ಜೈನ ಚರಿತ್ರೆ

ಬಂಧುಗಳೆ ಮನುಷ್ಯ ಮೊದಲಿನಿಂದಲು ಸ್ವತಂತ್ರವಾಗಿರಲು ಬಯಸುತ್ತಾನೆ, ಸ್ವತಂತ್ರವನ್ನು ಹುಡುಕುತ್ತಾನೆ. ಚಿಂತೆ, ನೋವು, ಅಸಹಾಯಕತೆ, ದುಖಃ, ಜೀವನ್ಮರಣ ಹೀಗೆ ಇದೆಲ್ಲದರಿಂದ ಮುಕ್ತಿ ಹೊಂದುವ ಬಯಕೆಯೇ ಹಲವಾರು ಧರ್ಮಗಳು ನಂಬಿಕೆಗಳು ಆಚರಣೆಗಳ ಹುಟ್ಟಿಗೆ ಕಾರಣವಾಗಿದೆ. ಉನ್ನತ ಜ್ಞಾನವನ್ನು ಪಡೆಯಲು ಅನೇಕ ಮಾರ್ಗಗಳಿವೆ ಅವುಗಳಲ್ಲಿ ಒಂದು ಅನುಯಾಯಿಗಳಿಗೆ ಸ್ವತಂತ್ರ ಅಥವ ಮುಕ್ತಿ ಮಾರ್ಗದ ಸೂತ್ರಗಳನ್ನು ತಿಳಿಸುವುದು, ಸೂಕ್ತ ಹಾದಿಯನ್ನು ಸೂಚಿಸುವುದು.

ಪ್ರಸ್ತುತ ಸ್ಥಿತಿಗತಿಗಳಲ್ಲಿ ಇದರ ಅವಶ್ಯಕತೆ ಅತ್ಯಂತ ಅನಿವಾರ್ಯವಾಗಿದ್ದು ಇಂತಹ ಉತ್ತಮ ಹಾದಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಕೊಂಡಿರುವ ಒಂದು ಉದಾಹರಣೆಯನ್ನು ಅಧ್ಯಯನ ಮಾಡಡುವುದ್ದಾದರೆ, ಜೈನ ಜಾತಿಯಲ್ಲ ಜೀವನ ಶೈಲಿ.

ಖ್ಯಾತ ಚಲನಚಿತ್ರ ನಟರು ಶ್ರೀಧರ್ ರವರು ಮಾತನಾಡಿ (ನಮಸ್ಕಾರ, ನನಗೆ ವೈಯಕ್ತಿಕವಾಗಿ ಜೈನ ಧರ್ಮದ ಬಗ್ಗೆ ಬಹಳ ಗೌರವ ಪ್ರೀತಿ. ಹಲವು ವರ್ಷಗಳ ಹಿಂದೆ ಹಲವು ಕಾರಣಾಂತರಗಳಿಂದ ಜೈನ ಧರ್ಮದ ಬಗ್ಗೆ ವಿಶೇಷವಾದಂತಹ ಅಧ್ಯಾಯನವನ್ನ ಮಾಡುವಂತಹ ಭಾಗ್ಯ ನನಗೆ ಸಿಕ್ಕಿತು. ಆ ಸಮಯದಲ್ಲಿ ಹಗಲು ರಾತ್ರಿ ಎಷ್ಟೊ ತಿಂಗಳು ನಾನು ಜೈನ ಧರ್ಮದ ಬಗ್ಗೆ ಓದುವುದಕ್ಕೆ ಅಧ್ಯಾಯನ ಮಾಡಿದೆ).

ನಾಡೋಜ ಡಾ|| ಮನು ಬಳಿಗಾರ್ ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ ರವರು ಮಾತನಾಡಿ (ಜ್ವಾಲಮಾಲ ನ್ಯೂಸ್ ರವರು ಜೈನ ಸಿದ್ಧಾಂತ ತತ್ವಗಳು, ಆಹಾರ ಪದ್ಧತಿ ಜೀವನ ಶೈಲಿ ಇತ್ಯಾದಿಗಳ ಮೇಲೆ ಒಂದು ಕಾರ್ಯಕ್ರಮವನ್ನ ಹಮ್ಮಿಕೊಂಡಿರುವುದು ಸ್ಥುತ್ಯಾರವಾಗಿರುವಂತಹದ್ದು).

