಾಗಿ ಹಾಗೂ ಅದರ ಅಸ್ತಿತ್ವಕ್ಕಾಗಿ ಅಳವಡಿಸಿಕೊಂಡ ಆಚಾರವಿಚಾರಗಳು . ಮಕ್ಕಳಲ್ಲಿ ಧರ್ಮ ಮತ್ತು ಸಂಸ್ಕೃತಿಯನ್ನು ತರುವಲ್ಲಿ ತಾಯಿಯ ಪಾತ್ರ ಬಹು ಮುಖ್ಯವಾಗಿರುತ್ತದೆ. ಅಂತಹುದೇ ಒಂದು ಮಾರ್ಗದರ್ಶನದಲ್ಲಿ ಬೆಳೆಯುತ್ತದ್ದಾಳೆ ನಮ್ಮ ದೃಶ್ಯ. ಬನ್ನಿ ಅವಳ ಪರಿಚಯ ಮಾಡಿಕೊಳ್ಳೋಣ.
ಹೆಸರು ದೃಶ್ಯ ರಾಜ್, ತಂದೆ ಪ್ರಾಜನ್ಯ ರಾಜ್ ತಾಯಿ ಶುಭ್ರ 7ನೇ ತರಗತಿ ಓದುತ್ತಿರುವ ಈಕೆ ಓದಿನಲ್ಲೂ ಮುಂದು ಹಲವಾರು ಹವ್ಯಾಸಗಳನ್ನು ಹೊಂದಿದ್ದಾಳೆ. ಭರತನಾಟ್ಯ , ಸಂಗೀತ ಕಲಿಯುವುದರ ಜೊತೆಗೆ ಕೀಬೋರ್ಡ್ ಕೂಡ ನುಡಿಸುತ್ತಾಳೆ.. ಬ್ಯಾಡ್ಮಿಂಡನ್ ಟೇಬಲ್ ಟೆನ್ನಿಸ್ ಸೈಕ್ಲಿಂಗ್ ಜೊತೆಗೆ ಓದುವ ಅಭ್ಯಾಸವೂ ಇದೆ. ಕರಾಟೆ ತರಬೇತಿ ಪಡೆದು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಹಳಿಸಿದ್ದಾಳೆ. ಕಳೆದ ವರ್ಷ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾಳೆ. ಚಿಕ್ಕಂದಿನಿಂದ ಧಾರ್ಮಿಕ ಕಥೆಗಳನ್ನು ಕೇಳುವ ಅಭ್ಯಾಸ ಮಾಡಿಕೊಂಡಿದ್ದಾಳೆ. ಜಿನಭಜನೆಗಳನ್ನು ಹಾಡುವುದೆಂದರೆ ಈಕೆಗೆ ತುಂಬಾ ಇಷ್ಟ. ಅಷ್ಟವಿದಾರ್ಚನೆ ಪೂಜೆಯನ್ನು ಮಾಡಲು ಕಲಿತಿದ್ದಾಳೆ. ಈ ಲಾಕ್ ಡೌನ್ ಸಮಯದಲ್ಲಿ ಭಕ್ತಾಂಬರ ಸ್ತೋತ್ರ , ನಿರಂಜ ನ ಸ್ತುತಿ, ಗೊಮ್ಮಟೇಶ್ವರ ಸ್ತುತಿಯನ್ನು ಕಲಿಯುತ್ತಿದ್ದಾಳೆ. ಚಿತ್ರಕಲೆಲಯಲ್ಲಿ ಅವಳ ವಯಸ್ಸಿಗೆ ಮೀರಿದ ಪ್ರತಿಭೆ. ಅವಳು ಬಿಡಿಸಿರುವ ಚಿತ್ರಗಳು