ಮಕ್ಕಳಲ್ಲಿರುವ ಧಾರ್ಮಿಕ ಆಸಕ್ತಿ ಅಭಿರುಚಿಯನ್ನುನಗುರುತಿಸುವಂತಹ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತಾ ಇಂದು ನಮ್ಮೊಂದಿಗೆ ಗೌರಿಬಿದನೂರಿನ ಶ್ರಾವಣಿ ಹಾಗು ಬೆಂಗಳೂರಿನ ಹರಿಹಂತ ಜೈನ್ ನಮ್ಮೊಂದಿಗಿದ್ದಾರೆ. ಬನ್ನಿ ಮೊದಲು ಶ್ರಾವಣಿ ಬಗ್ಗೆ ತಿಳಿದುಕೊಳ್ಳೋಣ . ಗೌರಿಬಿದನೂರಿನ 8 ವರ್ಷದ ಹೆಣ್ಣು ಮಗಳು ಇವಳು . ಶ್ರಾವಣಿ ಪ್ರತಿನಿತ್ಯ ಸ್ತೋತ್ರಕಲಿಯುವಲ್ಲಿ ಹಾಗೂ ಜಿನಭಜನೆಗಳನ್ನು ಕಲಿಯುತ್ತದ್ದಾಳೆ. ಈ ಬಾರಿ ತುಮಕೂರಿನಲ್ಲಿ ನಡೆದ ಜಿನಭಜನಾ ಕಾರ್ಯಕ್ರಮದಲ್ಲೂ ಕೂಡ ಇವಳು ಭಾಗವಹಿಸಿದ್ದಾಳೆ. ಕ್ರೀಡೆಗಳಲ್ಲೂ ಸಹ ಮುಂದಿದ್ದಾಳೆ. ಈಗ ಚಿಗುರೊಡೆಯುತ್ತಿರುವ ಈ ಧರ್ಮದ ಕುಡಿಯನ್ನು ಪ್ರೋತ್ಸಾಹಿಸಿ ಬೆಳೆಸೋಣ ಆಕೆಯೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಹುರಿದುಂಬಿಸೋಣ.
ಶ್ರಾವಣಿಯನ್ನು ಮಾತನಾಡಿಸಿದಾಗ ಅವಳು ಅವರ ಹಿನ್ನೆಲೆಯನ್ನು ನಮ್ಮೊಂದಿಗೆ ಹಂಚಿಕೊಂಡರು.
ನಿರೂಪಕಿ: ಹಾಯ್ ಶ್ರಾವಣಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ ನೀವು.
ಶ್ರಾವಣಿ : ಥ್ಯಾಂಕ್ಯೂ
ನಿರೂಪಕಿ: ಏನು ಓದುತ್ತಿರುವುದು ನೀವು?
ಶ್ರಾವಣಿ : 3ನೇ ತರಗತಿ
ನಿರೂಪಕಿ: ನಿಮ್ಮ ತಂದೆ ತಾಯಿ ಹೆಸರೇನು ?
ಶ್ರಾವಣಿ : ತಂದೆ : ಸಂತೋಷ್, ತಾಯಿ ಉಮಾ ಸಂತೋಷ್
ನಿರೂಪಕಿ : ನೀವು ತುಂಬಾ ಚೆನ್ನಾಗಿ ಸ್ತೋತ್ರಗಳನ್ನು ಹೇಳುತ್ತೀರಂತೆ ?
ಶ್ರಾವಣಿ : ಹೌದು ನನ್ನ ಅಮ್ಮ ಹೇಳಿಗೊಟ್ಟಿದ್ದು
ನಿರೂಪಕಿಯು ಶ್ರಾವಣಿಯನ್ನು ಮಾತನಾಡಿಸಿ ಅವಳು ಕಲಿತಿರುವಂತಹ ಸ್ತೋತ್ರಗಳನ್ನೆಲ್ಲಾ ಹಾಡಿಸಿ ಹೇಳಿಸಿದರು. ತುಂಬಾ ಚೆನ್ನಾಗಿ ತಪ್ಪಿಲ್ಲದೇ ಶ್ರಾವಣಿಯು ಹೇಳಿದರು. ನಂತರ ಶ್ರಾವಣಿ ಜ್ವಾಲಾಮಾಲಾದಲ್ಲಿ ನನಗೆ ಅವಕಾಶಮಾಡಿಕೊಟ್ಟ ತಮಗೆಲ್ಲ ಧನ್ಯವಾದಗಳನ್ನು ತಿಳಿಸಿದಳು.
ಜ್ವಾಲಾಮಾಲಾದಿಂದ ಮತ್ತೊಂದು ಕಾರ್ಯಕ್ರಮ ಮೂಡಿಬರುತ್ತಿದೆ ಅದೇನೆಂದರೆ ವಾರದ ಸುದ್ದಿಗಳನ್ನೆಲ್ಲಾ ಒಂದೆಡೆ ವೀಕ್ಷಿಸಬಹುದು. ಈ ಕಾರ್ಯಕ್ರಮದ ಮಾಗಿತಿ ಇಲ್ಲಿದೆ. ವಾರದುದ್ದಕ್ಕೂ ನಡೆಯುವ ಧಾರ್ಮಿಕ ವಿಚಾರಗಳ ಕಾರ್ಯಕ್ರಮಗಳ ಸಂಪೂರ್ಣ ಸುದ್ದಿ ವಿವರ ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿಪ್ರತಿ ಶನಿವಾರ ಸಂಜೆ 7 ರಿಂದ 7.30 ಕ್ಕೆ ಪ್ರಸಾರವಾಗಲಿದೆ ಇಲ್ಲಿ ಮೂಡಿಬರುವ ಮತ್ತೊಂದು ಕಾರ್ಯಕ್ರಮ ಜ್ವಾಲಾಮಾಲ ಸಾಧಕರ ಹೆಜ್ಜೆ. ನಮ್ಮಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಹಾದಿ, ಕಾರ್ಯ ವೈಖರಿ ಅವರ ನುಡಿಗಳಲ್ಲಿ ಪ್ರತಿ ಭಾನುವಾರ ಸಂಜೆ 4.30 ರಿಂದ 5 ರವರೆಗೆ ಪ್ರಸಾರವಾಗಲಿದೆ ಜ್ವಾಲಾಮಾಲಾ ಸಾಧಕರ ಹೆಜ್ಜೆ . ಇವೆಲ್ಲಾ ಕಾರ್ಯಕ್ರಮಗಳು ಜ್ವಾಲಾಮಾಲಾ ಡಾಟ್ ನ್ಯೂಸ್ ಫೇಸ್ ಬುಕ್ ಪೇಜ್ ನಲ್ಲಿ ಹಾಗೂ ಜ್ವಾಲಾಮಾಲಾ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲೂ ಲಭ್ಯವಿದೆ. ಕಾರ್ಯಕ್ರಮಕ್ಕೆ ಮತ್ತೊಮ್ಮೆ ಸ್ವಾಗತ.
ನಮ್ಮ ಮುಂದೆ ಇರುವ ಮತ್ತೊಬ್ಬ ಹುಡುಗ ಈ ಹರಿಯಂತ್ ಜೈನ್ . ಬನ್ನಿ ಅವನ ಬಗ್ಗೆ ತಿಳಿದುಕೊಳ್ಳೋಣ. ಬೆಂಗಳೂರಿನ ನಿವಾಸಿಯಾದ ಹರಿಯಂತ್ ಈತ ತನ್ನ ಹಲವಾರು ಚಟುವಟಿಕೆಗಳ ನಡುವೆ ಧರ್ಮದ ವಿಚಾರಗಳಲ್ಲಿನ ತನ್ನ ಅಭಿರುಚಿಯನ್ನು ಅದಕ್ಕೆ ಹೊಂದಿಸಿಕೊಂಡು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾನೆ. ರುಬಿಸ್ ಕ್ಯೂಬ್ ಸಾಲ್ವ್ ಮಾಡುತ್ತಾ ಮಾಡುತ್ತಾ ಅದಕ್ಕೆ ಧರ್ಮಕ್ಕೆ ಸಂಬಂಧ ಪಟ್ಟ ಚಿತ್ರಗಳನ್ನು ಕ್ಯೂಬ್ ಗಳಲ್ಲಿ ರಚಿಸುತ್ತಾ ಬಂದಿದ್ದಾನೆ. ಮಹಾವೀರರ ಸಮಾವಸರಣದ ಚಿತ್ರ, ಪರಮಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಭಾವಚಿತ್ರ ಹೀಗೆ ಹಲವಾರು ಚಿತ್ರಗಳನ್ನು ರಚಿಸಿದ್ದಾನೆ. ಇದಕ್ಕೆ ಅವನಿಗೆ ಗಿನ್ನೀಸ್ ವರ್ಡ್ ರೆಕಾರ್ಡ್ ಬುಕ್ ಹಾಗೂ ನ್ಯಾಷನಲ್ ರೆಕಾರ್ಡ್ ಕೂಡ ಬಂದಿದೆ. ಬನ್ನಿ ಅವನೊಂದಿಗೆ ಮಾತನಾಡೋಣ.
ನಿರೂಪಕಿ: ಹರಿಹಂತ್ ಏನು ಓದುತ್ತಿದ್ದೀರಾ ನೀವು?
ಹರಿಹಂತ್ : 8ನೇ ತರಗತಿ ಓದುತ್ತಿದ್ದೇನೆ.
ನಿರೂಪಕಿ : ನಿಮ್ಮ ತಂದೆ ತಾಯಿ ಹೆಸರೇನು?
ಹರಿಹಂತ್ ತಂದೆ ಅರುಣ್ ಕುಮಾರ್ / ತಾಯಿ ಅರ್ಚನಾ
ನಿರೂಪಕಿ : ನಿಮಗೆ ಇನ್ನೂ ಏನೆಲ್ಲಾ ಅಭ್ಯಾಸಗಳಿವೆ?
ಹರಿಹಂತ್ : ಕೀಬೋರ್ಡ್ ನುಡಿಸುತ್ತೇನೆ. ಹಾಕಿ ಆಡುತ್ತೇನೆ. ಚಿತ್ರಕಲೆ ಬರೆಯುತ್ತೇನೆ.
ನಿರೂಪಕಿ : ರೂಬಿಸ್ ಕ್ಯೂಬ್ ನಿಂದ ಏನೆಲ್ಲಾ ಕೆಲಸ ಮಾಡುತ್ತೀರಾ ?
ಹರಿಹಂತ್ : ನಾನು 40 ವಿವಿಧ ಬಗೆಯ ಕ್ಯೂಬ್ ಗಳನ್ನು ಸರಿಮಾಡಿ ಬಗೆಹರಿಸುತ್ತೇನೆ.
ನಿರೂಪಕಿ : ನಿಮಗೆ ಈ ಅಭ್ಯಾಸ ಎಲ್ಲಿಂದ ಬಂದಿತು?
ಹರಿಹಂತ್ : ಪ್ರತಿವರ್ಷ ನಾನು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ , ಮೂರು ವರ್ಷದ ಹಿಂದೆ ಶಿಬಿರಕ್ಕೆ ಹೋಗಿದ್ದಾಗ ನಾನು ಅದನ್ನು ಅಲ್ಲೇ ಕಲಿತೆ.
ನಿರೂಪಕಿ : ನಿಮಗೆ ಗಿನ್ನೀಸ್ ರೆಕಾರ್ಡ್ ಬುಕ್ ಬಂದಿದ್ದು ಅದು ಹೇಗೆ ನಿಮಗೆ ಲಭಿಸಿತು ಎಂದು ತಿಳಿಸುತ್ತೀರಾ ?
ಹರಿಹಂತ್ : ಈ ಅವಕಾಶ ನನಗೆ ನನ್ನ ಗುರುಗಳಿಂದ ದೊರೆಯಿತು. ನಾವು ಮೇ 5 ನೇ ತಾರೀಖು 2019 ರಲ್ಲಿ ನಡೆಯಿತು. ಇದರಲ್ಲಿ ನಾವು ಟೈಗರ್ ಚಿತ್ರವನ್ನು ಬಿಡಿಸಿದ್ದೇವೆ.
ನಿರೂಪಕಿ : ನ್ಯಾಷನಲ್ ರೆಕಾರ್ಡ್ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಹರಿಹಂತ್ : ಈ ರೆಕಾರ್ಡ್ ನಮ್ಮ ಗುರುಗಳು ಮಾಡಿದ್ದು ನೋಡಿ ನಾನು ಒಬ್ಬನೇ ಮಾಡಬೇಕು ಎಂದು ಮಾಡಿದ್ದು 29 ನೇ ಡಿಸೆಂಬರ್ 2019 ರಲ್ಲಿ ನಡೆಯಿತು. ನಂತರ ಈಗ ನಮಗಾಗಿ ಯಾವುದಾದರೂ ಒಂದು ಚಿತ್ರವನ್ನು ಮಾಡಿ ತೋರಿಸುತ್ತೀರಾ ಎಂದಾಗ ಅವರು ಕ್ಯೂಬ್ ಗಳನ್ನೆಲ್ಲಾ ಒಮದೆಡೆ ಸೇರಿಸಿ ಜೈನ ಸಮುದಾಯದ ಚಿಹ್ನೆಯನ್ನು ಮಾಡಿ ತೋರಿಸಿದರು. ಅಲ್ಲದೇ ಸ್ತೋತ್ರಗಳನ್ನೂ ಹೇಳುವುದರಲ್ಲಿ ಪರಿಣಿತರಾಗಿದ್ದಾರೆ. ಹೀಗೆ ನಿಮ್ಮ ಮಕ್ಕಳಲ್ಲೂ ಇಂತಹ ಪ್ರತಿಭೆಗಳಿದ್ದರೆ ಹಾಗೂ ಅಭಿರುಚಿಗಳಿದ್ದರೆ ಖಂಡಿತವಾಗಿ ನಮಗೆ ತಿಳಿಸಿ ನಾವು ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತೇವೆ. ಪ್ರತಿ ವಾರ ವೀಕ್ಷಿಸಿ ಧರ್ಮದ ಕುಡಿ ಕಾರ್ಯಕ್ರಮ ಪ್ರತಿ ಭಾನುವಾರ ಬೆಳಗ್ಗೆ 10.30 ಕ್ಕೆ ನಿಮ್ಮ ಜ್ವಾಲಾ ಮಾಲಾ ಡಾಟ್ ನ್ಯೂಸ್ ನಲ್ಲಿ