ಈ ನಿಟ್ಟಿನಲ್ಲಿ ಜೈನ ಧರ್ಮದ ಕರುಣೆ ಸಹನೆ ಅಹಿಂಸೆಯಿಂದ ಕೂಡಿದ ಹಾದಿ ದಿನನಿತ್ಯದ ಜಂಜಾಟದೊಂದಿಗೆ ಸಮಸ್ಯೆಗಳಿಗೆ ಸಮಾದನವನ್ನು ನೀಡುತ್ತದೆ. ಜಿನ ಅಂದರೆ ಜನ್ಮಗಳನ್ನು ಇಂದ್ರಿಯಗಳನ್ನು ಗೆದ್ದವನ್ನಾಗಿಸುವ ಸುವರ್ಣ ಅವಕಾಶವನ್ನು ಕಲ್ಪಿಸುತ್ತದೆ. ಜೈನ ಧರ್ಮದ ತತ್ವಗಳಾದ ಅಹಿಂಸೆ, ಜೀವಿಸು ಜೀವಿಸಲು ಬಿಡು,ಖ್ಯಾತ ಚಲನಚಿತ್ರ ನಟರು ಶ್ರೀಧರ್ ರವರು ಮಾತು ಮುಂದುವರಿಸಿ (ಸತ್ವೇಶು ಮೈತ್ರಿ ಗುಣಿಶು ಪ್ರಮೋದಂ ಕ್ಲಿಷ್ಟೇಶು ಜೀವೇಶು ಕೃಪಾಪರಂತಂ ಮಾಧ್ಯಸ್ತವಾವಂ ವಿಪರಿತ ಭುದಂ ಸದ ಮಾಮಾತ್ಮ ವಿಧದಾತು ದೇವ. ಇದು ಜೈನ ಧರ್ಮದ ಒಂದು ಸಾಮಾನ್ಯ ಶ್ಲೋಕ, ಬಹುಶಃ ಇದು ಅತ್ಯಂತ ದೊಡ್ಡ ಶಕ್ತಿಯೂಳ್ಳ ಸತ್ವವುಳ್ಳ ಶ್ಲೋಕ ಕೂಡ. ಇದರ ಅರ್ಥ ಸತ್ವೇಶು ಮೈತ್ರಿ ಸಾತ್ವಿಕರು ಸತ್ವ ಇರುವಂತಹ ಕಡೆ ನಾನು ನನ್ನ ಪ್ರೀತಿಯನ್ನು ಅದರಕಡೆ ಕೊಡುವಂತೆ ಮಾಡು ಅಲ್ಲಿ ಮೈತ್ರಿಯನ್ನು ಮಾಡುವಂತೆ ಮಾಡು, ಯಾರು ಸ್ಥತ್ವಿಕರಾಗಿದ್ದಾರೊ ಯಾರು ಒಳ್ಳೆ ನಡತೆ ಇದೆಯೋ ಅವರ ಹತ್ತಿರ ನಾನು ಮೈತ್ರಿಯನ್ನು ಮಾಡುವಹಾಗೆ ಮಾಡಪ್ಪ ದೇವರೆ. ಗುಣಿಶು ಪ್ರಮೋದಂ, ಉತ್ತಮ ಗುಣವನ್ನು ನೋಡಿದ್ದಾಗ ನನ್ನ ಹೃದಯದಲ್ಲಿ ಒಂದು ಆನಂದವನ್ನು ಉಂಟ್ಟಾಗಲ್ಲಿ ಅದರಿಂದ ನನಗೆ ಸಂತೋಷವಾಗಲ್ಲಿ ಅದನ್ನು ನೋಡಿ ಆನಂದಪಟ್ಟು ಪ್ರಶಂಸಿಸುವಂತ್ತಾಗಲಿ ಅದರ ಬಗ್ಗೆ ಗೌರವ ಉಂಟಾಗುವ ರೀತಿಯಲ್ಲಿ ನನ್ನ ವ್ಯಕ್ತಿತ್ವ ಇರಲಿ. ಕ್ಲಿಷ್ಟೇಶು ಜೀವೇಶು ಕೃಪಾಪರಂತಂ, ಯಾವ ಜೀವಿಗಳು ಕಷ್ಟದಲ್ಲಿ ಇದೆಯೋ ದುಃಖದಲ್ಲಿ ಇದೆಯೋ ಅದನ್ನು ಕಂಡ ತಕ್ಷಣ ನನ್ನ ಹೃದಯದಲ್ಲಿ ಒಂದು ಸ್ಪಂದನೆಯಾಗಲ್ಲಿ ನನ್ನ ಅಂತಕರಣದಲ್ಲಿ ಸ್ಪಂದನೆಯಿಂದ ಅದರ ಬಗ್ಗೆ ಕರುಣೆ ಉಂಟಾಗಲ್ಲಿ ನಾನು ಅದಕ್ಕೆ ಸಹಾಯ ಮಾಡುವ ಹಾಗೆ ಅದಕ್ಕೆ ಎನಾದರೂ ಒಳ್ಳೆಯದನ್ನು ಮಾಡುವುದರ ಬಗ್ಗೆ ಮನಸ್ಸು ನನ್ನಲ್ಲಿ ಬರಲಿ ಅನ್ನುವುದು. ಮಾಧ್ಯಸ್ತವಾವಂ ವಿಪರಿತ ಭುಧಂ, ಇಲ್ಲಿಯವರೆಗೂ ಒಳ್ಳೆಯವದ ಬಗ್ಗೆ ಹೇಳಿದೆವು, ಕೆಟ್ಟವರ ಬಗ್ಗೆ ದ್ವೇಷ ಅಲ್ಲ ಕೋಪ ಅಲ್ಲ ಮಾಧ್ಯಸ್ತವಾವಂ ಅಂದರೆ ನಾನು ಅವರನ್ನ ವಿಮರ್ಷೆ ಮಾಡುವುದಿಲ್ಲ ಅವರ ಬಗ್ಗೆ ನಾನು ಏನ್ನು ಅಂದಿಕೊಳ್ಳುವುದ್ದಿಲ್ಲಾ ಅದರೆ ಅವರಿಂದ ನಾನು ದೂರ ಇರುತ್ತೇನೆ. ಹೀಗೆ ಮನಷ್ಯನ ನಡವಳಿಕೆಗೆ ಸಂಬಂಧ ಪಟ್ಟಂತ ವಿಷಯದಲ್ಲಿ ಈ ಶ್ಲೋಕ ಇದೆ ಬಹುಷಃ ಈ ಒಂದು ಶ್ಲೋಕವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯನ ಜೀವನ ಅತ್ಯಂತ ಸುಖಮಯ, ವ್ಯಾವಹಾರಿಕವಾಗಲ್ಲಿ ಆಧ್ಯಾತ್ಮಿಕವಾಗಿ ಹಾಗಲ್ಲಿ ಮನುಷ್ಯನ ಒಂದು ಮಾರ್ಗ ಬಹಳ ಉನ್ನತಿಗೆ

ಜೈನ ಧರ್ಮ ಅನ್ನುವುದು ಒಂದು ಧರ್ಮವಾಗಿರದೆ ಒಂದು ತರ್ಕ ಶಾಸ್ತ್ರವಾಗಿದೆ. ಬದುಕಲು ಬೇಕಾದ ದಾರಿಯಾಗಿದೆ, ಒಬ್ಬ ವ್ಯಕ್ತಿ ಇದನ್ನು ಆಳವಾಗಿ ಅಧ್ಯಯನ ನಡೆಸಿದರೆ ಮಂದಿರ ನಿರ್ಮಾಣಕ್ಕಿಂತ ಮುಖ್ಯವಾಗಿ ಒಬ್ಬ ವ್ಯಕ್ತಿ ಹಿಂಸೆ ಮಾರ್ಗವನ್ನು ತೊರೆದು ಅಹಿಂಸಾತ್ಮಕನಾಗಿ ಪರಿವರ್ತನೆಯಾದರೆ ಅದಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಅತಿ ಪುರಾತನವಾದ ಜೈನ ಧರ್ಮದ ಅನುಯಾಯಿಗಳು ಕಾಲಚಕ್ರದ ಸುಳಿಯಲ್ಲಿ ಸಿಕ್ಕಿ ಕಡಿಮೆಯಾದರು ಈ ಹಾದಿಯನ್ನು ಅನುಸರಿಸಿದವರು ವಿಶ್ವದಲ್ಲಿ ಬಹಳ ಜನ ಒಪ್ಪಿದವರು ಅಪ್ಪಿದವರು ಅನೇಕ ಜನ ಈಗಲೂ ಭಾರತದಲ್ಲಿ ಐವತ್ತು ಲಕ್ಷಕ್ಕು ಹೆಚ್ಚು ಜನ ನೀವೇ ನಿಮ್ಮ ಭವಿಷ್ಯದ ಬರಹಗಾರರು ನಿಮ್ಮ ಇತಿಹಾಸದ ರಚನೆಕಾರರು ನೀವು ಮಾಡಿದ ಪಾಪ ಪುಣ್ಯ ಲಾಭ ನಷ್ಟಕ್ಕೆ ನೀವೇ ಜವಬ್ಧಾರರು ಎನ್ನುವ ಕರ್ಮ ಸಿದ್ಧಾಂತವನ್ನು ಶಮಣ ಪರಂಪರೆಯನ್ನು ಅರ್ಥ್ಯಸಿಕೊಂಡಿದ್ದಾರೆ. ಆದ್ದರಿಂದಲ್ಲೆ ಜೈನ ಸಮುದಾಯ ಸಾಕ್ಷರತೆಯಲ್ಲಿ ಅತ್ಯಂತ ಮುಂದೆ ಇದ್ದು ಶೇಕಡ 94ರಷ್ಟಿದೆ. ಭಾರತದಲ್ಲಿ ಗೃಹ ಉಧ್ಯೊಗದಲ್ಲಿ ಕೂಡ ಇವರ ಸ್ಥಾನ ಉನ್ನತ ಮಟ್ಟದಾಗಿದೆ, ದೇಶದ ಆರ್ಥಿಕ ಪ್ರಗತಿ ವಿಚಾರದಲ್ಲಿ ಅವರು ಬಹಳ  ಮುಂದೆ ಇದ್ದಾರೆ,

ಜೈನ ಜೀವನ ಶೈಲಿ ಜಗತ್ತಿನ ಎಲ್ಲಾ ಜೀವನ ಶೈಲಿಗಿಂತ ಸ್ವಸ್ತ್ಯವಾದುದು ಎಂದು ವಿಶ್ವಮಾನ್ಯ ಪಡೆದಿದೆ. ಜೈನ ತತ್ವವಾದ ಅಹಿಂಸಾ ಮಾರ್ಗ ಗಾಂಧಿ, ಲೂಥರ್ ಕಿಂಗ್ ಹೀಗೆ ಅನೇಕ ನೇತಾರರನ್ನು ಪ್ರೇರೆಪಿಸಿದೆ.