ಸುಂದರ ಶೈಲಿಯಲ್ಲಿ ಇವೆ. ಈಕೆಗೆ ನಮ್ಮ ಹಾಗೂ ನಿಮ್ಮೆಲ್ಲರ ಸಮಯ ಹಾಗು ಸಹಕಾರಗಳು ಅತ್ಯಗತ್ಯ ವಾಗಿದೆ. ನಾವು ದೃಶ್ಯಳನ್ನು ಮಾತನಾಡಿಸಿದಾಗ ಅವಳಿಗೆ ಗೊತ್ತಿರುವ ನಿರಂಜನ ಸ್ತುತಿ, ಗೊಮ್ಮಟೇಶ್ವರ ಸ್ತುತಿ, ಹಾಗೂ ಎಲ್ಲದ್ದಕ್ಕಿಂತ ಹೆಚ್ಛಾಗಿ ಭಕ್ತಾಂಬರ ಸ್ತೋತ್ರವನ್ನು ಕಲಿತಿರುವ ಸಾಲುಗಳನ್ನು ಹೇಳಿದಳು. ಹಾಗೂ ಜೈನ ಧರ್ಮದ ಸರೋಟು ಚಿತ್ರಗಳನ್ನು ಬಿಡಿಸಿ ತೋರಿಸಿದಳು. ನಂತರ ಅವಳು ಪಿಯಾನೋ ನುಡಿಸಿ ಹಾಗೂ ಜಿನ ಭಕ್ತಿಗೀತೆಗಳನ್ನು ಸಹಿತ ಹೇಳಿ ನಮಗೆಲ್ಲಾ ಸಂತೋಷವಾಯಿತು.
ನಾವು ಮೊದಲೇ ತಿಳಿಸಿದಂತೆ ಮುಂದಿನ ಕಾರ್ಯಕ್ರಮ ದೀರಜ್ ಜೈನ್ ರವರು ನಡೆಸಿಕೊಡುವ ಧರ್ಮ ಪಟ್ಟ. ಮಕ್ಕಳೆಲ್ಲಾ ಹಮನವಿಟ್ಟು ಆಲಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮೊದಲ ಹತ್ತು ಮಕ್ಕಳಿಗೆ ಮುಂದಿನ ಧರ್ಮದ ಕುಡಿ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
ದೀರಜ್ ಜೈನ್ ರವರು ಮಾತನಾಡಿ ಇವತ್ತಿನಸಂಚಿಕೆಯಲ್ಲಿ ಭಗವಂತನ ದರ್ಶನ ಆದ ಮೇಲೆ ಪುಂಜಿಯನ್ನು ಇಟ್ಟ ಮೇಲೆ ನಾವು ಏನು ಮಾಡಬೇಕು , ಹಾಗೂ ಭಗವಂತನ ದರ್ಶನ ಮಾಡಬೇಕಾದರೆ ಯಾವ ರೀತಿಯ ಭಾವನೆಗಳನ್ನು ಧರಿಸಿಕೊಳ್ಳಬೇಕು ಎಂದು ನಮಗೆಲ್ಲಾ ಗೊತ್ತಾಗಿದೆ. ಅದೇ ರೀತಿಯಲ್ಲಿ ಶ್ರಾವಕರ 6 ಕ್ರಿಯೆಗಳು ಎಂದು ನಾವು ಕರೆಯುತ್ತೇವೆ . ಆ ಕ್ರಯೆಗಳು ದೇವ ಪೂಜೆ, ಗುರುಪಾಹಸ್ತಿ, ಇನ್ನೂ ಮುಂತಾದ ಆರು