ಕೊರೊನಾ ಅವಧಿ 3 ರ ಪ್ರೇರಣಾ ವಿಡಿಯೋ

ಜೈ ಜಿನೇಂದ್ರ ವೀಕ್ಷಕರೆ ಕಳೆದ ಸಂಚಿಕೆಯಲ್ಲಿ ನಿವೇಲ್ಲ ಯೋಧರುಗಳ ಸೇವಮನೋಭಾವ ಪರಸ್ಪರ ಸಹಕಾರ ಕಾರ್ಯತ್ತಪರತೆ ಇವೆಲ್ಲದರ ಕಿರು ನೋಟ ವೀಕ್ಷಿಸಿದ್ದಿರಿ, ಸಮಯದ ಅಭಾವದಿಂದ ಉಳಿದ ಸಂಘ ಸಂಸ್ಥೆಗಳ ಮಠಗಳ ವತಿಯಿಂದ ನಡೆದ ಬೃಹತ್ ಕಾರ್ಯವನ್ನು ಮುಂದುವರಿದ ಈ ಭಾಗದಲ್ಲಿ ವೀಕ್ಷಿಸಲ್ಲಿದಿರಿ .

ಕಳೆದ ಸಂಚಿಕೆಯಲ್ಲಿ ತಿಳಿಸಿದಂತೆ ಹೊಂಬುಜ ಶ್ರೀಗಳ ವತಿಯಿಂದ ಸಂಕಷ್ಟಕೀಡಾದ ಅರ್ಚಕರಿಗೆ ಸಹಾಯಕ್ಕಾಗಿ ಆಹಾರ ಪದಾರ್ಥಗಳ ವಿತರಣೆ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು ರಾಜ್ಯದ ಪ್ರತಿಯೊಬ್ಬ ಅರ್ಚಕರಿಗೂ ತಲುಪಿಸಿರುವುದ್ದು ಅತ್ಯುತ್ತಮ ಕಾರ್ಯವಾಗಿದೆ. ಶ್ರೀ ಕ್ಷೇತ್ರ ಜೈನ ಮಠ ಮೂಡುಬಿದ್ರೆಯ ಜಗದ್ಗುರು ಡಾ|| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾಕರ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿಗಳವರು ಧವಲ ತ್ರೇಯ ಜೈನ ಕಾಶಿ ಟ್ರಸ್ಟ್ ಹಾಗೂ ಸಾನ್ಮಿಯ ಜೈನ ಟ್ರಸ್ಟ್ ವತಿಯಿಂದ ದಾನಗಳ ಸಹಕಾರದಿಂದ ನಿರಂತರ ಮಾರ್ಚ್ 24ರಿಂದ ಆಹಾರ ಪೊಟ್ಟಣದ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುತ್ತಿದ್ದು. ದಿನಾಂಕ 3/05/2020ರಂದು ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿಗಳವರ ಜನ್ಮ ದಿನದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಹೊಂಬುಜ ಶ್ರೀಗಳವರಿಂದ ನೀಡಲಾದ ಅರ್ಚಕರ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ 18 ಬಸದಿ ಅರ್ಚಕರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕು ಬಜಗೊಳಿ ಸುಮ್ಮಬಂಡೆ ಶಾಲೆ ಧರ್ಮಶಾಲೆವತಿಯಿಂದ ವಿವಿಧ ಸಮಾಜಿಕ ಚಟುವಟಿಕೆಗಳು 26-04-2020 ಅಕ್ಷಯ ತೃತೀಯದಂದು ಬಜಗೊಳಿ ಪರಿಸರದ ಬಸದಿ ಹಾಗೂ ದೇವಾಲಯಗಳ ಅರ್ಚಕರು ಗಳಿಗೆ ಟ್ರಸ್ಟಿ ವಿರನ್ ಜೈಕುಮಾರ್ ಬಜಗೊಳಿ ಆಹಾರ ಸಾಮಗ್ರಿ ಪೊಟ್ಟಣ ವಿತರಣೆ ಮಾಡಿದರು. ಬೀದಿ ನಾಯಿಗಳಿಗೆ ಪಶು ಪಕ್ಷಿಗಳಿಗೆ ಕಳೆದ ಎರಡು ತಿಂಗಳಿಂದ ನಿರಂತರ ಆಹಾರ ದಾನ ಹಾಗೂ ಗಾಯ ಗೊಂಡ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂಕ ಪ್ರಾಣಿಗಳ ನಿರಂತರ ಸೇವೆ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ.

ಶ್ರೀ ಕ್ಷೇತ್ರ ಅರತಿ ಪುರ ಜೈನ ಮಠದ ವತಿಯಿಂದ ಪರಮ ಪೂಜ್ಯ ಶ್ರೀಗಳವರಿಂದ ಈಗತಾನೆ ಆರಂಭವಾದ ಅಭಿವೃದ್ಧಿ ಪಥದಲ್ಲಿರುವ ಚಿಕ್ಕ ಮಠದವತಿಯಿಂದಲೂ ಸಹ ಇಂತಹ ಮಹತ್ ಕಾರ್ಯ ನಡೆಯುತ್ತಿದ್ದು, ಸುತ್ತಮುತ್ತಲಿನ ಬಡಜನರಿಗೆ ಬಡ ಮಕ್ಕಳಿಗೆ ಪ್ರತಿ ದಿನ ಆಹಾರ ವಿತರಣೆಯಾಗುತ್ತಿದೆ.

ಕಳೆದ ಸಂಚಿಕೆಯಲ್ಲಿ ಹಾಸನದ ಜೈನ ಸಮಾಜದ ವತಿಯಿಂದ ಚಾರುಶ್ರೀಗಳ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಮಟ್ಟದ ಅನ್ನ ದಾನವನ್ನು ವೀಕ್ಷಿಸಿದ್ದಿರಿ, ಅಲ್ಲಿನ ಸ್ವಯಂ ಸೇವಕರು ಸುತ್ತಮುತ್ತಲಿನ ಬಡ ಜನರಿಗೆ ಆಹಾರ ಪೊಟ್ಟಣಗಳನ್ನು ತಲುಪಿಸಿದ ಪರಿಯನ್ನು ಒಮ್ಮೆ ವೀಕ್ಷಿಸಿ.  ಅಲ್ಲಿನ ಶಾಸಕರು ಗಣ್ಯವ್ಯಕ್ತಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯವನ್ನು ಶ್ಲಾಘೀಸಿದ್ದಾರೆ. ಆಹಾರ ಪದಾರ್ಥದ ಜೊತೆಗೆ ವಿತರಿಸಲಾಗುತ್ತಿರುವ ಮಜ್ಜಿಗೆಯನ್ನು ತುಂಬಿಸಲು ಪ್ರತಿದಿನ 800ರಿಂದ 900 ಬಾಟಲುಗಳನ್ನು ಉಚಿತವಾಗಿ ನೀಡುತ್ತಿರುವ ಮಂಜುಶ್ರೀ ಇಂಡಸ್ಟ್ರಿ ಮಾಲೀಕರಾದ ಶ್ರೀಮತಿ ಅನುಪಮ ಚೇತನ್ ರವರಿಗೆ ಸಮಾಜದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಲಾಕ್ ಡೌನ್ ನ ತುರ್ತು ಸಂದರ್ಭದಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೆಡ್ ಅರ್ಗನೈಜೇ಼ಷನ್ ವತಿಯಿಂದ ಸುಮಾರು ಹನ್ನೆರಡುವರೆ ಲಕ್ಷಗಳ ಆಹಾರ ಪೊಟ್ಟಣ ವಿತರಣೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾಳ ಹರ್ಷೇಂದ್ರ ಕುಮಾರ್ ರವರು ಕುಲಿ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಹಾಗೂ ವೃದ್ದಾಶ್ರಮಕ್ಕೆ, ಅಂಗವಿಕಲರಿಗೆ ಹಾಗೂ ಹಸಿದ ಹೃದಯಗಳಿಗೆ ಸುಮಾರು 36 ದಿನಗಳಿಂದ ಎಲ್ಲರ ಸಹಾಯದೊಂದಿಗೆ ಒಟ್ಟು 19ಸಾವಿರ ಆಹಾರ ಪೊಟ್ಟಣಗಳನ್ನು ವಿತರಿಸಿದ್ದಾರೆ. ದಿನಸಿ ಪದಾರ್ಥಗಳ ಅವಶ್ಯಕತೆ ಇರುವವರನ್ನು ಸುಮಾರು 143 ಕುಟುಂಬಗಳಿಗೆ ದೀನಿಶ್ ರವರಿಂದ ವಿತರಣೆ ಮಾಡಿಸಿದ್ದು, ಹಾಗೂ 18 ಕುಟುಂಬಗಳಿಗೆ 5ಕೆ.ಜಿ.ಗೋಧಿ ಹಿಟ್ಟು ಹಾಗೂ 1ಲೀಟರ್ ಅಡುಗೆ ಎಣ್ಣೆಯನ್ನು ಸ್ವತಃ ತಾವೇ ವಿತರಣೆಮಾಡಿರುತ್ತಾರೆ.

ಹೊಸದುರ್ಗ ಜೈನ ಸಮಾಜದ ವತಿಯಿಂದ ಬಡವರಿಗೆ ಮತ್ತು ನಿರಾಶ್ರಿತರಿಗೆ ಹಾಗೂ ಚೇಕ್ ಪೋಸ್ಟ್ ಸಿಬಂದ್ಧಿ ವರ್ಗದವರಿಗೆ ಆಹಾರ ಮತ್ತು ನೀರಿನ ವಿತರಣೆ ಮಾಡಲಾಯಿತು. ಈ ಆಹಾರ ವಿತರಣೆ ಕಾರ್ಯಕ್ರಮವು ಸತತ 20ದಿನಗಳಿಂದ ನಡೆದುಕೊಂಡು ಬಂದಿರುತ್ತದೆ.

ಇನ್ನೂ ಕರ್ನಾಟಕ ಜೈನ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿರುವ ಬೃಹತ್ ಅನ್ನದಾನಕ್ಕೆ ಅನೇಕರು ಉದ್ದಾರತೆ ಮೆರೆದು ದೇಣಿಗೆಯನ್ನು ನೀಡಿದ್ದು, ಇಸ್ರೋ ಅಜಿತ್ ರವರ ಅಳಿಯಂದಿರಾದ ಪಿ.ಸಿ ಗುಣಧರ್ ರವರು ಮೂರು ಲಕ್ಷ ರೂಗಳನ್ನು ನೀಡಿದ್ದಾರಲ್ಲದೆ, ಅಮರಾಪುರದ ಧರಣೇಂದ್ರ ಕುಮಾರ್ ಕುಟುಂಬದಿಂದ ಎರಡು ಲಕ್ಷದ ಇಪ್ಪತ್ತೈಶದು ಸಾವಿರ ರೂಗಳು ಹಾಗೂ ಧೀನ ಬಂಧು ನಿಧಿ ಟ್ರಸ್ಟ್ ವತಿಯಿಂದ 35,000 ರೂ ಬಿಸ್ಕೆಟ್ ನೀಡಿದ್ದು, ಹೆಗ್ಗಡೆಯ ಕುಟುಂಬಸ್ಥರು ಪ್ರತ್ಯೇಕವಾಗಿ ಒಂದೊಂದು ದಿನದ ಜವಬ್ದಾರಿ ತೆಗೆದುಕೊಂಡಿದ್ದಾರಲ್ಲದೆ, ಅದೆರೀತಿ ವಿದ್ಯಾನಂದ ಮುನಿ ಮಹಾರಾಜರ ಜನ್ಮಜಯಂತಿಯಂದು ಎಂ.ಸಿ. ಅನಂತರಾಜಯ್ಯರವರ ಕುಟುಂಬ ವರ್ಗದವರಿಂದ ಹಾಗೂ ಸೆಂಟ್ರಲ್ ಜೈನ್ ಮಿಲನ್ ವತಿಯಿಂದ ಒಂದು ದಿನದ ಆಹಾರ ವಿತರಣೆಯ ಹೊಣೆ ಹೊತ್ತಿದ್ದಾರೆ.

ಹೀಗೆ ಇನ್ನೂ ಹಲವರು ವೈಯಕ್ತಿಕವಾಗಿ ದೇಣಿಗೆಯನ್ನು ನೀಡಿದ್ದು ನಮಗೆ ದೊರೆತ ಮಾಹಿತಿಯನ್ನು ತಿಳಿಸಲಾಗಿದೆ. ಎಂ.ಪಿ ತೇಜಸ್ವಿ ಸೂರ್ಯರವರು ತಮ್ಮ ಕೆ.ಜೆ.ಎ. ವತಿಯಿಂದ ನಡೆದ ಆಹಾರ ವಿತರಣೆಯಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ವಿಷಯವಾಗಿತ್ತು.

ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ

ಜ್ವಾಲಮಾಲ ಡಾಟ್ ನ್ಯೂಸ್