ಶ್ರುತ ಪಂಚಮಿ 27 05 2020

ಜೈ ಜಿನೇಂದ್ರ ವೀಕ್ಷಕರೆ ಇಂದು ಶ್ರುತ ಪಂಚಮಿ ಜೈನ ಶ್ರಾವಕರ ಪ್ರತಿಯೊಬ್ಬರ ಮನೆಯಲ್ಲೂ ಪೂಜೆ ನಡೆಯುತ್ತಿದೆ. ಬನ್ನಿ ನೋಡಿ ಬರೋಣ.

ಜೈಷ್ಠ ಶುದ್ದ ಪಂಚಮಿಯಂದು ಆಚರಿಸಲಾಗೂವ ಶ್ರುತ ಪಂಚಮಿ ಜೈನರ ಪ್ರಮುಖ ಪರ್ವಗಳಲ್ಲಿ ಒಂದು. ಇಂದು ಜಿನವಾಣಿ ಮಾತೆ ಶ್ರುತಸ್ಕಂದ ಆರಾಧನೆ ಮಾಡಲಾಗುತ್ತದೆ. ತೀರ್ಥಂಕವಾಣಿಯೇ ಸರಸ್ವತಿ ಎಂದು ಶಾಸ್ತ್ರಗಳ ಪೂಜೆ ನಡೆಸಲಾಗುತ್ತದೆ. ಶ್ರುತ ಪಂಚಮಿಯ ಮಹತ್ವದ ಕಥೆಯನ್ನಿಗಾಗಲೆ ಜ್ವಾಲಮಾಲ ಡಾಟ್ ನ್ಯೂಸ್ ನಿಂದ ಪ್ರಸ್ತುತ ಪಡಿಸಲಾಗಿದೆ.

ನಮ್ಮ ಆಗಮ ಗ್ರಂಥಗಳ ರಚನೆಯಾದ ಇಂತಹ  ಪುಣ್ಯದ ದಿನದ ಆಚರಣೆಯನ್ನು ಸರ್ವ ಭಟ್ಟಾರಕರುಗಳ ನಿರ್ದೇಶನದಂತೆ ಏಕಕಾಲದಲ್ಲಿ ಶ್ರುತ ಪೂಜೆ ಹಾಗೂ ಸ್ವಾದ್ಯಾಯ ಮಾಡುವುದರ ಮೂಲಕ ಶ್ರುತ ಪಂಚಮಿಗೆ ನಿಜವಾದ ಅರ್ಥಸಿಗುವ ಒಂದು ಪ್ರಯತ್ನ ನೀಡಲು ಜ್ವಾಲಮಾಲ ಡಾಟ್ ನ್ಯೂಸ್ ಮೂಲಕ ಕರೆ ನೀಡಲಾಗಿತ್ತು.

ಈ ಒಂದು ಸಂಕಲ್ಪದಲ್ಲಿ ಪ್ರತಿಯೊಬ್ಬರು ಭಾಗವಹಿಸಿದ್ದು ಪ್ರಭಾವನೆಗಾಗಿ ದೃಶ್ಯಾವಳಿಗಳನ್ನು ಜೋಡಿಸಲಾಗಿದೆ. ಸುಮಾರು 800ವರ್ಷಗಳ ಹಿಂದಿನ ಪ್ರತಿ ಏಕೈಕ ಧವಲ ತಾಳೆಗರಿ ಇರುವಂತ ನಾಡು ಮೂಡುಬಿದಿರೆಯಲ್ಲಿ ಶ್ರೀಗಳವರ ಸಾನಿಧ್ಯದಲ್ಲಿ ನಡೆದ ಶ್ರುತ ಪೂಜೆ ನೀವು ನೋಡುತ್ತಿದ್ದಿರಿ.

ಹಾಗೂ ಹೊಂಬುಜ ಶ್ರೀಗಳ ಸನಿಧ್ಯದಲ್ಲಿ ನಡೆದ ಜಿನವಾಣಿ ಪೂಜೆಯನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.

ನೀವೀಗ ನೋಡುತ್ತಿರುವುದು ಆರತೀ ಪುರ ಜೈನ ಮಠದಲ್ಲಿ ನಡೆದ, ಶ್ರೀಗಳವರ ಸಾನಿಧ್ಯದಲ್ಲಿ ನಡೆದ ಶ್ರುತ ಪೂಜೆ.

ಇದು ಸೋಂದಾ ಮಠ ಸುಧಾ ಪುರದಲ್ಲಿ ನಡೆದ ಪೂಜೆ.

ಜ್ವಾಲಮಾಲ ಡಾಟ್ ನ್ಯೂಸ್ ನ ಅಭಿಮಾನಿಗಳ ಈ ಅದ್ಬುತ ಈ ಸ್ಪಂದನೆಗೆ ಅನಂತ ಅನಂತ ವಂದನೆಗಳನ್ನ ಸಲ್ಲಿಸುತ್ತ.

ಈ ಕಾರ್ಯಕ್ರಮದ ಪ್ರಾಯೋಜಕರು ಬಿ.ಆರ್ ಶೀತಲ್ ಕುಮಾರ್ ಎಸ್. ಆರ್.ಎಫ್. ಡಿಟೆಕ್ಟಿವ್ ಅಂಡ್ ಸೆಕ್ಯೂರಿಟಿ ಸರ್ವಿಸ್ಸ್.