ಕ್ರಿಯೆಗಳಲ್ಲಿ ದೇವಪೂಜೆಯನ್ನು ಮೊದಲಿಗೆ ಪೂಜೆ ಬಾಡಬೇಕಾದರೆ ಎಷ್ಟು ಶ್ರದ್ಧಾ ಭಕ್ತಿಯಿಂದ ಮಾಡಬೇಕು ಅಂತಹ ಶ್ರದ್ಧಾಭಕ್ತಿ ನಮ್ಮ ಮನಸ್ಸಿನಲ್ಲಿ ಮೂಡುವುದಕ್ಕೆ ಯಾವ ರೀತಿಯ ಭಾವನೆಯಿಂದ ನಾವು ಮಾಡಬೇಕು ಎಂದು ಈ ನಮ್ಮ ಧರ್ಮದಲ್ಲಿ ಕೇಳುತ್ತಾರೆ. ಹಾಗಾಗಿ ನಾವು ಬಸದಿಗಳಿಗೆ ಹೋಗುತ್ತೇವೆ. ಅವರ ಮನಸ್ಸನ್ನು ಒಂದೇ ಕೇಂದ್ರಿಕೃತವಾಗುವಂತೆ ಒಂದೇ ಕಡೆ ನಾವು ಬಿಂವಿಸಿಕೊಂಡು ಭಗವಂತನ ದರ್ಶನ ಮಾಡುವುದಕ್ಕೆ ನಾವು ಬಸದಿಗೆ ಹೋಗುತ್ತೇವೆ. ನಮ್ಮ ಮನಸ್ಸಿನ ಏಕಾಗ್ರತೆಯನ್ನು ವೃದ್ದಿಸಿಕೊಳ್ಳುವುದಕ್ಕೋಸ್ಕರ ನಾವು ಭಜನೆಗೆ ಹೋಗುತ್ತೇವೆ. ಆ ಭಗವಂತನ ದರ್ಶನವನ್ನು ಮಾಡುತ್ತಿರುತ್ತೇವೆ ಆ ಸುಂದರವಾದ , ಮನೋಜ್ನವಾಗಿರುವಂತಹ ಬಿಂಬವನ್ನು ನೋಡಬೇಕಾದರೆ ನಮ್ಮ ಮನಸ್ಸು ಎಷ್ಟು ಖುಷಿಯಾಗುತ್ತದೆ ಅಂದರೆ ಹೇಳಲಾಗದ ಆನಂದ. ಅದೇ ರೀತಿ ನಾವು ಶ್ರಾವಕರಾಗಿ ಜಿನೇಂದ್ರ ಭಗವಂತನ ದರ್ಶನ ಅಭಿಷೇಕವನ್ನು ಮಾಡುವಂತಹ ಸೌಭಾಗ್ಯವನ್ನು ಕೂಡ ನಮ್ಮದಾಗಿಸಿಕೊಳ್ಳಬೇಕು. ಪ್ರತಿನಿತ್ಯ ನಮ್ಮ ಧರ್ಮದಲ್ಲಿ ಹೇಳಿದ್ದಾರೆ ಯಾವ ಒಬ್ಬ ಶ್ರಾವಕನಿಗೆ 7ವರ್ಷ ಅಂದರೆ ತಾನು ಹುಟ್ಟಿದ 7ವರ್ಷವಾದ ಮೇಲೆ ಅ ಭಗವಂತ ಜಿನೇಂದ್ರ ದೇವನ ಅಭಿಷೇಕ ಮಾಡುವಂತಹ ಯೋಗ್ಯತೆ ಬರುತ್ತದೆ. ಅದಕ್ಕೆ ನಾವು ಏನು ಹೇಳುತ್ತೇವೆ ಎಂದರೆ 7ವರ್ಷಗಳ ನಂತರ ಸಂಸ್ಕಾರವನ್ನು ಕೊಡುತ್ತೇವೆ. ಅದಕ್ಕೆ ಜೈನ ಸಂಸ್ಕಾರ ವಿಧಿ ಎಂದು ನಾವು ಹೇಳುತ್ತೇವೆ.
