ಜೈ ಜಿನೇಂದ್ರ ವೀಕ್ಷಕರೆ, ನಮ್ಮ ಈ ದಿನದ ಪಯಣ ಬಹಳ ಪ್ರಾಚೀನ ಕ್ಷೇತ್ರವಾದ ಮಂದಾರಗಿರಿಯಡೆಗೆ. ಮಂದಾರಗಿರಿ ಬಹಳಷ್ಟು ಜೈನ ಬಾಂಧವರಿಗೆ ಚಿರಪರಿಚಿತ ಜೈನ ಧಾರ್ಮಿಕ ಕೇಂದ್ರ ಆದರು ನಿಮ್ಮ ಮುಂದೆ ಮತ್ತೆ ಮಂದಾರಗಿರಿಯ ಬಗ್ಗೆ ಪ್ರಸ್ತಾಪಮಾಡುತ್ತಿರುವುದರ ಹಿಂದೆ ನಿಮಗೆಲ್ಲಾ ಬಹಳ ಹರ್ಷ ತರುವಂತಹ ವಿಷಯ ಒಂದಿದ್ದೆ. ಆ ವಿಷಯಕ್ಕೆ ಹೊಗುವುದಕ್ಕೆ ಮುಂಚೆ ಒಮ್ಮೆ ಕೆಲವೊಂದು ವಿಚಾರಗಳನ್ನು ನೆನಪಿಸಲ್ಲಿದ್ದೇನೆ.
ಇದು ಪ್ರಕೃತಿ ನಿರ್ಮಿತ ಸುಂದರ ತಾಣಗಳಲ್ಲಿರುವಂತ ಒಂದು ಬೆಟ್ಟ, ಬಹಳ ಹಿಂದಿನ ಕಾಲ ಅಂದರೆ ಸಾವಿರ ವರ್ಷದಷ್ಟು ಪುರಾತನವಾದ ಇತಿಹಾಸವೊಂದಿದ್ದ ಕ್ಷೇತ್ರ. ಈ ಬೆಟ್ಟದಲ್ಲಿ ಪಾರ್ಶ್ವನಾಥ ಸುಪಾರ್ಶ್ವನಾಥ ಹಾಗೂ ಚಂದ್ರತೀರ್ಥಂಕರರ ನಾಲ್ಕು ಶಿಲಾಮಯ ಮಂದಿರಗಳು. ಪಾಳುಬಿದ್ದಂತ್ತಾಗಿ ಗಿಡ ಘಂಟೆಗಳು ಬೆಳೆದು ನಿಂತು ಅವಸಾನದತ್ತ ಬರುತ್ತಿದು ನಿತ್ಯ ಪೂಜಾ ವಿಧಾನಗಳು ತುಮಕೂರು ಜೈನ ಸಮಾಜದವರಾದ ಧರ್ಮಾತ್ಮರುಗಳ ಕೃಪೆಯಿಂದ ನಡೆಯುತ್ತಿದರು ಅಲ್ಲಿ ಅಭಿವೃದ್ಧಿ ಕಾರ್ಯ ಕಷ್ಟಸಾಧ್ಯವಾಗಿತ್ತು. ಏಕೆಂದರೆ ಬೆಟ್ಟದ ಮೇಲಿನ ಕಾಮಗಾರಿಗಳಾಗಲ್ಲಿ ಪೂಜಾರಾಧನೆಗಳಾಗಲ್ಲಿ ಅಭಿವೃದ್ಧಿ ಕೆಲಸಗಳಾಗಲ್ಲಿ ಅಷ್ಟು ಸುಲಭದ ಮಾತಗಿರಲ್ಲಿಲ್ಲಾ.
ಸಮಯ ನಂತರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೆಂದ್ರ ಹೆಗ್ಗಡೆಯವರ ಧರ್ಮೊತ್ತಾನ ಟ್ರಸ್ಟ್ ವತಿಯಿಂದ ಜೀರ್ಣೋದ್ದಾರಗೊಂಡು ನಿತ್ಯ ಪೂಜೆಯ ಭಾಗ್ಯಕಂಡಿತು. ಇಂತಹ ಸಮಯದಲ್ಲಿ ತುಮಕೂರು ಜೈನ ಬಾಂಧವರು ಅದ್ಬುತ್ತ ಕಾರ್ಯವನ್ನು ಕೈಗೊಂಡರು, ಅದೇನೆಂದರೆ ಆ ಬೆಟ್ಟ ಮುಂಭಾಗದ ಪ್ರದೇಶದಲ್ಲಿ ಶ್ರೀ ಭಗವಾನ್ ಚಂದ್ರನಾಥ ಸ್ವಾಮಿಯ 21ಅಡಿ ಎತ್ತರದ ಮುದ್ದಾದ ಖಡ್ಗಾಸನ ಪ್ರತಿಮೆ. ಹಾಗೂ ದೇಶಕ್ಕೆ ಪ್ರಖ್ಯಾತವಾದ 81 ಅಡಿ ಎತ್ತರದ ಪಿಂಚಿ ಮಂದಿರದ ನಿರ್ಮಾಣ ಆ ಪಿಂಚಿ ಮಂದಿರದಲ್ಲಿ ಪರಮ ಪೂಜ್ಯ ಆಚಾರ್ಯ ಶ್ರೀ ಶಾಂತಿ ಸಾಗರ ಮುನಿ ಮಹಾರಾಜರ ಪ್ರತಿಮೆ ಭಕ್ತಿ ಭಾವ ಮೋಡಿಸುವಂತಹ ಹಾಗೂ ಮಂದಿರದ ಪ್ರಶಾಂತ ವಾತಾವರಣದಲ್ಲಿ ಮುನಿ ಮಹಾರಾಜರ ಕಥಾ ಚಿತ್ರಗಳು ಉತ್ತಮ ಮಾಹಿತಿ ನೀಡುವಂತಾಗಿದೆ.
ತುಮಕೂರು ಜೈನ ಬಾಂಧವರ ಇಂತಹ ಧರ್ಮಾಸಕ್ತಿ ಹಾಗೂ ದಾನ ಧರ್ಮದ ಫಲವಾಗಿ 2019ರ ಚಾತುರ್ಮಾಸಾಚರಣೆಗೆ ಯುಗಳ ಮುನಿಗಳಾದ ಶ್ರೀ ಅಮರ ಕೀರ್ತಿ ಮಹಾರಾಜರು ಹಾಗೂ ಅಮೋಘ ಕೀರ್ತಿ ಮಹಾರಾಜರ ಆಗಮನವಾಯಿತ್ತು. ಮುನಿ ಮಹಾರಾಜರುಗಳ ಬೃಹತ್ ಚಿಂತನೆಯಿಂದ ಚಾತುರ್ಮಾಸದ ಅವಧಿಯಲ್ಲಿ ಬೆಟ್ಟದ ಅಭಿವೃಧಿಯತ್ತ ಚಿಂತಿಸಿದರು. ಸುಕೃತ ಚಿಂತನೆಯ ಪರಿಣಾಮವೆಂಬಂತೆ ಕರೋನ ಕಾರಣದಿಂದಾಗಿ ಯುಗಳ ಮುನಿಗಳ ಈ ಬಾರಿಯ ವಾಸ್ತವ್ಯವು ಕೂಡ ಮಂದಾರಗಿರಿಯಲ್ಲಿ ಆಯಿತು. ಆದರ ಫಲ ಶೃತಿಯೇ ಈಗ ನೀವು ನೋಡುತ್ತಿರುವ ಜೀರ್ಣೋದ್ದಾರಗೊಳ್ಳುತ್ತಿರುವ ಹಾಗೂ ಆ ನಿಟ್ಟಿನಲ್ಲಿ ಬಹುತೇಕ ಕಾರ್ಯ ಪೂರ್ಣಗೊಂಡು ಸುಂದರವಾಗಿ ಗೋಚರಿಸುತ್ತಿರುವ ಮಂದಾರಗಿರಿಯ ಆವರಣ ನವೀಕೃತ ಮಂದಿರಗಳು. ಇನ್ನೊಂದು ಖುಷಿತರುವ ವಿಷಯವೇಂದರೆ ಇಲ್ಲಿ ತುಮಕೂರು ಜೈನ ಬಾಂಧವರ ಹಾಗೂ ಯುಗಳ ಮುನಿಗಳ ನೇತೃತ್ವದಲ್ಲಿ ಬೃಹತ್ ಸಂವರ್ಷರಣ ನಿರ್ಮಾಣಗೊಳ್ಳುತ್ತಿದೆ.
ತುಮಕೂರು ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ನಾಗರಾಜು ಎಸ್.ಜೆ. ರವರು ಮಾತನಾಡಿ ಶಾಂತಲ ಅಜಿತ್ ರವರ ಪ್ರಯತ್ನದಿಂದ ಯುಗಳ ಮುನಿಗಳಾದ ಶ್ರೀ ಅಮರ ಕೀರ್ತಿ ಮಹಾರಾಜರು ಹಾಗೂ ಅಮೋಘ ಕೀರ್ತಿ ಮಹಾರಾಜರ ಆಗಮನವಾಯಿತ್ತು. ಕಳೆದ ಚಾತುರ್ಮಾಸದಲ್ಲಿ ಉಳಿದಂತ ಹಣ ಮತ್ತು ಈ ಬಾರಿಯ ಚಾತುರ್ಮಾಸದಲ್ಲಿ ಬರುವಂತಹ ಹಣದಲ್ಲಿ ಮಂದಿರವನ್ನು ನವೀಕರಣ ಗೊಳಿಸಲಾಗಿದೆ. ಮುನಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಂವರ್ಷರಣ ಕಾರ್ಯಕ್ರಮ ನಡೆಯುತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮತ್ತು ಈ ಸಂದರ್ಭದಲ್ಲಿ ಅವರು ಅಧ್ಯಕ್ಷರಾಗಿದ್ದಕ್ಕೆ ಪೂಣ್ಯಮಾಡಿರುವುದಾಗಿ ತಿಳಿಸಿದರು.
ಅಗಮಿಸಿದ್ದ ಯುಗಳ ಮುನಿಗಳ ಭಕ್ತರುಗಳು ಸಂವತ್ಸರಣ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ದಿನಾಂಕ 03-08-2020ರಂದು ಯುಗಳ ಮುನಿಗಳಾದ ಪರಮ ಪೂಜ್ಯ 108 ಶ್ರೀ ಅಮೋಘ ಕೀರ್ತಿ ಹಾಗೂ ಪರಮಪೂಜ್ಯ 108 ಅಮರ ಕೀರ್ತಿ ಮುನಿ ಮಹಾರಾಜರುಗಳ ನೇತೃತ್ವದಲ್ಲಿ ಒಂದು ಅಮೋಘವಾದ ಅಮರವಾದ ಬೃಹತ್ ಕಾರ್ಯಕ್ಕೆ ಶಂಕು ಸ್ಥಾಪನೆ ತುಮಕೂರು ಜೈನ ದಿಗಂಬರ ಜೈನ ಸಮಾಜದವತಿಯಿಂದ ನಡೆಯಿತು.
ಅನೇಕ ದಾನಿಗಳ ಸಹಕಾರದಿಂದ ಹಾಗೂ ಕಳೆದ ಬಾರಿಯ ಚಾತುರ್ಮಾಸದಿಂದ ಉಳಿದ ನಿಧಿಯಿಂದ ಮಂದಾರಗಿರಿಯ ಜೀರ್ಣೋದ್ದಾರ ಹಾಗೂ ಒಂದು ಬೃಹತ್ ಸಂವತ್ಸರಣ ಮಂದಾರಗಿರಿಯ ಮೇಲೆ ಮೇಟ್ಟಿಲ್ಲು ಹತ್ತಿ ಸಾಗಿದ ತಕ್ಷಣವೆ ದರ್ಶನವಾಗುವ ಮಾದರಿಯಲ್ಲಿ ಲೈವ್ ಸೈಜ್ ವೃಕ್ಷಗಳು ಹಾಗೂ ಮೂರ್ತಿಗಳೊಂದಿಗೆ ಸಾಕ್ಷಾತ್ ಸಂವತ್ಸರಣವೇ ರಚನೆಯಾದಂತ್ತೇ ಮುಕ್ತ ಪರಿಸರದಲ್ಲಿ ನಿರ್ಮಾಣವಾಗಲಿದೆ. ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ಎಸ್ ಜೆ ನಾಗರಾಜ್ ರವರು ಮುನಿಗಳ ಪರಮ ಭಕ್ತರಾದ ಶ್ರೀ ಟಿ ಎನ್ ಅಜಿತ್ ಕುಮಾರ್ ದಂಪತಿಗಳು ಬೆಂಗಳೂರಿನ ಕೇಂದ್ರ ಸರ್ಕಾರಿ ವಕೀಲರಾದ ನಾಗಶ್ರೀಯವರು ಹಾಗೂ ಅನೇಕ ದಾನಿಗಳು ತುಮಕೂರು ಜೈನ ಸಮಾಜದ ಮುಖಂಡರು ಸದಸ್ಯರುಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.
ಇಲ್ಲಿನ ಮಂದಿರಗಳಲ್ಲಿ ಭಗವಾನ್ ಶ್ರೀ ಶ್ರೇಯಂಸ ತೀರ್ಥಂಕರರ ಮೋಕ್ಷ ಕಲ್ಯಾಣ ಹಾಗೂ ಜನಿವಾರದ ಹಬ್ಬದ ನಿಮಿತ್ತ ದಿನಾಂಕ 3-8-2020ರ ಸೋಮವಾರದಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಅಭಿಷೇಕ ಪೂಜೆ ಯುಗಳ ಮುನಿಗಳ ಪಾವನ ಉಪಸ್ಥಿತಿಯಲ್ಲಿ ನಡೆಯಿತು, ಪಾವನ ಕ್ಷಣಗಳು ನಿಮ್ಮ ವೀಕ್ಷಣೆಗಾಗಿ.
ಕೇಂದ್ರ ಸರ್ಕಾರಿ ವಕೀಲರಾದ ನಾಗಶ್ರೀಯವರು ಮಾತನಾಡಿ ತುಮಕೂರು ಜೈನ ದಿಗಂಬರ ಸಮಾಜದ ಕಾರ್ಯಕ್ಕೆ ಶ್ಲಾಘಿಸಿದರು ಮತ್ತು ಪಿಂಚಿ ಮಂದಿರದ ಕಲಾಕೃತಿಯನ್ನು ವರ್ಣಿಸುತ್ತಾ ಸಂತಸ ವ್ಯಕ್ತಪಡಿಸಿದರು.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್