ನಾಡೋಜ ಡಾ|| ಮನು ಬಳಿಗಾರ್ ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ ರವರು ಮಾತು ಮುಂದುವರಿಸಿ (ತನ್ನ ಮೂಲ ಉದ್ದೇಶವನ್ನಾಗಿ ಅಹಿಂಸೆಯನ್ನು ಇಟ್ಟು ಕೊಂಡು ಜೈನ ಧರ್ಮ ಜಾರಿಗೆ ಬಂತು. ಇವತ್ತು ವಿಶ್ವಾದ್ಯಂತ ಈ ತತ್ವವನ್ನು ಪಾಲಿಸ ಬೇಕಾಗಿದೆ, ಅಹಿಂಸಾ ತತ್ವ ಅನುವುದ್ದನ್ನ ನಾವು ತಿಳಿದುಕೂಳ್ಳ ಬೇಕು ಜಗತ್ತಿನ ಅನೇಕ ಮಹಾನ್ ನಾಯಕರಿಗೆ ಸ್ಪೂರ್ತಿ ಮಹಾತ್ಮಗಾಂಧಿಜೀಯವರು, ಮಹಾತ್ಮಗಾಂಧಿಜೀಯವರಿಗೆ ಜೈನ ತತ್ವ ಸಿದ್ಧಾಂತ ಈ ಆಹಾರ ಪದ್ದತಿ, ವಿಚಾರ ಪದ್ಧತಿ ಇವೆಲ್ಲ ಬಹಳಷ್ಟು ಮಾಡಿದವು ಎಂದು ಮಹಾತ್ಮಗಾಂಧಿಜೀಯವರು ಹೇಳಿದರು. ಅವರಿಗೆ ಇದಕ್ಕೆ ಕಾರಣವಾದವರು ರಾಯಚಂದ್ ಎನ್ನುವವರು, ಅವರ ಮೂಲಕ ಗಾಂಧಿಜೀಯವರಿಗೆ ಈ ಜೈನ ತತ್ವ ಸಿದ್ಧಾಂತದ ಒಂದು ಪ್ರಭಾವವಾಯಿತು. ಅಂದರೆ ಸತ್ವಿಕಾ ಆಹಾರವಿರ ಬೇಕು, ಸಸ್ಯಾಆಹಾರ, ಹಿಂಸೆ ಸಲ್ಲದು ಕೇವಲ ಪ್ರಾಣಿಗಳಿಗೆ ಅಲ್ಲ ಮನುಷ್ಯರ ಮನಸ್ಸನ್ನು ನೋಯಿಸಯವುದು ಕೂಡ ಹಿಂಸೆ ಅನ್ನುವುದು ಇದರ ಹಿಂದೆ ಇರುವಂತಹ ಒಂದು  ಒಳ ಅರ್ಥ). ಹಾಗಿದ್ದರೆ ಜೈನರು ಎಂದರೆ, ಯಾರು ಜೈನ ಧರ್ಮ ಎನ್ನುವ ವಿಶ್ವ ಧರ್ಮ ಏನ್ನು ಹೇಳುತ್ತದೆ, ಇವರ ಆಚರಣೆ ಹೇಗೆ, ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ಹೋದಾಗ ಬಹಳ ಸಾವಿರಾರು ವರ್ಷಗಳ ಹಿಂದಿನಿಂದಲ್ಲು ಅನೇಕ ವಿಚಾರಕರು, ಪ್ರಚಾರಕರು, ಸುಧಾರಕರು ಈ ಧರ್ಮದ ಮಹತ್ವವನ್ನು ಸಾರಿ ಹೋಗಿದ್ದಾರೆ. ಅವರ್ಯಾರು ದೇವತೆಗಳಾಗಿರಲ್ಲಿಲ್ಲಾ, ಆದರೆ ಇವರೆಲ್ಲರು ಸೈಯಮ, ತಪ, ಆಧ್ಯಾತ್ಮಚರ್ಯಗಳಿಂದ ತಮ್ಮ ದೂರ ದೃಷ್ಟಿಯಿಂದ ಜೀವನ್ಮರಣಗಳಿಂದ ಮುಕ್ತಿಯನ್ನು ಪಡೆದವರಾಗಿದ್ದಾರೆ. ಇವರನ್ನು ಅರಿಯಂತರು ಅಂತರಿಕ ಶತ್ರುಗಳನ್ನು ನಾಶ ಮಾಡಿದವರು, ವಿತ್ತರಾಗಿಗಳು ಎಂದೇಲ್ಲಾ ಹೇಳಲಾಗುತ್ತದೆ. ಇವರಿಗೆ ಬೇರೆಯವರೋಡನೆ ಮೋಹವಾಗಲ್ಲಿ ಅಥವಾ ದ್ವೇಷವಾಗಲ್ಲಿ ಇರುವುದಿಲ್ಲ ಹಾಗೇ ತಾವು ಗಳಿಸಿದ ಜ್ಞಾನವನ್ನು ನಮ್ಮೆಲ್ಲರಿಗೂ ಹಂಚಿದವರಾಗಿದ್ದಾರೆ.