ಅಂದರೆ ಆ ಮಗುವಿಗೆ 7 ವರ್ಷ ತುಂಬಿದ ನಂತರ ನಾವೇನು ಮಾಡುತ್ತೇವೆ ಎಂದರೆ ಜಿನಧರ್ಮದ ಬಗ್ಗೆ ಸಂಸ್ಕಾರವನ್ನು ಕೊಡುವುದಕ್ಕೆ ಶುರುಮಾಡುತ್ತೇವೆ. ತೀರ್ಥಂಕರ ಎಂದರೆ ಯಾರು ? ಅವರ ಭಾವನೆಗಳನ್ನು ಹೇಳುವುದಕ್ಕೆ ಶುರು ಮಾಡುತ್ತೇವೆ. ಈ ಪೂಜೆ ಮಾಡಬೇಕು ಭಗವಂತನಿಗೆ ಅಭಿಷೇಕವನ್ನು ಯಾವ ರೀತಿ ಮಾಡಬೇಕು ಆ ಒಂದು ಜೀವಿಗೆ ಪ್ರೇರೆಪಣೆಯನ್ನು ಕೊಡುವುದಕ್ಕೆ ಶುರು ಮಾಡುತ್ತೇವೆ. 7 ವರ್ಷದ ತನಕ ಆ ಒಂದು ಜೀವಿಯಲ್ಲಿ ಜ್ನಾನದ ಅರ್ಜನೆ ಕಡಿಮೆ ಯಾಗುತ್ತಾ ಹೋಗುತ್ತದೆ. ಆ ಒಂದು ಮಟ್ಟಕ್ಕೆ ಅವರಿಗೆ ಏನೇ ಹೇಳಿದರೂ ಕೂಡ ಅಷ್ಟೊಂದು ಪರಿಣಾಮಕಾರಿಯಾಗಿ ಅರ್ಥವಾಗುತ್ತಿರುವುದಿಲ್ಲ. ಆದ್ದರಿಂದ ನಾವು 7 ವರ್ಷದ ನಂತರ ಸಂಸ್ಕಾರ ಅದೇ ರೀತಿಯಲ್ಲಿ ಎಷ್ಟೊಂದು ಜನರು ಕೇಳುತ್ತಾರೆ ಭಗವಂತನ ಅಭಿಷೇಕವನ್ನು ಮಾಡುವುದಕ್ಕೆ ಏನೇನು ಉಲ್ಲೇಖಗಳಿವೆ ಅಂತ ಹೇಳುತ್ತಾರೆ. ಗೊಂದಲಗಳನ್ನು ನಿವಾರಣೆ ಮಾಡುವುದಕ್ಕೋಸ್ಕರವೇ ಅನೇಕ ಶಾಸ್ತ್ರ ಜ್ನರು , ಅನೇಕ ಪಂಡಿತರು ಅನೇಕ ಆಚಾರ್ಯ ಬಲ್ವಂತರು ಶಾಸ್ತದಲ್ಲಿ ಹೇಳಿದ್ದಾರೆ. ಶಾಸ್ತದಲ್ಲಿ ಏನು ಹೇಳುತ್ತಾರೆ ಎಂದರೆ 7 ವರ್ಷದ ನಂತರ ಬಾಲಕರು ಮಾತ್ರ ಪಂಚಕಲ್ಯಾಣ ಪೂರ್ಣವಾಗಿರುವಂತಹ ಜಿನಬಿಂಬಕ್ಕೆ ಪ್ರತಿನಿತ್ಯ ಅಭಿಷೇಕವನ್ನು ಮಾಡಬಹುದು. ಸ್ತ್ರೀ ಪರ್ಯಾಯದ ಕೆಲವೊಂದು ದೋಷದ ನಿಮಿತ್ತವಾಗಿ ಮಾತ್ರ ಅವರಿಗೆ ಅಭಿಷೇಕವನ್ನು ಮಾಡುವಂತಹ ಅವಕಾಶವಿಲ್ಲ. . ಹಾಗಂತ ಸ್ತ್ರೀ ಅಥವಾ ಹುಡುಗಿಯರು ಅಭಿಷೇಕವನ್ನು ಮಾಡಲೇಬಾರದು ಎನ್ನುವ ಯಾವ ರೀತಿಯಾದಂತಹ ಭಾವನೆಗಳಿಲ್ಲ ಅವರಿಗೂ ಕೂಡ ಅವಕಾಶವನ್ನು ಕಲ್ಪಿಸುವ ಅವಕಾಶಗಳಿವೆ ಯಾವಾಗ ಎಂದರೆ ತೀರ್ಥಂಕರರ ಜನ್ಮಕಲ್ಯಾಣ ಅಂದರೆ ಪಂಚ ಕಲ್ಯಾಣದಲ್ಲಿ ಮೊದಲನೇ ಕಲ್ಯಾಣ ಜನ್ಮ ಕಲ್ಯಾಣ ಯಾವಾಗ ತೀರ್ಥಂಕರರು ಮಗುವಾಗಿ ಜನನವನ್ನು ಪಡೆಯುತ್ತಾರೆ ಆಗ ಇಂದ್ರ ಪಾಂಡುಕಶಿಲೆಯಲ್ಲಿ ಆ ಭಗವಂತನನ್ನು ಮಗುವಾಗಿ ಕೂರಿಸಿಕೊಂಡು ಅಭಿಷೇಕವನ್ನು ಮಾಡುತ್ತಾನೆ.ಆಗ ಸ್ತ್ರೀ ಪರ್ಯಾಯದಲ್ಲಿರುವಂತಹ ದೇವಾನುದೇವತೆಗಳು ಕೂಡ ಅಭಿಷೇಕವನ್ನು ಮಾಡುತ್ತಾರೆ. ಆದ್ದರಿಂದ ಎಲ್ಲೆಲ್ಲಿ ಪಂಚಕಲ್ಯಾಣಗಳು ಆಗುತ್ತವೆಯೋ ಅಲ್ಲಿ ಜನ್ಮಕಲ್ಯಾಣದ ಅಭಿಷೇಕವನ್ನು ಮಾಡಬೇಕಾದರೆ ಸ್ತ್ರೀಯರೂ ಕೂಡ ಹುಡುಗಿಯರು ಕೂಡ ಭಾಗವಹಿಸಬಹುದು. ಪ್ರತಿನಿತ್ಯವೂ ಕೂಡ ನಾವು ಮಕ್ಕಳಿಗೆ ಇದೊಂದು ಸಂಸ್ಕಾರಗಳನ್ನು ಕೊಡಬೇಕು ಅಂದರೆ ಎಲ್ಲೆಲ್ಲಿ ಬಸದಿಗಳು ಇರುತ್ತವೆಯೋ ಹಾಗೂ ಹೊಸದಾಗಿ ಬಸದಿಯಲ್ಲಿ ಪೂಜೆ ಅಭಿಷೇಕಗಳನ್ನು ಮಾಡುತ್ತಿರುತ್ತಾರೋ ಆ ಒಂದು ಸಂದರ್ಭದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಮಕ್ಕಳಿಗೆ ಪ್ರೇರೇಪಣೆಯನ್ನು ನೀಡಬೇಕು. ಪ್ರೋತ್ಸಾಹವನ್ನು ನೀಡಬೇಕು ಅಭಿಷೇಕವನ್ನು ಮಾಡಬೇಕು. ಅಭಿಷೇಕವನ್ನು ಮಾಡುವುದರಿಂದ ಏನು ಲಾಭಗಳಿವೆ ಎಂದು ನಾವು ಹೇಳಿಕೊಡಬೇಕು. ಹಾಗಾಗಿ ಮಕ್ಕಳನ್ನು ಅಭಿಷೇಕವನ್ನು ತಯಾರು ಮಾಡುವುದು ಹೇಗೆ? ಬಸದಿಗೆ ಬರುವಾಗ ಮಕ್ಕಳು ಒಳ್ಳೆಯ ಮನಸ್ಸಿನಿಂದ ಶುಚಿರ್ಭೂತರಾಗಿ ಸ್ನಾನ ಮಾಡಿ ಶುಚಿಯಾಗಿ ಭಗವಂತನ ಸನ್ನದಾನಕ್ಕೆ ಬರಬೇಕಾದರೆ ಬಿಳಿಯ ವಸ್ತ್ರವನ್ನು ಧರಿಸಿ ಅಂದರೆ ಪಂಚೆ ಹಾಗೂ ಶಲ್ಯವನ್ನು ಧರಿಸಿಕೊಂಡು ಬಂದು ಆ ಭಗವಂತನಿಗೆ ಪ್ರಾಸವ ಜಲ ಅಂದರೆ ಬಿಸಿಯ ನೀರು ಬಿಸಿ ಆರಿದ ನೀರಿನಿಂದ ಅಭಿಷೇಕವನ್ನು ಮಾಡಬೇಕಾಗುತ್ತದೆ. ಜಿನಬಿಂಬವನ್ನು ಪ್ರತಿಷ್ಠಾಪನೆಯನ್ನು ಮಾಡಿ ಪಂಚಕಲ್ಯಾಣ ವಿಧಿವಿಧಾನಗಳನ್ನು ಮಾಡಿ ಮೂರ್ತಿಯನ್ನು ಪ್ರತಿಷ್ಠಾಪನೆಯನ್ನು ಮಾಡಿ ಮೂರ್ತಿಯ ಮೇಲೆ ಯಾವಾಗ ಸೂರ್ಯ ಮಂತ್ರ ಬೀಜಾಕ್ಷರ ಗಳನ್ನು ಬರೆಯುತ್ತಾರೋ ಅಲ್ಲಿಗೆ ಆಗ ಆ ಬಿಂಬ ಪೂಜೆ ಮಾಡಲಿಕ್ಕೆ ಯೋಗ್ಯವಾಗುತ್ತದೆ ಅಂತಹ ಯೋಗ್ಯವಾಗಿರುವಂತಹ ಜಿನ ಬಿಂಬದ
ಮೇಲೆ ಒಂದು ಹನಿ ನೀರನ್ನು ನಾವು ಹಾಕಿದಾಗ ನಾವು ಆ ಮೂರ್ತಿಯ ಮೇಲೆ ಇರುವಂತಹ ನೀರನ್ನು ಅಭಿಷೇಕದ ನಂತರ ನಾವು ಅದನ್ನು ತಲೆ ಮೇಲೆ ಹಾಕಿಕೊಳ್ಳುತ್ತೇವೆ. ಆ ಪದ್ದತಿಗೆ ನಾವು ಹೇಳುವುದು ಕಂದೂರಕ ೆಂದು ತಿಳಿಸಿದರು.
ಈ ವಾರದ ಪ್ರಶ್ನೆಗಳು :
- ಹಿಂದಿನ ಪಾಠದಲ್ಲಿ ಕಲಿತ ವಿಚಾರಗಳು ಯಾವುದು?
- ಬಸದಿಗೆ ಏಕೆ ಹೋಗುತ್ತೇವೆ ?
- ಎಷ್ಟನೇ ವಯಸ್ಸಿನಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಲಾಗುವುದು?
- ಪಂಚಕಲ್ಯಾಣದ ಮೊದಲನೇ ಕಲ್ಯಾಣ ಯಾವುದು?
- ಭಗವಂತನಿಗೆ ಯಾವುದರಿಂದ ಅಭಿಷೇಕ ಮಾಡಬೇಕು ?
ಮತ್ತು ಅಭಿಷೇಕದ ನಂತರ ಅದನ್ನು ಏನೆಂದು ಕರೆಯುತ್ತಾರೆ?
ನೀವು ಈ ಪ್ರಶ್ನೆಗಳಿಗೆ ಉತ್ತರಿಸುವುದಷ್ಟೇ ಅಲ್ಲ ನಮ್ಮಲ್ಲಿ ನೋಂದಾಯಿಸಿಕೊಂಡ ಮಕ್ಕಳಿಗಾಗಿ ಇಲ್ಲಿ ನಡೆದ ಪಾಠದ ಬಗ್ಗೆ ನಿಮ್ಮ ಊರಿಗೆ ಬಂದು ರಸಪ್ರಶ್ನೆ ನಡೆಸಿಕೊಡುತ್ತೆ ನಿಮ್ಮ ಜ್ವಾಲಾಮಾಲಾ ನ್ಯೂಸ್ ಚಾನಲ್ . ಹೀಗೆ ವೀಕ್ಷಿಸುತ್ತಿರಿ ಪ್ರತಿ ಭಾನುವಾರ 10.30 ಕ್ಕೆ ಸರಿಯಾಗಿ ಧರ್ಮದ ಕುಡಿ ಕಾರ್ಯಕ್ರಮ ನಿಮ್ಮ ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿ. .














