ದರ್ಶನ ಪಾಠ ಫಲಿತಾಂಶ

ಜೈ ಜಿನೇಂದ್ರ ವೀಕ್ಷಕರೆ, ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ ಸರ್ವ ಭಟ್ಟಾರಕರಿಗು ಪೂಜ್ಯ ಕಾವಂದರಿಗು ವಂದಿಸುತ್ತ, ಸ್ಪೂರ್ತಿ ನೀಡಿದ ಹೊಂಬುಜ ಶ್ರೀಗಳಿಗೂ ಅಭಿನಂದಿಸುತ್ತ ನಿಮಗೆಲ್ಲಾ ತಿಳಿದಿರುವಂತೆ ಜ್ವಾಲಮಾಲ ನ್ಯೂಸ್ ವತಿಯಿಂದ ಮಕ್ಕಳಿಗಾಗಿ ಸಿಕ್ಕಿರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಜೈನ ಧರ್ಮದ ಸಂಸ್ಕಾರವನ್ನು ಕಲಿಸಿಕೊಡಲು ಧಾರ್ಮಿಕ ಚಟುವಟಿಕೆಗಳನ್ನು ಏರ್ಪಡಿಸಲಾಗಿದ್ದು ಈ ಕಂತಿನಲ್ಲಿ ಮಕ್ಕಳಿಗೆ ವೀಡಿಯೋ ಮೂಲಕ ಬಸದಿ ದರ್ಶನಕ್ಕೆ ಯಾವೆಲ್ಲ ಕ್ರಮವನ್ನು ಅನುಸರಿಸ ಬೇಕು ಯಾವ ಮಂತ್ರಗಳನ್ನು ಸೃತಿಸ ಬೇಕು ಹಾಗೂ ಪುಂಚಗಳನ್ನು ಹೇಗೆ ಇಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡಲಾಗಿತ್ತು. ಅದಕ್ಕೆ ಕಳೆದ ಭಾನುವಾರದಂದು ಪ್ರಶ್ನಾವಳಿ ಇಡಲಾಗಿತ್ತು.

ಮಕ್ಕಳು ಅನೇಕ ಸಂಖ್ಯೆಯಲ್ಲಿ ಭಾಗವಹಿಸಿ ಆಶ್ಚರ್ಯ ಪಡುವಷ್ಟು ಅರ್ಥೈಸಿಕೊಂಡಿದ್ದಾರಲ್ಲದೆ ಉತ್ತಮ ರೀತಿಯಲ್ಲಿ ಭಾಗವಹಿಸಿದ್ದರು. ಅವರುಗಳಲ್ಲಿ ಪ್ರತಿ ಪ್ರಶ್ನೇಗೂ ಉತ್ತಮ ರೀತಿಯಲ್ಲಿ ಉತ್ತರಿಸಿ ಆಯ್ಕೆಯಾದ ಮಕ್ಕಳು ಈ ರೀತಿಯಾಗಿದ್ದಾರೆ.

ಕುಂಥಲ್-ಮೈಸೂರು, ಮಾನ್ಯ-ಬೆಳಗಾವಿ, ಮೋಹಿತ್-ಬೆಂಗಳೂರು, ಕೀರ್ತನ-ಹೊರನಾಡು, ಶ್ರಾವಣಿ-ಗೌರಿಬಿದನೂರು, ದೃತಿ-ತುಮಕೂರು, ಸಾತ್ವಿಕ್-ಹಾಸನ, ಚಿನ್ವಿತ-ಮಾಯಸಂದ್ರ, ರಾಜರತ್ನ-ಬೆಳ್ತಂಗಡಿ, ಭೂಮಿಕ-ಹುಬ್ಬಳ್ಳಿ, ನಿತ್ಯ-ಹೊರನಾಡು.

ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ದರ್ಶನ ಸ್ತುತಿ ಸ್ಪರ್ಧೆಯಲ್ಲಿ ಆಯ್ಕೆಯಾದ ಕೆಲವೇ ಕೆಲವು ಮಹಿಳೆಯರು ಇವರಾಗಿದ್ದಾರೆ.

ನವರತ್ನ-ಹಾಸನ, ಜಯಲಕ್ಷ್ಮಿ-ಹಾವೇರಿ, ರೇವತಿ-ದಡಗ, ನಂದಶ್ರೀ-ಉಡುಪಿ, ತ್ರಿಶಲಾ-ದಡಗ.

ಇನ್ನೂ ಈ ಲಾಕ್ ಡೌನ್ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಅದ್ಬುತ ಸ್ಪಂದನೆ ನೀಡಿದ ಮಕ್ಕಳಿಗೆ ಹಾಗೂ ಪೋಷಕರಿಗೆ ಹೃತ್ಪೂರ್ವಕ ವಂದನೆಗಳು.

ಇಲ್ಲಿಯವರೆಗೆ ಆಯ್ಕೆಯಾದ ಮಕ್ಕಳಿಗೆ ಸರ್ಟಿಫಿಕೇಟ್ ತಲುಪಿಸಲಾಗುವುದು. ಇದರ ತೀರ್ಪುಗಾರರಾಗಿ ಸಹಕರಿಸಿದ ಚಿತ್ತಾ ಜಿನೇಂದ್ರ ಹಾಗೂ ಶ್ವೇತ ನಿಹಾಲ್ ರವರಿಗೂ ಧನ್ಯವಾದಗಳನ್ನು ತಿಳಿಸುತ್ತ. ವೀಕ್ಷಕರೆ ನಮ್ಮ ಪ್ರತಿ ಕಾರ್ಯಕ್ರಮಕ್ಕೂ ಹೀಗೆ ಸ್ಪಂದಿಸುತ್ತಿರಿ ಎಂದು ಕೇಳಿಕೊಳ್ಳುತ್ತ.

ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ

ಜ್ವಾಲಮಾಲ ಡಾಟ್ ನ್ಯೂಸ್