ಜೈ ಜಿನೇಂದ್ರ ವೀಕ್ಷಕರೆ, ವಾರದ ಜೈನ ಸುದ್ದಿಗಳ ಸಂಕ್ಷಿಪ್ತ ವರದಿ.
ಶ್ರವಣ ಮಾಸವೆಂದರೆ ಹಬ್ಬಗಳ ಆರಂಭ ಚಾರುರ್ಮಾಸ ಕೂಡ ಆರಂಭವಾಗಿದೆ, ಆರಂಭವಾಗಿರುವ ಎಲ್ಲಾ ಪರ್ವಗಳಿಗು ಶುಭಾಶಯವನ್ನು ಕೊರುತ್ತ ಮುಖ್ಯಾಂಶಗಳು.
ಮುಖ್ಯಾಂಶಗಳು
ಕರ್ನಾಟಕದಲ್ಲಿ ನಡೆಯುತ್ತಿರುವ ಮುನಿಗಳ ಚಾತುರ್ಮಾಸ.
ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಉದ್ಘಾಟನೆ.
ಶ್ರೀ ಕ್ಷೇತ್ರ ವಡನಬೈಲಿನಲ್ಲಿ ಹಾಗೂ ಕನಕಗಿರಿಯ ನಾಗಪಂಚಮಿ ಹಬ್ಬದ ಆಚರಣೆ ಹಾಗೂ ಮುಕುಟಸಪ್ತಮಿ ಆಚರಣೆ.
ಬೆಂಗಳೂರು ರಾಜಾಜಿನಗರ ಜೈನ್ ಮಿಲನ್ ನೂತನ ಪದಾಧಿಕಾರಿಗಳ ಆಯ್ಕೆ.
ಬೆಳ್ಳೂರಿನ ಪುರಾತನ ಬಸದಿ ಕಾರ್ಯಕ್ಕಾಗಿ ಸಮಿತಿ ರಚನೆ.
ಹಿಂದಿನ ವಿಷಮ ಪರಿಸ್ಥಿತಿಯಲ್ಲಿ ಚಾತುರ್ಮಾಸದಲ್ಲಿ ಮುನಿಗಳ ವಾಸ್ತವ್ಯದ ಬಗ್ಗೆ ಬಹುತೆತೇಕರಿಗೆ ಅರಿವಿಗೆ ಬರುತ್ತಿಲ್ಲ, ಎಲ್ಲಿ ಯಾವ ಮುನಿಗಳು ಚಾತುರ್ಮಾಸ ಆಚರಿಸುತ್ತಿದ್ದಾರೆ ತಿಳಿಯೋಣ ಬನ್ನಿ.
ಕರ್ನಾಟಕದಲ್ಲಿ ಜೈನ ಮುನಿಗಳ ಚಾತುರ್ಮಾಸ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಎಲ್ಲೆಡೆ ನಿರ್ವಿಘ್ನವಾಗಿ ನಡೆಯುತ್ತಿರುವುದು ಎಲ್ಲೊ ಒಂದು ಕಡೆ ಧರ್ಮದ ಬೆಳಕು ಸಧಾ ಬೆಳಗುತ್ತಿರುವುದರ ಸಂಕೇತ. ಎಲ್ಲಿ ಯಾವ ಮುನಿಗಳ ಚಾತುರ್ಮಾಸವಾಗುತ್ತಿದೆ ಎನ್ನುವುದರ ಮಾಹಿತಿ ಇಲ್ಲಿದೆ.
ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿ ಮಹಾರಾಜರ ಸಂಘದ ಚಾತುರ್ಮಾಸವನ್ನು ಬೆಳಗಾವಿಯಲ್ಲಿ ಬಹಳ ಚನ್ನಾಗಿ ನಡೆಸುತ್ತಿದ್ದಾರೆ.
ಬಾಲಾಚಾರ್ಯ ಶ್ರೀ ಸಿದ್ಧಸೇನ ಮುನಿ ಮಹಾರಾಜರು ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮ.
ಬಾಲಾಚಾರ್ಯ ಶ್ರೀ ಪಾವನ ಕೀರ್ತಿ ಮುನಿ ಮಹಾರಾಜರು ಬೆಂಗಳೂರಿನ ಚಕ್ರೇಶ್ವರಿ ಮಹಿಳಾ ಸಮಾಜ.