ಜೈನ ಧರ್ಮದಲ್ಲಿ 24 ತೀರ್ಥಂಕರರು ಆಗಿ ಹೋಗಿದ್ದಾರೆ. ಅವರಲ್ಲಿ 24ನೇಯವರಾದ ಮಹಾವೀರರನ್ನು ತಿಳಿಯುವುದಾದರೆ ಸುಮಾರು ಎರಡು ಸಾವಿರದ ಆರುನೂರು ವರ್ಷಗಳ ಹಿಂದೆ ಬಂದ ಅವರ ವ್ಯಕ್ತಿತ್ವ ಉನ್ನತವಾಗಿತ್ತು. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸರ್ವ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಅವರು ತಮ್ಮಿಂದ ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಜೀವಿಸಿದವರು, ತಮಗೆ ಬಂದ ಅನೇಕ ನಿಂದನೆಗಳನ್ನು ಸಹಿಸಿ ಕ್ಷಮಿಸಿದವರು. ಕಠಿಣ ತಪಸ್ಸಿನಿಂದ ಕೇವಲ ಜ್ಞಾನವನ್ನು ಪ್ರಾಪ್ತಿಮಾಡಿಕೊಂಡಿದರು, ಇವರ ಉಪದೇಶಗಳಿಂದ ಸಮಾಜದಲ್ಲಿ ಅನೇಕ ಪರಿವರ್ತನೆಗಳಾದವು ಅದರ ಪರಿಣಾಮವಾಗಿ ಇಂದಿಗೂ ಜನರಲ್ಲಿ ಕರುಣೆ ಸಂದೇಶಗಳು ಅಹಿಂಸೆಯ ಗುಣಗಳು ಅನೇಕರ ಜೀವನವನ್ನು ಸುದಾರಣೆಗೆ ತಂದಿದೆ. ಅವರು ಉಪದೇಶಿಸಿದ ಪ್ರಕಾರ ಯಾವ ಜೀವಿಯನ್ನಾದರು ಕೊಲ್ಲುವುದು ಹೇಗೆ ಸಾದ್ಯ, ನಿಮಗೆ ಪ್ರಾಣವನ್ನು ಕೊಡುವ ಆಧಿಕಾರವಿಲ್ಲವಾದಲ್ಲಿ ಪ್ರಾಣವನ್ನು ಹೇಗೆ ಕಿತ್ತುಕೊಳ್ಳುತ್ತಿರಿ, ನಿಮ್ಮ ಜೀವನದಲ್ಲಿ ನಿಮಗೆ ಆಗುವ ನೋವುಗಳನ್ನು ತಡೆಯುವುದ್ದಕ್ಕೆ ಹಾಗದ ಮೇಲೆ ಇನ್ನೊಂದು ಜೀವಕ್ಕೆ ನೋವು ಕೊಡಲು ಹೇಗೆ ತಯಾರಾಗುತ್ತಿರಿ.
ಹೀಗೆ ಅನೇಕ ಧರ್ಮ ಅಹಿಂಸೆಯನ್ನು ಪ್ರತಿಪಾದಿಸಿದರು ಕೂಡ ಜೀವನದ ಎಲ್ಲ ಘಟ್ಟದಲು ಅಹಿಂಸೆ ಸಿದ್ಧಾಂತವನ್ನು ಪಾಲಿಸುತ್ತದೆ ಜೈನ ಧರ್ಮ ಅದರ ಪ್ರಕಾರ ಪ್ರತಿಯೊಂದು ಜೀವಿಗೂ ಆತ್ಮವಿರುತ್ತದೆ ಪ್ರತಿಯೊಂದು ಜೀವಿಯು ಸ್ವತಂತ್ರವಾಗಿರಲ್ಲು ಬಯಸುತ್ತದೆ. ನೀವು ನೋಡಬಹುದು ಈ ಹಾದಿಯಲ್ಲಿ ಅತ್ಯಂತ ಸರಳ ಜೀವನವನ್ನು ಜೀವಿಸುವ ಸಾಧು ಮುನಿಗಳನ್ನು. ಶುದ್ಧ ಸಸ್ಯಹಾರಯುತ ಸರಳ ಆಹಾರ, ಮಳೆ ಇರಲಿ ಬಿಸಿಲಿರಲ್ಲಿ ಚಳಿ ಇರಲಿ ಬರಿಗಾಲಲಿ ಎಷ್ಟು ದೂರವನ್ನಾದರು ಸರಿ ಕ್ರಮಿಸುವ ದೃಢತೆ ಅವರಲ್ಲಿರುತ್ತದ್ದೆ. ಮಾತನಾಡುವಾಗ ನಡೆಯುವಾಗ ನಡೆಯುವ ದಾರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ನಡೆಯುತ್ತಾರೆ, ಇರುವೆಯಂತಹ ಸೂಕ್ಷ್ಮ ಜೀವಿಗಳಿಗೂ ನಮ್ಮಿಂದ ಹಿಂಸೆಯಾದಿರಲ್ಲಿ ಎನ್ನುವುದು ಭಾವನೆ. ಇದೆ ಸಿದ್ದಾಂತವನ್ನು ಅನುಸರಿಸಿ ಎಲ್ಲಾ ಜೈನ ಅನುಯಾಯಿಗಳು ಸೂಕ್ಷ್ಮ ಜೀವಿಗಳಿಗೂ ತಮ್ಮಿಂದ ಪ್ರಾಣ ಹಾನಿಯಾಗಬಾರದೆಂದು ಶಪತ ಮಾಡುತ್ತಾರೆ, ಸಸ್ಯಹಾರ ಸೇವಿಸುತ್ತಾರೆ. ಸಸ್ಯಹಾರದಲು ಈರುಳ್ಳಿ, ಬೆಳ್ಳುಳ್ಳಿ, ಗೆಡ್ಡೆಗಳು, ಮಷ್ರೊಂ ಇದ್ಯಾವುದನ್ನು ತಿನ್ನುವುದ್ದಿಲ್ಲಾ, ಏಕೆಂದರೆ ಅದನ್ನು ಭೂಮಿಯಿಂದ ಅಗೆದು ತೆಗೆಯುವಾಗ ಅನೇಕ ಸೂಕ್ಷ್ಮ ಜೀವಿ ಜಂತುಗಳಿಗೆ ಹಾನಿಯಾಗುವ ಸಂಬವವಿರುತ್ತದೆ, ಜೊತೆಗೆ ರೆಂಬೆ, ಹೂ, ಹಣ್ಣುಗಳನ್ನಲ್ಲದೆ, ಅದರ ಬೇರನ್ನೆ ಕಡಿದರೆ, ಅದರ ಜೀವದ ಕೊನೆಯಾಗುವುದು ಎನ್ನುವುದು ಒಂದು ಭಾವನೆಯಾದರೆ, ತಮ್ಮ ಸ್ವಸ್ತ್ಯದ ದೃಷ್ಟಿಯಿಂದಲು ನೋಡುವುದ್ದಾದರೆ ಇವುಗಳ ಸೇವನೆಯಿಂದ ಉದ್ರೇಕ ಭಾವನೆಗಳು ಉತ್ಪತ್ತಿಯಾಗುತ್ತದೆ. ಇದು ನಮಗೆ ಸಾಮಾನ್ಯ ವಿಷಯವಾಗಿರುವುದು ವೈಜ್ಞಾನಿಕವಾಗಿ ಗಮನಿಸಿದಾಗ ಅಂಧಕಾರ ಎಲ್ಲಿರುತ್ತದೆ ಅಲ್ಲಿ ಜೀವಿಗಳ ಉತ್ಪತ್ತಿಯಾಗುತ್ತದೆ. ಏಕೆಂದರೆ ಅಲ್ಲಿಗೆ ಸೂರ್ಯನ ಕಿರಣಗಳು ಬೀಳುವುದಿಲ್ಲ, ಇದೆ ಕಾರಣದಿಂದ ಜೈನರು ತಮ್ಮ ದಿನದ ಕೊನೆಯ ಆಹಾರವನ್ನು ಸೂರ್ಯಾಸ್ತದ ಮೊದಲೆ ಸೇವಿಸುತ್ತಾರೆ. ನಾವು ಏನನ್ನು ಸೇವಿಸುತ್ತೇವೆಯೊ ನಮ್ಮ ಭಾವೊದ್ವೇಕಗಳು ಹಾಗೆ ಇರುತ್ತವೆ. ಇಂತಹ ಆಹಾರ ಸೇವನೆಯಿಂದ ಕೋಪ ಕ್ರೋಧದಂತಹ ಅಪಾಯಕಾರಿ ಗುಣಗಳು ಅಲ್ಲಿ ಬೆಳೆಯಬಹುದು. ಅಷ್ಟೇ ಅಲ್ಲಾ ಶುದ್ಧ ಸಸ್ಯಹಾರ ಸೇವನೆ ನಮ್ಮ ಶರೀರದ ಪಚನ ಕ್ರಿಯೆಗೆ ಬಹಳ ಅನುಕೂಲಕರವಾಗಿರುತ್ತದೆ. ಬಹಳ ಸುಲಭವಾಗಿ ಅವುಗಳ ಪೋಷಕಾಂಶಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತವೆ, ವೈದ್ಯರು ಕೂಡ ಅನೇಕ ರೋಗಿಗಳಿಗೆ ಸಾತ್ವಿಕ ಆಹಾರ ಸೇವನೆಯ ಸಲಹೆ ನೀಡುತ್ತಾರೆ,
ಡಾ|| ಬಿ.ಎಂ. ಕಾವ್ಯ ರವರು ಮಾತನಾಡಿ (ಸಸ್ಯಹಾರ ಸೇವನೆಯಿಂದ ಆಗುವಂತಹ ಅನುಕೂಲವನ್ನು ತಿಳಿಸಿದರು).
ಸಾತ್ವಿಕ ಸೇವನೆಯಿಂದ ಸೈಯಮ ಶಕ್ತಿ ಹೆಚ್ಚುತ್ತದೆ, ಅದೇ ಶಕ್ತಿಯಿಂದ ಕಣ್ಣಿನ ಹೊಳಪು ತೇಜಸ್ ಅನ್ನು ಕೊಡುತ್ತದೆ. ಈಗ ಜೈನರಷ್ಟೇ ಅಲ್ಲದೆ ಉತ್ತಮ ಸ್ವಸ್ತ್ಯದ ಅವಶ್ಯಕತೆ ಇರುವ ಪ್ರತಿಯೊಬ್ಬರು ನ್ಯೂಟ್ರಿಶನ್ಸ್ ಉನ್ನತ ಹುದ್ದೆಯಲ್ಲಿರುವವರು ಅನೇಕ ಬೃಹತ್ ಉದ್ಯಮಿಗಳು ಹೀಗೆ ಅನೇಕರು ಜೈನ ಸಿದ್ಧಾಂತವನ್ನು ಒಪ್ಪುತ್ತಾರೆ, ಅವರೊಂದಿಗೆ ಸ್ನೇಹವನ್ನು ಬಯಸುತ್ತಾರೆ. ಕಾರಣ ಜೈನರು ಅರ್ಥಿಕರಾಗಿ ಸದೃಢತೆ ಹೊಂದಲು ಅವರಲ್ಲಿನ ಕಾರ್ಯ ಕ್ಷಮತೆ ಸಂಕಲ್ಪ ಶಕ್ತಿ ದೃಢ ನಿರ್ಧಾರ ಕಾರಣವೆನ್ನುವುದು ಅವರುಗಳು ತಿಳಿದುಕೊಂಡಿರುವ ವಿಷಯ ಇರಬಹುದು.
ಇವರಲ್ಲಿ ತಮ್ಮ ಅಪೇಕ್ಷೆಯನ್ನು ಸಿಮಿತ್ತದಲ್ಲಿಡುವ ಶಕ್ತಿಯಿರುತ್ತದೆ. ತಮ್ಮ ಅಗತ್ಯಕಿಂತ ಹೆಚ್ಚಿನ ಉಳಿದ ಆದಾಯವನ್ನು ಇಲ್ಲದವರ ಸಹಾಯಕ್ಕಾಗಿ ಧಾರ್ಮಿಕ ಕೆಲಸಕ್ಕಾಗಿ ಮೀಸಲಿಡುವುದು ಇವರ ಅಭ್ಯಾಸ ಇವರ ಸಿದ್ದಾಂತ ಇವರ ಜೀವನದಲ್ಲಿ ಹಾಸು ಒಕ್ಕಾಗಿದೆ. ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಅಪರಿಗ್ರಹ ಅವರ ಸಿದ್ಧಾಂತದಲ್ಲಿರುವ ಪ್ರಮುಖ ಅಂಶಗಳು.
ಖ್ಯಾತ ಚಲನಚಿತ್ರ ನಟರು ಶ್ರೀಧರ್ ರವರು ಮಾತು ಮುಂದುವರಿಸಿ (ಜೈನ ಧರ್ಮದಲ್ಲಿ ಈ ಅತ್ಮೋನತಿಯ ಮಾರ್ಗವನ್ನು ಹೇಳುವುದಕ್ಕೆ ಬಹಳ ಮುಖ್ಯವಾದಂತ್ತಹ ಅಣು ವ್ರತಗಳನ್ನು ಅಥವಾ ಮಹಾ ವ್ರತಗಳನ್ನ ಸೂಚಿಸುತ್ತಾರೆ. ಅಹಿಂಸಾ ಸತ್ಯವ್ರತಂ ಅಚೌರ್ಯಂ ಚಕ್ತಾಕಮಾತಂ ಅಪರಿಗ್ರಹತ ಚೆತಿಪ್ರೊಪ್ತೊ ಧರ್ಮತ್ ಸನಾತನಹ, ಅಂದರೆ ಐದು ವ್ರತಗಳು, ಮನುಷ್ಯ ತನ್ನ ಆತ್ಮವನ್ನು ಉದ್ದಾರ ಮಾಡಿಕೊಳ್ಳ ಬೇಕಾದರೆ ಅಳವಡಿಸಿಕೊಳ್ಳಬೇಕಾದಂತಹ ಐದು ವ್ರತಗಳಿದೆ ಎಂದು ಹೇಳುತ್ತಾರೆ. ಅದರಲ್ಲಿ ಮೊದಲನೇಯದು ಅಹಿಂಸಾ ಸತ್ಯವ್ರತ ಅಂದರೆ ಸತ್ಯವನ್ನೇ ಹೇಳು, ಅಚೌರ್ಯಂ ಅಂದರೆ ಕಳ್ಳತನ ಮಾಡದಿರು. ಚಕ್ತಾಕಮಾತಂ ಅಂದರೆ ಕಾಮ ಇಲ್ಲದೆ ಇರುವುದು, ಅಪರಿಗ್ರಹತ ಅಂದರೆ ತನಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟು ಕೊಳ್ಳತ್ತಿನಿ ಹೆಚ್ಚಿನದಕ್ಕೆ ಆಸೆ ಪಡುವುದ್ದಿಲ್ಲಾ ಎಂದರ್ಥ. ಈ ಐದು ವ್ರತವನ್ನು ನಾವು ಪಾಲಿಸಿಕೊಂಡು ಬಂದರೆ ನಮ್ಮ ಜೀವನ ಅತ್ಯಂತ ಸುಖಮಯವಾಗಿರುತ್ತದೆ. ಈ ಜೈನ ಧರ್ಮದಲ್ಲಿ ಬಹಳ ಪ್ರಮುಖ್ಯತೆ ಇರುವುದು ಅಹಿಂಸ ತತ್ವ, ಜೈನಧರ್ಮದಲ್ಲಿ ಅಹಿಂಸ ತತ್ವಕ್ಕೆ ಕೊಟ್ಟಿರುವಷ್ಟು ಪ್ರಾಮುಖ್ಯತೆ ಬಹಳ ಅದ್ಭುತ. ಜೈನ ಧರ್ಮದಲ್ಲಿ ಇರುವಂತ ಒಂದು ವಿಶೇಷವಾದಂತ ವಿಷಯ ಸಂಕಲ್ಪ ಹಿಂಸೆ ಅಥವಾ ಭಾವ ಹಿಂಸೆ ಈ ಒಂದು ತತ್ವ ವಿಶ್ವದ ಎಲ್ಲ ಜ್ಞಾನಿಗಳಿಗು ಬಹಳ ಪರಿಣಾಮ ಬೀರುವಂತಹ ವಿಷಯ).

ಇವರಲ್ಲಿ ತುಂಬ ಸ್ವರಸ್ಯಕರವದ ಮತ್ತೊಂದು ಸಂಗತಿ ಎಂದರೆ ಅವರ ಪರ್ವಗಳಲೊಂದ್ದಾದ ದಶಲಕ್ಷಣ ಪರ್ವ ಎನ್ನುವ ಹತ್ತು ದಿನದ ಪರ್ವದಲ್ಲಿ ಆಚರಿಸುವ ಕ್ಷಮದಿನ ಎನ್ನುವ ವಿಶೇಷ ಆಚರಣೆ. ಅಂದು ತಮ್ಮ ಶತ್ರುಗಳನ್ನಾದಿಯಾಗಿ ಪ್ರತಿಯೊಬ್ಬರೊಂದಿಗೆ ತಿಳಿದೋ ತಿಳಿಯದೋ ತಮ್ಮಿಂದಾದ ತಪ್ಪುಗಳಿಗೆ ಕ್ಷಮೇಯಾಚಿಸುತ್ತಾರೆ. ಇದರಿಂದ ಮಾನವೀಯ ಮೌಲ್ಯಗಳಿಗೆ ಸಂಬಂಧಗಳಿಗೆ  ಅವರುಗಳಲ್ಲಿನ ಪ್ರಾಮುಖ್ಯತೆಯ ಅರಿವಾಗುತ್ತದೆ.

ಕ್ಷಮಾಯಾಚನೆಯಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲಾ ದ್ವೆಷವನ್ನು ಬಳಸುವುದರಿಂದ ಅಂತಿಮವಾಗಿ ಸಿಗುವುದು ಶೂನ್ಯ ಕ್ಷಮೆ ಎನ್ನುವುದು ಮನುಷ್ಯ ನನ್ನು ದೇವತಾ ಮನುಷ್ಯನನ್ನಾಗಿಸುತದ್ದೆ. ನೀವು ಮಂದಿರ ಹಾಗೂ ದೇವಸ್ಥಾನಕ್ಕೆ ತಮ್ಮ ಬಯಕೆಗಳನ್ನು ಅವಶ್ಯಕತೆಗಳಿಗೋಸ್ಕರ ದೇವರಲ್ಲಿ ಪ್ರಾರ್ಥಿಸಲು ದಾವಿಸುತ್ತಿರಾದರೆ, ಜೈನರು ದೈವಿ ಗುಣಗಳನ್ನು ತಮ್ಮದಾಗಿಸಿಕೊಳ್ಳಲು ದೈವತ್ವದ ಅಧ್ಯಾತ್ಮದ ಅನುಕರಣೆಗಾಗಿ ಶಾಶ್ವತ ಮುಕ್ತಿಗಾಗಿ ಬಸದಿಗಳಿಗೆ ತೆರಳುತ್ತಾರೆ.  ಯಾವುದೆ ಆರ್ಥಿಕ ಲಾಭಕ್ಕಾಗಿ ಅಲ್ಲ ಅಧ್ಯಾತ್ಮಿಕ ಲಾಭಕ್ಕಾಗಿ ಅಲ್ಲಿನ ಧನಾತ್ಮಕ ಶಕ್ತಿಯನ್ನು ತಮ್ಮಲ್ಲಿ ತುಂಬಿಕೊಳ್ಳುತ್ತಾರೆ. ವಿಶ್ವದೆಲ್ಲೆಡೆ ಜೈನ ಸಂಸ್ಕೃತಿಯ ಇತಿಹಾಸ  ಅಧ್ಯಾಯನ ನಡೆಯುತ್ತಿದ್ದು, ವಿಶ್ವದ ಬೃಹತ್ ವಿಶ್ವವಿಧ್ಯಾಲಯಗಳಲ್ಲಿ ಈ ಸಿದ್ದಾಂತದ ಬಗ್ಗೆ ಉತ್ಸುಕರಾಗಿದ್ದಾರೆ. ಸಂಶೋಧನೆ ಅಧ್ಯಾಯನ ನಡೆಸುತ್ತಾರೆ. ಹೀಗಿರುವಾಗ ಈ ಸಮಯದಲ್ಲಿ ಇದು ಉಪಯುಕ್ತ ಮಾಹಿತಿ ಎಂದುಕೊಂಡಿದ್ದೇನೆ. ಮನುಷ್ಯತ್ವದ ನೇಲೆಗಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ದೇಹದ ಸ್ವಾಸ್ಯವನ್ನು  ಈ ಪರಿಶುದ್ಧ ವಾತಾವರಣದಲ್ಲಿ ಕಾಪಡಿಕೊಳ್ಳಲು ಸಹಾಯಕಾರಿ ಎಂದು ಭಾವಿಸುತ್ತ ಇನ್ನೂ ಹೆಚ್ಚಿನ ಮಾಹಿತಿಯೊಂದಿಗೆ ನಿಮ್ಮನ್ನು ಭೇಟಿಯಾಗಲ್ಲಿದ್ದೇನೆ ನೋಡುತ್ತೀರಿ ಜ್ವಾಲಮಾಲ ಡಾಟ್ ನ್ಯೂಸ್.

ಹೋಗುತ್ತದೆ) ಇದಕ್ಕಾಗಿಯೇ ತಾನೆ ಇಡಿ ವಿಶ್ವದ ಯುದ್ದ.