ಯುಗಳ ಮುನಿಗಳು ಶ್ರೀ ಅಮೋಘ ಕೀರ್ತಿ ಮಹಾರಾಜರು ಮತ್ತು ಮುನಿ ಶ್ರೀ ಅಮರ ಕೀರ್ತಿ ಮಹಾರಾಜರು ತುಮಕೂರು ಜಿಲ್ಲೆ ಮಂಧಾರಗಿರಿಯಲ್ಲಿ ಅಮೋಟವಾಗಿ ಚಾತುರ್ಮಾಸವನ್ನು ನಡೆಸುತ್ತಿದ್ದಾರೆ.
ಮುನಿ ಶ್ರೀ ಪುಣ್ಯಸಾಗರ ಮಹಾರಾಜರು ಹಾವೇರಿ ಜಿಲ್ಲೆಯ ಅರಟಾಳ ಗ್ರಾಮ.
ಮುನಿ ಶ್ರೀ ಪ್ರಸಂಗ ಸಾಗರ ಮಹಾರಾಜರು ಧಾರವಾಡ ಜಿಲ್ಲೆಯ ವರೂರು ಗ್ರಾಮ.
ಮುನಿ ಶ್ರೀ ಪಾಯ ಸಾಗರ ಮಹಾರಾಜರು ಗದಗ ಜಿಲ್ಲೆಯ ಬನ್ನಿಕೊಪ್ಪ ಗ್ರಾಮ.
ಮುನಿ ಶ್ರೀ ಮಹಿಮಾ ಸಾಗರ ಮಹಾರಾಜರು ಕೊಥಳ್ಳಿ ಕುಪ್ಪನವಾಡಿ.
ಮುನಿ ಶ್ರೀ 108 ದಿವ್ಯ ಸಾಗರ ಮಹಾರಾಜರು ವೇಣೂರಿನಲ್ಲಿ ಚಾತುರ್ಮಾಸ ಆಚರಿಸುತ್ತಿದ್ದಾರೆ.
ಇನ್ನು ಹೆಚ್ಚಿನ ಮಾಹಿತಿ ಇದ್ದಲ್ಲಿ ನಮ್ಮ ಗಮನಕ್ಕೆ ತನ್ನಿ.
ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ನ್ನು ಕೇಂದ್ರ ಸಚಿವ ಪ್ರಹಲ್ಲಾದ್ ಜೋಶಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೆಂದ್ರ ಹೆಗ್ಗಡೆಯವರಿಂದ ಉದ್ಘಾಟಿಸಲಾಯಿತು.
ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ನ್ನು ಅನ್ ಲೈನ್ ಮೂಲಕ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೆಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಇಂದು ಉದ್ಘಾಟಿಸಿದರು. ಸಚಿವರಾದ ಜಗದೀಶ್ ಶೆಟ್ಟರ್ ಉಪಸ್ಥಿತಿಯಲ್ಲಿ ಯೂನಿಯನ್ ಮಿನಿಸ್ಟರ್ ಪ್ರಹ್ಲಾದ್ ಜೋಶಿಯವರು ಟೆಸ್ಟಿಂಗ್ ಲ್ಯಾಬ್ ನ್ನು ಉದ್ಘಾಟಿಸಿದರಲ್ಲದೆ ಬೆಡ್ ಗಳ ಸಂಖ್ಯೆ 100ರಿಂದ 150ಕ್ಕೆ ಏರಿಸಿದಕ್ಕಾಗಿ ಐ.ಸಿ.ಯು ವೆಂಟಿಲೆಟರ್ ವ್ಯವಸ್ಥೆಗಳಿಗಾಗಿ ಧನ್ಯವಾದಗಳನ್ನು ಕೂಡ ತಿಳಿಸಿದರು. ಅಲ್ಲಿನ ನಿರ್ದೇಶಕರಾದ ಡಾ|| ನಿರಂಜನ್ ಕುಮಾರ್ ರವರು ವರ್ಷದ ವೈದ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆಂದು ಕೂಡ ಇಲ್ಲಿ ನೆನಪಿಸಿ ಕೊಳ್ಳಬಹುದು. ಜ್ವಾಲಮಾಲ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತದೆ.
ನಾಗರ ಪಂಚಮಿ ಪ್ರಯುಕ್ತ ಶ್ರೀ ಕ್ಷೇತ್ರ ವಡನಬೈಲಿನಲ್ಲಿ ಹಾಗೂ ಕನಕಗಿರಿಯಲ್ಲಿ ಆಭಿಷೇಕಗಳು ನೆರವೇರಿದೆ, ಹಾಗೂ ಶ್ರೀ ಕ್ಷೇತ್ರ ಕನಕಗಿರಿ ಮೂಡುಬಿದ್ರೆಯಲ್ಲಿ ನಡೆದ ಮುಕುಟ ಸಪ್ತಮಿ ಆಚರಣೆಯನ್ನು ಮನೆಯಲ್ಲಿ ವೀಕ್ಷಿಸಲು ನಿಮಗಾಗಿ ತಂದಿದ್ದೆವೆ.
ದಿನಾಂಕ 27-02-2020ರಂದು ನಾಗರಪಂಚಮಿ ಪ್ರಯುಕ್ತ ಶ್ರೀ ವಡನಬೈಲಿನಲ್ಲಿ ಸರ್ವಸರ್ಪದೋಷ ನಿವಾರಣೆ ಮಾಡುವ ಶ್ರೀ ಮುಕ್ತಿ ನಾಗನಿಗೆ ಕ್ಷೀರಾಭಿಷೇಕ, ಅಷ್ಟ ಗಂಧಾಭಿಷೇಕ, ಅರಿಶಿಣದ ಅಭಿಷೇಕ ನಡೆಯಿತು. ಹಾಗೂ ಶ್ರೀ ಕ್ಷೇತ್ರ ಕನಕ ಗಿರಿಯಲು ಕೂಡ ನಾಗರಪಂಚಮಿ ಪ್ರಯುಕ್ತ ನಾಗರ ವಿಗ್ರಹಕ್ಕೆ ವಿಶೇಷ ಅಭಿಷೇಕ ಪೂಜೆ ನೆರವರಿಸಲಾಯಿತು.
ನಂತರ ಶ್ರೀಗಳವರು ಮಾತನಾಡಿ (ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ಇವತ್ತು ಮೋಕ್ಷ ಸಪ್ತಮಿ ಪಾರ್ಶ್ವನಾಥ ತೀರ್ಥಂಕರರು 23ನೇ ತೀರ್ಥಂಕರರು ಅವರು ಇವತ್ತು ನಿರ್ವಾಣ ಹೊಂದಿರುವಂತಹ ಒಂದು ಪುಣ್ಯದಿನ ಭಾರತದ ಬಿಹಾರ ಪ್ರಾಂತ್ಯದಲ್ಲಿ ಇದಂತಹ ಇವತ್ತಿನ ಜಾರ್ಖಂಡ ರಾಜ್ಯದಲ್ಲಿ ಇರುವಂತಹ ಸಂವೇದಗಿರಿಯಲ್ಲಿ ಅವರು ನಿರ್ವಾಣವನ್ನು ಹೊಂದಿದ್ದರು ಅವರ ನಿರ್ವಾಣವನ್ನು ಹೊಂದಿದರು. ಅವರ ನಿರ್ವಾಣ ಮಹೋತ್ಸವವನ್ನು ಕರ್ನಾಟಕದಲ್ಲಿ ಅತ್ಯಂತ ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವಂತಹ ಕ್ಷೇತ್ರ ಕನಕಗಿರಿಯಲ್ಲಿ ಇವತ್ತು ಬೆಳಿಗ್ಗೆ ಪಾರ್ಶ್ವನಾಥ ಸ್ವಾಮಿಯವರಿಗೆ ಮಹಾಭಿಷೇಕ, ಪಂಚಾಮೃತ ಅಭಿಷೇಕ, ಮತ್ತು ನಿರ್ವಾಹಣರ ಲಾಡು ಅರ್ಪಣೆಮಾಡುವುದರ ಮೂಲಕವಾಗಿ ಈ ಒಂದು ಕಾರ್ಯಕ್ರಮವನ್ನ, ಅಭಿಷೇಕವನ್ನ, ಮಹೊತ್ಸವವನ್ನ ಆಚರಣೆ ಮಾಡಿದ್ದಿವಿ. ಈ ಸಂದರ್ಭದಲ್ಲಿ ಇವತ್ತು ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವಂತಹ ಅತಿಥಿ ನಿವಾಸದ ಉದ್ಘಾಟನೆಯು ಕೂಡ ಆಗಿದೆ. ಮೈಸೂರು ಜಿಲ್ಲೆಯ ಕಡಕೊಳ ನಿವಾಸಿಗಳಾದ ಧರ್ಮಾನುರಾಗಿ ಶ್ರೀ ಯುತ ಆದರಾಜಯ್ಯನವರು ತಮ್ಮ ಪರಿವಾರದ ಮುಖಾಂತರವಾಗಿ ಶ್ರೀ ಕ್ಷೇತ್ರದಲ್ಲಿ ಸಾಧು ಸಂತರುಗಳಿಗೆ ಅತಿಥಿಗಳಿಗೆ ಉಪಯೋಗಿಸಲ್ಲೂ ಸೂಕ್ತಾವಾಗಿರುವಂತಹ ವ್ಯವಸ್ಥೆಯುಳ್ಳ ಅತಿಥಿ ಗೃಹ ನಿರ್ಮಾಣ ಮಾಡಿಕೊಟ್ಟಿರುತ್ತಾರೆ. ಆ ಕಾರ್ಯ ಕ್ರಮವನ್ನು ಇವತ್ತು ಉದ್ಘಾಟನೆ ಮಾಡಿ ನೆರವೇರಿಸಿದ್ದೇವೆ. ಬಂದಿರುವಂತಹ ಭಕ್ತಸಮೂಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ, ಮೊಕ್ಷಸಪ್ತಮಿಯ ಸುಸಂದರ್ಭದಲ್ಲಿ ತಮಗೆಲ್ಲರಿಗು ಶುಭವಾಗಲ್ಲಿ ಎಂದು ಹಾರೈಸುತ್ತ ಎರಡು ಸಂದೇಶವನ್ನು ಈ ಸಂದರ್ಭದಲ್ಲಿ ಹೇಳ ಬಯಸಿದ್ದೇನೆ).
ಕನಕ ಗಿರಿಯ ಮುಕುಟಸಪ್ತಮಿಯ ಅಭಿಷೇಕದ ಸಂಪೂರ್ಣ ವರದಿಯನ್ನು ಈ ಭಾನುವಾರ 9:30ಕ್ಕೆ ಚಂದನ ವಾಹಿನಿಯ ಜಿನ ದರ್ಶನದಲ್ಲಿ ಪ್ರಸಾರವಾಗಲಿದೆ ಸರ್ವರು ಖಂಡಿತ ವೀಕ್ಷಿಸಿ.
ಶ್ರೀ ಕ್ಷೇತ್ರ ಹೊಂಬುಜದಲ್ಲಿ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆದ ಮುಕುಟಸಪ್ತಮಿ ಆಚರಣೆಯ ಕ್ಷಣಗಳು.
ಹಾಗೂ ಈಗ ನೋಡುತ್ತಿರುವುದು ಪೆನಉಂಡೆ ಶ್ರೀ ಪಾರ್ಶ್ವನಾಥ ಸ್ವಾಮೀಯ ಮುಕುಟಸಪ್ತಮಿಯ ಆಚರಣೆಯ ದೃಶ್ಯಾವಳಿಗಳು.
ರಾಜಾಜಿನಗರ ಜೈನ್ ಮಿಲನ್ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ.
ರಾಜಾಜಿನಗರ ಜೈನ್ ಮಿಲನ್ ಜನವರಿಯಲ್ಲಿ ಹೊಸ ಪದಾಧಿಕಾರಿಗಳು ಆಯ್ಕೆಯಾಗಿದ್ದು ಕರೋನ ಕಾರಣದಿಂದಾಗಿ ಪದಗ್ರಹಣ ನಡೆದಿರುವುದಿಲ್ಲಾ. ಆದ ಕಾರಣ ಜೂನ್ ತಿಂಗಳ 30ನೇ ತಾರೀಖು ಆನ್ ಲೈನ್ ಮಿಟಿಂಗ್ ನಡೆದು ಅಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಮಿಲನ್ನ ಎಲ್ಲ ಸದಸ್ಯರುಗಳ ಒಪ್ಪಿಗೆ ಮೇರೆಗೆ ಆಯಿತು. ಆಯ್ಕೆಯಾದ ಪದಾಧಿಕಾರಿಗಳು ಈ ರೀತಿ ಇದ್ದಾರೆ.
ಅಧ್ಯಕ್ಷರು ಶ್ರೀ ವೀರ್ ಭೂಪಾಲ್ ಅಸ್ಕಿ, ಕಾರ್ಯದರ್ಶಿಯಾಗಿ ಶ್ರೀಮತಿ ವೀರಾಂಗನಾ ಸೌದಾಮಿನಿ ಅಜಿತ್, ಖಜಾಂಚಿಯಾಗಿ ಶ್ರೀ ವೀರ್ ಬಾಹುಬಲಿ ಗೌರಾಜ್ ಹೊಸ ಪದಾಧಿಕಾರಿಗಳೆಲ್ಲರಿಗೂ ಅಭಿನಂದನೆಗಳು.
ಬೆಳ್ಳೂರಿನ ಪುರಾತನ ಬಸದಿಯ ಜೀರ್ಣೋದ್ಧಾರಕಾಗಿ ಸಮಿತಿ ರಚನೆಯಾಗಿದೆ ಈ ಬಗ್ಗೆ ಪುಟ್ಟ ವರದಿ.
ಸೂರನಹಳ್ಳಿ ಬಸದಿ ಜೀರ್ಣೋದ್ಧಾರ ಮಾಡುವುದಕ್ಕಾಗಿ ಪಾರ್ಶ್ವಪುರ ತ್ರಿಕೂಟ ದಿಗಂಬರ ಜೈನ ಸೇವಾ ಟ್ರಸ್ಟ್ ಅನ್ನು ರಚಿಸಲಾಗಿದೆ, ಸಮಿತಿ ಪ್ರಥಮ ಮಹಾಸಭೆಯು ಬೆಳ್ಳೂರಿನ ಬಸದಿ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪರಮ ಸಂರಕ್ಷಕರಾಗಿ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಸ್ವಾಮೀಜಿಯವರು ನರಸಿಂಹರಾಜ ಪುರ ಬೆಳ್ಳೂರಿನ ಶ್ರೀ ಪದ್ಮನಾಭನವರು ಅಧ್ಯಕ್ಷರಾಗಿ, ಮೈಸೂರಿನ ಶ್ರೀಮತಿ ಶೀಲಾ ಅನಂತರಾಜ್ ರವರು ಮತ್ತು ಮಂಡ್ಯದ ಶ್ರೀಮತಿ ಜಯಶ್ರೀ ಮಹೇಂದ್ರರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು ಕಾರ್ಯದರ್ಶಿಗಳಾಗಿ ಬೆಳ್ಳೂರಿನ ಶ್ರೀ ಅಜಿತ್ ರವರು, ಜಂಟಿ ಕಾರ್ಯದರ್ಶಿಗಳಾಗಿ ಬೆಳ್ಳೂರಿನ ಶ್ರೀಮತಿ ಜಯಂತಿಮಾಲ ಹಾಗೂ ಬೆಂಗಳೂರಿನ ಶ್ರೀಮತಿ ಸ್ಪೂರ್ತಿಯವರು ಆಯ್ಕೆಯಾದರು, ಖಜಾಂಚಿಯಾಗಿ ಶ್ರೀ ಜಿನೇಂದ್ರ ರವರು, ಕಾರ್ಯಕಾರಿ ಸಮಿತಿಗೆ ಬೆಳ್ಳೂರಿನ ಶ್ರೀ ಶಾಂತಿ ಪ್ರಸಾದ್, ಡಾ|| ರತ್ನರಾಜ್ ಹಾಗೂ ಮಂಡ್ಯದ ಶ್ರೀ ರತ್ನಾತ್ರೇಯರವರು ಆಯ್ಕೆಯಾಗಿದ್ದಾರೆ.
ಇವರಲ್ಲದೇ ಆರು ಜನ ಸದಸ್ಯರಿದಾರೆ, ಬೆಂಗಳೂರಿನ ಶ್ರೀ ಚಿತ್ತಾ ಜಿನೇಂದ್ರ, ಯಡಿಯೂರಿನ ಶ್ರೀ ಜಿನೇಶ್, ಮಂಡ್ಯದ ಶ್ರೀಮತಿ ಜಯಂತಿ ಬಾಹುಬಲಿ, ಮೈಸೂರಿನ ಶ್ರೀ ಜ್ವಾಲೇಂದ್ರ, ಪಾಂಡವಪುರದ ಶ್ರೀ ರೂಪೇಶ್ ಹಾಗೂ ಬೆಳ್ಳೂರಿನ ಶ್ರೀ ರೋಹಿತ್ ಆಯ್ಕೆಯಾಗಿದ್ದಾರೆ. ಮುಖ್ಯ ಸಲಹೆಗಾರರಾಗಿ ಮೈಸೂರಿನ ಶ್ರೀ ಎನ್. ಪ್ರಸನ್ನಕುಮಾರ್ ರವರು ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳೆಲ್ಲರಿಗೂ ಜ್ವಾಲಮಾಲವತಿಯಿಂದ ಅಭಿನಂದನೆಗಳು.
ಕೆಲವೊಂದು ಪ್ರಕಟಣೆಗಳಿವೆ ನೋಡಿ ಬರೋಣ ಬನ್ನಿ.
ಶ್ರೀಕ್ಷೇತ್ರ ಆರತಿಪುರ ದಿಗಂಬರ ಜೈನ ಮಠ ಮಂಡ್ಯದಲ್ಲಿ ಈ ವರ್ಷ ಶ್ರಾವಣ ಮಾಸ ಶುಕ್ಲ ಪಕ್ಷ ಪ್ರತಿಪದೆಯ ಶುಭ ದಿನಾಂಕ 21-07-2020ರ ಮಂಗಳವಾರದಿಂದ ಶ್ರಾವಣ ಮಾಸ ಶುಕ್ಲ ಪಕ್ಷ ಅಮವಾಸ್ಯೆಯ ಶುಭ ದಿನಾಂಕ 19-08-2020ರ ಬುಧವಾರದ ವರೆಗೆ ಸ್ವಸ್ತಿಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ವಿಶ್ವಶಾಂತಿಗಾಗಿ ಪ್ರತಿದಿನ ಆರಾಧನೆಯನ್ನು ನೆರವೇರಿಸಲಾಗುವುದು. ಈ ವಿಶ್ವ ಶಾಂತಿ ಆರಾಧನೆಯ ಕಾರ್ಯಕ್ರಮಕ್ಕೆ ನಾಡಿನ ಸಮಸ್ತ ಭಕ್ತಾದಿಗಳು ತ್ರಿಯೋಗ ಪೂರ್ವಕ ಅನುಮೋದಿಸಿ ಪೂಣ್ಯ ಭಾಗಿಗಳಾಗ ಬೇಕಾಗಿ ಅಪೇಕ್ಷಿಸುತ್ತೇವೆ.
ಹಾಗೂ ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದಲ್ಲೂ ಕೂಡ ಸ್ವಸ್ತಿಶ್ರೀ ಭಟ್ಟಕಲಂಕ ಭಟ್ಟಾರಕ ಸ್ವಾಮೀಜಿಯವರ ಮಾರ್ಗ ದರ್ಶನದಲ್ಲಿ ಶ್ರೀ 1008 ಭಗವಾನ್ ನೇಮಿನಾಥ ಸ್ವಾಮಿ ಬಸದಿಯಲ್ಲಿ ದಿನಾಂಕ 20-08-2020ರಿಂದ 17-09-2020ರವರೆಗೆ ಪ್ರತಿ ದಿನ ಒಂದೊಂದು ಆರಾಧನೆಗಳನ್ನು ನೆರವೇರಿಸಲಾಗುವುದು. ಭಕ್ತಾದಿಗಳು ಈ ಶುಭ ಅವಸರದಲ್ಲಿ ತಮ್ಮ ಹೆಸರಿನಲ್ಲಿ ಆರಾಧನೆಯನ್ನು ಮಾಡಿಸಿ ಪೂಣ್ಯ ಬಾಗಿಗಳಾಗ ಬೇಕೆಂದು ವಿನಂತಿಸಿತ್ತೇವೆ.
ವಾರದ ಸುದ್ದಿ ವಿವರವನ್ನು ನೋಡಿದದ್ದಿರಿ, ನಿಮ್ಮ ಯಾವುದೇ ಜೈನ ಸುದ್ದಿಗಳು ಪ್ರಕಟಣೆಗಳು ಜಾಹೀರಾತು ಇದ್ದಲ್ಲಿ ಕೂಡಲೆ ನಮ್ಮನ್ನು ಸಂಪರ್ಕಿಸಿ.
ಹೀಗೆ ಪ್ರತಿವಾರವು ವೀಕ್ಷಿಸಿ ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ. ಮತ್ತೆ ಭೇಟಿಯಾಗಲ್ಲಿದೇವೆ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್













